ಚಿತ್ರದುರ್ಗ| 16 ವರ್ಷದೊಳಗಿನ ಅಥ್ಲೆಟಿಕ್ ವಿಭಾಗದ ರಾಜ್ಯಮಟ್ಟದಲ್ಲಿ ನೌಮನ್ ಅಹಮ್ಮದ್ ಷರೀಫ್ ಗೆ ಚಿನ್ನದ ಪದಕ.


“16 ವರ್ಷದೊಳಗಿನ ಅಥ್ಲೆಟಿಕ್ ವಿಭಾಗದ ರಾಜ್ಯಮಟ್ಟದಲ್ಲಿ ಚಿನ್ನದ ಪದಕವನ್ನು ಪಡೆದಿರುತ್ತಾನೆ”
ನೌಮನ್ ಅಹಮ್ಮದ್ ಷರೀಫ್ 10ನೇ ತರಗತಿಯ ವಿದ್ಯಾರ್ಥಿಯು ದಿನಾಂಕ 14.09.2024 ರಿಂದ 17.09.2024ರವರೆಗೆ ಮೈಸೂರಿನ
ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ “ಕರ್ನಾಟಕ ರಾಜ್ಯ ಜೂನಿಯರ್ ಮತ್ತು 23 ವರ್ಷದೊಳಗಿನ ಅಥ್ಲೆಟಿಕ್ಸ್ ಮೀಟ್ 2024” ಭಾಗವಹಿಸಿ, 16 ವರ್ಷದೊಳಗಿನ ಪೆಂಟಥ್ಲಾನ್ 3181 ಅಂಕಗಳನ್ನು ಗಳಿಸಿ, ಚಿನ್ನದ ಪದಕವನ್ನು ಪಡೆದು ರಾಜ್ಯಮಟ್ಟದ ಹೊಸ ದಾಖಲೆ ಮಾಡಿದ್ದಾನೆ. ಹಾಗೂ ಮುಂದಿನ ದಿನಗಳಲ್ಲಿ ನಡೆಯಲಿರುವ ಸೌತ್ ಜೋನ್ ಜೂನಿಯರ್ ನ್ಯಾಷನಲ್ಸ್ ಗುಂಟೂರ್, ಅಂಧ್ರಪ್ರದೇಶ, ಭುವನೇಶ್ವರ ಮತ್ತು ಒಡಿಸ್ಸಾದಲ್ಲಿ ನಡೆಯಲಿರುವ ಜೂನಿಯರ್ ನ್ಯಾಷಿನಲ್ಸ್ ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ.
ರಾಜ್ಯಮಟ್ಟದಲ್ಲಿ ಚಿನ್ನದ ಪದಕವನ್ನು ಪಡೆದು ಹೊರ ರಾಜ್ಯದಲ್ಲಿ ನಡೆಯಲಿರುವ ಸ್ಪರ್ಧೆಗಳಲ್ಲಿ ಪ್ರತಿನಿಧಿಸುತ್ತಿರುವ
ಈ ಕ್ರೀಡಾಪಟುಗೆ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ.ಬಿ.ವಿಜಯ್ ಕುಮಾರ್ ಸಂಸ್ಥೆಯ ಮುಖ್ಯ ಶಿಕ್ಷಕರಾದ ತಿಪ್ಪೇಸ್ವಾಮಿ.ಎನ್.ಜಿ
ಐಸಿಎಸ್‌ಇ ಪ್ರಿನ್ಸಿಪಾಲರಾದ ಬಸವರಾಜಯ್ಯ.ಪಿ ಐಸಿಎಸ್‌ಇ ಉಪಪ್ರಿನ್ಸಿಪಾಲರಾದ ಅವಿನಾಶ್ ಬಿ, ಸಂಸ್ಥೆಯ ನಿರ್ದೇಶಕರಾದ ಶ್ರೀ.ಎಸ್.ಎಂ ಪೃಥ್ವೀಶ್, ಹಾಗೂ ಶ್ರೀಮತಿ ಸುನಿತಾ.ಪಿ.ಸಿ ಮತ್ತು ಎಲ್ಲಾ ಶಿಕ್ಷಕ/ಶಿಕ್ಷಕೇತರ ವೃಂದದವರು ಶ್ಲಾಘಸಿ ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *