ಚಿತ್ರದುರ್ಗ|ಭ್ರಷ್ಟಾಚಾರ, ಸುಳ್ಳು, ಮೋಸ ಕಾಂಗ್ರೆಸ್ ಮನೆ ದೇವರು: ಛಲವಾದಿ ನಾರಾಯಣಸ್ವಾಮಿ.

ಚಿತ್ರದುರ್ಗ ನ. 11 : ಸುಳ್ಳು ನಮ್ಮ ಮನೆ ದೇವರಲ್ಲ, ಭ್ರಷ್ಟಾಚಾರ, ಸುಳ್ಳು, ಮೋಸ ಕಾಂಗ್ರೆಸ್ ಮನೆ ದೇವರು ಎಂದು ಕಾಂಗ್ರೆಸ್ ಪಕ್ಷದ ಮುಖಂಡರಿಗೆ ವಿಧಾನ ಪರಿಷತ್‍ನ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ತಿರುಗೇಟು ನೀಡಿದ್ದಾರೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ನಗರದಲ್ಲಿ ತಮ್ಮನ್ನು ಬೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ದಿನಕ್ಕೊಂದು ಹಗರಣ
ಬಯಲಾಗುತ್ತಿವೆ.ಸಿಎಂ ಸಿದ್ಧರಾಮಯ್ಯ ಮಾತ್ರ ರಾಜೀನಾಮೆ ನೀಡುತ್ತಿಲ್ಲ.. ಜಗ್ಗೋದಿಲ್ಲ, ಬಗ್ಗೋದಿಲ್ಲ ಅಂದವರು ಸೈಟ್ ಏಕೆ ವಾಪಸ್
ಕೊಟ್ಟರು.ಪ್ರಿಯಾಂಕ ಖರ್ಗೆ 5 ಎಕರೆ ಜಾಗ ಏಕೆ ವಾಪಸ್ ಕೊಟ್ಟರು.ಕಾಂಗ್ರೆಸ್ ನಿಂದ ಅಘೋಷಿತ ಕಾನೂನು ಜಾರಿ
ಆದಂತಿದೆ..ಯಾರೆಷ್ಟು ಬೇಕಾದರೂ ಕದಿಯಬಹುದು.ಸಿಕ್ಕಿಬಿದ್ದಾಗ ವಾಪಸ್ ಕೊಟ್ಟರಾಯ್ತು.ಎನ್ನುವ ಮನೋಭಾವದಲ್ಲಿ ಇದ್ದಾರೆ. ಎಂದು
ಟಾಂಗ್ ನೀಡಿದರು.

ರಾಬರಿ, ದರೋಡೆ ಮಾಡಿದ್ದು ವಾಪಸ್ ಕೊಟ್ಟರೆ ಕ್ರಮ ಬೇಡವೇ..? ಹಾಗಿದ್ದರೆ ನಿಮ್ಮ ಮೇಲೇಕೆ ಕ್ರಮ ಬೇಡವಾ…?ಮಾಜಿ ಸಚಿವ
ಇಕ್ಬಾಲ್ ಅನ್ಸಾರಿರವರ ಸಿಎಂ ಸಿದ್ಧರಾಮಯ್ಯ ಇರೋವರೆಗೆ ಮುಸ್ಲಿಂರು..ಬಳಿಕ ಬೊಂಬೆ ಎಂದು ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಅನ್ಸಾರಿ
ಹೇಳಿಕೆ ಸಿದ್ದರಾಮಯ್ಯ ಬಗ್ಗೆ ಸ್ಪಷ್ಟ ಪಡಿಸುತ್ತದೆ…ನಾನೇನು ಹೇಳಲ್ಲ ರಾಜ್ಯದ ಜನರೇ ತೀರ್ಮಾನಿಸಲಿ.ಸಚಿವ ಜಮೀರ್ ವಿರುದ್ಧ ಕ್ರಮಕ್ಕೆ
ರಾಜ್ಯಪಾಲರ ಆದೇಶ ಸರಿಯಿದೆ.ನ್ಯಾಯಾಂಗದ ಆದೇಶ ಬೀದೀಲಿ ಪ್ರಶ್ನಿಸೋದು ಸರಿಯಲ್ಲ.ಬಿಜೆಪಿಯವರಿಗೆ ಸುಳ್ಳೇ ಮನೆದೇವರು..
ಎಲ್ಲಾ ಕಡೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿರುವುದರಿಂದ ಅವರಲ್ಲಿ ನಡಕ ಉಂಟಾಗಿದೆ ಎಂಬ ಡಿ.ಕೆ ಶಿವಕುಮಾರ್ ಅವರ ಹೇಳಿಕೆಯ
ಪ್ರತಿಕ್ರಿಯಿಸಿಸುಳ್ಳು ನಮ್ಮ ಮನೆ ದೇವರಲ್ಲ, ಭ್ರಷ್ಟಾಚಾರ, ಸುಳ್ಳು, ಮೋಸ ಕಾಂಗ್ರೆಸ್ ಮನೆ ದೇವರು ಎಂದರು.

ಜೋಳಗಿ ಹಾಕಿಕೊಂಡಿರುವುದಕ್ಕೆ ಪ್ರತಿಕ್ರಿಯಿಸಿ ಛಲವಾದಿ ಸಮುದಾಯದಲ್ಲಿರುವ ಸಂಸ್ಕೃತಿಯನ್ನು.. ಮರೆತು ಹೋಗಿರುವ
ಸಂಸ್ಕೃತಿಯನ್ನು ಮೆಲುಕು ಹಾಕುವ ಕಾರ್ಯ.ಓಬವ್ವ ಸಂಸ್ಕೃತಿಯನ್ನು ಮೆಲುಕು ಹಾಕುವ ಕಾರ್ಯಕ್ರಮ.ನಮ್ಮ ಸರ್ಕಾರ ಅಧಿಕಾರದಲ್ಲಿ
ಇದ್ದ ಸಂದರ್ಭದಲ್ಲಿ ಬಹಳ ದೊಡ್ಡ ಕಾರ್ಯಕ್ರಮವನ್ನು 2022 ರಲ್ಲಿ ಮಾಡಿದ್ದೆವು.ಬಸವರಾಜ ಬೊಮ್ಮಾಯಿರವರನ್ನು ನಾವಿಂದು
ನೆನೆಸಿಕೊಳ್ಳಬೇಕಾಗಿದೆ. ಎರಡು ಗುಂಪುಗಳಾಗಿ ಜಯಂತಿಯನ್ನು ಆಚರಣೆ ಮಾಡುತ್ತೀವಿ ಎಂಬುದು ಪ್ರತಿಕ್ರಿಯಿಸಿ ಇಲ್ಲಿ ಗುಂಪುಗಳ
ಪ್ರಶ್ನೆಯೇ ಇಲ್ಲ… ಸರ್ಕಾರಿ ಕಾರ್ಯಕ್ರಮವನ್ನು ಅವರು ಮಾಡುತ್ತಿದ್ದಾರೆ.. ಸಮುದಾಯದ ಪರವಾಗಿ ಶ್ರೀಗಳ ನೇತೃತ್ವದಲ್ಲಿ
ಮಾಡುತ್ತಿದ್ದಾರೆ.. ಇದರಿಂದ ತಪ್ಪು ಸಂದೇಶ ಹೋಗುವುದು ಬೇಡ.ಎರಡು ಕಾರ್ಯಕ್ರಮಗಳು ಅವರ ನೆನಪಿಗಾಗಿ.. ಎರಡು ಗುಂಪು
ಅನ್ನೋದನ್ನು ಮರೆತುಬಿಡಬೇಕು ಎಂದು ನಾರಾಯಣಸ್ವಾಮಿ ತಿಳಿಸಿದರು.

Leave a Reply

Your email address will not be published. Required fields are marked *