ಶಿವಾಜಿ ಮಹಾರಾಜರ ಮಾತೃಭಕ್ತಿ, ಧರ್ಮಸಹಿಷ್ಣುತೆ ಸರ್ವಕಾಲಕ್ಕೂ ಆದರ್ಶಪ್ರಾಯ : ಭಾವಸಾರ ಕ್ಷತ್ರಿಯ ಸಮಾಜದ ಕಾರ್ಯದರ್ಶಿ ಶ್ರೀನಾಥ್ ಬೇದ್ರೆ ಅಭಿಪ್ರಾಯ.

ಚಿತ್ರದುರ್ಗ: ಫೆ. 19 : ಭಾವಸಾರ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಚಿತ್ರದುರ್ಗ, ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಚಿತ್ರದುರ್ಗ ಸಂಯುಕ್ತವಾಗಿ ಬುಧವಾರ ನಗರದ ಚಿಕ್ಕಪೇಟೆಯಲ್ಲಿ ಹಿಂದೂ ಸಾಮ್ರಾಟ ಶಿವಾಜಿ ಮಹಾರಾಜರ 395ನೇ ಜಯಂತೋತ್ಸವ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ನಗರದ ಹೊಂಗಿರಣ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ದೇವರಾಜ್ ಕೋಟ್ಲ ಮಾತನಾಡಿ
ಭಾವಸಾರ ಕ್ಷತ್ರಿಯ ಸಮಾಜದ ದೈವ ಮಂಡಳಿ ಕಾರ್ಯದರ್ಶಿಗಳಾದ ಶ್ರೀನಾಥ್ ಬೇದ್ರೆ ಮಾತನಾಡಿ ತಾಯಿಯಿಂದ ಧಾರ್ಮಿಕ ಮೌಲ್ಯ, ತಂದೆಯಿಂದ ಶೌರ್ಯ ಪರಾಕ್ರಮ, ಗುರುವಿನಿಂದ ಗೆರಿಲ್ಲಾ ಮಾದರಿಯ ಯುದ್ಧ ನೈಪುಣ್ಯತೆ ಪಡೆದ ಛತ್ರಪತಿ ಬಿರುದಾಂಕಿತ ಶಿವಾಜಿ ಮಹಾರಾಜರು ಶೌರ್ಯ ಪರಾಕ್ರಮಗಳಿಗೆ ಹೆಸರಾಗಿದ್ದು ಮೊಘಲ್ ದೊರೆಗಳ ಹುಟ್ಟನ್ನಡಗಿಸಿ ವಿಶಾಲವಾದ ಹಿಂದೂ ಸಾಮ್ರಾಜ್ಯವನ್ನು ಸ್ಥಾಪಿಸಿದ ಏಕೈಕ ದೊರೆಯಾಗಿದ್ದು ಬಾಜಿ ಮಹಾರಾಜರು ತಮ್ಮ ತಾಯಿ ಜೀಜಾಬಾಯಿ ಅವರ ಮೇಲಿದ್ದ ಮಾತೃಭಕ್ತಿ ಸರ್ವಕಾಲಕ್ಕೂ ನಮ್ಮ ಮಕ್ಕಳಿಗೆ ಆದರ್ಶಪ್ರಾಯ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿದ್ಯಾ ಸಂಸ್ಥೆಯ ಆಡಳಿತ ಅಧಿಕಾರಿ ದೇವರಾಜ್ ಕೋಟ್ಲಾ ಮಾತನಾಡಿ ಶಿವಾಜಿ ಮಹಾರಾಜರು ಚಿಕ್ಕ ವಯಸ್ಸಿನಲ್ಲೇ ಕೋಟೆಗಳನ್ನು ಗೆದ್ದ ಕೀರ್ತಿ ಶಿವಾಜಿಗೆ ಸಲ್ಲುತ್ತದೆ.ಕಾಡಿನಲ್ಲಿ ಇರುವಂತಹ ಮಾವಳ್ಳಿ ಮಕ್ಕಳನ್ನು ಕೂಡಿಕೊಂಡು ತಂಡವನ್ನು ಕಟ್ಟಿಕೊಂಡುಕೊಂಡು. ಅವರಿಗೆಲ್ಲ ಸಾಹಸದ ಆಟಗಳನ್ನು ಆಡಿಸುತ್ತಾ ಕಬಡ್ಡಿ ಆಟಗಳನ್ನು ಆಡಿಸುತ್ತಾ ಯುದ್ಧ ಕಲೆಯನ್ನು ಕೂಡ ಹೇಳಿಕೊಡುತ್ತಾ. ಮೊಘಲ್ ಮತ್ತು ಸುಲ್ತಾನರ ವಿರುದ್ಧ ಹೋರಾಡಲು ಸಿದ್ಧಗೊಳಿಸುತ್ತಿದ್ದನು. ಸಣ್ಣ ಸಣ್ಣ ಸೈನ್ಯದೊಂದಿಗೆ ಮೊಘಲರ ದೊಡ್ಡ ದೊಡ್ಡ ಸೈನ್ಯದೊಡನೆ ವಿಜಯ ಗಳಿಸಿ ಅನೇಕ ಕೋಟೆಗಳನ್ನು ವಶಪಡಿಸಿಕೊಂಡು ಔರಂಗಜೇಬನಿಗೆ ನುಂಗಲಾರದ ತುತ್ತಾಗಿತ್ತು. ಅಫ್ಜಲ್ ಖಾನ್ ನನ್ನು ಕೊಂದ ರೀತಿ, ಔರಂಗಜೇಬನ ಆಸ್ಥಾನದಿಂದ ಪುಟ್ಟಿಗಳಲ್ಲಿ ತಪ್ಪಿಸಿಕೊಂಡು ಬಂದ ರೀತಿ ಅದ್ಭುತ ಚಾಣಕ್ಯತೆಗೆ ಸಾಕ್ಷಿಯಾಗಿತ್ತು. ಗೆರಿಲ್ಲ ಯುದ್ಧ ತಂತ್ರದ ಮೂಲಕ ಅನೇಕ ಶತ್ರುಗಳಿಗೆ ಮಣ್ಣುಮುಕ್ಕಿಸದಂತಹ ವೀರ ಶಿವಾಜಿ. ವೀರ ಶಿವಾಜಿಗೆ ಪ್ರೇರಣೆ ಎಂದರೆ ತಾಯಿ ಜೀಜಾ ಮಾತೆ ತಾಯಿ ಹೇಳುತ್ತಿದ್ದ ರಾಮಾಯಣ ಮಹಾಭಾರತದ ಕಥೆಗಳನ್ನು ಕೇಳುತ್ತಾ ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸಿದ ವೀರ ಶಿವಾಜಿಯ ಜಯಂತಿಯನ್ನು ಇಂದು ನಾವೆಲ್ಲರೂ ಸ್ಮರಿಸೋಣ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾರತೀಯ ಯೋಗ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ರವಿ ಕೆ. ಆಂಬೇಕರ್ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು 17 ನೇ ಶತಮಾನದ ಹಿಂದೂ ಸಾಮ್ರಾಜ್ಯದ ಸಂಸ್ಥಾಪಕರಲ್ಲಿ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಅವರು ಕೇವಲ ಹಿಂದೂ ಧರ್ಮಕ್ಕೆ ಮಾತ್ರ ಸೀಮಿತವಾಗಿರಲಿಲ್ಲ, ಅವರು ಎಲ್ಲಾ ಜಾತಿ ಮತ್ತು ಧರ್ಮದ ಜನರಿಗೆ ಸೇರಿದವರಾಗಿದ್ದರು. ಅವರ ಸೈನ್ಯದಲ್ಲಿ ಮುಸ್ಲಿಂ ಸೈನಿಕರು ಮತ್ತು ಅಧಿಕಾರಿಗಳು ಸಹ ಇದ್ದರು. ಶಿವಾಜಿ ಮಹಾರಾಜರು ಸರ್ವಧರ್ಮ ಸಮಭಾವವನ್ನು ಹೊಂದಿದ್ದರು ಮತ್ತು ಅವರು ಎಲ್ಲಾ ಧರ್ಮಗಳನ್ನು ಗೌರವಿಸುತ್ತಿದ್ದರು.
ಶಿವಾಜಿ ಮಹಾರಾಜರ ಆಡಳಿತವು ಜಾತ್ಯತೀತವಾಗಿತ್ತು ಮತ್ತು ಅವರು ಎಲ್ಲಾ ಜನರಿಗೆ ನ್ಯಾಯವನ್ನು ಒದಗಿಸಿದರು. ಅವರು ಬಡವರು ಮತ್ತು ದುರ್ಬಲರ ಬಗ್ಗೆ ಕಾಳಜಿ ವಹಿಸಿದರು ಮತ್ತು ಬಡವರ ಕಲ್ಯಾಣಕ್ಕಾಗಿ ಶ್ರಮಿಸಿದರು. ಶಿವಾಜಿ ಮಹಾರಾಜರು ಒಬ್ಬ ಧೀಮಂತ ನಾಯಕ ಮತ್ತು ಆಡಳಿತಗಾರರಾಗಿದ್ದರು ಮತ್ತು ಅವರ ಸಾಧನೆಗಳು ಇಂದಿಗೂ ಯುವಕರಲ್ಲಿ ಸ್ಫೂರ್ತಿ ನೀಡುತ್ತವೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಶಿವಾಜಿ ಮಹಾರಾಜರ ಪುತ್ತಳಿಗೆ ಪುಷ್ಪಾರ್ಚನೆ ಮಾಡುವುದರೊಂದಿಗೆ ಪ್ರಾರಂಭಿಸಲಾದ ಈ ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ ಅಧಿಕಾರಿ ಮಲ್ಲಿಕಾರ್ಜುನಚಾರ್ಯ, ಚಿತ್ರದುರ್ಗ ಕೋಟೆ ವಾಯು ವಿಹಾರಿಗಳ ಸಂಘದ ಅಧ್ಯಕ್ಷ ಸತ್ಯಪ್ಪ, ಯೋಗ ಶಿಕ್ಷಕಿ ಶ್ರೀಮತಿ ಮಂಜುಳಾ ರಾಜೇಶ್, ಭಾವಸಾರ ಸಮಾಜದ ಪ್ರಕಾಶ್ ಅಂಬೇಕರ್ ಹಾಗೂ ಇನ್ನಿತರರು ಉಪಸ್ಥತರಿದ್ದರು