
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ನ. 30: ಪ್ರಜಾ ಸೇವಾ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘ (ರಿ) ಮಳಲಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ರೋಟರಿ ಕ್ಲಬ್ ಚಿನ್ಮೂಲಾದ್ರಿ ಚಿತ್ರದುರ್ಗ ಸಹಯೋಗದಲ್ಲಿ ಕರ್ನಾಟಕ ಸಂಭ್ರಮ 50ರ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಶೀರ್ಷಿಕೆಯಲ್ಲಿ ಶುಕ್ರವಾರ ಸಂಜೆ ಸಾಂಸ್ಕೃತಿಕ ಸಂಭ್ರಮ 2024 ರೋಟರಿ ಬಾಲ ಭವನದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮುಖಾಂತರ ಉದ್ಘಾಟಿಸಿ ಮಾತನಾಡಿದ ಪಶು ಸಂಗೋಪನ ಇಲಾಖೆಯ ಸಹಾಯಕ
ನಿರ್ದೇಶಕರಾದ ಡಾ. ತಿಪ್ಪೇಸ್ವಾಮಿ ಗ್ರಾಮೀಣ ಕಲೆಗಳನ್ನು ಆಸ್ವಾದಿಸುವುದರ ಮುಖಾಂತರ ನಿರಂತರವಾಗಿ ಕಲಾ ಚಟುವಟಿಕೆಗಳನ್ನು
ಮುಂದುವರಿಸಿ ಉಳಿಸಿ ಬೆಳೆಸಬೇಕಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ರೋಟರಿ ಕ್ಲಬ್ ಚಿನ್ಮೂಲಾದ್ರಿಯ ಅಧ್ಯಕ್ಷರಾದ ಮಂಜುನಾಥ್ ಭಾಗವತ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸ್ಥಳೀಯ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳಿಗೆ ಹೆಚ್ಚಿನ ಪ್ರೋತ್ಸಾಹಗಳನ್ನು ನೀಡಬೇಕು ಜೀವಂತವಾಗಿರಿಸಲು ಸಂಘಟಿತ ಅಸಂಘಟಿತ ಕಲಾವಿದರ ಕಲಾ ಪ್ರತಿಭೆಗಳನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ಇಲಾಖೆಯ ಪಾತ್ರವೂ
ದೊಡ್ಡದು ಎಂದರು.
ವೇದಿಕೆಯಲ್ಲಿ ಗಾಯತ್ರಿ ಶಿವರಾಂ ವಕೀಲರಾದ ದಿಲ್ ಶಾದ್, ಈ ಅರುಣ್ ಕುಮಾರ್, ರಂಗ ನಿರ್ದೇಶಕರಾದ ಕೆ.ಪಿ.ಎಮ್ ಗಣೇಶಯ್ಯ, ಶಿವರಾಂ, ಪ್ರಜಾಸೇವಾ ಸಾಂಸ್ಕೃತಿಕ ಕ್ರೀಡಾ ಸಂಘದ ಶ್ರೀಮತಿ ಓಂಕಾರಮ್ಮ ಶ್ರೀನಿವಾಸ್ ಉಪಸ್ಥಿತರಿದ್ದರು.

ಕೆ ಪಿ ಎಂ ಗಣೇಶಯ್ಯ ಅವರಿಂದ ರಂಗಗೀತೆಗಳು, ಎಂ ಕೆ ಹರೀಶ್ ಅವರಿಂದ ಜಾನಪದ ಹಾಡುಗಳು, ಯಲ್ಲಪ್ಪ ಐಹೊಳೆ ತಮಟೆ, ಗಂಗಾಧರ್ ಜನಪದ ಗೀತೆಗಳು, ಹಿಮಂತ್ ರಾಜ್ ಸುಗಮ ಸಂಗೀತ, ಮೈಲಾರಿ ತತ್ವಪದ, ಶಿವಣ್ಣ ತಂಡದವರಿಂದ ಭಜನೆ, ಯಶೋದಮ್ಮ ತಂಡದವರಿಂದ ಸೋಬಾನೆ, ಲಾಸಿಕ ಫೌಂಡೇಶನ್ ವತಿಯಿಂದ ಕುಮಾರಿ ಸುಖೀ ಭಾಗವತ್ ಭರತನಾಟ್ಯ ಕುಮಾರಿ
ಅನನ್ಯ ಕೊರವಂಜಿ ನೃತ್ಯ ಸಾದರಪಡಿಸಲಾಯಿತು.