ಚಿತ್ರದುರ್ಗ|ಕುಮಾರಿ ಚಂದನ ಕೆ.ಪಿ ಹಾಗೂ ಚಿನ್ಮಯ ಕೆ.ಪಿ.ಯವರ ಹೃನ್ಮನ ತಣಿಸಿದ ಮನಮೋಹಕ ಭರತನಾಟ್ಯ ರಂಗಪ್ರವೇಶ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಏ. 28 : ಆಹ್ಲಾದಕಾರಿ ನೃತ್ಯಗಳ ಝೇಂಕಾರ ,ಪ್ರಬುದ್ಧ ಅಭಿನಯದ ಮೂಲಕ ಶೋಭಿಸಿದ ರಂಗಪ್ರವೇಶ ಭಾನುವಾರ ನಗರದ ಜಿ.ಜಿ ಸಮುದಾಯ ಭವನದಲ್ಲಿ ಯಶಸ್ವಿಯಾಗಿ ಜರುಗಿತು.

ಚಿತ್ರದುರ್ಗ ಪ್ರತಿಷ್ಠಿತ ನಾಟ್ಯ ಕಲಾ ಕೇಂದ್ರ ಲಾಸಿಕಾ ಫೌಂಡೇಷನ್ನಿನ ನೃತ್ಯ ಗುರು ಶ್ರೀಮತಿ ಶ್ವೇತಾ ಮಂಜುನಾಥ್ ರವರ ಶಿಸ್ತು ಬದ್ದ ತರಬೇತಿಯಿಂದ ಉತ್ತಮ ಕಲಾವಿದೆಯಾಗಿ ರೂಪುಗೊಂಡ ಕಲಾಪ್ರತಿಭೆ ಕುಮಾರಿ ಚಂದನ ಕೆ ಪಿ ಹಾಗೂ ಚಿನ್ಮಯಿ ಕೆ ಪಿ ,ಗುರುವಿಗೆ ತಕ್ಕ ಶಿಷ್ಯೆಯಾಗಿ ತಮ್ಮ ಅಪೂರ್ವ ನೃತ್ಯ ಕಲೆಯನ್ನು ಸಾಬೀತುಪಡಿಸಿದರು

ನಟುವಾಂಗದ ಮೂಲಕ ಇಡೀ ಕಾರ್ಯಕ್ರಮದ ಸೂತ್ರದಾರಿಯಾಗಿ ಭರತನಾಟ್ಯ ಗುರು ಶ್ರೀಮತಿ ಶ್ವೇತಾ ಮಂಜುನಾಥ್ ಎಲ್ಲರ
ಗಮನ ಸೆಳೆದು ತಾನೊಬ್ಬ ಸಮರ್ಥ ನೃತ್ಯ ಗುರು ಎಂಬುದನ್ನು ಮತ್ತೊಮ್ಮೆ ನಿರೂಪಿಸಿದರೆ , ಗಾಯನದಲ್ಲಿ ನಮ್ಮ ನಾಡಿನ
ಭರವಸೆಯ ಉದಯೋನ್ಮುಖ ಕಲಾವಿದರಾದ ವಿದ್ವಾನ್ ಶ್ರೀ ರೋಹಿತ್ ಭಟ್ ಬೆಂಗಳೂರು , ಮೃದಂಗದಲ್ಲಿ ಬಹುಮುಖ ಪ್ರತಿಭೆ
ವಿದ್ವಾನ್ ಶ್ರೀ ನಾಗೇಂದ್ರ ಪ್ರಸಾದ್ ಬೆಂಗಳೂರು, ಕೊಳಲು ವಾದನದಲ್ಲಿ ಯುವ ಕಲಾವಿದರಾದ ವಿದ್ವಾನ್ ಶಶಾಂಕ್
ಜೋಡೀದಾರ್ ಬೆಂಗಳೂರು , ರಿಧಮ್ ಪಾಡ್ ನಲ್ಲಿ ಸಾಯಿ ವಂಶಿ ಬೆಂಗಳೂರು, ಅಪಾರ ಅನುಭವಿಗಳು ಆದ ವಿದ್ವಾನ್ ಗೋಪಾಲ್
ವೆಂಕಟ್ರಮಣ ಇವರು ವೀಣಾ ವಾದನದಲ್ಲಿ ಎಲ್ಲ ಪೇಕ್ಷಕರ ಮನಗೆದ್ದರು. ಆರಂಭದಲ್ಲಿ ಹಿಮ್ಮೇಳ ಕಲಾವಿದರಿಂದ ವಿನಾಯಕನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಿ ವೇದಿಕೆಗೆ ನಯ -ನಾಜೂಕಿನ ಹೆಜ್ಜೆಗಳಲ್ಲಿ ಬಳಕುತ್ತ ಪ್ರವೇಶಿಸಿದ ಕಲಾವಿದೆಯರು ಮೊದಲಿಗೆ ನ್ರತ್ಯದ ಅಧಿದೇವತೆ ನಟರಾಜನಿಗೆ ಪೂಜೆಯನ್ನು ಸಲ್ಲಿಸಿ ಶ್ರೀಮತಿ ಶ್ವೇತ ಮಂಜುನಾಥರವರು ತಮ್ಮ ನೃತ್ಯ ಕಲಿಕೆಯ ಗುರುಗಳಾದ ಹಾಗು ನ್ರತ್ಯ ಕಲಿಕೆಯಲ್ಲಿ ತಮ್ಮ ಬೆನ್ನೆಲುಬಾಗಿ ನಿಂತಿರುವಂತಹ ನಾಟ್ಯ ಸರಸ್ವತಿ ಬಿರುದಾಂಕಿತೆ , ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಅಧ್ಯಕ್ಷರು ಆದ ಶ್ರೀಮತಿ ಶುಭ ಧನಂಜಯರವರಿಗೆ ವಂದನೆಗಳನ್ನು ಸಲ್ಲಿಸಿ ,ತನ್ನ ಶಿಷ್ಯೆ ಯಶಸ್ವಿನಿಗೆ ಗೆಜ್ಜೆ ತೊಡಿಸುವುದರ ಮೂಲಕ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು .

ಪುಷ್ಪಾಂಜಲಿಯೊಂದಿಗೆ ವಿನಮ್ರ ಬಾವದಿಂದ ತನ್ನ ರಂಗಪ್ರವೇಶದ ಯಶಸ್ಸಿಗೆ ಸಹಕರಿಸುತ್ತಿರುವ ಎಲ್ಲರಿಗು ಅಭಿವಂದನೆ ಸಲ್ಲಿಸಿ ಬಹಳ ಮುಖ್ಯವಾಗಿ ನರ್ತಿಸಲು ವೇದಿಕೆಯ ರೂಪದಲ್ಲಿ ಅವಕಾಶ ನೀಡಿರುವ ಭೂ ಮಾತೆಗೆ ಪ್ರಣಾಮ ಸಲ್ಲಿಸಿ , ಸಂಗೀತ
ಕಲಾವಿದರಿಗೆ ,ಸಭಿಕರಿಗೆ ,ತನ್ನ ಅಸ್ತಿತ್ವಕ್ಕೆ ಕಾರಣರಾದ ತಂದೆ ತಾಯಿಗೆ , ಗುರಪರಂಪರೆಗೆ , ಬಂಧುಬಳಗದವರಿಗೆ ತನ್ನ
ಮನೋಹರ ನ್ರತ್ಯದ ಮೂಲಕ ವಿನಮ್ರ ನಮನಗಳನ್ನು ಸಲ್ಲಿಸಿದರು .ಅದೇ ರೀತಿ ವಿಘ್ನ ವಿನಾಶಕ ಗಣಪತಿಗೂ ವಂದನೆ
ಸಲ್ಲಿಸಲಾಯಿತು. ನಂತರದಲ್ಲಿ ಗಣಪತಿ ಸ್ತುತಿ , ಅರ್ಧನಾರೀಶ್ವರ ,ಭರತನಾಟ್ಯದ ಕೇಂದ್ರ ಭಾಗವಾಗಿರುವ ವರ್ಣ ನ್ರತ್ಯ ಸುಮನೋಹರವಾಗಿ ಕಣ್ಮುಂದೆ ತಂದಳು. ಬೆಡಗು ತುಂಬಿದ ನ್ರತ್ತಗಳಲ್ಲೇ ಆಕರ್ಷಕ ಭಂಗಿಗಳನ್ನು ಕೊಟ್ಟಿದ್ದು ವಿಶೇಷ . ಹನುಮಾನ್ ಚಾಲೀಸ್ ಮತ್ತು ಜಾವಳಿ ನ್ರತ್ಯಗಳು ಕಲಾ ವಿದ್ವಾಂಸರ ಮತ್ತು ಕಲಾರಸಿಕರ ಪ್ರಶಂಸೆಗೆ ಪಾತ್ರವಾದವು ಕೊನೆಯದಾಗಿ ತಿಲ್ಲಾನ ಮತ್ತು ಮಂಗಳದೊಂದಿಗೆ ಭರತನಾಟ್ಯ ರಂಗಪ್ರವೇಶವನ್ನು ಸುಮಾರು ಮೂರು ಘಂಟೆಗಳ ಕಾಲ ಏಕವ್ಯಕ್ತಿ ಪ್ರದರ್ಶನ ನೀಡುವುದರ ಮೂಲಕ ಯಶಸ್ವಿಯಾಗಿ ತಮ್ಮ ನೃತ್ಯ ಪ್ರದರ್ಶನವನ್ನು ಸಂಪನ್ನಗೊಳಿಸಿದರು.

ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಅಧ್ಯಕ್ಷರಾದ ಶ್ರೀಮತಿ ಶುಭ ಧನಂಜಯ
ಮಾತನಾಡಿ ಚಿತ್ರದುರ್ಗದಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜಸಿರುವ ಕುರಿತು ಹೆಮ್ಮೆ ವ್ಯಕ್ತಪಡಿಸಿದರು , ನಮ್ಮ ಸಂಸ್ಕೃತಿ,
ಪರಂಪರೆ ಮುಂದುವರೆಯಬೇಕಾದರೆ ಇಂತಹ ರಂಗಪ್ರವೇಶದ ಮೂಲಕ ಹೊಸ ಹೊಸ ಪ್ರತಿಭಾನ್ವಿತ ಕಲಾವಿದರು ಭರತನಾಟ್ಯ
ಕಲಿಯಲು ಮುಂದಾಗಬೇಕು ಎಂದು ತಿಳಿಸಿದರು , ಶ್ರೀಯುತ ರೇವಣಸಿದ್ದಪ್ಪ ರಾಮಾಂಜನೇಯ, ಲಾಸಿಕ ಫೌಂಡೇಶನ್
ಅಧ್ಯಕ್ಷರಾದ ಶ್ರೀ ರತ್ನಾಕರ ಭಟ್ ರವರು ಕಲಾವಿದರ ಭವಿಷ್ಯಕ್ಕೆ ಶುಭ ಕೋರಿದರು. ಲಾಸಿಕಾ ಫೌಂಡೇಶನ್ ನ್ನಿನ ಮಂಜುನಾಥ್
ಭಾಗವತ್ ನಿರ್ವಹಣೆ ಮಾಡಿದರು.

Leave a Reply

Your email address will not be published. Required fields are marked *