
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಏ. 14 : ಸಹಕಾರ ಸಂಘವನ್ನು ಸ್ಥಾಪಿಸುವುದರ ಮೂಲಕ ಬಡವರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಣೆ ಮಾಡುವತ ಗಮನ ನೀಡುವಂತೆ ಮಾಜಿ ಶಾಸಕ ಎಸ್.ಕೆ.ಬಸವರಾಜನ್ ನೂತನ ಆಡಳಿತ ಮಂಡಳಿಗೆ ಸಲಹೆ ನೀಡಿದ್ದಾರೆ.
ಚಿತ್ರದುರ್ಗ ನಗರದ ಜೆಸಿಆರ್ ಬಡಾವಣೆಯ ಮುಖ್ಯ ವೃತ್ತದ ಬಳಿ ಇಂದು ಪ್ರಾರಂಭವಾದ ಶ್ರೀ ಜಗದ್ಗುರು ಪಂಚಾಚಾರ್ಯ
(ಎಸ್.ಜೆ.ಪಿ) ಪತ್ತಿನ ಸಹಕಾರ ಸಂಘ ನಿಯಮಿತ ಇದರ ಪ್ರಾರಂಭೋತ್ಸವದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ
ಮಾತನಾಡಿದ ಅವರು, ಇಂದಿನ ದಿನಮಾನದಲ್ಲಿ ಸಹಕಾರ ಎನ್ನುವುದು ಎಲ್ಲರಿಗೂ ಸಹಾ ಅಗತ್ಯವಾಗಿದೆ ಒಬ್ಬರ ಸಹಕಾರ
ಇನ್ನೊಬ್ಬರಿಗೆ ಇಲ್ಲದಿದ್ದರೆ ಜೀವನ ನಡೆಸುವುದು ಕಷ್ಠವಾಗುತ್ತದೆ. ರಾಷ್ಟ್ರೀಕೃತ ಬ್ಯಾಂಕ್‌ಗಳು ಸಾಲವನ್ನು ನೀಡುವಾಗ ವಿವಿಧ
ರೀತಿಯ ದಾಖಲೆಗಳನ್ನು ತೆಗೆದುಕೊಂಡು ಬನ್ನಿ ಎಂದು ಅಲೆದಾಡಿಸುತ್ತಾರೆ ಆದರೆ ನಮ್ಮಂತಹರಿಗಾಗಿ ಇರುವ ಈ ರೀತಿಯ
ಸಹಕಾರಿ ಬ್ಯಾಂಕ್‌ಗಳು ಬಡವರ ಪಾಲಿಗೆ ವರದಾನವಾಗುತ್ತಿವೆ ಎಂದರು.

ಈ ರೀತಿಯ ಸಹಕಾರ ಸಂಘಗಳು ಸರಿಯಾದ ರೀತಿಯಲ್ಲಿ ಉಳಿಯಬೇಕಾದರೆ ಅಲ್ಲಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ
ಸರಿಯಾಗಿ ಇರಬೇಕಿದೆ ಆಡಳಿತ ಮಂಡಳಿ ಎಲ್ಲದಕ್ಕೂ ಸಹಾ ಮಧ್ಯ ಬರಬಾರದು ಕೆಲವೊಂದು ಸ್ವಾತಂತ್ರ್ಯಗಳನ್ನು ವ್ಯವಸ್ಥಾಪಕರಿಗೆ
ನೀಡುವುದರ ಮೂಲಕ ಉತ್ತಮವಾಗಿ ಸಹಕಾರ ಸಂಘ ನಡೆಯಲು ಅನುವು ಮಾಡಬೇಕಿದೆ. ಇಲ್ಲಿ ಹಣ ಇದ್ದವರು ತಮ್ಮ ಹಣವನ್ನು
ಇಡುವುದರ ಮೂಲಕ ಬೇರೆಯವರಿಗೆ ಸಹಕಾರ ಸಂಘದ ಮೂಲಕ ನೆರವಾಗಬೇಕಿದೆ. ಸಂಘದ ಆಡಳಿತ ಮಂಡಳಿಯವರು ತಮ್ಮ
ಸಹಾಯವನ್ನು ಸಾಧ್ಯವಾದಷ್ಟು ಬಡವರಿಗೆ ನೀಡುವುದರ ಮೂಲಕ ಅವರ ಅರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವಂತ ಗಮನ
ನೀಡುವಂತೆ ಬಸವರಾಜನ್ ಕರೆ ನೀಡಿದರು.
ಸಹಕಾರ ಸಂಘದ ಮುಖ್ಯ ಪ್ರವರ್ತಕರಾದ ಕಲ್ಲೇಶಯ್ಯ ಮಾತನಾಡಿ, ಈ ಸಹಕಾರ ಸಂಘವನ್ನು ಸ್ಥಾಪನೆ ಮಾಡಲು ಹಲವಾರು
ವರ್ಷಗಳ ಕಾಲ ಕಷ್ಟವನ್ನು ಪಡಲಾಗಿದೆ ನಮ್ಮ ಸಮುದಾಯದ ಮನೆಗಳಿಗೆ ಭೇಟಿ ಮಾಡಿ ಅವರಿಂದ ಷೇರು ಹಣವನ್ನು
ಪಡೆದುಕೊಂಡು ಸಹಕಾರ ಸಂಘವನ್ನು ಸ್ಥಾಪನೆ ಮಾಡುವುದು ಕಷ್ಠದ ಕೆಲಸವಾಗಿದೆ. ಅದರೂ ಸಹಾ ನೀವುಗಳು ನಮ್ಮೆಲ್ಲರ ಮೇಲೆ
ವಿಶ್ವಾಸ ನಂಬಿಕೆಯನ್ನು ಇರಿಸಿ ಹಣವನ್ನು ನೀಡಿ ಷೇರನ್ನು ಖರೀದಿ ಮಾಡಲಾಗಿದೆ ಈ ನಂಬಿಕೆಯನ್ನು ನಮ್ಮ ಅಡಳಿತ ಮಂಡಳಿ
ಉಳಿಸಿಕೊಳ್ಳಲಿದೆ. ಮಂದಿನ ದಿನದಲ್ಲಿ ಸಹಕಾರ ಸಂಘ ಉತ್ತಮವಾದ ಕಾರ್ಯವನ್ನು ಮಾಡಲಾಗುವುದು ಎಂದರು.
ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ವಿಜಯಕುಮಾರ್ ಮಾತನಾಡಿ, ನಮ್ಮ ಸಮಾಜದ ಬಹು ದಿನಗಳ ಬೇಡಿಕೆ ಇದು
ಈಡೇರಿದೆ. ಇದಕ್ಕೆ ನಿಮ್ಮಲ್ಲರ ಸಹಕಾರ ಇದೆ. ಮುಂದಿನ ದಿನದಲ್ಲಿ ಈ ಸಹಕಾರ ಸಂಘ ಉತ್ತಮವಾಗಿ ಕೆಲಸವನ್ನು
ಮಾಡುವುದರ ಮೂಲಕ ಜನ ಮನ್ನಣೆಯನ್ನು ಪಡೆಯಲಿದೆ. ನಮ್ಮ ಸಮುದಾಯ ಇದಕ್ಕೆ ಪೂರ್ಣ ಪ್ರಮಾಣದ ಸಹಕಾರ ಸಹಾಯ
ಮಾಡಲಿದೆ ನಮ್ಮಲ್ಲಿನ ಜನತೆ ದೂರದಿಂದ ನಿಂತು ನೋಡುತ್ತಾರೆ ಹೊರೆತು ಒಳಗಡೆ ಬಂದ ನಿಲ್ಲುವುದಿಲ್ಲ ಒಳಗಡೆ ಬಂದು ಸಮಾಜ
ಏನು ಮಾಡುತ್ತಿದೆ ಎಂದು ನೋಡಬೇಕಿದೆ ಅಗ ನಮ್ಮ ಸಮಾಜ ಮತ್ತಷ್ಟು ಬೆಳೆಯಲು ಸಾಧ್ಯವಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಂಗಮ ಸಮಾಜದ ಅಧ್ಯಕ್ಷರಾದ ಎಂ.ಟಿ.ಮಲ್ಲಿಕಾರ್ಜನಯ್ಯ ಸ್ವಾಮಿ, ಶ್ರೀ ಜಗದ್ಗುರು ಪಂಚಾಚಾರ್ಯ
(ಎಸ್.ಜೆ.ಪಿ) ಪತ್ತಿನ ಸಹಕಾರ ಸಂಘ ನಿಯಮಿತದ ಕಾರ್ಯದರ್ಶಿ ಎಸ್.ಷಡಾಕ್ಷರಯ್ಯ, ನ್ಯಾಯವಾದಿ ಕೆ.ಎನ್.ವಿಶ್ವನಾಥಯ್ಯ,
ಡಾ.ಪ್ರಭುದೇವ್, ಬಿ.ವಿಜಯಕುಮಾರ್, ಶಶಿಧರ್ ಬಾಬು, ಬಸವರಾಜ ಶಾಸ್ತ್ರಿ, ಶ್ರೀಮತಿ ಲೀಲಾವತಿ, ಬಿ.ಎಂ.ಕರಿಬಸವಯ್ಯ,
ಜಿ.ಎಂ.ವಿರೇಶ್, ಶರಣಯ್ಯ, ಶಿವನಗೌಡ್ರು, ಹಾಗೂ ಸದಸ್ಯರು, ಸಮಾಜದ ಬಂಧುಗಳು ಭಾಗವಹಿಸಿದ್ದರು.