ಚಿತ್ರದುರ್ಗದ ಸತೀಶ್ ಕುಮಾರ್‌ಗೆ ರಾಷ್ಟ್ರೀಯ ಮಟ್ಟದಲ್ಲಿ ಭರ್ಜರಿ ಸಾಧನೆ: 5 ಪದಕಗಳೊಂದಿಗೆ ಅಂತರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆ.

ಪೋಟೋ ವರದಿ ಸುರೇಶ್ ಪಟ್ಟಣ್

ಚಿತ್ರದುರ್ಗ ಮಾ. 18
50 ಮೇಲ್ಪಟ್ಟವರಿಗೆ 45ನೇ ರಾಷ್ಟ್ರ ಮಟ್ಟದ ಹಿರಿಯರ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ (2026) ಕ್ರೀಡಾಕೂಟವು ಪಂಜಾಬನ ಗುರುಕಾಶಿ ವಿಶ್ವವಿದ್ಯಾನಿಲಯದ ಭಟಿಂಡ ಕ್ರೀಡಾಂಗಣದಲ್ಲಿ ಮಾರ್ಚ್ 14 ,15 , ಹಾಗೂ 16 ರಂದು  ನಡೆಯಿತು.
ಈ ಕ್ರೀಡಾಕೂಟದಲ್ಲಿ ಚಿತ್ರದುರ್ಗದ ಕ್ರೀಡಾಂಗಣದಲ್ಲಿ ತರಬೇತುದಾರರಾದ ಸತೀಶ್ ಕುಮಾರ್ ರವರು ಭಾಗವಹಿಸಿ 100 ಮೀಟರ್ ಓಟದಲ್ಲಿ ದ್ವೀತೀಯ ಸ್ಥಾನ, 200 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ, 4 ಇಂಟು 100 ಮೀಟರ್ ಮಿಕ್ಸ ರಿಲೆಯಲ್ಲಿ ಪ್ರಥಮ ಸ್ಥಾನ, 4 ಇಂಟು 400 ರಿಲೆಯಲ್ಲಿ ತೃತೀಯ ಸ್ಥಾನ, 4 ಇಂಟು 400 ಮೀಟರ್ ಮೆನ್ಸ್ ರಿಲೆಯಲ್ಲಿ ಪ್ರಥಮ ಸ್ಥಾನವನ್ನು ಸೇರಿದಂತೆ   ಒಟ್ಟು ಐದು ಪ್ರಶಸ್ತಿ ಪದಕಗಳನ್ನು ಪಡೆದು ಕರ್ನಾಟಕ ರಾಜ್ಯಕ್ಕೆ ಕೀರ್ತಿಯನ್ನು ತಂದಿದ್ದು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.

Leave a Reply

Your email address will not be published. Required fields are marked *