
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಸೆ. 12 : ಶರಣ ಸಾಹಿತ್ಯ ಪರಿಷತ್ತು, ಚಿತ್ರದುರ್ಗ ಜಿಲ್ಲಾ ಘಟಕ, ರೋಟರಿ ಕ್ಲಬ್ ಪೋರ್ಟ್ ಚಿತ್ರದುರ್ಗ ಮತ್ತು ಮುಕ್ತ ವೇದಿಕೆ,ಸಂಯುಕ್ತಾಶ್ರಯದಲ್ಲಿ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಇವರ ಸತ್ಯವ್ರತಿಯ ಸ್ಪಷ್ಟಪದಿಗಳು ಗ್ರಂಥಲೋಕಾರ್ಪಣೆ ಕಾರ್ಯಕ್ರಮವು ಸೆ. 13ರ ಶುಕ್ರವಾರ ಸಂಜೆ 5ಕ್ಕೆ ನಗರದ ಮೆದೇಹಳ್ಳಿ ರಸ್ತೆಯ ಮರುಳಪ್ಪ ಬಡಾವಣೆಯ 2ನೇ ಮುಖ್ಯರಸ್ತೆಯ ಆದಿಶೇಷ ರೋಟರಿ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಮಾರಂಭದ ಅಧ್ಯಕ್ಷತೆಯನ್ನು ನಿವೃತ್ತ ಪ್ರಾಧ್ಯಾಪಕರು ಮತ್ತು ಜಾನಪದ ವಿದ್ವಾಂಸರಾದ ಡಾ. ಮೀರಾಸಾಬಿಹಳ್ಳಿ ಶಿವಣ್ಣ
ವಹಿಸಲಿದ್ದಾರೆ. ಗ್ರಂಥಲೋಕಾರ್ಪಣೆಯನ್ನು ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಕುಲಪತಿಗಳಾದ ಡಾ.ಡಿ.ವಿ.ಪರಮಶಿವಮೂರ್ತಿ
ಮಾಡಲಿದ್ದಾರೆ. ಗ್ರಂಥಾವಲೋಕನವನ್ನು ವಿಶ್ರಾಂತ ಪ್ರಾಂಶುಪಾಲರು ಮತ್ತು ಇತಿಹಾಸ ಸಂಶೋಧಕರಾದ ಡಾ.ಬಿ.ರಾಜಶೇಖರಪ್ಪ
ಮಾಡಲಿದ್ದಾರೆ.
ವಿಶೇಷ ಅತಿಥಿಗಳಾಗಿ ರೋಟರಿ ಕ್ಲಬ್, ಚಿತ್ರದುರ್ಗ ಫೋರ್ಟ್‍ನ ಅಧ್ಯಕ್ಷರಾದ ರೊ.ಚೇತನ್ ಬಾಬು, ಡಾ. ಎಸ್.ವೈ. ಸೋಮಶೇಖರ್
ನಿರ್ದೇಶಕರು ಶೈಕ್ಷಣಿಕ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ ರೊ. ವೆಂಕಟೇಶ್ ಜಿ.ಕೆ. ಅಧ್ಯಕ್ಷರು, ರೋಟರಿ ಫೋರ್ಟ್ ಟ್ರಸ್ಟ್ ಚಿತ್ರದುರ್ಗ
ಡಾ. ಕೆ.ಎಂ. ವೀರೇಶ್ ಅಧ್ಯಕ್ಷರು, ಶರಣ ಸಾಹಿತ್ಯ ಪರಿಷತ್ತು, ಚಿತ್ರದುರ್ಗ ಜಬಿವುಲ್ಲಾ ಎಂ ಸಾಹಿತಿಗಳು ಮತ್ತು ರೇಖಾ ಚಿತ್ರಕಾರರು,
ಮೊಳಕಾಲ್ಕೂರು ರೊ. ರವೀಂದ್ರ ಎಂ.ಕೆ.ಪ್ರೊ. ಸಿ. ಬಸವರಾಜಪ್ಪ ವಿಶ್ರಾಂತ ಪ್ರಾಂಶುಪಾಲರು ಮತ್ತು ಸಂಚಾಲಕರು, ಮುಕ್ತ ವೇದಿಕೆ,
ಚಿತ್ರದುರ್ಗಚೇತನ್ ಕಣಬೂರು ಅಕ್ಷರ ಮಂಟಪ ಪ್ರಕಾಶನ, ಹಂಪಿನಗರ, ಬೆಂಗಳೂರು ಡಾ. ಜಿ. ಎನ್.ಮಲ್ಲಿಕಾರ್ಜುನಪ್ಪ ವಿಶ್ರಾಂತ
ಪ್ರಾಂಶುಪಾಲರು ಮತ್ತು ಕೃತಿಕಾರರು ಭಾಗವಹಿಸಲಿದ್ದಾರೆ.