Old Pension Scheme : ಹಳೆಯ ಪಿಂಚಣಿ ಯೋಜನೆ ಬಗ್ಗೆ ಮಹತ್ವದ ಘೋಷಣೆ ಮಾಡಿದ ಮುಖ್ಯಮಂತ್ರಿ,. ತಜ್ಞರ ಸಮಿತಿ ಸಲ್ಲಿಸಿದ ವರದಿ ಆಧರಿಸಿ ಈ ನಿರ್ಧಾರ.
Old Pension Scheme : ಇತ್ತೀಚೆಗೆ ನೌಕರರು ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸುವಂತೆ ಒತ್ತಾಯಿಸಿ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹಳೆಯ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ದೇಶಾದ್ಯಂತ ಹಲವು ಚರ್ಚೆಗಳು ನಡೆಯುತ್ತಿವೆ. ಕೇಂದ್ರ ಸರ್ಕಾರಿ ನೌಕರರು ಹಾಗೂ ಹಲವು ರಾಜ್ಯ ಸರ್ಕಾರಿ ನೌಕರರು ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸುವಂತೆ ಒತ್ತಾಯಿಸುತ್ತಿದ್ದಾರೆ. ಇದಕ್ಕಾಗಿ ಹಲವು ಪ್ರತಿಭಟನೆಗಳು ನಡೆಯುತ್ತಿವೆ. ಹಲವು ರಾಜ್ಯ ಸರ್ಕಾರಗಳು ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿವೆ.
ಇದೀಗ ಸಿಕ್ಕಿಂನಲ್ಲಿ ಹಳೆಯ ಪಿಂಚಣಿ ಯೋಜನೆ ಮರು ಜಾರಿಯಾಗಲಿದೆ ಎಂದು ವರದಿಯಾಗಿದೆ. ಸಿಕ್ಕಿಂ ಮುಖ್ಯಮಂತ್ರಿ ಬಿಎಸ್ ತಮಾಂಗ್ ಕೋಲೆ ಸೋಮವಾರ ಈ ಶುಭ ಸುದ್ದಿ ಪ್ರಕಟಿಸಿದ್ದಾರೆ. ತಜ್ಞರ ಸಮಿತಿಯು ಸಲ್ಲಿಸಿದ ವರದಿಯನ್ನು ಆಧರಿಸಿ, ಸಿಕ್ಕಿಂ ರಾಜ್ಯದಲ್ಲಿ ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಿಕ್ಕಿಂ ಸರ್ಕಾರವು ರಾಜ್ಯ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯನ್ನು ಪರಿಷ್ಕರಿಸುವ ಸಾಧ್ಯತೆಯನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಿತ್ತು. ಸಮಿತಿಯ ಅಧ್ಯಕ್ಷತೆಯನ್ನು ಸಿಕ್ಕಿಂ ಸಿಬ್ಬಂದಿ ಇಲಾಖೆ ಕಾರ್ಯದರ್ಶಿ ರಿನ್ಸಿಂಗ್ ಚೆವಾಂಗ್ ಭುಟಿಯಾ ವಹಿಸಿದ್ದರು.
ಕರ್ನಾಟಕದಲ್ಲಿ ಹಳೆಯ ಪಿಂಚಣಿ ಯೋಜನೆ ? :
ಕರ್ನಾಟಕದಲ್ಲಿಯೂ ಹಳೆಯ ಪಿಂಚಣಿ ಯೋಜನೆಗಾಗಿ ಪ್ರತಿಭಟನೆಗಳು ನಡೆಯುತ್ತಿವೆ. ರಾಜ್ಯದಲ್ಲಿ ಹಳೆಯ ಪಿಂಚಣಿ ಯೋಜನೆ ಜಾರಿಗೆ ತರುವಂತೆ ರಾಜ್ಯ ಸರ್ಕಾರಿ ನೌಕರ ನಿರಂತರವಾಗಿ ಒತ್ತಾಯಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಹಳೆಯ ಪಿಂಚಣಿ ಯೋಜನೆ ಜಾರುಗೆ ತರುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಹೇಳಿತ್ತು. ಕಳೆದ ಕೆಲವು ದಿನಗಳಿಂದ ವಿವಿಧ ಸಂಘಟನೆಗಳು ವಿವಿಧ ಪ್ರತಿಭಟನೆಗಳನ್ನು ನಡೆಸುತ್ತಿವೆ.
ವಿವಿಧ ರಾಜ್ಯಗಳಲ್ಲಿ ಹಳೆಯ ಪಿಂಚಣಿ ಯೋಜನೆ ಜಾರಿಯಾಗಿದ್ದರೂ, ರಾಜ್ಯ ಸರ್ಕಾರ ಈ ಯೋಜನೆಯನ್ನು ಏಕೆ ಜಾರಿಗೊಳಿಸುತ್ತಿಲ್ಲ ಎನ್ನುವುದು ರಾಜ್ಯ ಸರ್ಕಾರಿ ನೌಕರರ ಪ್ರಶ್ನೆ.
ರಾಷ್ಟ್ರೀಯ ಪಿಂಚಣಿ ಯೋಜನೆ V/S ಹೊಸ ಪಿಂಚಣಿ ಯೋಜನೆ
ರಾಷ್ಟ್ರೀಯ ಪಿಂಚಣಿ ಯೋಜನೆ (NPS)
1.NPS ನಲ್ಲಿ, ಉದ್ಯೋಗಿಯ ಮೂಲ ವೇತನ ಮತ್ತು ಭತ್ಯೆಗಳಿಂದ 10 ಪ್ರತಿಶತವನ್ನು ಕಡಿತಗೊಳಿಸಲಾಗುತ್ತದೆ.
2. ರಾಷ್ಟ್ರೀಯ ಪಿಂಚಣಿ ಯೋಜನೆಯು ಷೇರು ಮಾರುಕಟ್ಟೆ ಆಧಾರಿತವಾಗಿದೆ. ಆದ್ದರಿಂದ ಇದು ತುಲನಾತ್ಮಕವಾಗಿ ಕಡಿಮೆ ಸುರಕ್ಷಿತವೆಂದು ಪರಿಗಣಿಸಲಾಗಿದೆ.
3. ಇದರ ಅಡಿಯಲ್ಲಿ, ನಿವೃತ್ತಿಯ ನಂತರ ಪಿಂಚಣಿ ಪಡೆಯಲು 40% ಅನ್ನು NPS ನಿಧಿಯಲ್ಲಿ ಹೂಡಿಕೆ ಮಾಡಬೇಕು.
4. ಈ ಯೋಜನೆಯು ನಿವೃತ್ತಿಯ ನಂತರ ಸ್ಥಿರ ಪಿಂಚಣಿಯನ್ನು ಖಾತರಿಪಡಿಸುವುದಿಲ್ಲ.
5. ಹೊಸ ಪಿಂಚಣಿ ಯೋಜನೆಯಲ್ಲಿ, ಆರು ತಿಂಗಳಿಗೊಮ್ಮೆ ತುಟ್ಟಿಭತ್ಯೆ ಪಾವತಿಸುವುದಿಲ್ಲ.
ಹಳೆಯ ಪಿಂಚಣಿ ಯೋಜನೆ (OPS):
1. ಇದರ ಅಡಿಯಲ್ಲಿ, ಕೊನೆಯದಾಗಿ ಪಡೆದ ಸಂಬಳದ 50 ಪ್ರತಿಶತವನ್ನು ನಿವೃತ್ತಿಯ ನಂತರ ಒಟ್ಟು ಮೊತ್ತದೊಂದಿಗೆ ಮಾಸಿಕ ಪಿಂಚಣಿಯಾಗಿ ಪಾವತಿಸಲಾಗುತ್ತದೆ.
2. 80 ವರ್ಷಗಳ ನಂತರ ಪಿಂಚಣಿ ಹೆಚ್ಚಿಸುವ ನಿಬಂಧನೆಯೂ ಇದೆ. ಜಿಪಿಎಫ್‌ಗೂ ಅವಕಾಶವಿದೆ.
3. ಇದರ ಅಡಿಯಲ್ಲಿ, 20 ಲಕ್ಷ ರೂಪಾಯಿಗಳವರೆಗೆ ಗ್ರಾಚ್ಯುಟಿ ನೀಡಲಾಗುತ್ತದೆ.
4. ಇದನ್ನು ರಾಜ್ಯದ ಖಜಾನೆಯಿಂದ ಪಾವತಿಸಲಾಗುತ್ತದೆ. ಉದ್ಯೋಗಿಯ ಸಂಬಳದಿಂದ ಹಣವನ್ನು ಕಡಿತಗೊಳಿಸುವುದಿಲ್ಲ.
5. ನಿವೃತ್ತ ನೌಕರನ ಮರಣದ ನಂತರ ಹೆಂಡತಿಗೆ ಪಿಂಚಣಿಯನ್ನು ಒದಗಿಸಲಾಗುತ್ತದೆ. ಇದರ ಅಡಿಯಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ಡಿಎ ಕೂಡಾ ನೀಡಲಾಗುತ್ತದೆ. ಹೀಗಾಗಿ ಪಿಂಚಣಿ ಮೊತ್ತ ಹೆಚ್ಚಾಗುತ್ತಲೇ ಇರುತ್ತದೆ.
ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk
ನಮ್ಮ Facebook page: https://www.facebook.com/samagrasudii