Stone thrown on CM Jagan : ಆಂಧ್ರಪ್ರದೇಶದಲ್ಲಿ ವಿಧಾನಸಭಾ ಚುನಾವಣಾ ಕಾವು ಜೋರಾಗಿದೆ. ಇದೇ ವೇಳೆ ಬಸ್ ಯಾತ್ರೆ ನಡೆಸುತ್ತಿದ್ದ ಸಿಎಂ ಜಗನ್ ಮೋಹನ್ ರೆಡ್ಡಿ ಅವರ ಮೇಲೆ ಕಲ್ಲು ತೂರಾಟ ನಡೆದಿದೆ. ಘಟನೆಯಲ್ಲಿ ಜಗನ್ ಕಣ್ಣಿನ ಮೆಲ್ಬಾಗ ಬಲವಾದ ಗಾಯವಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
- ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಮೇಲೆ ಕಲ್ಲು ತೂರಾಟ
- ಘಟನೆಯಲ್ಲಿ ಮುಖ್ಯಮಂತ್ರಿ ಜಗನ್ ಕಣ್ಣಿನ ಮೆಲ್ಬಾದಲ್ಲಿ ಗಾಯ
- ವಿಜಯವಾಡದಲ್ಲಿ ನಡೆಯುತ್ತಿ ಬಸ್ ಯಾತ್ರೆಯ ವೇಲೆ ಘಟನೆ
Andhra Chief Minister injured : ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಮೇಲೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ವೇಮಂತ ಸರ್ಯಾರ್ ಬಸ್ ಯಾತ್ರೆಯ ಅಂಗವಾಗಿ ಸಿಎಂ ಜಗನ್ ಇಂದು ವಿಜಯವಾಡಕ್ಕೆ ಭೇಟಿ ನೀಡಿದ್ದರು. ವಿಜಯವಾಡ ಸಿಂಗ್ ನಗರದಲ್ಲಿ ಅವರು ಬಸ್ ಮೇಲೆ ನಿಂತು ಮಾತನಾಡುತ್ತಿದ್ದ ವೇಳೆ ಕೆಲವು ಪುಂಡ ಪೋಕರಿಗಳು ಅವರ ಮೇಲೆ ಕಲ್ಲು ಎಸೆದಿದ್ದಾರೆ. ಘಟನೆಯಲ್ಲಿ ಸಿಎಂ ಜಗನ್ ಅವರ ಎಡಗಣ್ಣಿಗೆ ಬಲವಾಗಿ ಗಾಯವಾಗಿದೆ ಎಂದು ತಿಳಿದು ಬಂದಿದೆ..
ಪಕ್ಕದಲ್ಲಿಯೇ ವೈಎಸ್‌ಆರ್ ಪಕ್ಷದ ನಾಯಕ ವೆಲ್ಲಂಪಳ್ಳಿಗೆ ಅವರಿಗೂ ಸಹ ಕಲ್ಲು ತಾಕಿದೆ. ತಕ್ಷಣ ಭದ್ರತಾ ಸಿಬ್ಬಂದಿ ಸಿಎಂ ಜಗನ್ ಅವರನ್ನು ಬಸ್ ಒಳಗೆ ಕರೆದೊಯ್ದು ಚಿಕಿತ್ಸೆ ನೀಡಿದ್ದಾರೆ. ಪೊಲೀಸರು ದಾಳಿಕೋರನನ್ನು ಹಿಡಿಯಲು ಯತ್ನಿಸುತ್ತಿದ್ದಾರೆ. ಇದೇ ವೇಳೆ ಕದಿರಿಯಲ್ಲಿಯೂ ಸಿಎಂ ಜಗನ್ ಮೇಲೆ ಅಪರಿಚಿತರಿಂದ ಚಪ್ಪಲಿಯಿಂದ ಹಲ್ಲೆ ನಡೆದಿರುವುದು ಗೊತ್ತಾಗಿದೆ.
ಇನ್ನು ಘಟನೆಯಲ್ಲಿ ಸಿಎಂ ಜಗನ್ ಕಣ್ಣಿಗೆ ತೀವ್ರ ಗಾಯವಾಗಿದೆ. ವೈದ್ಯರು ಬಸ್‌ನಲ್ಲಿಯೇ ವಿಶೇಷ ಚಿಕಿತ್ಸೆ ನೀಡಿದ್ದಾರೆ. ಕಣ್ಣಿನ ಮೇಲಿನ ಭಾಗದಲ್ಲಾದ ಗಾಯವನ್ನು ಸ್ವಚ್ಛಗೊಳಿಸಿ ಪ್ಲಾಸ್ಟರ್ ಹಾಕಲಾಗಿದೆ. ಒಂದು ವೇಳೆ ಕಣ್ಣಿಗೆ ಕಲ್ಲು ತಗುಲಿದ್ದರೇ ಕಣ್ಣಿಗೆ ಗಂಭೀರ ಗಾಯವಾಗುತ್ತಿತ್ತು. ಸಿಎಂ ಜಗನ್ ಜನ ಬೆಂಬಲ ಕಂಡು ಸಹಿಸಲಾಗದೆ ಟಿಡಿಪಿ ಇಂತಹ ನೀಚ ಕೆಲಸಗಳನ್ನು ಮಾಡಿಸುತ್ತಿದೆ ಎಂದು ವೈಸಿಪಿ ನಾಯಕರು ಟೀಕಿಸುತ್ತಿದ್ದಾರೆ.
ದೇವರ ಆಶೀರ್ವಾದ, ಜನರ ಆಶೀರ್ವಾದ ಇರುವವರೆಗೂ ಸಿಎಂ ಜಗನ್ ಮೇಲೆ ಎಷ್ಟೇ ಷಡ್ಯಂತ್ರ ಮಾಡಿದರೂ ಅವರಿಗೆ ಏನೂ ಆಗುವುದಿಲ್ಲ ಎಂದು ವೈಸಿಪಿ ಮುಖಂಡರು ಹೇಳುತ್ತಿದ್ದಾರೆ. ಅದೇ ರೀತಿ.. ಮತ್ತೊಮ್ಮೆ YSRCP ಭಾರಿ ಬಹುಮತದಿಂದ ಗೆಲ್ಲುವುದು ಖಚಿತ ಎನ್ನುತ್ತಿದ್ದಾರೆ YSRCP ನಾಯಕರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1