ತೆಂಗಿನ ಹೂವು ಇದು ತೆಂಗಿನಕಾಯಿಯ ಒಳಗೆ ಆಗುತ್ತದೆ. ತೆಂಗಿನ ಕಾಯಿ ಬಟ್ಟಲೊಳಗೆ ಆಗುವ ಬಿಳಿ ಸ್ಪಂಜಿನಂತಹ ಹೂವು ತಿನ್ನಲು ರುಚಿಕರವಾಗಿರುತ್ತದೆ. ಇದು ಆರೋಗ್ಯಕ್ಕೂ ಸಹ ಸಾಕಷ್ಟು ಲಾಭಕಾರಿ!

ತೆಂಗಿನ ಹೂವು ಇದು ತೆಂಗಿನಕಾಯಿಯ ಒಳಗೆ ಆಗುತ್ತದೆ. ತೆಂಗಿನ ಕಾಯಿ ಬಟ್ಟಲೊಳಗೆ ಆಗುವ ಬಿಳಿ ಸ್ಪಂಜಿನಂತಹ ಹೂವು ತಿನ್ನಲು ರುಚಿಕರವಾಗಿರುತ್ತದೆ. ಇದು ಆರೋಗ್ಯಕ್ಕೂ ಸಹ ಸಾಕಷ್ಟು ಲಾಭಕಾರಿ ಆಗಿದೆ. ತೆಂಗಿನ ಹೂವು ಪೋಷಕಾಂಶಗಳಿಂದ ತುಂಬಿದೆ. ತೆಂಗಿನಕಾಯಿ ಒಡೆದಾಗ ಅದರೊಳಗೆ ಮೊಳಕೆ, ಹೂವು ಬಂದರೆ ಅದು ಅದೃಷ್ಟದ ಸಂಕೇತವೆಂದು ಹೇಳಲಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ತೆಂಗಿನ ಹೂವನ್ನು ಸಹ ಮಾರಾಟ ಮಾಡುವುದು ಕಂಡು ಬರುತ್ತದೆ. ತೆಂಗಿನ ಹೂವಿನಲ್ಲಿ ಉತ್ಕರ್ಷಣ ನಿರೋಧಕಗಳಿವೆ. ಇದು ಮೂತ್ರಪಿಂಡದ ಕಲ್ಲುಗಳ ರಚನೆ ತಡೆಯುತ್ತದೆ. ಕೂದಲಿನ ಆರೋಗ್ಯ ಕಾಪಾಡುತ್ತದೆ. ಮತ್ತು ಮುಖದ ಸುಕ್ಕುಗಳಂತಹ ಅನೇಕ ಸಮಸ್ಯೆ ಪರಿಹರಿಸುತ್ತದೆ. ಇದರಲ್ಲಿ ಫೈಬರ್ ಅಂಶವಿದೆ. ಇದು ತೂಕ ನಷ್ಟಕ್ಕೂ ಸಹಕಾರಿ.

ತೆಂಗಿನ ಹೂವು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ತೆಂಗಿನ ಹೂವು ಮತ್ತು ಜೇನುತುಪ್ಪ ಒಟ್ಟಿಗೆ ಸೇವಿಸಿದರೆ ಮಧುಮೇಹ ನಿಯಂತ್ರಣದಲ್ಲಿರುತ್ತದೆ. ಇದು ಮಲಬದ್ಧತೆ ತಡೆಗೆ ಸಹಕಾರಿ. ಗರ್ಭಿಣಿ ಮತ್ತು ಮಗುವಿನ ಆರೋಗ್ಯ ಕಾಪಾಡುತ್ತದೆ. ಇದು ದೇಹದ ತೂಕ ಕಡಿಮೆ ಮಾಡುತ್ತದೆ. ಕೂದಲು ಉದುರುವಿಕೆ ತಡೆಯುತ್ತದೆ. ಶಕ್ತಿ ನೀಡುತ್ತದೆ.

ತೆಂಗಿನಕಾಯಿ ಹೂವು ಕೊಬ್ಬನ್ನು ಕಡಿಮೆ ಮಾಡುತ್ತದೆ. ಇದು ಮುಖದ ಮೇಲಿನ ಸುಕ್ಕುಗಳು ಮತ್ತು ಕಲೆ ನಿವಾರಿಸುತ್ತದೆ. ತೆಂಗಿನ ಹೂವು ಫೈಬರ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ರಂಜಕ ಮುಂತಾದ ಪೋಷಕಾಂಶಗಳು ಸಮೃದ್ಧವಾಗಿವೆ. ಇದರ ಸೇವನೆಯು ರಕ್ತದ ಸಕ್ಕರೆ, ಮೆದುಳು ಮತ್ತು ಮೂಳೆಗಳ ಆರೋಗ್ಯ ಕಾಪಾಡುತ್ತದೆ.

ರಕ್ತಸ್ರಾವದ ಅಸ್ವಸ್ಥತೆ ಗುಣಪಡಿಸುತ್ತದೆ. ಮುಟ್ಟಿನ ಸಮಸ್ಯೆಗಳು ಮತ್ತು ಮೂಗಿನ ರಕ್ತಸ್ರಾವದಂತಹ ಅಸ್ವಸ್ಥತೆ ನಿವಾರಣೆಗೆ ಪ್ರಯೋಜನಕಾರಿಯಾಗಿದೆ. ಇದು ಪ್ರೊಜೆಸ್ಟರಾನ್ ಮತ್ತು ಈಸ್ಟ್ರೊಜೆನ್ ಉತ್ಪಾದನೆ ಮತ್ತು ನಿರ್ಮೂಲನೆಗೆ ಸಹಾಯ ಮಾಡುತ್ತದೆ. ರಕ್ತ ಹೆಪ್ಪುಗಟ್ಟುವಿಕೆ, ರಕ್ತಸ್ರಾವವನ್ನು ತಡೆಯುತ್ತದೆ.

ಮಧುಮೇಹ ಮತ್ತು ಮೂತ್ರನಾಳದ ಅಸ್ವಸ್ಥತೆ ಗುಣಪಡಿಸುತ್ತದೆ ತೆಂಗಿನ ಹೂವವು. ಮೂತ್ರದ ಸಮಸ್ಯೆಯಿದ್ದರೆ ಮೊಳಕೆ ಬರಿಸಿದ ತೆಂಗಿನ ಹೂವು ತಿನ್ನುವುದು ಒಳ್ಳೆಯದು. ತೆಂಗಿನಕಾಯಿ ಹೂವು ಹೆಚ್ಚು ಖನಿಜಗಳನ್ನು ಹೊಂದಿದೆ. ಇದು ಮಧುಮೇಹ ನಿಯಂತ್ರಿಸುತ್ತದೆ. ಇನ್ಸುಲಿನ್ ಸ್ರವಿಸುವಿಕೆ ಹೆಚ್ಚಿಸುತ್ತದೆ. ಮಹಿಳೆಯರಲ್ಲಿ ವೈಟ್ ಡಿಸ್ಚಾರ್ಜ್ ಅನ್ನು ಗುಣಪಡಿಸುತ್ತದೆ.

ಮಹಿಳೆಯರಲ್ಲಿ ಬಿಳಿ ಸ್ರವಿಸುವಿಕೆಯು ಸಾಮಾನ್ಯವಾಗಿದೆ. ಆದರೆ ಕೆಲವೊಮ್ಮೆ ಇದು ದೊಡ್ಡ ಸಮಸ್ಯೆಯ ಸಂಕೇತವಾಗಿದೆ. ತೆಂಗಿನ ಹೂವು ಸೇವನೆಯು ಬಿಳಿ ವಿಸರ್ಜನೆಯ ಸಮಸ್ಯೆ ತಪ್ಪಿಸುತ್ತದೆ. ತೆಂಗಿನಕಾಯಿ ಹೂವುಗಳನ್ನು ಮಿತವಾಗಿ ತಿನ್ನಬೇಕು. ಇಲ್ಲದಿದ್ದರೆ ಅದು ಮಲಬದ್ಧತೆಗೆ ಕಾರಣವಾಗುತ್ತದೆ. ಇದು ದೇಹವನ್ನು ತಂಪಾಗಿಡಲು ಮತ್ತು ತಾಜಾವಾಗಿರಲು ಸಹಾಯ ಮಾಡುತ್ತದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1