ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಜು. 05 : ನಾವೀಗ ಕಲುಷಿತ ವಾತಾವರಣದಲ್ಲಿ ಇದ್ದೇವೆ, ತರಕಾರಿ, ಹಣ್ಣು, ದವಸ ಧಾನ್ಯಗಳು ಎಲ್ಲಾ ಆಹಾರ ವಸ್ತುಗಳು ವಿಷ ಪದಾರ್ಥ ರಾಸಾಯನಿಕ ಗೊಬ್ಬರಗಳಿಂದಲೇ ಬೆಳಿತ್ತಿರೂದರಿಂದ ಎಲ್ಲವೂ ವಿಷಮಯವಾಗಿದೆ ನಾವು ಬದುಕಲಿಕ್ಕೆ ಈ ವಿಷ ವಸ್ತುಗಳನ್ನು ತಿನ್ನಬೇಕಾಗುತ್ತದೆ ಆದರೆ ಈ ಯೋಗದ ಅಭ್ಯಾಸವನ್ನು ನಾವು ರೂಢಿಸ್ಕೊಂಡ್ರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಕರ್ನಾಟಕದ ಪತಂಜಲಿ ಯೋಗ ಪೀಠದ ರಾಜ್ಯ ಪ್ರಭಾರಿಗಳಾದ ಭವರ್‍ಲಾಲ್ ಆರ್ಯ ತಿಳಿಸಿದರು.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪತಂಜಲಿ ಯೋಗ ಸಮಿತಿ ಕರ್ನಾಟಕ ವತಿಯಿಂದ ಸಹಯೋಗ ಶಿಕ್ಷಕರ ತರಬೇತಿ ಶಿಬಿರವನ್ನು ಪ್ರಾರಂಭ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲೂ ಸಹ ಸಹಯೋಗ ಶಿಕ್ಷಕರ ತರಬೇತಿ ಶಿಬಿರವನ್ನು 14 ಜುಲೈ 2024 ರಿಂದ ಆಗಸ್ಟ್ 14ರವರೆಗೆ ನಗರದ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ಭವನದ ವೀರ ಸೌಧದಲ್ಲಿ ನಡೆಯಲಿದೆ. ಯೋಗ ಶಿಕ್ಷಕರಾಗಲು ಯಾವುದೇ ವಯಸ್ಸಿನ ಇತಿಮಿತಿ ಇಲ್ಲ ಕನಿಷ್ಠ 18 ವರ್ಷ ಮೇಲ್ಪಟ್ಟವರು ಎಲ್ಲರೂ ಅರ್ಹರು ,ಇಲ್ಲಿ ವಯಸ್ಸಿನ ಯಾವುದೇ ಮಿತಿ ಇರುವುದಿಲ್ಲ. ಬೆಳಗಿನ ಸಮಯ ಐದರಿಂದ ಆರು, ಆರರಿಂದ ಏಳು ಎರಡು ಗಂಟೆಗಳ ಕಾಲ ಸಮಯ ಕೊಡುವವರು, ಅವರ ಆರೋಗ್ಯದ ಜೊತೆ ಸುತ್ತಮುತ್ತಲಿನವರ ಕುಟುಂಬದವರ ಆರೋಗ್ಯ ರಕ್ಷಣೆ ಮಾಡುವಂತಹ ಮನಸ್ಥಿತಿ ಇರುವವರು, ಸಮಯ ಇರುವಂಥವರು ಈ ಒಂದು ತರಬೇತಿಯಲ್ಲಿ ಭಾಗವಹಿಸಬಹುದು. ಈ ಒಂದು ತರಬೇತಿ 25 ದಿನಗಳ ಕಾಲ ನಡೆಯುತ್ತದೆ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಿಂದ ನುರಿತ ಯೋಗ ಶಿಕ್ಷಕರು ಪತಂಜಲಿ ಯೋಗ ಪೀಠ ಹರಿದ್ವಾರದಿಂದ ಯೋಗ ಮಾರ್ಗದರ್ಶನ ಮಾಡಲಿದ್ದಾರೆ. ಪತಂಜಲಿ ಯೋಗಪೀಠ ಹರಿದ್ವಾರ ದಿಂದ ಪರಮಪೂಜ್ಯ ಸ್ವಾಮಿ ರಾಮದೇವ್ ಜಿ ಮಹಾರಾಜರು ,ಆಚಾರ್ಯ ಬಾಲಕೃಷ್ಣ ಜಿ ಅವರು ಬೇರೆ ಬೇರೆ ರಾಜ್ಯ ಗಳಿಂದ ಯೋಗ ಶಿಕ್ಷಕರು ದೇಶವಿದೇಶಗಳ ನುರಿತ ಯೋಗ ವಿದ್ವಾಂಸರಿಂದ ಯೋಗ ಮಾರ್ಗದರ್ಶನ ಮಾಡಲಾಗುತ್ತದೆ ಎಂದರು.
ಈ ತರಬೇತಿಯ ಉದ್ದೇಶ ಚಿತ್ರದುರ್ಗ ನಗರದ 35 ವಾರ್ಡಗಳಲ್ಲಿ 35 ಉಚಿತ ಯೋಗ ಕೇಂದ್ರಗಳ ಸ್ಥಾಪನೆ ಮಾಡುವುದು, ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಕೂಡ ಉಚಿತ ಯೋಗ ಶಿಬಿರಗಳನ್ನು ಮಾಡಿ ಅಲ್ಲಿ ಉಚಿತ ಯೋಗ ಕೇಂದ್ರಗಳ ಸ್ಥಾಪನೆ ಮಾಡಿ ಯೋಗಮಯ ಕರ್ನಾಟಕ ಅಭಿಯಾನವನ್ನು ಮಾಡುವುದು ನಮ್ಮ ಸಂಕಲ್ಪ. ಈ ಅಭಿಯಾನದ ಉದ್ದೇಶ ನಮ್ಮ ಕರ್ನಾಟಕದ ಎಲ್ಲಾ ನಾಗರಿಕರು ಆರೋಗ್ಯವಂತರಾಗಿರಬೇಕು ನಮ್ಮ ಆಹಾರ ಪದ್ಧತಿ ಹೇಗಿರಬೇಕು, ಯಾವ ಸಮಯದಲ್ಲಿ ನಾವು ಆಹಾರ ಸೇವಿಸಬೇಕು ,ರೋಗಗಳಿಗೆ ಅನುಸಾರವಾಗಿ ನಾವು ಯಾವ ಆಹಾರ ಪದ್ಧತಿಯನ್ನು, ಯಾವ ಯೋಗಾಭ್ಯಾಸಗಳನ್ನು ಮಾಡಬೇಕು ಎನ್ನುವುದನ್ನು ಈ ಕಾರ್ಯದಲ್ಲಿ ತಿಳಿಸಲಾಗುವುದು. ಕಾಯಿಲೆಗಳು ಬಡತನ ,ಶ್ರೀಮಂತಿಕೆ ಹಾಗೂ ಹಣ ನೋಡಿಕೊಂಡು ಬರುವುದಿಲ್ಲ. ಹಾಗಾಗಿ ಕರ್ನಾಟಕ ರಾಜ್ಯದ ಎಲ್ಲಾ ನಾಗರೀಕರು ಈ ಯೋಗಭ್ಯಾಸವನ್ನು ಮಾಡಿದ್ರೆ ಕಾಯಿಲೆಗಳಿದ್ದರೆ, ಕಾಯಿಲೆಗಳು ಗುಣ ಆಗ್ತಾವೆ. ಇಲ್ಲದಿದ್ದರೂ ಸಮೇತ ಕಾಯಿಲೆಗಳು ಮುಂದಿನ ದಿನಗಳಲ್ಲಿ ಬರುವುದನ್ನು ತಡೆಗಟ್ಟಬಹುದು. ಆರೋಗ್ಯವನ್ನು ನೂರಾರು ವರ್ಷಗಳ ಕಾಲ ಕಾಪಾಡಿಕೊಳ್ಳುಬಹುದು. ಈ ಯೋಗ ಶಿಬಿರದಲ್ಲಿ ಭಾಗವಹಿಸುವುದರ ಮುಖಾಂತರ ಕಾಯಿಲೆಗಳು ಬಂದಾಗ ಆಸ್ಪತ್ರೆಗಳಿಗೆ ,ಔಷಧಿ ಅಂಗಡಿಗಳಿಗೆ ಖರ್ಚು ಮಾಡುವಂತ ಹಣವನ್ನು ನಾವು ಉಳಿತಾಯ ಮಾಡಬಹುದು ಎಂದು ತಿಳಿಸಿದರು.
ನಮ್ಮ ಸಂಕಲ್ಪ ಪ್ರತಿ ಮನೆಯಲ್ಲಿ ಒಬ್ಬ ಯೋಗ ಶಿಕ್ಷಕನಿರಬೇಕು. ಪ್ರತಿ ಮನೆಯಲ್ಲೊಬ್ಬ ಯೋಗ ಶಿಕ್ಷಕ ಇದ್ರೆ ಕುಟುಂಬದ ಎಲ್ಲಾ ಸದಸ್ಯರ ಆರೋಗ್ಯವನ್ನು ಅವರು ಯೋಗದ ಮುಖಾಂತರ ,ಯೋಗ ಮಾರ್ಗದರ್ಶನ ಮುಖಾಂತರ ಕಾಪಾಡಬಹುದು. ನಮ್ಮ ಆರೋಗ್ಯದ ರಕ್ಷಣೆ ನಮ್ಮ ಹೊಣೆ ಈ ಒಂದು ಸಂಕಲ್ಪದಿಂದ ಈ ಅಭಿಯಾನ ನಾವು ಆರಂಭ ಮಾಡಿದ್ದೇವೆ .ಹಾಗಾಗಿ ಎಲ್ಲರೂ ಈ ಒಂದು ಯೋಗ ಶಿಬಿರದಲ್ಲಿ ಭಾಗವಹಿಸಿ ನಿಮ್ಮ ಆರೋಗ್ಯವನ್ನು ನೀವು ಪಡಿಬೇಕು ಯೋಗ ಆರೋಗ್ಯವಂತರಿಗೆ ಜೀವನ ಪದ್ಧತಿ, ರೋಗಿಗಳಿಗೆ ಒಂದು ಚಿಕಿತ್ಸಾ ಪದ್ಧತಿ, ಸಾಧನೆ ಮಾಡುವಂತಹ ಸಾಧಕರಿಗೆ ಸಾಧನಾ ಪದ್ಧತಿಯಾಗಿದೆ ಎಂದರು.
ಈ ಪತ್ರಿಕಾಗೋಷ್ಠಿ ಕಾರ್ಯಕ್ರಮದಲ್ಲಿ ಪತಂಜಲಿ ಚಿತ್ರದುರ್ಗ ಜಿಲ್ಲಾ ಸಮಿತಿ ಸದಸ್ಯರಾದ ದೇವಾನಂದ ನಾಯಕ, ಶ್ರೀನಿವಾಸ, ನವೀನ್, ಕಲ್ಲೇಶ್, ಗುರುಮೂರ್ತಿ ಉಪಸ್ಥಿತರಿದ್ದಾರೆ.