ದುರ್ಗದಲ್ಲಿ ಎರಡು ಲಾರಿಗಳ ನಡುವೆ ಡಿಕ್ಕಿ: ಸಹ ಚಾಲಕ ಸೇರಿದಂತೆ 9 ಜಾನುವಾರು ಸಾವು

2 ಲಾರಿಗಳ ನಡುವೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ, 9 ಜಾನುವಾರುಗಳು ಸಾವಪ್ಪಿರುವಂತಹ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಕೆಆರ್​ಹಳ್ಳಿ ಗೇಟ್ ಬಳಿ ಅಪಘಾತ ನಡೆದಿದೆ. 

ಚಿತ್ರದುರ್ಗ: 2 ಲಾರಿಗಳ ನಡುವೆ ಡಿಕ್ಕಿ (collision) ಹೊಡೆದ ಪರಿಣಾಮ ಓರ್ವ ವ್ಯಕ್ತಿ, 9 ಜಾನುವಾರುಗಳು ಸಾವಪ್ಪಿರುವಂತಹ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಕೆಆರ್​ಹಳ್ಳಿ ಗೇಟ್ ಬಳಿ ಅಪಘಾತ ನಡೆದಿದೆ.  ಮಹರಾಷ್ಟ್ರದಿಂದ ಕೋಲಾರಕ್ಕೆ ಲಾರಿಯಲ್ಲಿ ಜಾನುವಾರುಗಳನ್ನು ಸಾಗಿಸಲಾಗುತ್ತಿತ್ತು. ಮಹಾರಾಷ್ಟ್ರ ಮೂಲದ ಸಹ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮತ್ತೋರ್ವ ಚಾಲಕನಿಗೆ ಗಾಯಗಳಾಗಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

10 ಜಾನುವಾರುಗಳ ಪೈಕಿ 9 ಸಾವಪ್ಪಿದ್ದು, ಗಾಯಗೊಂಡಿರುವ 1 ಜಾನುವಾರನ್ನು ಚಳ್ಳಕೆರೆ ಬಳಿಯ ಗೋಶಾಲೆಗೆ ಶಿಫ್ಟ್ ಮಾಡಲಾಗಿದೆ. ಹಿರಿಯೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Source : https://tv9kannada.com/karnataka/chitradurga/9-cattle-including-co-driver-death-in-collision-between-two-lorries-in-chitradurga-ggs-607279.html

Leave a Reply

Your email address will not be published. Required fields are marked *