![](https://samagrasuddi.co.in/wp-content/uploads/2025/01/e10098c6-d967-4fcd-87cc-8e8325e8ba6a-300x200.jpg)
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಜ. 23: ನಗರದ ಕೋಟೆ ಆಟೋ ನಿಲ್ದಾಣದ ಸಂಘದ ವತಿಯಿಂದ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ ಆರನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ಅನ್ನದಾಸೋಹ ಕಾರ್ಯಕ್ರಮವನ್ನು ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ
ಮಹಾಸ್ವಾಮಿಗಳು ಉದ್ಘಾಟಿಸಿದರು.ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ , ನಗರಸಭಾ ಸದಸ್ಯರಾದ ಶ್ರೀನಿವಾಸ್,
ವಿಜಯಕುಮಾರ್, ನಾಗರಾಜ್ ಸಂತೋಷ ನಾಗಣ್ಣ, ಮಂಜು, ರವಿ ಮಾರುತಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಕೋಟೆ ಆಟೋ ನಿಲ್ದಾಣದ ಎಲ್ಲಾ ಚಾಲಕರು ಮತ್ತು ಪದಾಧಿಕಾರಿಗಳ ವತಿಯಿಂದ ಸರ್ವ ಭಕ್ತಾದಿಗಳಿಗೆ ಅನ್ನ
ಸಂತರ್ಪಣೆ ಹಮ್ಮಿಕೊಳ್ಳಲಾಯಿತು. ಇದರಲ್ಲಿ ಕೋಟೆ ಆಟೋ ನಿಲ್ದಾಣದ ಚಾಲಕರು ಹಾಗೂ ಮಾಲೀಕರು ಎಲ್ಲಾ ಪದಾಧಿಕಾರಿಗಳು
ಹಾಗೂ ಸಾರ್ವಜನಿಕರು ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು