ತರಕಾರಿ ಬೆಲೆ ಏರಿಕೆಗೆ ಜನಸಾಮಾನ್ಯರು ಕಂಗಾಲು : ಟೊಮೆಟೊ 100, ಬೀನ್ಸ್‌ 200 ರೂ.ಗೆ ಮಾರಾಟ!

ಈ ನಡುವೆ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಟೊಮೆಟೊ ಸೇರಿದಂತೆ ಕಾಯಿಪಲ್ಲೆ, ಹಸಿರುಪಲ್ಲೆಗಳ ದರಗಳು ಹೆಚ್ಚಳವಾಗುತ್ತಿದ್ದು, ಬೆಲೆ ಕೇಳಿಸಿಕೊಳ್ಳುವ ಗ್ರಾಹಕ ತಮ್ಮಹಣಕಾಸಿನ ಸ್ಥಿತಿಯನ್ನು ಎರಡು ಎರಡು ಬಾರಿ ಯೋಚನೆ ಮಾಡಿ ಕಾಯಿಪಲ್ಲೆ, ಹಸಿರುಪಲ್ಲೆಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಕಳೆದ ವಾರವಷ್ಟೆ ಕೆಜಿಗೆ 50 ರೂ.ಗೆ ದೊರೆಯುತ್ತಿದ್ದ ಟೊಮೆಟೊ, ಈಗ ಏಕಾಏಕಿ 100 ರೂ. ಗಡಿ ದಾಟಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದಿದ್ದೆ.

ಈ ಎಲ್ಲಾ ತರಕಾರಿ ಬೆಲೆಯಲ್ಲಿ ಏರಿಕೆ : ಬೀನ್ಸ್ ಕೆಜಿಗೆ 229 ರೂ. ಗೆ ಏರಿಕೆಯಾಗಿದ್ದರೆ ಉಳಿದಂತೆ ಶುಂಠಿ 198 ರೂ. ಬೆಳ್ಳುಳ್ಳಿ 338 ರೂ. ನಾಟಿ ಕೊತ್ತಂಬರಿ 250 ರೂ. ಏಲಕ್ಕಿ ಬಾಳೆ 86 ರೂ. ಬಿಳಿ ಬದನೆ 100 ರೂ. ಬಜ್ಜಿ ಮೆಣಸಿನಕಾಯಿ 114 ರೂ. ಕ್ಯಾಪ್ತಿಕಾಂ 114 ರೂ. ಮೂಲಂಗಿ 70 ರೂ. ನುಗ್ಗೆಕಾಯಿ 184 ರೂ. ಹೀರೇಕಾಯಿ 100 ರೂ. ಕ್ಯಾರಟ್ 92 ರೂ. ನವಿಲುಕೋಸು 98 ರೂ. ಟೊಮೇಟೊ 100 ರೂ. ಗಡಿ ದಾಟಿದೆ.

Source : https://m.dailyhunt.in/news/india/kannada/kannadanewsnow-epaper-kanowcom/tarakaari+bele+erikege+janasaamaanyaru+kangaalu+tometo+100+bins+200+ru+ge+maaraata+-newsid-n618564164?listname=topicsList&topic=for%20you&index=10&topicIndex=0&mode=pwa&action=click

 

Leave a Reply

Your email address will not be published. Required fields are marked *