ಸ್ತನ್ಯಪಾನ ತಾಯಿ ಮಗುವಿನ ಬಾಂಧವ್ಯ ಬೆಸೆಯಲು ಸಹಕಾರಿ-ಸಮುದಾಯ ಆರೋಗ್ಯಾಧಿಕಾರಿ ರಮೇಶ್ ಟಿ.

ಮಗುವಿಗೆ ತಾಯಿ ಎದೆಹಾಲು ಆರೋಗ್ಯ ನೀಡುವ ಪೌಷ್ಟಿಕಾಹಾರ ಮಾತ್ರವಲ್ಲ ತಾಯಿ ಮಗುವಿಗೆ ಸ್ತನ್ಯಪಾನ ಮಾಡಿಸುವುದರಿಂದ ತಾಯಿ ಮತ್ತು ಮಗುವಿನ ಬಾಂಧವ್ಯ ಗಟ್ಟಿಯಾಗಿ ಬೆಸೆಯಲು ಸಹಕಾರಿಯಾಗಿದೆ ಎಂದು ಸಮುದಾಯ ಆರೋಗ್ಯಾಧಿಕಾರಿ ರಮೇಶ್ ಟಿ. ಅಭಿಪ್ರಾಯಪಟ್ಟಿದ್ದಾರೆ.

ಚಿತ್ರದುರ್ಗ ತಾಲ್ಲೂಕಿನ ಜೆ ಎನ್ ಕೋಟೆ ಗ್ರಾಮದ ಸರ್ಕಾರಿ ಉಪ ಆರೋಗ್ಯ ಮತ್ತು ಕ್ಷೇಮ ಮಂದಿರದ ವತಿಯಿಂದ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಬಗ್ಗೆ ಮಾಹಿತಿ‌ ನೀಡುತ್ತಾ ಮಾತನಾಡುತ್ತಾ ತಾಯಿಯ ಎದೆಹಾಲು ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅಗತ್ಯವಾದ ಎಲ್ಲ ಪೋಷಕಾಂಶಗಳನ್ನೂ ಒಳಗೊಂಡಿರುತ್ತದೆ. ಹೀಗಾಗಿ ಮೊದಲ ಆರು ತಿಂಗಳುಗಳವರೆಗೆ ಮಗುವಿಗೆ ಸ್ತನ್ಯಪಾನ ಮಾಡಿಸುವುದು ಅತ್ಯಗತ್ಯ. ಇದೊಂದು ನೈಸರ್ಗಿಕ ಕ್ರಿಯೆಯಾದರೂ ತಾಯಿಯಾದವಳು ಮಗುವಿಗೆ ಎದೆಹಾಲುಣಿಸುವಾಗ ಕೆಲವೊಂದು ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವುದು ಅತ್ಯವಶ್ಯವಾಗಿದೆ. ಇದರಿಂದ ಮಗು ಮತ್ತು ತಾಯಿ ಹಲವಾರು ಪ್ರಯೋಜನಗಳನ್ನು ಪಡೆಯಲು ಸಾಧ್ಯ ತಾಯಿಯ ಎದೆಹಾಲು ಮಗುವಿಗೆ ಅಮೃತ ಸಮಾನ. ಸ್ತನ್ಯಪಾನ ಮಗುವಿನ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಗುವಿಗೆ ಅಗತ್ಯವಾದ ಎಲ್ಲ ಪೌಷ್ಟಿ ಕಾಂಶಗಳು ತಾಯಿಯ ಹಾಲಿನಲ್ಲಿವೆ. ಎಂದು ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜೆ ಎನ್ ಕೋಟೆ ಸರ್ಕಾರಿ ಆಯುರ್ವೇದ ಆಯುಷ್ ಕೇಂದ್ರದ ಯೋಗ ತರಬೇತುದಾರ ರವಿ ಕೆ.ಅಂಬೇಕರ್ ಮಾತನಾಡಿ ಗರ್ಭಾವಸ್ಥೆಯಲ್ಲಿರುವ ಮಹಿಳೆಯರ ದೇಹವು ಪ್ರತಿದಿನ ನೋಯುತ್ತಿರುವುದನ್ನು ಗರ್ಭಾವಸ್ತೆಯಲ್ಲಿರುವ ತಾಯಂದಿರು ಸಾಮಾನ್ಯವಾಗಿ ಗಮನಿಸಬಹುದು. ಗರ್ಭಾವಸ್ಥೆಯಲ್ಲಿ ತಾಜಾ ಮತ್ತು ಆರಾಮವಾಗಿರಲು ಸರಳ ಯೋಗ ವ್ಯಾಯಾಮವು  ಉತ್ತಮ ಒಂದು ಪರಿಹಾರವಾಗಿದೆ.ಸುಲಭ ಪ್ರಸವ ಹಾಗೂ ತಾಯಿ ಮಗುವಿನ ಉತ್ತಮ ಆರೋಗ್ಯದ ದೃಷ್ಟಿಯಿಂದ ಗರ್ಭಾವಸ್ಥೆಯಲ್ಲಿ ಗರ್ಭಿಣಿಯರು ಯೋಗ ಪ್ರಾಣಾಯಾಮ ಮಾಡುವುದು ಅತ್ಯವಶ್ಯಕ ಇಂತಹ ಸರಳ ಯೋಗಭ್ಯಾಸವನ್ನು ಸರ್ಕಾರಿ ಆಯುಷ್ ಆಯುರ್ವೇದ ಚಿಕಿತ್ಸಾಲಯಗಳಲ್ಲಿ ಉಚಿತವಾಗಿ ತರಬೇತಿ ನೀಡಲಾಗುವುದು ಗರ್ಭಿಣಿ ಸ್ತ್ರೀಯರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ಇದೇ ಸಂಧರ್ಭದಲ್ಲಿ ಗರ್ಭಿಣಿಯರು ಮತ್ತು ಬಾಣಂತಿ ಸ್ತ್ರೀಯರು ಸೇವಿಸಬೇಕಾದ ಪೌಷ್ಟಿಕ ಆಹಾರದ ಪ್ರದರ್ಶನ ಮಾಡುವುದರೊಂದಿಗೆ ಅವುಗಳು ಉಪಯೋಗ ಮತ್ತು ಲಾಭವನ್ನು ತಿಳಿಸಿಕೊಡಲಾಯಿತು.

ಕಾರ್ಯಕ್ರಮದಲ್ಲಿ ಸಂಧರ್ಭದಲ್ಲಿ ಸಮುದಾಯ ಆರೋಗ್ಯ ಸುರಕ್ಷಣಾಧಿಕಾರಿ ರತ್ನಮ್ಮ ಆಶಾ ಕಾರ್ಯಕರ್ತೆಯರಾದ ಕರಿಯಮ್ಮ ಶಾರದಮ್ಮ

ಅಂಗನವಾಡಿ ಕಾರ್ಯಕರ್ತೆ ಭಾಗ್ಯಮ್ಮ ಮತ್ತು ಹಲವಾರು ಗರ್ಭಿಣಿ ಮತ್ತು ಬಾಣಂತಿ ಸ್ತ್ರೀಯರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *