ಪತಂಜಲಿ ಯೋಗ ಸಮಿತಿಯಿಂದ 69ನೇ ಕನ್ನಡ ರಾಜ್ಯೋತ್ಸವ ಹಾಗೂ ಯೋಗ ಶಿಬಿರದ ಮುಕ್ತಾಯ ಸಮಾರಂಭ.

ಚಿತ್ರದುರ್ಗ:ನ. 27 ನಮ್ಮ ನಿತ್ಯ ಜೀವನದಲ್ಲಿ ಕನ್ನಡ ಮಾತನಾಡುವ ಅಭ್ಯಾಸ ಮತ್ತು ಯೋಗ ಧ್ಯಾನ ಮಾಡುವ ಅಭ್ಯಾಸ ನಾವು ಬದುಕಿನಲ್ಲಿ ಅಳವಡಿಸಿಕೊಂಡರೆ ಬದುಕು ಬದುಕು ಸಾರ್ಥಕಗೊಳ್ಳುವಲ್ಲಿ ಎರಡು ಮಾತಿಲ್ಲ ಚಿತ್ರದುರ್ಗ ಪತಂಜಲಿ ಯೋಗ ಸಮಿತಿಯಿಂದ ಉಚಿತ ಯೋಗ ಶಿಬಿರಗಳನ್ನು ನಡೆಸುವುದರ ಜೊತೆಗೆ ಕನ್ನಡ ರಾಜ್ಯೋತ್ಸವ ಆಚರಿಸುವ ಮೂಲಕ ಜನರಲ್ಲಿ ಕನ್ನಡ ಜಾಗೃತಿಯನ್ನು ಬೆಳೆಸುತ್ತಿರುವುದು ಸಂತೋಷದ ವಿಷಯವಾಗಿದೆ ಎಂದು ಕನ್ನಡ ಉಪನ್ಯಾಸಕಿ ಶ್ರೀಮತಿ ಸರೀನಾ ಹೇಳಿದರು.

ಜಿಲ್ಲಾ ಪತಂಜಲಿ ಯೋಗ ಸಮಿತಿ, ಜಿಲ್ಲಾ ಪತಂಜಲಿ ಕಿಸಾನ್ ಸಮಿತಿ ಚಿತ್ರದುರ್ಗ ಸಂಯುಕ್ತವಾಗಿ ನಗರದ ದವಳಗಿರಿ ಬಡಾವಣೆಯಲ್ಲಿ ಕಳೆದ 15 ದಿನಗಳಿಂದ ಸಾರ್ವಜನಿಕರಿಗಾಗಿ ಹಮ್ಮಿಕೊಂಡಿದ್ದ ಉಚಿತ ಯೋಗ ತರಬೇತಿ ಶಿಬಿರದ ಮುಕ್ತಾಯ ಸಮಾರಂಭ ಹಾಗೂ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು
ಸಮಾರಂಭವನ್ನು ಉದ್ದೇಶಿ ಮಾತನಾಡಿದ ನಿವೃತ್ತ ಕನ್ನಡ ಪ್ರಾಧ್ಯಾಪಕ ಶಶಿಕಿರಣ್ ನಮ್ಮ ಕರ್ನಾಟಕ ರಾಜ್ಯದಲ್ಲಿ ನೆಲೆಸಿರುವ ಪ್ರತಿಯೊಬ್ಬ ಕನ್ನಡಿಗನೂ ಕನ್ನಡ ಭಾಷೆಯ ಬಗ್ಗೆ ಹೆಮ್ಮೆ ಹೊಂದಿರಬೇಕು. ನಮ್ಮ ಮಾತೃಭಾಷೆಯನ್ನು ಕೇವಲ ಮನೆಗಷ್ಟೇ ಸೀಮಿತವಾಗಿರಿಸದೇ, ಶಾಲೆ, ಕಚೇರಿ ಮತ್ತು ವ್ಯಾಪಾರದಲ್ಲೂ ಹೆಚ್ಚಾಗಿ ಬಳಸುವಂತಾಗಬೇಕು. ಕನ್ನಡವನ್ನು ಪ್ರೀತಿಸೋಣ, ಕನ್ನಡವನ್ನು ಬೆಳೆಸೋಣ ಇದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಯೋಗ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಯೋಗ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದ ಪತಂಜಲಿ ಯೋಗ ಸಮಿತಿಯ ಜಿಲ್ಲಾಧ್ಯಕ್ಷರಾದ ದೇವಾನಂದ ನಾಯಕ್ ಮಾತನಾಡಿ ಯೋಗದ ಸಾಧನೆಯ ಮಹತ್ವ ಮತ್ತು ಅದರ ಉಪಯೋಗದ ಬಗ್ಗೆ ಅರಿವಿದ್ದರೂ ಯೋಗ ನಮ್ಮ ಜೀವನದ ಒಂದು ಅವಿಭಾಜ್ಯ ಅಂಗ ಎಂದು ಒಪ್ಪಿಕೊಳ್ಳುವಲ್ಲಿ ನಾವು ಹಿಂದೆ ಬಿದ್ದಿದ್ದೇವೆ ಯೋಗ ಹೊಟ್ಟೆ ಕರಗಿಸುವ ವ್ಯಾಯಾಮವಷ್ಟೇ ಆಗದೆ, ಅದು ಬದುಕನ್ನು ಬದಲಿಸುವ ಜೀವನದ ಮೌಲ್ಯವಾಗಿದೆ. ಯೋಗ ಶಿಕ್ಷಕರು ತಾವು ಪಡೆದ ಜ್ಞಾನವನ್ನು ಇತರರಿಗೆ ನಿಸ್ವಾರ್ಥತೆಯಿಂದ ಹಂಚುವುದರ ಮೂಲಕ ಯೋಗದ ನೂರಾರು ಜನರಿಗೆ ಆರೋಗ್ಯವನ್ನು ನೀಡುತ್ತಾ ಬಂದಿದ್ದಾರೆ ಅಂತಹ ಶಿಕ್ಷಕರನ್ನು ಗೌರವಿಸಿ ಸನ್ಮಾನಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಯೋಗ ಶಿಕ್ಷಕಿ ಶ್ರೀಮತಿ ಸರ್ವದ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭದಲ್ಲಿ ಕನ್ನಡ ಉಪನ್ಯಾಸಕ ಹಾಗೂ ಯೋಗ ಶಿಕ್ಷಕ ಕೆಂಚವೀರಪ್ಪ ಎಲ್ಲರನ್ನೂ ಸ್ವಾಗತಿಸಿದರೆ ಸಮಿತಿಯ ಕಾರ್ಯದರ್ಶಿ ಗುರುಮೂರ್ತಿ ವಂದನಾರ್ಪಣೆ ಸಲ್ಲಿಸಿದರು ಯೋಗ ಸಾಧಕ ರವೀಂದ್ರ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಿರೂಪಿಸಿದರು.
ವೇದಿಕೆಯಲ್ಲಿ ಗ್ಯಾರಂಟಿ ಅಧ್ಯಕ್ಷರಾದ ಶಿವಣ್ಣ, ಶ್ರೀಕಾಂತ್ ಮುನಿಯಪ್ಪ ಸಮಿತಿ ಸದಸ್ಯರಾದ ಸುಭದ್ರಮ್ಮ ಲಲಿತ ಬೇಂದ್ರೆ ವಿಜಯಲಕ್ಷ್ಮಿ ಕಮಲಮ್ಮ ರಂಗಣ್ಣ ರಾಜಪ್ಪ ಈಶ್ವರಪ್ಪ ಯೋಗ ಶಿಕ್ಷಕರಾದ ಶ್ರೀಧರ್ ತಿಪ್ಪೇಸ್ವಾಮಿ ಶಿವಸ್ವಾಮಿ ಶಿವಲಿಂಗಪ್ಪ ಹಾಗೂ ಇನ್ನಿತರರು ಉಪಸ್ಥರಿದ್ದರು.


Leave a Reply

Your email address will not be published. Required fields are marked *