ಚಿತ್ರದುರ್ಗ| ಕಬೀರಾನಂದ ಆಶ್ರಮ;ಕಬೀರಾನಂದ ಮಹಾಸ್ವಾಮಿಗಳ ಹಾಗೂ ಶ್ರೀ ಸದ್ಗುರು ಕಬೀರೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆಯ ಸಮಾರೋಪ ಸಮಾರಂಭ.

ಚಿತ್ರದುರ್ಗ ನ. 25: ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲಿಯೇ ಮಠಗಳು, ಮಂದಿರಗಳಿಗೆ ಕರೆದುಕೊಂಡು ಹೋಗುವ ಅಭ್ಯಾಸವನ್ನು ಮಾಡಿದಾಗ ಅವರು ಸಂಸ್ಕಾರವನ್ನು ಕಲಿಯಲು ಸಹಾಯವಾಗುತ್ತದೆ ಎಂದು ಶಾರದಾ ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗಳಾದ ಶ್ರೀ ಸ್ವಾಮಿ
ಬ್ರಹ್ಮನಿಷ್ಠಾನಂದಜೀ ತಿಳಿಸಿದರು.

ಚಿತ್ರದುರ್ಗ ನಗರದ ಕಬೀರಾನಂದ ನಗರದ ಶ್ರೀ ಗುರು ಕಬೀರಾನಂದ ಆಶ್ರಮದವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ಸದ್ಗುರು
ಕಬೀರಾನಂದ ಮಹಾಸ್ವಾಮಿಗಳವರ 68ನೇ ಹಾಗೂ ಶ್ರೀ ಸದ್ಗುರು ಕಬೀರೇಶ್ವರ ಮಹಾಸ್ವಾಮಿಗಳವರ 58ನೇ ಪುಣ್ಯಾರಾಧನೆ
ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಮಾನವನಾದನಿಗೆ ಹಿಂದೆ ಗುರು ಇದ್ದು ಮುಂದೆ ಗುರಿ ಇದ್ದಾಗ
ಮಾತ್ರ ಸರಿಯಾದ ದಾರಿಯಲ್ಲಿ ಸಾಗಲು ಸಾಧ್ಯವಿದೆ, ಇವೆರಡು ಇಲ್ಲದಿದಾಗ ಮಾನವ ದಾರಿಯನ್ನು ತಪ್ಪುತ್ತಾನೆ, ಮಕ್ಕಳು ಚಿಕ್ಕ
ವಯಸ್ಸಿನಲ್ಲಿ ಇದ್ದಾಗಲೇ ಅವರಿಗೆ ಮಠ, ಆಶ್ರಮ, ದೇವಾಲಯಗಳನ್ನು ತೋರಿಸುವ ಕಾರ್ಯವನ್ನು ಪೋಷಕರಾದವರು ಮಾಡಬೇಕಿದೆ
ಇದರಿಂದ ಅವರಿಗೆ ಮುಂದೆ ಉತ್ತಮವಾಗಲಿದೆ, ಚನ್ನಾಗಿ ಸಂಸ್ಕಾರವನ್ನು ಕಲಿಯಲು ಸಾಧ್ಯವಾಗುತ್ತದೆ ಗುರುಗಳಲ್ಲಿ ಭಕ್ತಿ ಮೂಡುತ್ತದೆ
ಎಂದರು.

ಮಕ್ಕಳ ಕೈಯಲ್ಲಿ ಮೊಬೈಲ್ ಕೂಡಬೇಡಿ ಅದರ ಬದಲಿಗೆ ಪುಸ್ತಕವನ್ನು ಅದನ್ನು ಓದುವುದರಿಂದ ಜ್ಞಾನ ಹೆಚ್ಚಾಗುತ್ತದೆ. ಇದರಿಂದ ಮುಂದೆಉಪಯೋಗವಾಗಲಿದೆ. ಇದ್ದಲ್ಲದೆ ಉತ್ತಮ ವ್ಯಕ್ತಿಗಳಾಗಲು ಸಹಾ ಸಾಧ್ಯವಿದೆ. ಇಂತಹ ಕಾರ್ಯಕ್ರಮಗಳನ್ನು ತಮ್ಮ ಮಕ್ಕಳನ್ನು ಕರೆತರುವುದರಿಂದ ಗುರುಗಳ ಸಾನೀಧ್ಯ ದೂರಕುತ್ತದೆ, ಅವರ ಅಮೃತವಾಣಿಯನ್ನು ಕೇಳುವುದರಿಂದ ಜೀವನ ಪಾವನವಾಗುತ್ತದೆ.
ಮನೆಯಲ್ಲಿ ತಂದೆ-ತಾಯಿಗಳನ್ನು ಚನ್ನಾಗಿ ನೋಡಿಕೊಳ್ಳಿ ಅವರಿಗೆ ಯಾವುದೇ ತೊಂದರೆಯನ್ನು ನೀಡಬೇಡಿ ಎಂದು ಮನವಿ ಮಾಡಿದರು.

ಸಮಾರೋಪ ಸಮಾರಂಭದ ಸಾನಿಧ್ಯವನ್ನು ವಹಿಸಿದ್ದ ಶ್ರೀ ಗುರು ಕಬೀರಾನಂದಾಶ್ರಮದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನಂದ ಮಹಾಸ್ವಾಮಿಗಳು ಮಾತನಾಡಿ, ಮಾನವನಾದನಿಗೆ ಪುತ್ರೇಶ, ವಿತ್ತೇಶ ಹಾಗೂ ಲೋಕೇಶನನ್ನು ಬಿಟ್ಟವನು ಜೀವನದಲ್ಲಿ ದೂಡ್ಡವನಾಗಲೂ ಸಾಧ್ಯವಿದೆ. ಕಬೀರಾನಂದರ ಆರ್ಶೀವಾದವನ್ನು ಪಡೆದವನು ಜೀವನದಲ್ಲ ಸನ್ಮಾರ್ಗವನ್ನು ಕಾಣುತ್ತಾನೆ, ಪೋಷಕರಲ್ಲಿ ಸಂಸ್ಕಾರ ಇದ್ದರೆ ಅದು ಮಕ್ಕಳಲ್ಲಿ ಬರಲು ಸಾಧ್ಯವಿದೆ, ಈ ಹಿನ್ನಲೆಯಲ್ಲಿ ಮೊದಲು ಪೋಷಕರಾದವರು ಸಂಸ್ಕಾರವಂತರಾಗಬೇಕಿದೆ. ಓದುವ ಹವ್ಯಾಸವನ್ನು ಬೆಳಸಿಕೊಳ್ಳಿ ಇದರಿಂದ ನಿಮ್ಮ ಜೀವನ ಪಾವನವಾಗುತ್ತದೆ. ಕಬೀರಾನಂದ ಶ್ರೀಗಳು ಗುರುವಿನ ಆಣತಿಯಂತೆ ಚಿತ್ರದುರ್ಗಕ್ಕೆ ಬಂದು ಗೋಶಾಲೆಯನ್ನು ತೆರೆಯುವುದರ ಮೂಲಕ ಗೋಸಂರಕ್ಷಣೆಯನ್ನು ಮಾಡಿದರು ಎಂದರು.

ಜಿ.ಪಂ.ನಿವೃತ್ತ ವ್ಯವಸ್ಥಾಪಕರಾದ ನಾಗರಾಜ್ ಸಂಗಂ ಮಾತನಾಡಿ, ಗುರುವಿಗೆ ಶರಣಾದಾಗ ಮಾತ್ರ ಮುಕ್ತಿ ಸಿಗಲು ಸಾಧ್ಯವಿದೆ.
ಗುರುವಿನ ಚರಿತೆಯನ್ನು ಎಲ್ಲರು ತಿಳಿಯಬೇಕಿದೆ, ಆಗ ಮಾತ್ರ ಗುರುವಿನ ಸಾನೀಧ್ಯ ದೂರಕಲು ಸಾಧ್ಯವಿದೆ. ಇಂದಿನ ದಿನಮಾನದಲ್ಲಿ
ವೃದ್ದಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿರುವುದು ನೋವಿನ ಸಂಗತಿಯಾಗಿದೆ, ಮನೆಯಲ್ಲಿಯೇ ವೃದ್ದರನ್ನು ಚನ್ನಾಗಿ ನೋಡಿಕೊಳ್ಳುವ
ಕಾರ್ಯವಾಗಬೇಕಿದೆ. ಮನೆಯಲ್ಲಿ ಅತ್ತೇ-ಸೊಸೆಯ ವೈರತ್ವ ಕಡಿಮೆಯಾದಾಗ ಮಾತ್ರ ಇಂತಹ ವೃದ್ದಾಶ್ರಮಗಳ ಸಂಖ್ಯೆ ಕಡಿಮೆಯಾಗಲು
ಸಾಧ್ಯವಿದೆ ಎಂದರು.

ಕೆಡಿಪಿ ಸದಸ್ಯರಾದ ಕೆ.ಸಿ.ನಾಗರಾಜು ಮಾತನಾಡಿದರು. ನಗರಸಭಾ ಸದಸ್ಯರಾದ ವೆಂಕಟೇಶ್, ವೀರಶೈವ ಕ್ರೆಡಿಟ್ ಕೋ-ಆಪರೇಟಿವ್
ಸೊಸೈಟಿಯ ನಿರ್ದೆಶಕರಾದ ಸಿದ್ದವ್ವನಹಳ್ಳಿ ಪರಮೇಶ್ ನಿವೃತ್ತ ಜಿಲ್ಲಾಧಿಕಾರಿಗಳಾದ ಭೀಮಯ್ಯ ಗಣಪತಿ ಶಾಸ್ತ್ರಿ, ನಿರಂಜನ ಮೂರ್ತಿ
ತಿಪ್ಪೇಸ್ವಾಮಿ ಭಾಗವಹಿಸಿದ್ದರು. ಸಾಹಿತಿಗಳಾದ ಹುರಳಿ ಬಸವರಾಜು ಉಪನ್ಯಾಸ ನೀಡಿದರು.
ಸಮಾರೋಪ ಸಮಾರಂಭದ ಸಾನಿಧ್ಯವನ್ನು ಶ್ರೀ ಗುರು ಕಬೀರಾನಂದಾಶ್ರಮದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನಂದ
ಮಹಾಸ್ವಾಮಿಗಳು ವಹಿಸಲಿದ್ದಾರೆ. ಶಾರದಾ ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗಳಾದ ಶ್ರೀ ಸ್ವಾಮಿ ಬ್ರಹ್ಮನಿಷ್ಠಾನಂದಜೀ
ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತ್ರಿ ಪುರಸ್ಕøತರು, ನಿವೃತ್ತ ಕಾಲೇಜು ಶಿಕ್ಷಣ ನಿರ್ದೆಶಕರಾದ ಶ್ರೀಮತಿ ಡಾ.ಕಮಲಮ್ಮ ಹಾಗೂ
ಚಿತ್ರದುರ್ಗ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷರಾದ ಡಾ.ವಿ.ಎಲ್,ಪ್ರಶಾಂತ್‍ರವರನ್ನು ಸನ್ಮಾನಿಸಲಾಯಿತು.
ಶ್ರೀ ಸದ್ಗುರು ಕಬೀರಾನಂದ ಮಹಾಸ್ವಾಮಿಗಳವರ 68ನೇ ಹಾಗೂ ಶ್ರೀ ಸದ್ಗುರು ಕಬೀರೇಶ್ವರ ಮಹಾಸ್ವಾಮಿಗಳವರ 58ನೇ
ಪುಣ್ಯಾರಾಧನೆಯ ಅಂಗವಾಗಿ ನ. 18 ರಿಂದ 23 ರವರೆಗೆ ಆರೂಢ ಮೇರು ಜೀವನ ಚರಿತ್ರೆ ಪಾರಾಯಣ ಪ್ರವಚನ ನಡೆದಿದ್ದು, ಬೆಳಿಗ್ಗೆ
ಬ್ರಾಹ್ಮೀ ಮಹೂರ್ತದಲ್ಲಿ ಶ್ರೀ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ನಡೆದಿದ್ದು ಸಂಜೆ ಮಹಾ ಮಂಗಳಾರತಿ ನಡೆಯಿತು.
ಸುಬ್ರಯಾಭಟ್ಟರು ವೇದ ಘೋಷಗಳನ್ನು ಮಾಡಿದರೆ ಶಿಕ್ಷಕಿ ಶ್ರೀಮತಿ ಜ್ಯೋತಿ ಪ್ರಾರ್ಥಿಸಿದರು ತಿಪ್ಪೇಸ್ವಾಮಿ ಸ್ವಾಗತಿಸಿದರು, ಮುರುಗೇಶ್
ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Views: 1

Leave a Reply

Your email address will not be published. Required fields are marked *