ಚನ್ನರಾಯಪಟ್ಟಣ ಪುರಸಭೆ ವಾರ್ಡ್ಗಳಿಗೆ ನಾಮಫಲಕ ಅಳವಡಿಸುವಂತೆ ಪುರಸಭೆ ಮುಖ್ಯ ಅಧಿಕಾರಿಗೆ ಕಾಂಗ್ರೆಸ್ ಮನವಿ .

ವರದಿ ಮತ್ತು ಫೋಟೋ ಕೃಪೆ: ವರುಣ್ ಚಕ್ರವರ್ತಿ, ಹಾಸನ.  ಮೊ: 9743929407

ಚನ್ನರಾಯಪಟ್ಟಣ  : ಹಾಸನ ನಗರಸಭೆ ವತಿಯಿಂದ ಎಲ್ಲಾ ವಾರ್ಡ್ಗಳಲ್ಲಿ ನಾಮಫಲಕ ಅಳವಡಿಸಿರುವಂತೆ ಚನ್ನರಾಯಪಟ್ಟಣ ತಾಲ್ಲೂಕು 23 ವಾರ್ಡ್ ಗಳಿಗೂ ನಾಮಫಲಕ ,ರಸ್ತೆ ಹೆಸರು,ವಾರ್ಡ್ ನಂಬರ್ ಬೋರ್ಡ್ ಅಳವಡಿಸುವಂತೆ ಸಾರ್ವಜನಿಕವಾಗಿ ಮನವಿ ಮಾಡಲಾಯಿತು. ಪಟ್ಟಣದ ಕೆಲವೊಂದು ರಸ್ತೆ ಮತ್ತು ವಾರ್ಡ್ಗಳಲ್ಲಿ ಹೆಸರು ಮತ್ತು ವಾರ್ಡ್ ನಂಬರ್ ತಿಳಿಸುವ ಯಾವುದೇ ಬೋರ್ಡ್ ಇರುವುದಿಲ್ಲ.

ಸಾರ್ವಜನಿಕರಲ್ಲಿ ಬೇಸರ ತಂದಿದೆ

ಸಾರ್ವಜನಿಕರಿಂದ ತೆರಿಗೆ ವಸೂಲಿ ಮಾಡುವ ಪುರಸಭೆಗೆ ಅರ್ಥವಾಗದ ವಿಷಯವೇನಲ್ಲ ಹಾಗೂ ಪ್ರತಿನಿತ್ಯ ಸಾವಿರಾರು ಮಂದಿ ಚನ್ನರಾಯಪಟ್ಟಣಕ್ಕೆ ವ್ಯಾಪಾರ ವಹಿವಾಟು ಇತರೆ ಕೆಲಸ ಕಾರ್ಯಗಳಿಗೆ ಆಗಮಿಸುತ್ತಾರೆ, ಅವರಿಗೆ ಬೇಕಾದ ವಿಳಾಸ ಹುಡುಕಲು ಪರದಾಡುತ್ತಾರೆ. ಹಾಲಿ ವಾಸ ಇರುವ ನಿವಾಸಿಗಳಿಗೆ ಬಹುತೇಕ ಯಾವ ವಾರ್ಡಿನಲ್ಲಿ ಇದ್ದೇವೆ ಎಂಬುದು ಹಾಗೂ ಯಾವ ರಸ್ತೆಯಲ್ಲಿ ಇದ್ದೇವೆ ಎಂಬುದು ಗೊಂದಲದ ಗೂಡಾಗಿದೆ. ಪಟ್ಟಣದ ಕೆಲವೊಂದು ರಸ್ತೆ ಮತ್ತು ವಾರ್ಡ್ಗಳಲ್ಲಿ ಹೆಸರು ಮತ್ತು ವಾರ್ಡ್ ನಂಬರ್ ತಿಳಿಸುವ ಯಾವುದೇ ಬೋರ್ಡ್ ಇರುವುದಿಲ್ಲ,ಎಂಬುದೇ ಬೇಸರದ ಸಂಗತಿಯಾಗಿದೆ. ಆದಷ್ಟು ಬೇಗ ಅಧಿಕಾರಿಗಳು ಇದರ ಬಗ್ಗೆ ಪರೀಶೀಲಿಸಿ ಅತಿ ಶೀಘ್ರದಲ್ಲಿ ನಾಮಫಲಕ ಅಳವಡಿಸಬೇಕು. ವರ್ಷಗಳ ಹಿಂದೆ ಪಟ್ಟಣದಾದ್ಯಂತ ಎಲ್ಲಾ ವಾರ್ಡ್ ಮತ್ತು ರಸ್ತೆಗಳಲ್ಲಿ ಅಳವಡಿಸಿದ್ದಂತಹ ಕಾಂಕ್ರೀಟ್  ರಸ್ತೆ ಮತ್ತು ಕಾಮಗಾರಿಗಳ ಹೊಡೆತಕ್ಕೆ ನಶಿಸಿಹೋಗಿದೆ. ಆದುದರಿಂದ ಮಾನ್ಯ ಪುರಸಭಾ ಅಧಿಕಾರಿಗಳು ಇದರ ಬಗ್ಗೆ ಖುದ್ದಾಗಿ ಪರೀಶೀಲಿಸಿ ಶೀಘ್ರದಲ್ಲೇ ನಾಮಫಲಕ ಅಳವಡಿಸಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಜಬಿ ಕಾಂಗ್ರೆಸ್ ಮುಖಂಡರು ಹಾಗೂ ರವಿ ರೈತ ಸಂಘದ ಮುಖಂಡರು, ಪ್ರೇಮ ಅಕ್ಕ ರೈತ ಸಂಘ ,ಸೀನ ರೈತ ಮುಖಂಡರು, ಪುರಸಭೆ ಮುಖ್ಯ ಅಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.

Leave a Reply

Your email address will not be published. Required fields are marked *