ಚಿತ್ರದುರ್ಗ ನ. 26
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಸಂವಿಧಾನ ದಿನದ ಆಚರಣೆಯ ಉದ್ದೇಶ ಭಾರತದ ನಾಗರಿಕರಲ್ಲಿ ಸಂವಿಧಾನದ ಮೌಲ್ಯಗಳು, ಹಕ್ಕು-ಕರ್ತವ್ಯಗಳು, ನ್ಯಾಯ- ಸಮಾನತೆ-ಸ್ವಾತಂತ್ರ್ಯ ತತ್ವಗಳು ಬಗ್ಗೆ ಜಾಗೃತಿ ಮೂಡಿಸುವುದು. ಸಂವಿಧಾನವು ಕೇವಲ ಕಾನೂನು ಪಠ್ಯವಷ್ಟೇ ಅಲ್ಲ; ಇದು ದೇಶದ ಪ್ರತಿಯೊಬ್ಬ ನಾಗರಿಕನ ಹಕ್ಕು- ಸ್ವಾತಂತ್ರ್ಯಗಳನ್ನು ಕಾಪಾಡುವ ಭದ್ರಗೋಡೆ ಎಂದು ಮಾಜಿ ಸಚಿವ ಹೆಚ್.ಅಂಜನೇಯ ತಿಳಿಸಿದರು.
ನವಂಬರ್ 26ರಂದು ಆಚರಿಸಲಾಗುವ ಸಂವಿಧಾನ ದಿನದ ಪ್ರಯುಕ್ತ ಚಿತ್ರದುರ್ಗ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ನಡೆದ ಸಂವಿಧಾನ ಬಚಾವ್ ದಿವಸ್ ಆಚರಣೆ ಹಾಗೂ ಸಂವಿಧಾನ ಪೀಠಿಕೆಯನ್ನು ಬೋಧಿಸುವ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿಆರ್ ಅಂಬೇಡ್ಕರರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಅನೇಕ ಹೋರಾಟಗಾರರ ತ್ಯಾಗದ ಫಲವಾಗಿ ದೇಶ 1947 ಆಗಸ್ಟ್ 15ರಂದು ಸ್ವಾತಂತ್ರ್ಯ ಗಳಿಸಿದರೂ ದೇಶ ಮುನ್ನಡೆಸಲು ಅಗತ್ಯವಿದ್ದುದು ಕಾನೂನು, ನೀತಿ ನಿರೂಪಣೆಗಳ ಸಂವಿಧಾನ. ಸಂವಿಧಾನ ಶಿಲ್ಪಿ ಡಾ.ಬಿಆರ್ ಅಂಬೇಡ್ಕರರ ನೇತೃತ್ವದಲ್ಲಿ ಸತತ ಮೂರ್ನಾಲ್ಕು ವರ್ಷಗಳ ಅಧ್ಯಯನ ಹಾಗೂ ಶ್ರಮದಿಂದ ರಚಿಸಿದ ಸಂವಿಧಾನವನ್ನು ಲೋಕಸಭೆಯಲ್ಲಿ 1949ನವೆಂಬರ್ 26ರಂದು ಮಂಡಿಸಿ ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ. ಈ ದಿನ ನಾವು ಅಲ್ಪ ಸ್ವಲ್ಪ ಗೌರವದ, ಸ್ವಾವಲಂಬನೆ ಬದುಕು ಸಾಗಿಸಲು ಸಂವಿಧಾನವೇ ಮುಖ್ಯ ಕಾರಣವಾಗಿದೆ 1946ರಲ್ಲಿ ರಚಿಸಲಾದ ಕರಡು ಸಮಿತಿಯು ಸುಮಾರು 2 ವರ್ಷ 11 ತಿಂಗಳು 18 ದಿನ ಸಂವಿಧಾನದ ಮೇಲೆ ಕಾರ್ಯನಿರ್ವಹಿಸಿತು.ಒಟ್ಟು ಸುಮಾರು 389 ಸದಸ್ಯರು ಇದರ ಭಾಗವಾಗಿದ್ದರು. ಸಂವಿಧಾನವು 22 ಭಾಗಗಳು, 395 ಕಲ್ಮೆಗಳು ಹಾಗೂ 12 ಅನುಸೂಚಿಗಳನ್ನು ಹೊಂದಿದ್ದು ವಿಶ್ವದ ದೀರ್ಘ ಸಂವಿಧಾನಗಳಲ್ಲಿ ಒಂದಾಗಿದೆ. ಎಂದರು.
ಸಂವಿಧಾನದ ಮೌಲ್ಯಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಅವನ್ನು ಪಾಲಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ನ್ಯಾಯ, ಸಮಾನತೆ, ಸ್ವಾತಂತ್ರ್ಯ ಹಾಗೂ ಬಾಂಧವ್ಯವನ್ನು ಕಾಪಾಡುವುದೇ ನಿಜವಾದ ಸಂವಿಧಾನ ಪ್ರೀತಿ. ಭಾರತೀಯ ಸಂವಿಧಾನದ ವಿಶಿಷ್ಟ ಮೌಲ್ಯಗಳು ಸರ್ವಜನ ಸಮಾನತೆ ಮತ, ಜಾತಿ, ಧರ್ಮ, ಭಾಷೆ, ಲಿಂಗದ ಬೇಧವಿಲ್ಲದ ಹಕ್ಕುಗಳು ಮೂಲಭೂತ ಹಕ್ಕುಗಳು ನಾಗರಿಕ ಕರ್ತವ್ಯಗಳು ಸಂಘೀಯ ವ್ಯವಸ್ಥೆ, ಸಂಸತ್ತೀಯ ಪ್ರಜಾಪ್ರಭುತ್ವ, ಸ್ವತಂತ್ರ ನ್ಯಾಯಾಂಗ ಈ ದಿನ ನಮ್ಮೆಲ್ಲರ ಜವಾಬ್ದಾರಿ ಯಾಗಿದೆ. ಡಾ. ಅಂಬೇಡ್ಕರ್ ಅವರು ಭಾರತದ ಸಂವಿಧಾನದ ಮುಖ್ಯ ಕರಡು ರಚನೆಕಾರಗಿದ್ದು ಸಾಮಾಜಿಕ ನ್ಯಾಯ, ಧರ್ಮನಿರಪೇಕ್ಷತೆ, ಸಮಾನತೆ, ಮಾನವ ಹಕ್ಕುಗಳ ಮೂಲ ತತ್ವಗಳಿಗೆ ಅವರು ನೀಡಿದ ಪ್ರಾಮುಖ್ಯತೆ ವಿಶ್ವದ ದೊಡ್ಡ ಸಂವಿಧಾನಗಳಲ್ಲಿ ಒಂದಾದ ಭಾರತೀಯ ಸಂವಿಧಾನದ ವಿಶಿಷ್ಟತೆಯಾಗಿದೆ ಎಂದು ತಿಳಿಸಿದರು.
ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸದೆ ಈಗ ಅಧಿಕಾರವನ್ನು ನಡೆಸುತ್ತಿರುವ ರಾಜಕೀಯ ಪಕ್ಷ ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಎಂದು ಹೇಳುತ್ತಾ ಬಂದಿದೆ ಆದರೆ ಸಂವಿಧಾನವನ್ನು ಬದಲಾಯಿಸುವ ಧೈರ್ಯ ಯಾರಿಗೂ ಸಹಾ ಇಲ್ಲವಾಗಿದೆ ಏಕೆಂದರೆ ಸಂವಿಧಾನವನ್ನು ಬದಲಾಯಿಸಲು ಕೆಲವು ಕೈಗಳು ಕೆಲಸವನ್ನು ಮಾಡಿದರೆ ಅದನ್ನು ಉಳಿಸಲು ಹಲವಾರು ಕೈಗಳು ಗಟಿಯಾಗಿ ನಿಂತಿವೆ ಇದರಿಂದ ಸಂವಿಧಾನ ಬದಲಾವಣೆಯಾರಿಂದಲೂ ಸಹಾ ಸಾಧ್ಯವಿಲ್ಲ ಎಂದ ಅವರು ನಮ್ಮ ಸಂವಿಧಾನದಿಂದ ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಇದೆ ಆದರೆ ಬೇರೆ ದೇಶಗಳಲ್ಲಿ ಸ್ವಾತಂತ್ರ್ಯ ಇಲ್ಲವಾಗಿದೆ. ಅಲ್ಲಿ ಬಿಗಿಯಾದ ಕಾನೂನು ಇವೆ, ಸಂವಿಧಾನದ ಬಗ್ಗೆ ದುಷ್ಟ ಶಕ್ತಿಗಳು ಸುಳ್ಳು ಸುದ್ದಿಯನ್ನು ಹರಡುತ್ತಿದ್ದಾರೆ. ಬದಲಾವಣೆ ಮಾಡುತ್ತೇವೆ ಎನುತ್ತಿದ್ದಾರೆ, ಇದು ಸಾಧ್ಯವಿಲ್ಲದ ಮಾತಾಗಿದೆ, ಇದನ್ನು ನಂಬ ಬೇಡಿ, ಡಾ.ಬಿ,.ಆರ್ ಅಂಬೇಡ್ಕರ್ ರವರು ನೀಡಿದಂತ ಸಂವಿಧಾನ ಬಲಿಷ್ಠವಾಗಿದೆ, ಯಾವುದಕ್ಕೂ ಸಹಾ ಅದು ಜಗ್ಗುವುದಿಲ್ಲ, ಬಗ್ಗುವುದಿಲ್ಲ ಎಂದರು.
ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ತಾಜ್ ಪೀರ್ ಮಾತನಾಡಿ, ದೇಶ ಬ್ರಟಿಷರ ದಾಸ್ಯದಿಂದ ಮುಕ್ತವಾದ ನಂತರ ದೊಡ್ಡದಾದ ಪ್ರಜಾಪ್ರಭುತ್ವ ರಾಷ್ಟ್ರವಾಯಿತು, ಶೋಷಣೆಗೆ ಒಳಗಾದವರಿಗೆ ಸ್ವಾತಂತ್ರ್ಯವನ್ನು ನೀಡುವುದು ಮಹಾತ್ಮ ಗಾಂಧಿಜಿಯವರ ಕನಸಾಗಿತ್ತು ಅದರಂತೆ ನಡೆಯಲಾಗುತ್ತಿ ಇಂದು ನಾವುಗಳು ಸ್ವಾತಂತ್ರ್ಯದ ಸಂವಿಧಾನದ ಫಲಾನುಭವಿಗಳಾಗಿದ್ದೆವೆ ಸಂವಿಧಾನದಲ್ಲಿ ಸಮಾನತೆ, ಅವಕಾಶಗಳನ್ನು ಪಡೆಯಲು ಅನುವು ಮಾಡಿಕೊಡಲಾಗಿದೆ. ನಮ್ಮ ಪೂರ್ವಜರು ಸಮಾನತೆಯಿಂದ ವಂಚಿತರಾಗಿದ್ದರು, ಸಂವಿಧಾನ ನಮ್ಮೆಗೆಲ್ಲ ರಕ್ಷಣೆಯಾಗಿದೆ, ಮನು ಸಂಸ್ಕøತಿಯನ್ನು ಹೊಂದಿದವರು ಸಂವಿಧಾನವನ್ನು ತೆಗೆಯಲು ಹೊರಟಿದ್ದಾರೆ ಇದಕ್ಕೆ ನಾವು ಅವಕಾಶವನ್ನು ನೀಡುವುದಿಲ್ಲ ಎಂದರು.
ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರಾಧ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ, ಕೆ.ಪಿ.ಸಂಪತ್ ಕುಮಾರ್, ಮೈಲಾರಪ್ಪ, ಗ್ಯಾರೆಂಟಿ ಯೋಜನೆಯ ಜಿಲ್ಲಾಧ್ಯಕ್ಷರಾದ ಶಿವಣ್ಣ, ತಾಲ್ಲೂಕು ಅಧ್ಯಕ್ಷರಾದ ಪ್ರಕಾಶ್, ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಗೀತಾ ನಂದಿನಿಗೌಡ, ಲಿಡ್ಕರ್‍ನ ಮಾಜಿ ಅಧ್ಯಕ್ಷರಾದ ಓ ಶಂಕರ್, ಉಪಾಧ್ಯಕ್ಷರಾದ ರವಿಕುಮಾರ್, ಸೇವಾದಳದ ಜಿಲ್ಲಾಧ್ಯಕ್ಷರಾಧ ಭೂತೇಶ್, ನಗರಾಧ್ಯಕ್ಷರಾದ ಲಕ್ಷ್ಮೀಕಾಂತ್, ಶಿಕ್ಷಕರ ಘಟಕದ ಅಧ್ಯಕ್ಷರಾಧ ಮುದಾಸಿರ್, ಜಮೀರ್ ವೆಂಕಟೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.
Views: 20