ನಿಮ್ಮ ಮನಸ್ಸು ತುಂಬಾ ಚಂಚಲನಾ? ನಿಮ್ಮ ಮಂಕಿ ಮೈಂಡ್ ಹೀಗೆ ಕಂಟ್ರೋಲ್ ಮಾಡಿ!

ವೇಗವಾಗಿ ಓಡುತ್ತಿರುವ ಮಾಡ್ರೆನ್​ ಜಗತ್ತಿನಲ್ಲಿ (Modren Life) ನಮ್ಮ ಯೋಚನೆಗಳು, ಚಿಂತೆಗಳು, ಗೊಂದಲಗಳು ಮತ್ತು ಅತಿಯಾದ ಆಸೆಗಳು ತುಸು ಹೆಚ್ಚೇ ಎನ್ನಬಹುದು. ಒಟ್ಟಿನಲ್ಲಿ ನಮ್ಮ ಮನಸ್ಸು ನಿರಂತರವಾಗಿ ಗೊಂದಲಗಳಿಂದ ಕೂಡಿರುತ್ತದೆ. ಈ ಚಂಚಲ ಮನಸ್ಥಿತಿಯನ್ನು “ಮಂಗನ ಮನಸ್ಥಿತಿ” ಅಥವಾ “ಮಂಕಿ ಮೈಂಡ್” (Monkey Mind) ಎಂದು ಕರೆಯಲಾಗುತ್ತದೆ. ಕೋತಿ ಹೇಗೆ ಯಾವಾಗಲೂ ಮರದಿಂದ ಮರಕ್ಕೆ ಜಿಗಿಯುತ್ತದೆಯೋ ಹಾಗೆಯೇ ನಮ್ಮ ಆಲೋಚನೆಗಳು (Thoughts) ಕೋತಿಯಂತೆ ನಿರಂತರವಾಗಿ ಒಂದು ವಿಷಯದಿಂದ ಇನ್ನೊಂದಕ್ಕೆ ಹೋಗುತ್ತಲೇ ಇರುತ್ತವೆ, ಇದನ್ನೇ ಮಂಕಿ ಮೈಂಡ್‌ ಎನ್ನಲಾಗುತ್ತದೆ. ನಮ್ಮ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ಈ ಆಲೋಚನೆಗಳನ್ನು ತೊರೆಯುವುದು ಅಸಾಧ್ಯವಾಗುತ್ತದೆ. ನಮಗೆ ಏಕಾಗ್ರತೆಯಿಂದ  ಇರಲು ಕಷ್ಟವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಶಾಂತವಾಗಿರುವುದು ತುಂಬಾ ಮುಖ್ಯ. ಈ ಆಲೋಚನೆಗಳನ್ನು ಶಾಂತಗೊಳಿಸಲು ಮತ್ತು ನೆಮ್ಮದಿಯಾಗಿರಿಸಲು ಕೆಲವು ಸ್ನೇಹಪರ ಮಾರ್ಗಗಳು ಇಲ್ಲಿವೆ. ಈ ಕುರಿತು ತಿಳಿಯೋಣ ಬನ್ನಿ.

ನಿಮ್ಮ ಮಂಕಿ ಮೈಂಡ್ ಅನ್ನು ಶಾಂತಗೊಳಿಸಲು 6 ಸರಳ ಮಾರ್ಗಗಳು

  • ಪ್ರಾಣಯಾಮ: ನೀವು ಪ್ರಾಣಯಾಮ ಮಾಡುವುದರಿಂದ ನಿಮ್ಮ ಮೆದುಳು ಎಲ್ಲವೂ ಸರಿಯಾಗಿದೆ ಎಂಬ ಸಂಕೇತವನ್ನು ಪಡೆಯುತ್ತದೆ. ಒತ್ತಡವನ್ನು ತೊಡೆದುಹಾಕಲು ಮತ್ತು ನಿಮ್ಮ ಮನಸ್ಸನ್ನು ನೆಮ್ಮದಿಯಿಂದ ಇರಿಸಿಕೊಳ್ಳಲು ಇದು ನೈಸರ್ಗಿಕ ಮಾರ್ಗವಾಗಿದೆ. ಮುಂದಿನ ನಿಮಗೇನಾದರೂ ಆತಂಕ ಉಂಟಾದರೆ ಪ್ರಾಣಯಾಮ ಮಾಡಿ ಇದರಿಂದ ವಿಶ್ರಾಂತಿ ಪಡೆಯಬಹುದು.
  • ವಾಕ್‌ ಮಾಡಿ: ವಾಕಿಂಗ್​ ನಿಮ್ಮ ಎಲ್ಲಾ ಚಿಂತೆಗಳನ್ನು ದೂರ ಮಾಡಬಹುದು. ಇದು ನಿಮ್ಮ ಮೆದುಳಿಗೆ ರೀಸೆಟ್ ಬಟನ್‌ನಂತಿದೆ. ವಾಕ್‌ ಮಾಡಿ ಮತ್ತು ನಿಮ್ಮ ಮನಸ್ಥಿತಿಯನ್ನು ಸುಧಾರಿಸಲು ಇದು ತರುವ ಸಕಾರಾತ್ಮಕತೆಯನ್ನು ಗಮನಿಸಿ. ಒಂದು ಸಣ್ಣ ವಾಕ್‌ ನಿಮ್ಮ ಮನಸ್ಸನ್ನು ಸುಧಾರಿಸುವುದರ ಜೊತೆಗೆ ನಿಮಗೆ ನೆಮ್ಮದಿಯನ್ನು ನೀಡುತ್ತದೆ.
  • ಕೆಲವು ಹಿತವಾದ ಹಾಡನ್ನು ಕೇಳಿ: ನಿಮ್ಮ ಮೆಚ್ಚಿನ ಹಾಡುಗಳನ್ನು ಕೇಳುವುದು ನಿಮ್ಮ ಮೇಲೆ ಪಾಸಿಟಿವ್ ಪರಿಣಾಮ ಬೀರುತ್ತದೆ ಮತ್ತು ನಕಾರಾತ್ಮಕ ಆಲೋಚನೆಗಳನ್ನು ತೊಡೆದುಹಾಕುವ ಮೂಲಕ ನಿಮಗೆ ಉತ್ತಮ ಭಾವನೆಯನ್ನು ನೀಡುತ್ತದೆ. ನಿಮ್ಮ ನಕಾರಾತ್ಮಕ ಆಲೋಚನೆಗಳನ್ನು ತಡೆಯಲು ಹೆಡ್‌ಫೋನ್‌ಗಳನ್ನು ಧರಿಸಿ.
  • ಚಿತ್ರ ಬಿಡಿಸಿ: ಕಲೆಯು ಗೊಂದಲದ ಮಧ್ಯೆ ಚಿಕಿತ್ಸೆಯಂತೆ ಮತ್ತು ಧನಾತ್ಮಕವಾಗಿರಲು ನಿಮಗೆ ಸಹಾಯ ಮಾಡುತ್ತದೆ. ಡೂಡ್ಲಿಂಗ್ ಮತ್ತು ಡ್ರಾಯಿಂಗ್ ನಿಮಗೆ ಉತ್ತಮ ಭಾವನೆಯನ್ನು ನೀಡಬಹುದು, ಏಕೆಂದರೆ ಕಲಾತ್ಮಕ ಹವ್ಯಾಸಗಳು ಸಾಮಾನ್ಯವಾಗಿ ಡೋಪಮೈನ್ ಬಿಡುಗಡೆಯನ್ನು ಹೆಚ್ಚಿಸುತ್ತವೆ, ಇದು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ.
  • ಸುವಾಸನೆಯ ಮೇಣದ ಬತ್ತಿಯನ್ನು ಬೆಳಗಿಸಿ: ಪರಿಮಳಯುಕ್ತ ಮೇಣದಬತ್ತಿಗಳು ಅವುಗಳ ಆರೊಮ್ಯಾಟಿಕ್ ಸುಗಂಧದಿಂದಾಗಿ ನಿಮ್ಮ ಮನಸ್ಥಿತಿಯ ಮೇಲೆ ಶಾಂತಗೊಳಿಸುವ ಪರಿಣಾಮವನ್ನು ಬೀರಬಹುದು. ಮನಸ್ಸು ತುಂಬಾ ಗೊಂದಲಕ್ಕೊಳಗಾಗಿದೆ ಅಂದರೆ ಮನೆಯನ್ನು ಸ್ವಚ್ಛ ಮಾಡಿ ಕ್ಯಾಂಡಲ್‌ಗಳನ್ನು ಹಚ್ಚಿ.
  • ಕೃತಜ್ಞರಾಗಿರಿ: ಜೀವನಕ್ಕಾಗಿ ಕೃತಜ್ಞರಾಗಿರಲು ಮತ್ತು ಪ್ರತಿ ಕ್ಷಣವನ್ನು ಎಂಜಾಯ್ ಮಾಡುವುದನ್ನು ಮರೆಯಬೇಡಿ. ಜೀವನದ ಮೌಲ್ಯವನ್ನು ಅರ್ಥಮಾಡಿಕೊಳ್ಳುವುದು ನಿಮಗೆ ಸಕಾರಾತ್ಮಕ ದೃಷ್ಟಿಕೋನವನ್ನು ಪಡೆಯಲು ಸಹಾಯ ಮಾಡುತ್ತದೆ ಮತ್ತು ಅನಗತ್ಯ ಆಲೋಚನೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಸಕಾರಾತ್ಮಕತೆಯು ನಿಮ್ಮ ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ.

ನಿಮ್ಮ ಆಲೋಚನೆಗಳನ್ನು ಶಾಂತಗೊಳಿಸಲು ನಿಮಗೆ ಒಳ್ಳೆಯದನ್ನುಂಟುಮಾಡುವ ಕೆಲಸಗಳನ್ನು ಮಾಡುವುದು ಮುಖ್ಯ. ಅದರಲ್ಲೂ ಪಾಸಿಟಿವ್​ ಕೆಲಸಗಳನ್ನು ಮಾಡಲು ಪ್ರಯತ್ನಿಸಿ. ಸಕ್ರಿಯವಾಗಿರಲು ನಿಯಮಿತವಾಗಿ ವ್ಯಾಯಾಮ ಮಾಡಿ ಮತ್ತು ನಿಮ್ಮ ಗಮನವನ್ನು ಬೇರೆಡೆಗೆ ತಿರುಗಿಸಲು ಸೃಜನಶೀಲ ಹವ್ಯಾಸಗಳನ್ನು ಅಧ್ಯಯನ ಮಾಡಲು ಕಲಿಯಿರಿ. ನಿಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸುವಲ್ಲಿ ಜೀವನಶೈಲಿಯ ಅಂಶಗಳು ಪ್ರಮುಖ ಪಾತ್ರವಹಿಸುತ್ತವೆ. ನಿಮ್ಮ ಉತ್ಸಾಹವನ್ನು ಹೆಚ್ಚಿಸಲು ಯೋಗ, ಆಸನಗಳು ಮತ್ತು ಧ್ಯಾನವನ್ನು ಅಭ್ಯಾಸ ಮಾಡಿ. ನಿಮ್ಮ ದೈಹಿಕ ಆರೋಗ್ಯವನ್ನು ಮಾತ್ರವಲ್ಲದೇ ನಿಮ್ಮ ಮಾನಸಿಕ ಆರೋಗ್ಯವನ್ನೂ ನೋಡಿಕೊಳ್ಳಿ.

Source : https://kannada.news18.com/news/lifestyle/how-you-can-calm-the-monkey-mind-stg-mnk-1749672.html

Leave a Reply

Your email address will not be published. Required fields are marked *