
ಚಿತ್ರದುರ್ಗ : ನಗರದ ಶಿಕ್ಷಣ ಸಂಸ್ಥೆಯಾದ ಎಸ್.ಆರ್.ಎಸ್. ಬ್ಯೂಜೆಮ್ಸ್ ನಲ್ಲಿ ಹಿರಿಯ ಕೆ.ಜಿ ಮಕ್ಕಳಿಗೆ ಬುಧವಾರದಂದು ಘಟಿಕೋತ್ಸವ ( Graduation day ) ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಚರಿಸಲಾಯಿತು.
ಸಮಾರಂಭದ ಮುಖ್ಯ ಅತಿಥಿಯಾಗಿ ಜಿಲ್ಲಾ ಆರೋಗ್ಯ ಅಧಿಕಾರಿಗಳು ಡಾ. ರಂಗನಾಥ್ ಆರ್ ರವರು ಮುಖ್ಯಅತಿಥಿಗಳು, ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ಸುಜಾತ ಲಿಂಗಾರೆಡ್ಡಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾದ್ಯಕ್ಷರಾದ ಶ್ರೀಯುತ ಅಮೋಘ ಬಿ.ಎಲ್ ಕಾರ್ಯಕ್ರಮದಲ್ಲಿ ಕೆ.ಜಿ. ಚಿಣ್ಣರು ಏಕ ಪಾತ್ರಾಭಿನಯ, ಗಾಯನ, ನೃತ್ಯವನ್ನು ಪ್ರದರ್ಶಿಸಿ ನೆರೆದವರನ್ನು ರಂಜಿಸಿದರು.
ಯಶಸ್ ವಿದ್ವಿಕ್ ಸಾಹಿರ್ ಸಾಯಿಶ್ರೇಷ್ಠ ನಿರೂಪಣೆ ಮಾಡಿದರು,ಆಕರ್ಷ್ ನವ್ಯತಾ ದಕ್ಷಿತ್ ಆನಂದ್,ಅನಂತ್ ವೈಣವಿ,ರಾಘವಿ,ತಮ್ಮ ವಂದನಾರ್ಪಣೆ ಮೊಹಮದ್ ಸುಫಿಯಾನ್ ಮಾಡಿದರು.ಕಾರ್ಯಕ್ರಮದಲ್ಲಿ ಹಿರಿಯ ಮಕ್ಕಳಿಗೆ ಪದವಿ ಪ್ರಮಾಣ ಪತ್ರಗಳನ್ನು ವಿಸ್ತರಿಸಿದರು,ಹಾಗೆಯೇ ಮುಖ್ಯ ಅತಿಥಿಗಳಾದ ಡಾ. ರಂಗನಾಥ್ ಮುಂದಿನ ಕಲಿಕಾ ಪಯಣ ಶುಭವಾಗಲಿ ಎಂದು ಶುಭ ಹಾರೈಸಿದರು.
ಸಮಾರಂಭದಲ್ಲಿ ಪೋಷಕರು ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮ ಕುರಿತು ಶಾಲೆಯ ಪ್ರಾಂಶುಪಾಲರಾದ ಪ್ರಭಾಕರ್ ಎಂ.ಎಸ್ ರವರು ರಾಮಾಯಣದ ಕೆಲವು ಮೌಲ್ಯಗಳನ್ನು ಹಾಗೂ ಪೋಷಕರಿಗೆ ತಿಳಿ ಹೇಳುವುದರ ಹಾಗೂ ಚಿಣ್ಣರಿಗೆ ಶುಭ ಹಾರೈಸಿದರು ಹಾಗೂ ಉಪಪ್ರಾಂಶುಪಾಲರು, ಬ್ಯೂಜೆಮ್ಸ್ನ ಕೋಆರ್ಡಿನೇಟರ್ ಶಾಂತಾ ಕುಮಾರಿ ಬೋಧಕ ವರ್ಗದವರು ಉಪಸ್ಥಿತರಿದ್ದರು.
The post ಚಿತ್ರದುರ್ಗದ ಎಸ್.ಆರ್.ಎಸ್ . ಬ್ಲೂ ಜೆಮ್ಸ್ ಶಾಲೆಯಲ್ಲಿ ಘಟಿಕೋತ್ಸವ first appeared on Kannada News | suddione.
from ಚಿತ್ರದುರ್ಗ – Kannada News | suddione https://ift.tt/U1LoBmk
via IFTTT
Views: 0

