ಒಂದು ಬಾರಿ ತಿಂಡಿಯನ್ನು ಕರಿಯಲು ಬಳಸಿದ ಎಣ್ಣೆಯನ್ನು ಮತ್ತೆ ಹಲವು ಬಾರಿ ಬಳಸಬಾರದು ಎಂಬ ಕಾರಣಕ್ಕೆ ಎಷ್ಟೋ ಮಂದಿ ಮನೆಯಲ್ಲಿ ಸ್ನ್ಯಾಕ್ಸ್ ತಯಾರಿಸುವುದೇ ಇಲ್ಲ. ಬದಲಿಗೆ ಹೋಟೆಲ್ನಿಂದ ಪಾರ್ಸೆಲ್ ತರಿಸಿಕೊಂಡು ತಿನ್ನುತ್ತಾರೆ.

ಚಳಿಗಾಲದಲ್ಲಿ ಬಿಸಿ-ಬಿಸಿ ಬಜ್ಜಿ, ಬೋಂಡಾ, ಪಕೋಡಾವನ್ನು ತಿನ್ನುವ ಮಜಾನೇ ಬೇರೆ. ಹಾಗಾಗಿ ಸಂಜೆ ಹೊತ್ತು ಜನ ಅನೇಕ ರೀತಿಯ ಸ್ನ್ಯಾಕ್ಸ್ ಮಾಡಿಕೊಂಡು ಸವಿಯುತ್ತಾರೆ. ಆದರೆ ರುಚಿಕರವಾದ ಸ್ನ್ಯಾಕ್ಸ್ ತಯಾರಿಸಲು ಏನಿಲ್ಲದಿದ್ದರೂ ಎಣ್ಣೆಯಂತೂ ಇರಲೇಬೇಕು.

ಅಲ್ಲದೇ ಒಂದು ಬಾರಿ ತಿಂಡಿಯನ್ನು ಕರಿಯಲು ಬಳಸಿದ ಎಣ್ಣೆಯನ್ನು ಮತ್ತೆ ಹಲವು ಬಾರಿ ಬಳಸಬಾರದು ಎಂಬ ಕಾರಣಕ್ಕೆ ಎಷ್ಟೋ ಮಂದಿ ಮನೆಯಲ್ಲಿ ಸ್ನ್ಯಾಕ್ಸ್ ತಯಾರಿಸುವುದೇ ಇಲ್ಲ. ಬದಲಿಗೆ ಹೋಟೆಲ್ನಿಂದ ಪಾರ್ಸೆಲ್ ತರಿಸಿಕೊಂಡು ತಿನ್ನುತ್ತಾರೆ.

ಆದರೆ ತಿಂಡಿಯನ್ನು ಕರಿದ ಬಳಿಕವೂ ಎಣ್ಣೆಯನ್ನು ಸ್ವಚ್ಛಗೊಳಿಸಿ ಬಳಸಬಹುದು ಎಂಬ ವಿಚಾರ ನಿಮಗೆ ತಿಳಿದಿದ್ಯಾ? ಅದು ಹೇಗಪ್ಪಾ ಅಂತೀರಾ? ಈ ಸ್ಟೋರಿ ಓದಿ.

ಕಾರ್ನ್ ಫ್ಲೋರ್: ಮೊದಲನೇಯದಾಗಿ ಕಾರ್ನ್ ಫ್ಲೋರ್ ತೆಗೆದುಕೊಂಡು ಇದಕ್ಕೆ ಸ್ವಲ್ಪ ನೀರು ಸೇರಿಸಿ ಹಿಟ್ಟಿನ ಹಾಗೆ ಕಲಸಿಟ್ಟು ಕೊಳ್ಳಿ. ನಂತರ ಅದನ್ನು ಕುದಿಯುವ ಎಣ್ಣೆಗೆ ಸೇರಿಸಿ. ಣ್ಆಗ ಎಣ್ಣೆಯ ಕೆಳಭಾಗಕ್ಕೆ ಹಿಟ್ಟು ಹೋಗುತ್ತದೆ ಮತ್ತು ಶೇಷವು ಹಿಟ್ಟಿಗೆ ಅಂಟಿಕೊಳ್ಳುವಂತೆ ಮಾಡುತ್ತದೆ. ನೀವು ಅವುಗಳನ್ನು ಹೊರತೆಗೆದರೆ, ಎಲ್ಲಾ ಅವಶೇಷಗಳು ಅಂಗೈಗೆ ಬರುತ್ತವೆ ಮತ್ತು ಎಣ್ಣೆಯು ಶುದ್ಧವಾಗಿರುತ್ತದೆ.

ಈಗ ಈ ಎಣ್ಣೆಯೊಂದಿಗೆ ಶುದ್ಧವಾದ ಎಣ್ಣೆಯನ್ನು ಸೇರಿಸಿ ನೀವು ಬಳಸಬಹುದು. ಈಗ ತಳದಲ್ಲಿರುವ ಎಣ್ಣೆಯನ್ನು ವೇಸ್ಟ್ ಮಾಡಬಾರದು ಎಂದಾದರೆ ಆಮ್ಲೆಟ್ ಕೂಡ ಮಾಡಬಹುದು. ಇನ್ನೂ ಎಣ್ಣೆಯನ್ನು ಬಳಸಿದ ಬಟ್ಟಲನ್ನು ನಿಂಬೆ ರಸ ಮತ್ತು ಸಾಬೂನಿನಿಂದ ಸ್ವಚ್ಛಗೊಳಿಸಿದರೆ ಇಡೀ ಬಟ್ಟಲು ಸ್ವಚ್ಛವಾಗಿರುತ್ತದೆ. ಜಿಡ್ಡು ಕೂಡ ಇರುವುದಿಲ್ಲ.

ಇವುಗಳನ್ನು ಮರೆಯಬೇಡಿ: ಒಂದು ವಿಚಾರವನ್ನು ನೆನಪಿಟ್ಟುಕೊಳ್ಳಿ. ಒಮ್ಮೆ ಬಳಸಿದ ಎಣ್ಣೆಯನ್ನು ಮತ್ತೆ ಬಳಸದಿರುವುದು ಉತ್ತಮ. ಈ ಎಣ್ಣೆಯನ್ನು ಪದೇ ಪದೇ ಬಳಸುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ, ಕರಿಯುವಾಗ ಸಣ್ಣ ಪ್ರಮಾಣದಲ್ಲಿ ಕರಿಯಬೇಕು. ಏರ್ ಫ್ರೈಯರ್ಗಳನ್ನು ಬಳಸಿ. ಇದರಿಂದ ಹೆಚ್ಚು ತೈಲ ವ್ಯರ್ಥವಾಗುವುದಿಲ್ಲ.

ಎಣ್ಣೆಯುಕ್ತ ಪದಾರ್ಥಗಳ ಅತಿಯಾದ ಸೇವನೆಯು ಅಧಿಕ ತೂಕ ಮತ್ತು ಕೊಲೆಸ್ಟ್ರಾಲ್ಗೆ ಕಾರಣವಾಗುತ್ತದೆ. ಹಾಗಾಗಿ ಈ ಎಣ್ಣೆಯುಕ್ತ ಆಹಾರ ಮತ್ತು ತಿಂಡಿಗಳಿಂದ ಆದಷ್ಟು ದೂರವಿರುವುದು ಉತ್ತಮ.
ಸೂಚನೆ: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಸಮಗ್ರ ಸುದ್ದಿಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಸಮಗ್ರ ಸುದ್ದಿ ಇದಕ್ಕೆ ಜವಾಬ್ದಾರಿಯಲ್ಲ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1