ಭ್ರಷ್ಟಾಚಾರ, ರೈತ ವಿರೋಧಿ, ಅಭಿವೃದ್ಧಿ ಶೂನ್ಯವೇ ಇವರ ಗ್ಯಾರಂಟಿ :ಗೋವಿಂದ ಕಾರಜೋಳ.

ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್

ಚಿತ್ರದುರ್ಗ ಜೂ.19 ರಾಜ್ಯದಲ್ಲಿಯೇ ಅಭಿವೃದ್ಧಿ ಆಗಿಲ್ಲ, ಬೇಕಾದ್ರೆ ಸರ್ಕಾರ ಶ್ವೇತಪತ್ರ ಹೊರಡಿಸಲಿ ಈ ಸರ್ಕಾರದ್ದು ಭ್ರಷ್ಟಾಚಾರ, ರೈತ ವಿರೋಧಿ, ಅಭಿವೃದ್ಧಿ ಶೂನ್ಯವೇ ಇವರ ಗ್ಯಾರಂಟಿ ಎಂದು ಎಂದು ಸಂಸದ ಗೋವಿಂದ ಕಾರಜೋಳ ದೂರಿದ್ದಾರೆ. 

ರೈಲ್ವೆ ನಿಲ್ದಾಣದಲ್ಲಿ ಕೇಂದ್ರ ಸರ್ಕಾರದ ಅಮೃತ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಯನ್ನು ಗುರುವಾರ ವೀಕ್ಷಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದರು, ಲೋಕಾಯುಕ್ತ ಹಗರಣದಲ್ಲಿ ಸಂಬಂಧಿಸಿದವರ ವಿರುದ್ದ ಕ್ರಮ ಆಗಬೇಕಿತ್ತು ಸುಮ್ಮನೆ ಅದಕ್ಕೂ ಒಂದು ಕಮಿಷನ್ ನೇಮಿಸುವ ಕೆಲಸ ಆಗಬಾರದು ಎಲ್ಲಾ ಕೇಸ್‍ಗಳನ್ನು ಮುಚ್ಚಿ ಹಾಕುವ ಕೆಲಸವನ್ನು ಈ ಸರ್ಕಾರ ಮಾಡ್ತಿದೆ ಇಂತಹ ಕೆಟ್ಟ ಸರ್ಕಾರ ನಾವು ನೋಡಿಲ್ಲ ಎಂದು ಜನ ಶಾಪ ಹಾಕ್ತಿದ್ದಾರೆ ಈಗಿನ ಸರ್ಕಾರದ ಎಲ್ಲಾ ಹಗರಣದಲ್ಲಿ ಮಂತ್ರಿಗಳೇ ಇದ್ದಾರೆ ನದಿಗಳಲ್ಲಿ ಇರುವ ಮರಳನ್ನು ಲೂಟಿ ಮಾಡುವ ಕೆಟ್ಟ ಸರ್ಕಾರ ಇದು ಅದರಲ್ಲಿ ಎಲ್ಲಾ ಜಿಲ್ಲಾ ಮಂತ್ರಿಗಳು ಭಾಗಿಯಾಗ್ತಿದ್ದಾರೆ ರಾಜ್ಯದಲ್ಲಿ ಈಗಿನ ಸರ್ಕಾರ ಬಹಳ ದುರಾಡಳಿತ ಮಾಡ್ತಿದೆ ಬಹುಶಃ ಶೀಘ್ರವೇ ಈ ಸರ್ಕಾರ ಅಂತ್ಯ ಕಾಣ್ತದೆ ಎಂದ ಕಾರಜೋಳ ಭವಿಷ್ಯ ನುಡಿದರು. 

ಬಿಜೆಪಿ ಈ ಸರ್ಕಾರದ ವಿರುದ್ದ ನಿರಂತರವಾಗಿ ಹೋರಾಟ ಮಾಡ್ತಿದೆ ಈ ದಪ್ಪ ಚರ್ಮದ ಸರ್ಕಾರಕ್ಕೆ ಅದರ ಬಿಸಿ ತಟ್ಟುತ್ತಿಲ್ಲಇದೊಂದು ಲಜ್ಜೆಗೆಟ್ಟ, ಮೂರು ಬಿಟ್ಟ ಸರ್ಕಾರಹೀಗಾಗಿ ಅವರು ಕುರ್ಚಿಗೆ ಅಂಟಿಕೊಂಡು ಅಧಿಕಾರದಲ್ಲಿ ಇದ್ದಾರೆಇವರ ಅವಧಿಯಲ್ಲಿ ಹಗರಣಗಳ ಮೇಲೆ ಹಗರಣಗಳು ಆಗ್ತಿವೆನೌಕರರ ಆತ್ಮಹತ್ಯೆಗಳಿಂದ ಎಚ್ಚೆತ್ತು ಆಡಳಿತದಲ್ಲಿ ಸುಧಾರಣೆ ತರಬೇಕಿತುಭ್ರಷ್ಟಾಚಾರದಲ್ಲಿ ಯಾವ ಮಂತ್ರಿಗಳು ಇದ್ದಾರೋ ಅವರನ್ನು ವಜಾ ಮಾಡಬೇಕಿತ್ತು ನೀವು ಭಂಡತನದಿಂದ ಹೇಳಿಕೆ ಕೊಟ್ಟು ಮುಂದುವರೆದರೆ ಜನ ನಿಮ್ಮನ್ನ ಕ್ಷಮಿಸಲ್ಲ ಖಅಃ ಹನ್ನೊಂದು ಅಭಿಮಾನಿಗಳು ಸತ್ರೆ ಅದಕ್ಕೂ ಬೇಜವಾಬ್ದಾರಿ ಉತ್ತರ ಕೊಡ್ತಾರೆ ಎಂದರು. 

ಆರ್.ಸಿ.ಬಿ. ದುರಂತಕ್ಕೆ ಹನ್ನೊಂದು ಮಂದಿ ಬಲಿಯಾಗಿದ್ದಕ್ಕೆ ಸಂಬಂಧಿಸಿದಂತೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇವರುಗಳು ನೈತಿಕ ಹೊಣೆ ಹೊತ್ತು ಇಷ್ಟೊತ್ತಿಗಾಗಲೆ ರಾಜಿನಾಮೆ ನೀಡಬೇಕಿತ್ತು. ಭಂಡತನ ಪ್ರದರ್ಶಿಸುತ್ತಿರುವುದನ್ನು ಜನ ಒಪ್ಪಲ್ಲ ರಾಜ್ಯ ಸರ್ಕಾರ ಹಗರಣಗಳ ಮೇಲೆ ಹಗರಣಗಳನ್ನೆಸಗುತ್ತಿದೆ. ಲಂಚಕ್ಕೆ ಅಧಿಕಾರಿಗಳು, ನೌಕರರು, ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚೆತ್ತುಕೊಂಡು ಸಂಬಂಧಪಟ್ಟ ಮಂತ್ರಿಗಳನ್ನು ವಜಾಗೊಳಿಸಬೇಕಿತ್ತು. ವಾಲ್ಮೀಕಿ ಹಗರಣದಲ್ಲಿ 187 ಕೋಟಿ ರೂ.ಗಳನ್ನು ಲೂಟಿ ಹೊಡೆದಿರುವುದಕ್ಕೆ ಮುಖ್ಯಮಂತ್ರಿ ಜವಾಬ್ದಾರಿ ಹೊರಬೇಕು. ಮುಡಾ ಹಗರಣ ಹೀಗೆ ಒಂದರ ಮೇಲೊಂದು ಹಗರಣಗಳನ್ನು ಎಸಗುತ್ತಿರುವುದೇ ಕಾಂಗ್ರೆಸ್ ಪಕ್ಷದ ಗ್ಯಾರೆಂಟಿ ಎಂದು ವ್ಯಂಗ್ಯವಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ. ನೂತನ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಖಜಾಂಚಿ ಮಾಧುರಿ ಗಿರೀಶ್, ನಿಕಟಪೂರ್ವ ಅಧ್ಯಕ್ಷ ಎ.ಮುರಳಿ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್ ಹಾಜರಿದ್ದರು. 

Leave a Reply

Your email address will not be published. Required fields are marked *