IND vs WI T20 ಪ್ರಾರಂಭಕ್ಕೆ ಕ್ಷಣಗಣನೆ: ರೋಹಿತ್, ಕೊಹ್ಲಿ ಸೇರಿ ಈ 6 ಮಂದಿ ಸರಣಿಯಿಂದಲೇ ಔಟ್!

India vs West India T20 Series: ರೋಹಿತ್ ಶರ್ಮಾ, ರಿತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜಾ ಮತ್ತು ಜಯದೇವ್ ಉನದ್ಕತ್ ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ವಿಶ್ರಾಂತಿ ಪಡೆಯಲಿದ್ದು, ಈ ಸರಣಿಯಿಂದ ಹೊರಗುಳಿದಿದ್ದಾರೆ.

India vs West India T20 Series: ODI ಸರಣಿಯಲ್ಲಿ 2-1 ಗೆಲುವಿನ ನಂತರ, ಟೀಮ್ ಇಂಡಿಯಾ ಈಗ ವೆಸ್ಟ್ ಇಂಡೀಸ್ ವಿರುದ್ಧ ಐದು ಪಂದ್ಯಗಳ T20 ಸರಣಿಯನ್ನು ಆಡಬೇಕಾಗಿದೆ. ಆಗಸ್ಟ್ 3 ರಿಂದ ಉಭಯ ತಂಡಗಳ ನಡುವೆ ಈ ಟಿ20 ಸರಣಿ ನಡೆಯಲಿದೆ. ಟಿ20 ಸರಣಿಯ ಮೊದಲ ಪಂದ್ಯ ಟ್ರಿನಿಡಾಡ್‌ ನಲ್ಲಿ, ಎರಡು ಮತ್ತು ಮೂರನೇ ಪಂದ್ಯಗಳು ಗಯಾನಾದಲ್ಲಿ ಹಾಗೂ ಕೊನೆಯ ಎರಡು ಪಂದ್ಯಗಳು ಫ್ಲೋರಿಡಾದಲ್ಲಿ ನಡೆಯಲಿದೆ.

ಈ ಸರಣಿಯಲ್ಲಿ ಟೀಮ್ ಇಂಡಿಯಾದ ಕಮಾಂಡ್ ಹಾರ್ದಿಕ್ ಪಾಂಡ್ಯ ಕೈಯಲ್ಲಿರಲಿದೆ. ರೋವ್ಮನ್ ಪೊವೆಲ್ ವೆಸ್ಟ್ ಇಂಡೀಸ್ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನು ರೋಹಿತ್ ಶರ್ಮಾ. ವಿರಾಟ್ ಕೊಹ್ಲಿ ಸೇರಿ ಟೀಂ ಇಂಡಿಯಾದ 6 ಆಟಗಾರರು ಭಾರತಕ್ಕೆ ಮರಳಲಿದ್ದಾರೆ.

ರೋಹಿತ್ ಶರ್ಮಾ, ರಿತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜಾ ಮತ್ತು ಜಯದೇವ್ ಉನದ್ಕತ್ ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ವಿಶ್ರಾಂತಿ ಪಡೆಯಲಿದ್ದು, ಈ ಸರಣಿಯಿಂದ ಹೊರಗುಳಿದಿದ್ದಾರೆ.  

ಐರ್ಲೆಂಡ್ ಪ್ರವಾಸದಲ್ಲಿ ರಿತುರಾಜ್ ಗಾಯಕ್ವಾಡ್ ಭಾರತ ತಂಡದೊಂದಿಗೆ ಇರಲಿದ್ದಾರೆ. ಹೀಗಾಗಿ ವೆಸ್ಟ್ ಇಂಡೀಸ್‌’ನಲ್ಲಿ ಇವರೊಬ್ಬರು ಮಾತ್ರ ಉಳಿಯುವ ಸಾಧ್ಯತೆಯಿದೆ.

T20 ಸರಣಿಯ ಸಂಪೂರ್ಣ ವೇಳಾಪಟ್ಟಿ:

  • ಮೊದಲ T20 – ಆಗಸ್ಟ್ 3 – ಟ್ರಿನಿಡಾಡ್
  • ಎರಡನೇ ಟಿ20 – ಆಗಸ್ಟ್ 6 – ಗಯಾನಾ
  • ಮೂರನೇ T20 – 8 ಆಗಸ್ಟ್ – ಗಯಾನಾ
  • ನಾಲ್ಕನೇ T20 – ಆಗಸ್ಟ್ 12 – ಫ್ಲೋರಿಡಾ
  • ಐದನೇ ಟಿ20 – ಆಗಸ್ಟ್ 13 – ಫ್ಲೋರಿಡಾ

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡ:

ಇಶಾನ್ ಕಿಶನ್ (WK), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (vc), ಸಂಜು ಸ್ಯಾಮ್ಸನ್ (wk), ಹಾರ್ದಿಕ್ ಪಾಂಡ್ಯ (c), ಅಕ್ಷರ್ ಪಟೇಲ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ರವಿ ಬಿಷ್ಣೋಯ್, ಅರ್ಶ್ದೀಪ್ ಸಿಂಗ್, ಉಮ್ರಾನ್ ಮಲಿಕ್ , ಅವೇಶ್ ಖಾನ್ ಮತ್ತು ಮುಖೇಶ್ ಕುಮಾರ್.

ಭಾರತ ವಿರುದ್ಧ ಟಿ20 ಸರಣಿಗೆ ವೆಸ್ಟ್ ಇಂಡೀಸ್ ತಂಡ:

ರೋವ್‌ಮನ್ ಪೊವೆಲ್ (v), ಕೈಲ್ ಮೇಯರ್ಸ್ (vc), ಜಾನ್ಸನ್ ಚಾರ್ಲ್ಸ್, ರೋಸ್ಟನ್ ಚೇಸ್, ಶಿಮ್ರಾನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ಶಾಯ್ ಹೋಪ್, ಅಕೀಲ್ ಹೊಸೈನ್, ಅಲ್ಜಾರಿ ಜೋಸೆಫ್, ಬ್ರೆಂಡನ್ ಕಿಂಗ್, ಒಬೆಡ್ ಮೆಕಾಯ್, ನಿಕೋಲಸ್ ಪೂರನ್, ರೊಮಾರಿಯೊ ಶೆಫರ್ಡ್, ಓಡಿಯನ್ ಥಾಮಸ್, ಓಶನ್ ಸ್ಮಿತ್ .

Source : https://zeenews.india.com/kannada/sports/countdown-to-start-of-ind-vs-wi-t20-including-rohit-and-kohli-these-6-players-out-from-the-series-149970

Leave a Reply

Your email address will not be published. Required fields are marked *