ನೀರು, ಭೂಮಿ ಮೇಲೆ ಚಲಿಸುವ ದೇಶದ ಮೊದಲ ಹೋವರ್‌ಕ್ರಾಫ್ಟ್ ಬೋಟ್ ಪ್ರಯೋಗ ಯಶಸ್ವಿ.

ನೀರು, ಭೂಮಿ ಮತ್ತು ಮಂಜುಗಡ್ಡೆಯ ಮೇಲೆ ಚಲಿಸುವ ಹೋವರ್​ಕ್ರಾಫ್ಟ್​ ಹಡಗಿನ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ. ಇದು ದೇಶದ ಮೊದಲ ಹೋವರ್‌ಕ್ರಾಫ್ಟ್ ಬೋಟ್​ ಆಗಿದೆ.

ಕೊಯಮತ್ತೂರು (ತಮಿಳುನಾಡು): ನೀರು, ಭೂಮಿ, ಹಿಮದ ಮೇಲೆ ಚಲಿಸುವ ದೇಶದ ಮೊದಲ ಹೋವರ್‌ಕ್ರಾಫ್ಟ್ ಬೋಟ್​ನ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ.

ಯುರೋಟೆಕ್ ಪಿವೋಟ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ರೂಪಿಸಿರುವ ಈ ಬೋಟ್​ ಅನ್ನು ತಮಿಳುನಾಡಿನ ಕೆರೆಯೊಂದರಲ್ಲಿ ಪರೀಕ್ಷೆ ನಡೆಸಲಾಯಿತು. ಇದು ಗಂಟೆಗೆ 20 ರಿಂದ 25 ಕಿಮೀ ವೇಗದಲ್ಲಿ ಸಂಚಾರ ನಡೆಸಿದೆ.

ನೀರು ಮತ್ತು ಭೂಮಿಯ ಮೇಲೆ ಕಾರ್ಯಾಚರಣೆ ನಡೆಸಲು ಉದ್ದೇಶಿಸಿ 50 ಲಕ್ಷ ರೂಪಾಯಿ ವೆಚ್ದದಲ್ಲಿ ಈ ಹೋವರ್​ಕ್ರಾಫ್ಟ್​ ಬೋಟ್​ ಅನ್ನು ನಿರ್ಮಿಸಲಾಗಿದೆ. ಅಗ್ನಿಶಾಮಕ ದಳ ಮತ್ತು ರಕ್ಷಣಾ ತಂಡದ ನೇತೃತ್ವದಲ್ಲಿ ಸೂಲೂರು ಎಂಬಲ್ಲಿನ ಚಿಕ್ಕ ಕೆರೆಯಲ್ಲಿ ಪ್ರಾಯೋಗಿಕ ಓಡಾಟ ನಡೆಸಲಾಯಿತು. ಹೋವರ್‌ಕ್ರಾಫ್ಟ್ ನೀರಿನ ಮೇಲೆ ನುಗ್ಗುತ್ತಿರುವುದನ್ನು ಜನರು ಆಸಕ್ತಿಯಿಂದ ವೀಕ್ಷಿಸಿದರು.

ಪ್ರವಾಹದ ವೇಳೆಯೂ ಬಳಕೆ: ಯೂರೋಟೆಕ್ ಸಲ್ಯೂಷನ್ಸ್​ನ ವ್ಯವಸ್ಥಾಪಕ ನಿರ್ದೇಶಕಿ ಸುಪ್ರಿತಾ ಚಂದ್ರಶೇಖರ್ ಮಾತನಾಡಿ, ದೇಶದಲ್ಲಿಯೇ ಪ್ರಥಮ ಬಾರಿಗೆ ನೀರು ಮತ್ತು ಭೂಮಿಯಲ್ಲಿ ಕಾರ್ಯಾಚರಣೆ ನಡೆಸುವ ಹೋವರ್​ಕ್ರಾಫ್ಟ್ ಬೋಟ್ ತಯಾರಿಸಿರುವುದು ಸಂತಸ ತಂದಿದೆ. ಸದ್ಯ ಪ್ರಾಯೋಗಿಕವಾಗಿ ನಡೆದ ಪರೀಕ್ಷೆ ಯಶಸ್ವಿಯಾಗಿದೆ. ಗಂಟೆಗೆ 20 ರಿಂದ 25 ಕಿಮೀ ವೇಗದಲ್ಲಿ ಬೋಟ್​ ಚಲಿಸಿದೆ. ಇದಕ್ಕೆ ನೀರು, ಭೂಮಿ ಮತ್ತು ಹಿಮಭರಿತ ಪ್ರದೇಶಗಳಲ್ಲಿ ಗಂಟೆಗೆ 80 ಕಿಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಗಂಟೆಗೆ 100 ಕಿಮೀ ವೇಗದಲ್ಲಿ ಪ್ರಯಾಣಿಸುವ ಕ್ರಾಫ್ಟ್ ಬೋಟ್ ಅನ್ನು ಮುಂದೆ ವಿನ್ಯಾಸಗೊಳಿಸಲಾಗುತ್ತದೆ ಎಂದು ತಿಳಿಸಿದರು.

ಕೆನಡಾದ ಖಾಸಗಿ ಕಂಪನಿಯ ಸಹಯೋಗದಲ್ಲಿ ಸಿದ್ಧಪಡಿಸಲಾದ ಈ ರೋವರ್ ಕ್ರಾಫ್ಟ್ ಅನ್ನು ಚಂಡಮಾರುತ, ಪ್ರವಾಹ ಸೇರಿದಂತೆ ಪ್ರಕೃತಿ ವಿಕೋಪಕ್ಕೊಳಗಾದ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಗೆ ಬಳಸಬಹುದಾಗಿದೆ. ಜೊತೆಗ ಕರಾವಳಿ ಗಡಿ ರಕ್ಷಣೆ, ನೌಕಾಪಡೆಯ ಕಣ್ಗಾವಲು ಮತ್ತು ತುರ್ತು ಸಂದರ್ಭಗಳಲ್ಲಿ ವೈದ್ಯಕೀಯ ಅಗತ್ಯಗಳಿಗಾಗಿಯೂ ಬಳಸಬಹುದು. ಪ್ರತಿ ಗಂಟೆಗೆ ಸುಮಾರು 20 ರಿಂದ 25 ಲೀಟರ್ ಇಂಧನ ಇದಕ್ಕೆ ಖರ್ಚಾಗುತ್ತದೆ ಎಂದು ಮಾಹಿತಿ ನೀಡಿದರು.

ಸಾಮಾನ್ಯ ಹಡಗು ಮತ್ತು ಕ್ರಾಫ್ಟ್​ ನಡುವಿನ ವ್ಯತ್ಯಾಸವೇನು?: ಸಾಮಾನ್ಯ ಹಡಗಿನ ಕೆಳಭಾಗ ನೀರಿನ ಮೇಲೆ ಮಾತ್ರ ಚಲಿಸುವಂತೆ ರೂಪಿಸಲಾಗಿರುತ್ತದೆ. ಆದರೆ, ಹೋವರ್‌ಕ್ರಾಫ್ಟ್‌ಗಳು ಹಲ್‌ (ಹಡಗು ಮುಂದೆ ಸಾಗುವ ಯಂತ್ರ)ಗಳನ್ನು ಹೊಂದಿದ್ದು, ಅವುಗಳು ನೀರಿನ ಮೇಲೆ ದೋಣಿ ತೇಲುವಂತೆ ಮಾಡುತ್ತದೆ. ಜೊತೆಗೆ ನೀರನ್ನು ಸೀಳಿಕೊಂಡು ಹಡಗನ್ನು ಸಾಗಿಸುತ್ತದೆ. ಲಂಬವಾದ ಫ್ಯಾನ್‌ಗಳೊಂದಿಗೆ ಬೀಸಿದ ಗಾಳಿಯು ಹೋವರ್‌ಕ್ರಾಫ್ಟ್ ತೇಲುವಂತೆ ಮಾಡುತ್ತದೆ. ಏರ್ ಕುಶನ್ ಅನ್ನು ಸಾಮಾನ್ಯವಾಗಿ ಬಟ್ಟೆಯಿಂದ ತಯಾರಿಸಲಾಗಿರುತ್ತದೆ. ಇದು ಸಲೀಸಾಗಿ ನೀರು, ಭೂಮಿ ಮತ್ತು ಮಂಜುಗಡ್ಡೆಯಲ್ಲಿ ಕ್ರಾಫ್ಟ್​ ಮುಂದೆ ಸಾಗಲು ಸಹಾಯ ಮಾಡುತ್ತದೆ. ಹೋವರ್‌ಕ್ರಾಫ್ಟ್‌ ಅನ್ನು ಸಾಮಾನ್ಯ ದೋಣಿಗಳಿಗಿಂತ ಹೆಚ್ಚು ವೇಗದಲ್ಲಿ ಭೂಮಿ ಮೇಲೆ ಚಲಿಸುವ ಹಾಗೆ ಶಕ್ತಗೊಳಿಸಲಾಗಿರುತ್ತದೆ.

Source : https://m.dailyhunt.in/news/india/kannada/etvbhar9348944527258-epaper-etvbhkn/niru+bhumi+mele+chalisuva+deshadha+modala+hovarkraaft+bot+prayoga+yashasvi-newsid-n558786130?listname=newspaperLanding&topic=homenews&index=13&topicIndex=0&mode=pwa&action=click

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *