ದೇಶದ ಮೊದಲ ಜಲಾಂತರ್ಗಾಮಿ ಪ್ರವಾಸೋದ್ಯಮ ದ್ವಾರಕಾದಲ್ಲಿ ಶುರು.

ದ್ವಾರಕಾ: ರಾಜ್ಯದ ಪ್ರವಾಸಿಗರಿಗೆ ಜಲಾಂತರ್ಗಾಮಿ ಸೇವೆಯನ್ನು ಪರಿಚಯಿಸಲು ಇದೀಗ ಗುಜರಾತ್ ಸರ್ಕಾರ ಮುಂದಾಗಿದ್ದು, ಸಮುದ್ರದ ಆಳದಲ್ಲಿ ಅವಿತುಹೋಗಿದೆ ಎಂದು ನಂಬಲಾದ ಪ್ರಾಚೀನ ನಗರವಾದ ದ್ವಾರಕಾದಲ್ಲಿ ಸಮುದ್ರ ಜೀವಿಗಳನ್ನು ಅನ್ವೇಷಿಸಲು ಈ ಯೋಜನೆಯನ್ನು ಶೀಘ್ರವೇ ಪ್ರಾರಂಭಿಸಲಿದೆ.

ಭಗವಂತ ಶ್ರೀ ಕೃಷ್ಣನ ನಗರ ಎಂದು ಕರೆಯಲ್ಪಡುವ ದ್ವಾರಕ, ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ಸದ್ಯ ಈ ನಗರದಲ್ಲಿ ಜಲಾಂತರ್ಗಾಮಿ ಪ್ರವಾಸೋದ್ಯಮ ಪ್ರಾರಂಭಿಸಲು ರಾಜ್ಯ ಸರ್ಕಾರವು ಮಜಗಾಂವ್ ಡಾಕ್ ಹಡಗು ನಿರ್ಮಾಣಗಾರರೊಂದಿಗೆ ಜ್ಞಾಪಕ ಪತ್ರಕ್ಕೆ ಸಹಿ ಹಾಕಿದ್ದು, ಇದು ಜಲಾಂತರ್ಗಾಮಿ ನೌಕೆ ಮೂಲಕ ಸಮುದ್ರದೊಳಗೆ ಹೋಗುವ ಮೊದಲ ಅಂಡರ್​ವಾಟರ್​ ಪ್ರವಾಸೋದ್ಯಮವಾಗಲಿದೆ.

ಪ್ರಸ್ತುತ ಯೋಜನೆಯ ಪ್ರಕಾರ, ಅಕ್ಟೋಬರ್ 2024ರಲ್ಲಿ ದೀಪಾವಳಿ ಹಬ್ಬಕ್ಕೂ ಮುನ್ನ ಈ ಯೋಜನೆಯನ್ನು ಕಾರ್ಯಗತಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಪ್ರವಾಸಿಗರನ್ನು ಜಲಾಂತರ್ಗಾಮಿ ಮೂಲಕ ಸಮುದ್ರದ ಬದುಕನ್ನು ನೋಡಲು 100 ಮೀಟರ್‌ ಆಳದವರೆಗೂ ಕರೆದೊಯ್ಯಲಾಗುತ್ತದೆ. ಪ್ರತಿ ಜಲಾಂತರ್ಗಾಮಿ ನೌಕೆಯು 24 ಪ್ರವಾಸಿಗರನ್ನು ಹೊತ್ತೊಯ್ಯುತ್ತದೆ ಮತ್ತು ನೌಕೆಯನ್ನು ಇಬ್ಬರು ಅನುಭವಿ ಪೈಲಟ್‌ಗಳು ಹಾಗೂ ವೃತ್ತಿಪರ ಸಿಬ್ಬಂದಿಗಳು ಮುನ್ನಡೆಸುತ್ತಾರೆ ಎಂದು ವರದಿ ಉಲ್ಲೇಖಿಸಿದೆ.

ಪ್ರಯಾಣಿಕರಿಗೆ ಕಿಟಕಿಯ ಮೂಲಕ ಉತ್ತಮ ವೀಕ್ಷಣೆಯನ್ನು ಒದಗಿಸುವಂತೆ ಹಡಗನ್ನು ವಿನ್ಯಾಸಗೊಳಿಸಲಾಗಿದೆ. ಜಲಾಂತರ್ಗಾಮಿ ಸೌಲಭ್ಯವು ಪ್ರತಿದಿನ ಹೆಚ್ಚಿನ ಸಂಖ್ಯೆಯ ಜನರನ್ನು ಆಕರ್ಷಿಸುವ ದೇಶದ ಪ್ರಮುಖ ದೇವಾಲಯಗಳ ಪಟ್ಟಣಗಳಲ್ಲಿ ಒಂದಾದ ದ್ವಾರಕಾದ ಪ್ರವಾಸೋದ್ಯಮ ಭವಿಷ್ಯವನ್ನು ಉತ್ತೇಜಿಸುತ್ತದೆ ಎಂದು ಸರ್ಕಾರ ಭಾವಿಸಿದೆ.

ಇನ್ನು ಈ ಬಗ್ಗೆ ಮಾತನಾಡಿದ ಗುಜರಾತ್ ಪ್ರವಾಸೋದ್ಯಮದ ವ್ಯವಸ್ಥಾಪಕ ನಿರ್ದೇಶಕ ಸೌರಭ್ ಪಾರ್ಧಿ, ‘ಇದು ಪ್ರಕೃತಿಯಲ್ಲೇ ವಿಭಿನ್ನ ಯೋಜನೆಯಾಗಿದ್ದು, ನಗರಕ್ಕೆ ಪ್ರವಾಸೋದ್ಯಮದಲ್ಲಿ ಗಮನಾರ್ಹ ಉತ್ತೇಜನವನ್ನು ತರುವ ಸಾಮರ್ಥ್ಯವನ್ನು ಹೊಂದಿದೆ. ಪ್ರವಾಸಿಗರನ್ನು ಜಲಾಂತರ್ಗಾಮಿ ಮೂಲಕ ದ್ವಾರಕಾ ಸಮುದ್ರಕ್ಕೆ ಕರೆದೊಯ್ಯಲಾಗುತ್ತದೆ’ ಎಂದರು.

ಪ್ರವಾಸಿಗರು ಸಮುದ್ರ ಜೀವನವನ್ನು ಆರಾಮದಾಯಕವಾಗಿ ಕುಳಿತು ಅನ್ವೇಷಣೆ ಮಾಡಬಹುದು. ಗುಜರಾತ್‌ನಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಮತ್ತು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಪ್ರಯಾಣಿಕರ ಸುರಕ್ಷತೆ ಬಗ್ಗೆ ಹೆಚ್ಚು ಆದ್ಯತೆ ನೀಡಲಾಗಿದೆ’ ಎಂದು ಪಾರ್ಧಿ ಹೇಳಿದರು.

Source : https://m.dailyhunt.in/news/india/kannada/vijayvani-epaper-vijaykan/deshadha+modala+jalaantargaami+pravaasodyama+dvaarakaadalli+shuru-newsid-n569582598?listname=topicsList&topic=for%20you&index=3&topicIndex=1&mode=pwa&action=click

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *