ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಆ. 25: ಕೇಂದ್ರ ಸರ್ಕಾರ ಬೆಳೆ ಪರಿಹಾರವನ್ನು ಓಬಿರಾಯನ ಕಾಲದ ದರದಲ್ಲೇ ಪರಿಹಾರ ನೀಡುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಕಿಡಿಕಾರಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಅತೀವೃಷ್ಟಿ ಪ್ರದೇಶಗಳಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕಾ ಸುದ್ದಿಗಾರರೊಂದಿಗೆ ಮಾತನಾಡಿದ
ಅವರು, ರಾಜ್ಯದಲ್ಲಿ ನೂರು ಕೋಟಿಗೂ ಅಧಿಕ ಹಣ ಬೆಳೆ ಹಾನಿಗೆ ನೀಡಿದ್ದೇವೆ. ಆದರೆ ಕೇಂದ್ರ ಸರ್ಕಾರ ಮಾತ್ರ ಓಬಿರಾಯನ ಕಾಲದ
ದರದಲ್ಲೇ ಪರಿಹಾರ ನೀಡುತ್ತಿದೆ. ಬಿಜೆಪಿ, ಜೆಡಿಎಸ್ ನವರು ಸೇರಿ ಪರಿಹಾರ ದರ ಹೆಚ್ಚಳ ಮಾಡಿಸಲಿ ಎಂದು ಮನವಿ ಮಾಡಿದರು.
ಮಳೆಹಾನಿಗೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡಿಲ್ಲ ಎಂದು ಬಿ ವೈ ವಿಜಯೇಂದ್ರ ಹೇಳಿಕೆ ವಿಚಾರಕ್ಕೆ ಪ್ರತಿಕ್ರೀಯೆ ನೀಡಿದ ಅವರು, ಬಿ
ವೈ ವಿಜಯೇಂದ್ರ ಉಡಾಫೆ ಮಾತು ಬಿಡಬೇಕು. ಮನೆ ಹಾನಿ, ಬೆಳೆ ಹಾನಿ ಪರಿಹಾರ ನೀಡಿದ್ದೇವೆ ಎಂಬುದರ ಬಗ್ಗೆ ಅಂಕಿ ಸಂಖ್ಯೆ ನೋಡಿ
ಮಾತನಾಡಬೇಕು ಎಂದು ಸಲಹೆ ನೀಡಿದರು.
ಭದ್ರಾ ಮೇಲ್ದಂಡೆ ಯೋಜನೆಗೆ 5300ಕೋಟಿ ಘೋಷಿಸಿದ್ದರು. ಈವರೆಗೆ 5 ಪೈಸೆ ಕೂಡ ಅನುದಾನವನ್ನೂ ನೀಡಿಲ್ಲ. ಬಿಜೆಪಿ , ಜೆಡಿಎಸ್
ನವರು ಹಿಟ್ ಅಂಡ್ ರನ್ ಬಿಡಬೇಕು. ವಿಜಯೇಂದ್ರ ಸಾಹೇಬರು, ಜೆಡಿಎಸ್ ನವರು, ಜೋಶಿ ಸಾಹೇಬರಿಗೆ ಕಾಳಜಿಯಿದ್ದರೆ ಕೇಂದ್ರದ ಬಳಿ
ಹೋಗಿ 5300ಕೋಟಿ ಅನುದಾನ ತರಲಿ ಎಂದು ಹೇಳಿದರು.
8 ಜನ ಬಿಜೆಪಿ ಶಾಸಕರು ಕಾಂಗ್ರೆಸ್ ಸೇರುತ್ತಾರೆಂದು ಬಿಜೆಪಿ ಶಾಸಕರೇ ಹೇಳುತ್ತಿದ್ದಾರೆ. ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂದಿರುವ
ಛಲವಾದಿ ನಾರಾಯಣಸ್ವಾಮಿ ಅವರು ಮೊದಲು ತಮ್ಮ ಪಕ್ಷದ ಶಾಸಕರು ಹೇಳಿದ್ದಕ್ಕೆ ಉತ್ತರಿಸಲಿ. ಆಗ ಯಾವುದು ಮುಳುಗುತ್ತಿರುವ
ಹಡಗು ಎಂಬುದು ತಿಳಿಯುತ್ತದೆ ಎಂದು ಟಾಂಗ್ ನೀಡಿದರು.
ಕಾಂಗ್ರೇಸ ಪಕ್ಷದ ಬಡವರ ಪರ ಕೆಲಸ ಬಿಜೆಪಿಗೆ ಸಹಿಸಲು ಆಗುತ್ತಿಲ್ಲ. ಇದನ್ನು ಸಹಿಸಲಾಗದೆ ಆರೋಪ, ಪಿತೂರಿ ಮಾಡುತ್ತಿರುವ
ಬಿಜೆಪಿಗರು ಗ್ಯಾರಂಟಿ ಯೋಜನೆ ನಿಲ್ಲಿಸಿ ಅಂಬಾನಿ, ಅದಾನಿ ಅವರಿಗೆ ಕೊಟ್ಟರೆ ಖುಷಿ ಆಗುತ್ತಾರೆ ಎಂದು ಲೇವಡಿ ಮಾಡಿದರು.
ಬಿಜೆಪಿ, ಜೆಡಿಎಸ್ ನವರು ಸರ್ಕಾರ ಬೀಳಿಸ್ತೀವಿ ಎಂದು ಹೇಳುತ್ತ, ನಾವು ಮುಖ್ಯಮಂತ್ರಿ ಎಂದು ಕುಮಾರಣ್ಣ ಸ್ವಯಂ ಘೋಷಣೆ
ಮಾಡಿದ್ದಾರೆ. ಕುಮಾರಸ್ವಾಮಿ ಸಿಎಂ ಆದ್ರೆ ನಂದೇನು ಎಂದು ವಿಜಯೇಂದ್ರಣ್ಣ ಟೆನ್ಷನ್ ಆಗಿದ್ದಾರೆ. ಬಿಜೆಪಿಯಲ್ಲಿರುವ ಒಕ್ಕಲಿಗರಿಗೆ ಚಿಪ್ಪು
ಎಂಬ ಆತಂಕ ಮೂಡಿದೆ ಎಂದರು.
ಟಿಕೆಟ್ ಸಿಗದೆ ಆಕಾಂಕ್ಷಿಗಳಲ್ಲಿ ಸಿಟ್ಟು ಸಹಜವಾಗಿ ಇರುತ್ತದೆ. ಕೆಪಿಸಿಸಿ ಅಧ್ಯಕ್ಷರು ಆಕಾಂಕ್ಷಿಗಳ ಜತೆ ಮಾತಾಡಿ ಫೈನಲ್ ಮಾಡಿದ್ದಾರೆ
ಎಂದು ಶಿಗ್ಗಾಂವಿ ಕ್ಷೇತ್ರದಲ್ಲಿ ಅಸಮಾಧಾನದ ಹೊಗೆ ವಿಚಾರಕ್ಕೆ ಪ್ರತಿಕ್ರಿಯಿಸಿದರು.