CSK Vs GT Head to Head Records: ಹಾರ್ದಿಕ್ ಮುಂದೆ ಧೋನಿ ಆಟ ನಡೆದೇ ಇಲ್ಲ!

ಇಂಡಿಯನ್ ಪ್ರೀಮಿಯರ್ ಲೀಗ್ 16ನೇ ಆವೃತ್ತಿಯ ಮೊದಲ ಪಂದ್ಯವು ಶುಕ್ರವಾರ, ಮಾರ್ಚ್ 31 ರಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆಯಲಿದೆ. ಈ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಮತ್ತು ಅವರ ಶಿಷ್ಯ ಹಾರ್ದಿಕ್ ಪಾಂಡ್ಯ ಮುಖಾಮುಖಿಯಾಗಲಿದ್ದಾರೆ. ಗುಜರಾತ್ ಟೈಟಾನ್ಸ್ ಪ್ರಸ್ತುತ ಲೀಗ್‌ನ ಚಾಂಪಿಯನ್ ಆಗಿದೆ.  ಕಳೆದ ಸೀಸನ್​ನಲ್ಲಿ ತಂಡವು 14 ಪಂದ್ಯಗಳಲ್ಲಿ 10 ಪಂದ್ಯಗಳನ್ನು ಗೆಲ್ಲುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿತ್ತು.  ಇದಾದ ಬಳಿಕ ಕ್ವಾಲಿಫೈಯರ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸಿ ಫೈನಲ್‌ನಲ್ಲಿ ಪ್ರಶಸ್ತಿ ಜಯಿಸಿತ್ತು.  ಇನ್ನೊಂದೆಡೆ ಚೆನ್ನೈ ತಂಡದ ಪ್ರದರ್ಶನ ತದ್ವಿರುದ್ಧವಾಗಿತ್ತು. ತಂಡವು 14 ಪಂದ್ಯಗಳಲ್ಲಿ ನಾಲ್ಕರಲ್ಲಿ ಮಾತ್ರ ಗೆದ್ದು ಒಂಬತ್ತನೇ ಸ್ಥಾನ ಗಳಿಸಿತು.  ಕಳೆದ ಸೀಸನ್​ನ ಲೀಗ್ ಸುತ್ತಿನಲ್ಲಿ ಉಭಯ ತಂಡಗಳ ನಡುವೆ 2 ಪಂದ್ಯಗಳು ನಡೆದಿದ್ದವು. ಈ ಎರಡೂ ಪಂದ್ಯಗಳಲ್ಲೂ ಹಾರ್ದಿಕ್ ನಾಯಕತ್ವ ಗುಜರಾತ್ ತಂಡ ಚೆನ್ನೈ ತಂಡವನ್ನು ಸೋಲಿಸಿತ್ತು.ಚೆನ್ನೈ ತಂಡವು ಗುಜರಾತ್ ವಿರುದ್ಧ ಎರಡು ಪಂದ್ಯಗಳನ್ನು ಆಡಿದ್ದು, ಒಂದರಲ್ಲಿ ರವೀಂದ್ರ ಜಡೇಜಾ ನಾಯಕತ್ವ ವಹಿಸಿದ್ದರೆ, ಇನ್ನೊಂದಕ್ಕೆ ಮಹೇಂದ್ರ ಸಿಂಗ್ ಧೋನಿ ನಾಯಕತ್ವ ವಹಿಸಿದ್ದರು.  ಜಡೇಜಾ ನಾಯಕತ್ವದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ 169 ರನ್ ಗಳಿಸಿತ್ತು.  ಕೊನೆಯ ಓವರ್‌ನ ಐದನೇ ಎಸೆತದಲ್ಲಿ ಈ ಗುರಿಯನ್ನು ಗುಜರಾತ್ ಸಾಧಿಸಿತು.  ಈ ಪಂದ್ಯದಲ್ಲಿ ಡೇವಿಡ್ ಮಿಲ್ಲರ್ 94 ರನ್‌ಗಳ ಬಿರುಸಿನ ಇನ್ನಿಂಗ್ಸ್ ಆಡಿದರು. ಎರಡನೇ ಪಂದ್ಯದಲ್ಲೂ ಚೆನ್ನೈ ತಂಡ ಮೊದಲು ಬ್ಯಾಟಿಂಗ್‌ಗೆ ಇಳಿದಿತ್ತು.  ರುತುರಾಜ್ ಅವರ ಅರ್ಧಶತಕದ ಆಧಾರದ ಮೇಲೆ ತಂಡವು ಐದು ವಿಕೆಟ್‌ಗೆ 133 ರನ್ ಗಳಿಸಿತು.  ಈ ಗುರಿ ಬೆನ್ನಟ್ಟಿದ ಗುಜರಾತ್ ತಂಡ ವೃದ್ಧಿಮಾನ್ ಸಹಾ ಅವರ 67 ರನ್‌ಗಳ ನೆರವಿನಿಂದ ಐದು ಎಸೆತಗಳು ಬಾಕಿ ಇರುವಂತೆಯೇ ಗೆಲುವು ಸಾಧಿಸಿತು.

source https://tv9kannada.com/photo-gallery/cricket-photos/ipl-2023-gujrat-titans-vs-chennai-super-kings-head-to-head-records-in-kannada-psr-au14-545731.html

Views: 0

Leave a Reply

Your email address will not be published. Required fields are marked *