CSK vs LSG: ‘ಜೈಂಟ್ಸ್‌’ ಎದುರು ನಡೆಯಲಿಲ್ಲ ‘ಕಿಂಗ್ಸ್‌’ ಆಟ! ರಾಹುಲ್‌ ರಣಾರ್ಭಟಕ್ಕೆ ಚೆನ್ನೈ ಚಿತಾಲ್‌ ಪತಾಲ್‌!

ಇಂದು ಚುಟುಕು ಸಮರದಲ್ಲಿ 34 ನೇ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) , ಲಕ್ನೋ ಸೂಪರ್‌ಜೈಂಟ್ಸ್ (Lucknow Super Giants) ತಂಡ ಎದುರು ಬದುರಾಗಿತ್ತು. ಕಳೆದ ಎರಡು ಪಂದ್ಯಗಳಲ್ಲಿ ಸೋಲು (Fail) ಕಂಡಿರುವ ಲಕ್ನೋ ತನ್ನ ತವರು ನೆಲದಲ್ಲಿ ಗೆಲುವಿನ ಟ್ರ್ಯಾಕ್‌ಗೆ ಮರಳಲು ಬಯಸಿತ್ತು. ಇತ್ತ ಚೆನ್ನೈ (CSK) ತಂಡ ತನ್ನ ಗೆಲುವಿನ ಸರಣಿಯನ್ನು ಮುಂದುವರೆಸುವ ಮೂಲಕ ಸತತ ಮೂರನೇ ಗೆಲುವು ದಾಖಲಿಸುವ ಕನಸು ಕಂಡಿತ್ತು. ಟಾಸ್‌  (Toss) ಗೆದ್ದು ಲಕ್ನೋ ತಂಡ ಬೌಲಿಂಗ್‌(Bowling) ಆಯ್ಕೆ ಮಾಡಿಕೊಂಡಿತ್ತು. ಚೆನ್ನೈ ಸೂಪರ್‌ ಕಿಂಗ್ಸ್‌‌ ತಂಡ 176 ರನ್‌ಗಳಿಸಿತ್ತು. ಈ ಗುರಿಯನ್ನು ಸುಲಭವಾಗಿ ಲಕ್ನೋ ಸೂಪರ್ ಜೈಂಟ್ಸ್ ತಲುಪಿದೆ.

ರಾಹುಲ್‌-ಡಿಕಾಕ್‌ ಅಬ್ಬರ!

ಲಕ್ನೋ ಸೂಪರ್‌ಜೈಂಟ್ಸ್‌ಗೆ ನಾಯಕ ಕೆಎಲ್ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಸ್ಥಿರ ಆರಂಭ ನೀಡಿದ್ದರು. ನಾಯಕ ಕೆಎಲ್ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಲಕ್ನೋಗೆ ಉತ್ತಮ ಆರಂಭ ನೀಡಿದ್ದು, ಪವರ್‌ಪ್ಲೇ ಅಂತ್ಯಕ್ಕೆ ಲಕ್ನೋ ವಿಕೆಟ್ ನಷ್ಟವಿಲ್ಲದೆ 54 ರನ್ ಗಳಿಸಿತ್ತು.

ಲಕ್ನೋ ನಾಯಕ ಕೆಎಲ್ ರಾಹುಲ್ ಸಿಎಸ್ ಕೆ ವಿರುದ್ಧ ಭರ್ಜರಿ ಬ್ಯಾಟಿಂಗ್ ನಡೆಸಿ ಅರ್ಧಶತಕ ಬಾರಿಸಿದ್ದಾರೆ. ಅಲ್ಲದೆ ಕ್ವಿಂಟನ್ ಡಿ ಕಾಕ್ ಅವರೊಂದಿಗೆ ಮೊದಲ ವಿಕೆಟ್‌ಗೆ ಶತಕದ ಜೊತೆಯಾಟವನ್ನು ಪೂರ್ಣಗೊಳಿಸಿದ್ರು. ಡಿಕಾಕ್‌ 54 ರನ್‌ಗಳಿಸಿ ಔಟಾದ್ರು. ಕೆಲ್‌ ರಾಹುಲ್‌ 53 ಬಾಲ್‌ಗಳಲ್ಲಿ 82 ರನ್‌ಗಳಿಸಿ ಕೊನೆಯಲ್ಲಿ ಜಡೇಜಾಗೆ ಕ್ಯಾಚ್‌ ನೀಡಿ ಔಟಾದ್ರು.

ಚೆನ್ನೈ ತಂಡಕ್ಕೆ ಆರಂಭಿಕ ಆಘಾತ!

ಬ್ಯಾಟಿಂಗ್‌ ಆರಂಭಿಸಿದ ಚೆನ್ನೈ ಸೂಪರ್‌ ಕಿಂಗ್ಸ್‌‌ಗೆ ಆರಂಭಿಕ ಆಘಾತ ಎದುರಾಯ್ತು. ಆರಂಭಿಕ ಆಟಗಾರ ರಚಿನ್ ರವೀಂದ್ರ ಅವರನ್ನು ಔಟ್ ಮಾಡುವ ಮೂಲಕ ವೇಗದ ಬೌಲರ್ ಮೊಹ್ಸಿನ್ ಖಾನ್ ಸಿಎಸ್​ಕೆಗೆ ಮೊದಲ ಆಘಾತ ನೀಡಿದ್ದಾರೆ. ಮೊಹ್ಸಿನ್ ಮೊದಲ ಎಸೆತದಲ್ಲಿಯೇ ರಚಿನ್ ಅವರನ್ನು ಬೌಲ್ಡ್ ಮಾಡಿದರು. ನಾಯಕ ರುತುರಾಜ್ ಕೂಡ ಕೇವಲ 17 ರನ್​ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು.

ಕೈ ಕೊಟ್ಟ ಸ್ಟಾರ್‌ ಪ್ಲೇಯರ್‌ ದುಬೆ!

ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ 36 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ತಂಡದ ಸ್ಟಾರ್ ಬ್ಯಾಟರ್ ಶಿವಂ ದುಬೆ ಕೂಡ ಕೇವಲ 3 ರನ್‌ಗಳಿಗೆ ಔಟಾಗಿದ್ದಾರೆ. ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಗಮಿಸಿದ್ದ ಸಮೀರ್ ರಿಜ್ವಿ ಕೂಡ ಒಂದೇ ರನ್‌‌ಗೆ ಔಟಾದ್ರು.

ಚೆನ್ನೈ ತಂಡಕ್ಕೆ ಆಸರೆಯಾದ ಜಡೇಜಾ, ಧೋನಿ!

ಒಂದು ಕಡೆ ವಿಕೆಟ್‌ಗಳು ಉರುಳುತ್ತಿದ್ರೆ ಇತ್ತ ಜಡೇಜಾ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಆಸರೆಯಅದ್ರಯ. 35 ಬಾಲ್‌‌ಗಳಲ್ಲಿ ಭರ್ಜರಿ ಅರ್ಧ ಶತಕ ಬಾರಿಸಿದ್ರು. ಇನ್ನೂ ಮೊಯಿನ್‌ ಅಲಿ ಔಟಾದ ಬಳಿಕ ಬಂದ ಧೋನಿ ಮತ್ತೆ ಕಮಾಲ್‌ ಮಾಡಿದ್ರು.

ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ XI): ರುತುರಾಜ್ ಗಾಯಕ್ವಾಡ್ (ಸಿ), ರಚಿನ್ ರವೀಂದ್ರ, ಅಜಿಂಕ್ಯಾ ರಹಾನೆ, ಮೊಯಿನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ (ಪ), ದೀಪಕ್ ಚಾಹರ್, ತುಷಾರ್ ದೇಶಪಾಂಡೆ, ಮುಸ್ತಫಿಜುರ್ ರೆಹಮಾನ್, ಮತೀಶ ಪತಿರಾನ

Source : https://kannada.news18.com/news/sports/ipl-2024-csk-vs-lsg-lucknow-super-giants-wont-by-8-wickets-vdd-1662399.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *