ಚಿತ್ರದುರ್ಗ: ಅನುಪಮ ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ್ ನ ಆವರಣದಲ್ಲಿ “ಎಐಪಿಎಸ್ ಇವೆನೆಮೆಂಟ್” ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸದ್ಗುರು ಕಬೀರಾನಂದ ಸ್ವಾಮಿಗಳು ವಹಿಸಿದ್ದರು, ಶಾಲೆಯ ಅಭಿವೃದ್ಧಿಯಲ್ಲಿ ಇಂತಹ ಕಾರ್ಯಕ್ರಮಗಳು ಮುಖ್ಯ ಸಂಸ್ಥೆಯ ಕಾರ್ಯದರ್ಶಿಗಳು ಅಚ್ಚು ಕಟ್ಟಾಗಿ ನಿರ್ವಹಿಸುತ್ತಿದ್ದಾರೆ, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪಠ್ಯಪುಸ್ತಕದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಅವಶ್ಯಕ ಎಂದು ಕಬೀರಾನಂದ ಶ್ರೀಗಳು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಮಾದಾರ ಚೆನ್ನಯ್ಯ ಶ್ರೀಗಳು ಮಾತನಾ ಮಗುವೂ ವಿದ್ಯಾವಂತರಾದಾಗ ದೇಶ ಉಜ್ವಲವಾಗಿದೆ, ಇದಕ್ಕೆ ಶಿಕ್ಷಣವೇ ಪ್ರಮುಖ ಅಸ್ತ್ರ ಎಂದು ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಹೇಳಿದರು.
ಮಾಜಿ ಶಾಸಕರಾದ ಜಿ.ಎಚ್. ತಿಪ್ಪಾರೆಡ್ಡಿ, ಮಾಜಿ ಶಾಸಕರಾದ ಎಸ್.ಕೆ.ಬಸವರಾಜನ್, ಕೆ.ಸಿ. ನಾಗರಾಜ್, ಸರ್ಕಲ್ ಇನ್ಸ್ ಪೆಕ್ಟರ್ ತಿಪ್ಪೇಸ್ವಾಮಿ, ಡಿಡಿಪಿಐ ಎಂ.ಆರ್. ಮಂಜುನಾಥ್, ಎಚ್. ರಾಮಮೂರ್ತಿ, ಎಚ್. ಶ್ರೀನಿವಾಸ್, ತಾರಕೇಶ್ವರಿ, ಸಂಸ್ಥೆಯ ಕಾರ್ಯದರ್ಶಿಗಳಾದ ಎಸ್. ಭಾಸ್ಕರ್, ಎಸ್.ಬಿ. ರಕ್ಷಣ್, ಸ್ಕೂಲ್ ನ ಪ್ರಿನ್ಸಿಪಾಲ್ ಸಿ.ಡಿ. ಸಂಪತ್ ಕುಮಾರ್, ಪುನೀತ್ ಮಣಿ, ಡಾ|| ಈ. ರುದ್ರಮುನಿ, ಎಂ.ಎಸ್. ಪರ್ವತ್ ರಾಜು ಮುಂತಾದವರು ಇತರಿರಿದ್ದರು.
ಇದೇ ವೇಳೆ ನಿವೃತ್ತ ಯೋಧ ಎಂ.ಪೆರಿಸ್ವಾಮಿ ರೆಡ್ಡಿ ಅವರನ್ನು ಸನ್ಮಾನಿಸಲಾಯಿತು. ಯು ಕೆ ಜಿ ಮತ್ತು ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಗ್ರಾಜ್ಯುಯೇಷನ್ ಪ್ರಮಾಣಪತ್ರ ವಿತರಿಸಲಾಯಿತು.
ಸ್ಕೂಲ್ ನ ಪ್ಲೇಹೋಂನಿಂದ ಎಸ್ಎಸ್ಎಲ್ ಸಿವರೆಗಿನ ವಿದ್ಯಾರ್ಥಿಗಳು ವೈವಿಧ್ಯಮಯ ವೇಷಭೂಷಣ ದೊಂದಿಗೆ ಕನ್ನಡ ಸಿನಿಮಾ ಮತ್ತು ಭಕ್ತಿ ಗೀತೆಗಳಿಗೆ ನೃತ್ಯ ಪ್ರದರ್ಶಿಸಿ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.