ಬೆಂಗಳೂರು, ಮೇ 26: ದೇಶದಲ್ಲಿ ಚಂಡಮಾರುತವು ಬಿರುಗಾಳಿ ಎಬ್ಬಿಸಿದೆ. ಭಾನುವಾರ ರಾತ್ರಿ ಭೀಕರ ಸ್ವರೂಪ ತಾಳುವ ಸಾಧ್ಯತೆಗಳು ಇವೆ. ಇದರ ಪರಿಣಾಮ ಕರ್ನಾಟಕದ ಮೇಲೂ ಆಗಿದೆ. ಇಂದಿನಿಂದ ಜೂನ್ 3ರವರೆಗೆ ಹಾಗೂ ಜೂನ್ 3ರಿಂದ ಜೂನ್ 11ರವರೆಗೆ ಭಾರೀ ಮಳೆಯಾಗಲಿದೆ. ಇದರಲ್ಲಿ ಎರಡನೇ ಹಂತದಲ್ಲಿ ವ್ಯಾಪಕ ಮಳೆ ಮುನ್ಸೂಚನೆ ಕೊಡಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ತಿಳಿಸಿದೆ.
ಇಂದು ಮೇ 26ರಿಂದ ಜೂನ್ 03ರವರೆಗೆ ಕರ್ನಾಟಕದ ರೆಮನ್ ಚೆಂಡಮಾರುತದ ಪ್ರಭಾದಿಂದ ಭಾರೀ ಮಳೆ ಆಗಲಿದೆ. ಈ ವೇಳೆ ಆಗಾಗ ಮಳೆ ಇಳಿಕೆ ಆಗುವ, ಇಲ್ಲವೇ ದಿನ ಬಿಟ್ಟು ದಿನ ಮಳೆ ಆಗುವ ಸಾಧ್ಯತೆ ಇರುತ್ತದೆ. ಮೊದಲು ದಕ್ಷಿಣ ಒಳನಾಡಿನ ಭಾಗದ ಜಿಲ್ಲೆಗಳಲ್ಲಿ, ಕರಾವಳಿ ಭಾಗದಲ್ಲಿ ಹೆಚ್ಚು ಮಳೆ ನಿರೀಕ್ಷಿಸಬಹುದಾಗಿದೆ.
ಉಳಿದಂತೆ ಮಲೆನಾಡು ಜಿಲ್ಲೆಗಳು ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಬಹುದು. ಕೆಲವೆಡೆ ತುಂತುರು ಮಳೆ ಆಗುವ ಸಾಧ್ಯತೆ ಇದೆ. ಎಲ್ಲೆಡೆ ಮೋಡ ಕವಿದ ವಾತಾವರಣ ಕಂಡು ಬರುತ್ತದೆ. ಆದರೆ ಈ ವಾರ ನಿಂತರ ಮಳೆ ಆಗುವುದು ಸಾಧ್ಯತೆ ತುಸು ಕಡಿಮೆ.
ಜೂನ್ 03ರಿಂದ ಹೇಗಿರಲಿದೆ ಮಳೆ: ವರದಿ
ನಂತರ ಜೂನ್ 03ರಿಂದ ಜೂನ್ 11ರವರೆಗೆ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಅಧಿಕ ಮಳೆ ಆಗಬಹುದು. ಅಷ್ಟೊತ್ತಿಗಾಗಲೇ ಕರ್ನಾಟಕ ಸೇರಿದಂತೆ ದೇಶದಲ್ಲಿ ಮುಂಗಾರು ಮಳೆ ಸಕ್ರಿಯವಾಗಿರುತ್ತದೆ. ಜೊತೆಗೆ ಚಂಡಮಾರುತದ ಹಾವಳಿ ತಗ್ಗದಿದ್ದರೆ ಗುಡುಗು ಮಿಂಚು ಸಹಿತ ಧಾರಾಕಾರ ಮಳೆಯನ್ನು ನಿರೀಕ್ಷಿಸಬಹುದಾಗಿದೆ.
ಸದ್ಯ ಉತ್ತರ ಒಳನಾಡಿನಲ್ಲಿ ಹಲವೆಡೆ ಮಳೆ ಆಗಿದೆ. ಇನ್ನೂ ಕೆಲವೆಡೆ ಉತ್ತಮ ಮಳೆಗಾಗಿ ಕಾಯುತ್ತಿದ್ದು, ರೈತರು ಮುಂಗಾರು ಹಂಗಾಮು ಬಿತ್ತನೆ ಸಜ್ಜಾಗಿದ್ದಾರೆ. ಸರತಿ ಸಾಲಿನಲ್ಲಿ ನಿಂತು ಸಹಕಾರಿ ಕೇಂದ್ರದಿಂದ ಬಿತ್ತನೆ ಬೀಜ ಖರೀದಿಸಿಟ್ಟುಕೊಂಡಿದ್ದಾರೆ. ನಿರಂತರ ಮಳೆಯ ಸೂಚನೆ ರೈತರಿಗೆ ವರದಾನವಾಗುವ ಲಕ್ಷಣಗಳು ಇವೆ.
135 ಕಿಮೀ ವೇಗದ ಚಂಡಮಾರುತದ ಗಾಳಿ
ಒಂದು ವಾರದಿಂದ ಚಂಡಮಾರುತ ಪರಿಚಲನೆಯಂತಿದ್ದ ವೈಪರಿತ್ವು ನಂತರ ವಾಯುಭಾರ ಕುಸಿತವಾಗಿ ಮಾರ್ಪಟ್ಟು ಶನಿವಾರ ರಾತ್ರಿ ಸ್ಪಷ್ಟ ‘ರೆಮಲ್‘ ಚಂಡಮಾರುತವಾಗಿ ಬದಲಾಗಿದೆ. ಇಂದು ಭಾನುವಾರ ರಾತ್ರಿ ಪಶ್ಚಿಮ ಬಂಗಾಳದ ಕರಾವಳಿ ಹಾಗೂ ಬಾಂಗ್ಲಾದೇಶದ ಕರಾವಳಿ ಮಧ್ಯೆ ಅಪ್ಪಳಿಸಲಿದೆ. ಈ ವೇಳೆ ಚಂಡಮಾರುತದ ಗಾಳಿಯ ವೇಗ ಪ್ರತಿ ಗಂಟೆಗೆ 135 ಕಿಮೀ ವೇಗದಲ್ಲಿರುತ್ತದೆ. ಇಂದು ಶನಿವಾರ ರೆಮಲ್ ವೇಗ ಪ್ರತಿ ಗಂಟೆಗೆ 90-100 ಕಿಮೀ ವರೆಗೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನಾಳೆವರೆಗೆ ಏರ್‌ಪೋರ್ಟ್ ಬಂದ್
ಕರಾವಳಿ ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಕೊಲ್ಕತ್ತ ವಿಮಾನ ನಿಲ್ದಾಣವನ್ನು ಇಂದು ರಾತ್ರಿ 12 ಗಂಟೆಯಿಂದ ಸೋಮವಾರ ಬೆಳಗ್ಗೆ 09 ಗಂಟೆವರೆಗೆ ಮುಚ್ಚಲು ಸರ್ಕಾರ ತೀರ್ಮಾನಿಸಲಾಗಿದೆ. ಅಗತ್ಯ ಕಟ್ಟೆಚ್ಚರಗಳನ್ನು ಜಿಲ್ಲಾಡಳಿ, ವಿಪುತ್ತು ನಿರ್ವಹಣಾ ತಂಡ ಕೈಗೊಂಡಿವೆ.
ಕರ್ನಾಟಕದ ಮೇಲೆ ‘ರೆಮನ್‘ ಪ್ರಭಾವ
ಈಗಾಗಲೇ ಕರ್ನಾಟಕದಲ್ಲಿ ಚಂಡಮಾರುತದ ಪ್ರಭಾವ ಉಂಟಾಗಿದೆ. ದಕ್ಷಿಣ ಒಳನಾಡಿನ ತುಂಬೆಲ್ಲ ಕೆಲವು ದಿನಗಳಿಂದ ತಂಪು ವಾತಾವರಣ ಕಂಡು ಬರುತ್ತಿದೆ. ಬಿಸಿಲು ಅಷ್ಟಕಷ್ಟೆ ಎಂಬಂತಾಗಿದೆ. ವಾತವರಣ ಮುದ ನೀಡುವಂತಿದ್ದರೂ, ಮುಂದೆ ಬರಲಿರುವ ಧಾರಾಕಾರ ಮಳೆಯಿಂದ ಏನೆಲ್ಲ ಅವಾಂತರಗಳು ಆಗಲಿವೆಯೇ ಎಂಬ ಆತಂಕ ಕರಾವಳಿ ಹಾಗೂ ಇನ್ನಿತರ ಜಿಲ್ಲೆಗಳ ಜನರನ್ನು ಕಾಡುತ್ತಿದೆ.
ಯೆಲ್ಲೋ ಅಲರ್ಟ್ ಎಚ್ಚರಿಕೆ
ಮುಂದಿನ ಮೂರು ದಿನಗಳಲ್ಲಿ ಕರ್ನಾಟಕ ಕರಾವಳಿಯ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಾತ್ರವೇ ಭಾರೀ ಮಳೆ ಮುನ್ಸೂಚನೆ ಇದೆ. ಇಲ್ಲಿ 6ಸೆಂಟಿ ಮೀಟರ್‌ನಿಂದ 11 ಸೆಂಟಿ ಮೀಟರ್‌ವರಗೆ ಮಳೆ ಆಗುವ ಕಾರಣಕ್ಕೆ ಮೂರು ಜಿಲ್ಲೆಗಳಿಗೆ ಮುಂದಿನ ಮೂರು ದಿನ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಸಾಧಾರಣ ಮಳೆ
ಉಳಿದಂತೆ ಮುಂದಿನ ಮೂರು ದಿನ ದಕ್ಷಿಣ ಒಳನಾಡಿನ ಬೆಂಗಳೂರು, ಕೋಲಾರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಚಾಮರಾಜನಗರ, ತುಮಕೂರು, ಬಳ್ಳಾರಿ, ಚಿತ್ರದುರ್ಗ, ವಿಜಯನಗರ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಸಾಧಾರಣವಾಗಿ ಮಳೆ ಆಗಲಿದೆ.
ಸಾಮಾನ್ಯ, ತುಂತುರು ಮಳೆ
ಮೂರು ದಿನ ಉತ್ತರ ಕರ್ನಾಟಕ ಕೆಲವು ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಾಮಾನ್ಯವಾಗಿ ಮಳೆ ಬರುತ್ತಿದೆ. ಇಲ್ಲಿನ ರೈತರು ಅಬ್ಬರದ ಮಳೆಗಾಗಿ ಕಾಯುತ್ತಿದ್ದಾರೆ. ಜೂನ್ ಮೊದಲ ವಾರ ಅವರ ನಿರೀಕ್ಷೆಯಂತೆ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನಾ ವರದಿ ತಿಳಿಸಿದೆ.