ನಿತ್ಯಭವಿಷ್ಯ, 24 ನವೆಂಬರ್​ : ಇಂದು ಈ ರಾಶಿಯವರಿಗೆ ಎಲ್ಲ ವಿಷಯಕ್ಕೂ ಅತಿಯಾದ ಕಿರಿಕಿರಿ ಆಗಲಿದೆ

24 ನವೆಂಬರ್​ 2025ರ ಸೋಮವಾರದ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಮಾರ್ಗಶೀರ್ಷ, ಸೌರ ಮಾಸ : ವೃಶ್ಚಿಕ, ಮಹಾನಕ್ಷತ್ರ : ಅನೂರಾಧಾ, ವಾರ : ಸೋಮ, ಪಕ್ಷ : ಶುಕ್ಲ, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ಉತ್ತರಾಷಾಢ, ಯೋಗ : ಧೃತಿ, ಕರಣ : ಭದ್ರ, ಸೂರ್ಯೋದಯ – 06 – 23 am, ಸೂರ್ಯಾಸ್ತ – 05 – 49 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:49 – 09:15, ಗುಳಿಕ ಕಾಲ 13:32 – 14:58, ಯಮಗಂಡ ಕಾಲ 10:41 – 12:06

ದಿನ ಭವಿಷ್ಯ, 24, ನವೆಂಬರ್​ 2025: ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಹೇಮಂತ ಋತುವಿನ ಮಾರ್ಗಶೀರ್ಷ ಮಾಸ ಶುಕ್ಲ ಪಕ್ಷದ ಚತುರ್ಥೀ ತಿಥಿ ಸೋಮವಾರ ನೆಮ್ಮದಿಯ‌ ನಿರೀಕ್ಷೆ, ದೂರಪ್ರಯಾಣ, ಇಷ್ಟದವರ ಒಡನಾಟ, ಧಾರ್ಮಿಕ ಕಾರ್ಯ, ವ್ಯಾಪಾರಕ್ಕೆ ಓಡಾಟ, ಸ್ಪರ್ಧೆಯಲ್ಲಿ ಉತ್ಸಾಹ, ವಿವಾಹದ ಚಿಂತೆ ಇವೆಲ್ಲ ಇಂದಿನ ಭವಿಷ್ಯ.

ಮೇಷ ರಾಶಿ:

ವಿದೇಶ ಪ್ರಯಾಣಕ್ಕೆ ಬೇಕಾದ ಮೂಲಭೂತ ವ್ಯವಸ್ಥೆಯ ಗಮನಹರಿಸಿ. ನಿಮ್ಮೊಳಗಿನ ವಿಷಮಭಾವವು ಕೆಲವರ ವಿಚಾರದಲ್ಲಿ ಕಡಿಮೆಯಾಗುವುದು. ಮಕ್ಕಳಿಗೆ ಸಿಗುವ ಗೌರವದಿಂದ ನಿಮಗೆ ಹೆಮ್ಮೆ. ನೀವು ಪ್ರತಿಕೂಲಸ್ಥಿತಿಯನ್ನು ಎದುರಿಸಲು ಮಾನಸಿಕವಾಗಿ ಸಿದ್ಧರಿರುವಿರಿ. ಸ್ತ್ರೀಯರಿಂದ ಇಂದಿನ ನಿಮ್ಮ ಕೆಲಸವನ್ನು ಮಾಡಿಕೊಳ್ಳುವಿರಿ. ಅಗೌರವವನ್ನು ಕೊಟ್ಟಂತೆ ನಿಮಗೆ ಅನ್ನಿಸಬಹುದು. ಸ್ನೇಹಿತರ ಜೊತೆ ಮನಸ್ತಾಪವು ಬರಬಹುದು. ಸಾಹಿತ್ಯಾಸಕ್ತರಿಗೆ ಒಳ್ಳೆಯ ಗೌರವ ಬರುವುದು. ಮಕ್ಕಳು ಅಡ್ಡದಾರಿಗೆ ಹೋಗುವ ಸನ್ನಿವೇಶವು ಬರಬಹುದು. ಮಾರ್ಗದರ್ಶನದ ಅವಶ್ಯಕತೆ ಇರಲಿದೆ. ಸ್ವಾವಂಬಿಯಾಗಲು ನೀವು ಇಚ್ಛಿಸುವಿರಿ. ಸಿಟ್ಟನ್ನು ಕಡಿಮೆ ಮಾಡಿಕೊಂಡು ಎಲ್ಲವನ್ನೂ ಸ್ವೀಕರಿಸಿದರೆ ಯಶಸ್ಸು ನಿಮ್ಮದೇ. ಸಂಸ್ಥೆಯ ಭಾಗವಾಗಿ ನೀವು ಪ್ರಾಮಾಣಿಕ ಕೆಲಸವನ್ನು ಮಾಡುವಿರಿ. ಉನ್ನತ ಅಧಿಕಾರವು ನಿಮ್ಮನ್ನು ಹುಡುಕಿಕೊಂಡು ಬಂದೀತು. ತಪ್ಪನ್ನು ಒಪ್ಪಿಕೊಂಡು ಸುಮ್ಮನಾಗುವಿರಿ. ನಿಯಮವನ್ನು ಪಾಲಿಸುವುದು ಮುಖ್ಯವಾಗಿರಲಿ.

ವೃಷಭ ರಾಶಿ:

ಆರೋಗ್ಯದ ಖರ್ಚಿಗೆ ಸಂಬಂಧಿಸಿದಂತೆ ಓಡಾಟ ಮಾಡಿ, ಲಾಭ ಪಡೆಯುವಿರಿ. ಪ್ರೇಮ ವಿವಾವಹವು ಇಂದು ಸಿದ್ಧಿಯಾದ ಸಂಭ್ರಮದಲ್ಲಿ ಇರುವಿರಿ. ಮನೆಯವರ ಜೊತೆ ವಿನಾಕಾರಣ ಏರುದನಿಯಲ್ಲಿ ಮಾತನಾಡುವಿರಿ. ಆಸ್ತಿಯು ನಷ್ಟವಾಗುದು ಎಂಬ ಹೆದರಿಕೆ ಇರಲಿದೆ. ಹಣಕಾಸಿನ ಒತ್ತಡವು ಕಡಿಮೆ ಆಗಲಿದೆ. ಅನಾರೋಗ್ಯದ ಕಾರಣದಿಂದ ನೀವು ಇಂದಿನ ಪ್ರಯಾಣವನ್ನು ನಿಲ್ಲಿಸುವಿರಿ. ವಾಹನ ಚಾಲನೆಯಲ್ಲಿ ಭೀತಿ ಕಾಣಿಸುವುದು. ಸಜ್ಜನರಿಗೆ ಕೆಲವು ಅಪವಾದದ ಮಾತುಗಳು ಬರಬಹುದು. ನಿಮ್ಮ ತಾಳ್ಮೆಯ ವರ್ತನೆಯಿಂದ ಸಂಕಟವು ದೂರಾಗುವುದು. ಕಲಿಕೆಯಲ್ಲಿ ಹೊಸತನವನ್ನು ಇರುವುದು. ಮುಂಗಡವಾಗಿ ಪಡೆದ ಹಣವನ್ನು ಹಿಂದಿರುಗಿಸಬೇಕಾಗುವುದು. ಸಂತಾನವು ನಿಮಗೆ ಖುಷಿ ಕೊಡುವುದು. ವಿದೇಶಪ್ರಯಾಣವನ್ನು ಮಾಡುವ ಯೋಚನೆಯಲ್ಲಿಯೇ ಇರುವಿರಿ. ಕೆಲಸದಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಿದ್ದೀರಿ. ಪುಣ್ಯಸ್ಥಳಗಳ ದರ್ಶನವು ಇರಲಿದೆ. ತಿಳಿವಳಿಕೆಯ ವಿಚಾರದಲ್ಲಿ ನಿಮಗೆ ಮುಜುಗರ ಆಗಬಹುದು.

ಮಿಥುನ ರಾಶಿ:

ಕೆಲಸದಲ್ಲಿ ದೃಢತೆ ಮತ್ತು ಒಲವು ಎರಡೂ ಒಂದಕ್ಕೊಂದು ಪೂರಕ. ಅಕಾರಣವಾದ ಪ್ರೀತಿಯು ಅಕಾರಣವಾಗಿಯೇ ಮುಕ್ತಾಯವಾಗುವುದು. ಪ್ರೀತಿಯ ವಿಚಾರಕ್ಕೆ ಬಂದರೆ ಪೂರ್ಣ ಸಮಾಧಾನ‌ ಇರದು.‌ ಸಂಗಾತಿಯ ಮೇಲೆ ಅನುಮಾನವನ್ನು ವ್ಯಕ್ತಪಡಿಸುವಿರಿ. ಹಣವನ್ನು ಕೊಟ್ಟಾದರೂ ಆಗಬೇಕಾದ ಕಾರ್ಯವನ್ನು ಶೀಘ್ರವಾಗಿ ಮಾಡಿಸಿಕೊಳ್ಳಿ. ಚರ್ಮದ ತೊಂದರೆಯಿಂದ ಆತಂಕ ಜಾಸ್ತಿ. ಅತಿಯಾದ ಖರ್ಚನ್ನು ಮಾಡಿಕೊಳ್ಳುವಿರಿ. ಮನೆಯ ಜವಾಬ್ದಾರಿಗಳನ್ನು ಸಮತೋಲನಗೊಳಿಸಲು ಪ್ರಯತ್ನ. ನಿಮ್ಮವರ ಪ್ರೀತಿಯು ನಿಮಗೆ ಕಡಿಮೆ ಆದಂತೆ ಅನ್ನಿಸಬಹುದು. ಕೃಷಿಯಲ್ಲಿ ಉಪಯುಕ್ತ ಯೋಜನೆಯನ್ನು ಹಾಕಿಕೊಳ್ಳುವಿರಿ. ಮಕ್ಕಳ ಬಗ್ಗೆ ಇರುವ ನಿಮ್ಮ ಚಿಂತೆ ನಿವಾರಣೆ ಆಗುವುದು. ಹಣವನ್ನು ಗಳಿಸುವ ಹಂಬಲವು ಇದ್ದು ಅದಕ್ಕಾಗಿ ಮಾರ್ಗವನ್ನೂ ಪರ್ಯಾಲೋಚಿಸಿ. ಭವಿಷ್ಯದ ದೃಷ್ಟಿಯಿಂದ ಸಂವಹನ ಅಧಿಕ. ಸಹೋದರಿಯ ಜೊತೆ ಭಾವನೆಯನ್ನು ತೆರೆದಿಡುವಿರಿ. ಸಮಯಸಾಧನೆಗೆ ದಾರಿ ಹುಡುಕುವಿರಿ.

ಕರ್ಕಾಟಕ ರಾಶಿ:

ಹಣಕಾಸಿನ ಇಳಿಮುಖವನ್ನು ಸಹಿಸಲಾರಿರಿ. ಅದಕ್ಕಾಗಿ ಕೆಲಸದಲ್ಲಿ ಉತ್ತೇಜನ‌ ಸಿಗದು. ವಾಹನ ಖರೀದಿಗೆ ಯೋಚನೆ ಇರಲಿದ್ದು ಸಾಲ ಮಾಡಬೇಕಾಗವುದು. ನಿಮ್ಮ ವೇಗದ ಮನಸ್ಸನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವಿರಿ. ಬಂದ ಹಣವನ್ನು ಕೊಡಬೇಕಾದವರಿಗೆ ನೀಡಿ. ಮನೆಯವರ ಸಣ್ಣ ತಪ್ಪುಗಳೂ ನಿಮಗೆ ಸಹ್ಯವಾಗದೇ ಇರುವುದು. ಮತ್ತೆ ಮತ್ತೆ ಉಂಟಾದ ಅನಾರೋಗ್ಯದಿಂದ ನಿಮ್ಮ ದಿನಚರಿಯನ್ನೇ ಬದಲಿಸಿಕೊಳ್ಳುವಿರಿ. ಬಂಧುಗಳು ನಿಮ್ಮ ಬಗ್ಗೆ ಏನಾದರೂ ಆಡಿಕೊಂಡಾರು. ಶ್ರಮವು ಯುಕ್ತಿಯಿಂದ ಕೂಡಿರಲಿ. ಧನಾತ್ಮಕ ಚಿಂತನೆಯನ್ನು ಪ್ರಯತ್ನಪೂರ್ವಕವಾಗಿ ಮಾಡಿಬೇಕಾದೀತು. ನಿದ್ರೆಯು ಬಾರದೇ ಕಷ್ಟವಾದೀತು. ಮನೆತನದ ಗೌರವವನ್ನು ಕಾಪಾಡಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಲಿದೆ. ಕಳೆದುಕೊಂಡ ವಸ್ತುವಿಗಾಗಿ ನೀವು ಬಹಳ ಬೇಸರಪಡುವಿರಿ.‌ ಮಾತಿನಲ್ಲಿನ ಅತಿರೇಕ ತಪ್ಪಿಸಿದರೆ ಸ್ನೇಹ ಸಂಬಂಧಗಳು ಗಾಢವಾಗುತ್ತವೆ. ಆತ್ಮವಿಶ್ವಾಸ ಹೆಚ್ಚುತ್ತದೆ. ಯಾರ ಸಲಹೆ ಪಡೆಯದೇ ಮನಸ್ಸಿಗೆ ಬಂದಂತೆ ವ್ಯವಹರಿಸುವುದನ್ನು ಬಿಡಿ.

ಸಿಂಹ ರಾಶಿ:

ರಹಸ್ಯವಾಗಿ ನಿಮ್ಮ ಅವಕಾಶಗಳನ್ನು ನಿಮ್ಮದಾಗಿಸಿಕೊಳ್ಳುವಿರಿ. ಹಣಕಾಸಿನಲ್ಲಿ ಜಾಣ್ಮೆ ಅಗತ್ಯ. ಆರೋಗ್ಯದಲ್ಲಿ ಶಕ್ತಿ ಹೆಚ್ಚಾಗುತ್ತದೆ. ಭೂಮಿಯ ಲಾಭವು ಆಗಲಿದ್ದು ಅನೇಕ‌ ದಿನದ ಚಿಂತೆಗಳು ದೂರಾಗುವುದು. ಉದ್ಯೋಗದಲ್ಲಿ ಅಧಿಕ‌ ಆದಾಯು ಸಿಗುವುದು ಎಂಬ ನಿರೀಕ್ಷೆ ಇರಲಿದೆ. ಮಾನಸಿಕ ಅಸಮತೋಲನವನ್ನು ಸರಿ ಮಾಡಿಕೊಳ್ಳುವಿರಿ. ಸ್ನೇಹಿತರಿಗೆ ಮಾನಸಿಕ ಬೆಂಬಲವನ್ನು ನೀಡುವಿರಿ. ಮಾತಿಗೆ ಸಂಬಂಧಿಸದಂತೆ ದೋಷವು ನಿಮಗೆ ಕಾಣಸಿಗುವುದು. ನಿಮ್ಮ ಕೆಲಸವನ್ನು ಶಿಸ್ತಿನಿಂದ ಮಾಡಿ ಮುಗಿಸುವಿರಿ. ಕಾರ್ಯಸಾಧನೆಗೆ ಹೆಚ್ಚು ಓಡಾಟವನ್ನು ಮಾಡಬೇಕಾದೀತು. ಇಂದು ಪ್ರಯತ್ನಿಸಿದ ಕಾರ್ಯವು ಆಗದೇ ಇರುವುದಕ್ಕೆ ಬೇಸರಿಸುವಿರಿ. ಇನ್ನೊಬ್ಬರನ್ನು ಟೀಕಿಸುವುದು ನಿಮಗೆ ಬೇಡ. ಕುಟುಂಬದಲ್ಲಿ ಬಂಧುಗಳ ವಿಚಾರದಲ್ಲಿ ವಾಗ್ವಾದ. ದೂರದಲ್ಲಿರುವ ಆತ್ಮೀಯರಿಂದ ಶುಭಸುದ್ದಿ. ವಸ್ತುಗಳ ಮೇಲೆ ಅಧಿಕ ಮೋಹವನ್ನು ಇಟ್ಟುಕೊಳ್ಳಲಾರಿರಿ. ಸಮಯಕ್ಕೆ ಆಗಬೇಕಾದುದು ಆಗುವುದು ಎಂಬ ತಟಸ್ಥ ಸ್ಥಿತಿ ಇರಲಿದೆ‌.

ಕನ್ಯಾ ರಾಶಿ:

ಕೆಲಸ ಸ್ಥಾನ ಮತ್ತು ಮನೆಯಲ್ಲಿ ಸಮಾನ ಜವಾಬ್ದಾರಿ. ಒತ್ತಡವಿದ್ದರೂ ಕಲಹಗಳಿಗೆ ಅವಕಾಶ ಕೊಡಬೇಡಿ. ನಿಮ್ಮ ಅನಗತ್ಯ ಮೊಂಡುತನ ನಿಮ್ಮನ್ನೇ ಕುರುಡುಮಾಡಬಹುದು. ರಾಜಕೀಯದಲ್ಲಿ ತೃಪ್ತಿ ಸಿಗದೇ ತೊಳಲಾಟ ಇರಲಿದೆ. ಸಂಗಾತಿಯ ಆರೋಗ್ಯದ ಕಡೆ ನಿಮ್ಮ ಗಮನವು ಹೆಚ್ಚಿರುವುದು. ಅನಾದರದಿಂದ ನಿಮಗೆ ಸಿಟ್ಟುಬರಬಹುದು. ಕಿರಿಯರಿಂದ ಆಕಸ್ಮಿಕವಾಗಿ ಗೌರವಕ್ಕೆ ಪಾತ್ರರಾಗುವಿರಿ. ಅಸಹಜ ಮಾತುಗಳಿಗೆ ಸ್ಪಂದನೆ ಸಿಗದು. ಪ್ರತ್ಯೇಕತೆಯನ್ನು ನೀವು ಬಯಸುತ್ತಿರುವಿರಿ. ಏಕಾಂತವು ನಿಮಗೆ ಬಹಳ ಪ್ರಿಯವಾಗಲಿದೆ. ‌ಆರ್ಥಿಕ ಅಭಿವೃದ್ಧಿಯಿಂದ ನೆಮ್ಮದಿ ಇರುವುದು. ದಾಂಪತ್ಯ ಜೀವನವನ್ನು ಬಹಳ ಆನಂದಿಸುವಿರಿ. ಹಣಕಾಸಿನ ವಿಚಾರಗಳಲ್ಲಿ ಸೂಕ್ತ ಸಮಯ. ಸ್ನೇಹಿತರೊಂದಿಗೆ ಮಾತುಕತೆ ಮನಸ್ಸಿಗೆ ಹರ್ಷ. ಖರ್ಚುಗಳಿಗೆ ನಿರ್ದಿಷ್ಟತೆ ಇರಲಿ. ಚಂಚಲವಾದ ಮನಸ್ಸಿನಿಂದ ಯಾರು ಹೇಳಿದ್ದೂ ನಿಮಗೆ ಗೊತ್ತಾಗದು. ನಿಮ್ಮ ಬಗ್ಗೆ ನಿಮ್ಮನ್ನೇ ಕೇಳಿಕೊಳ್ಳಿ. ಇನ್ನೊಬ್ಬರ ಜೊತೆ ಸೇರಿ ಟೀಕೆಯನ್ನು ಮಾಡುವಿರಿ.

ತುಲಾ ರಾಶಿ:

ಸಂಬಂಧಗಳಲ್ಲಿ ಅರ್ಥೈಸಿಕೊಳ್ಳುವಿಕೆ ಹೆಚ್ಚುತ್ತದೆ. ದಿನದ ಅಂತ್ಯದಲ್ಲಿ ಶಾಂತಿಯ ಅನುಭವ. ನಿಮ್ಮ ಚರಾಸ್ತಿಯನ್ನು ಯಾರಾದರೂ ಬಳಸಿಯಾರು. ನಿಮ್ಮ ಮೇಲೆ ನಿಮಗೆ ಪೂರ್ಣ ನಂಬಿಕೆ ಇಟ್ಟು ಕೆಲಸ ಮಾಡಿದರೆ ಯಶಸ್ಸು ಸಾಧಿಸಬಹುದು. ನಿಮ್ಮ‌ಅಹಂಕಾರದ ಮಾತುಗಳಿಂದ ಮಿತ್ರರೇ ನಿಮ್ಮ ವಿರುದ್ಧ ತಿರುಗಿ ನಿಲ್ಲಬಹುದು. ಅಪರಿಚಿತರು ಮನೆಗೆ ಬರಬಹುದು. ನಿಮ್ಮ‌ ಆಲೋಚನೆಗಳನ್ನು ಇನ್ನೊಬ್ಬರ ಮೇಲೆ ಹೇರುವುದು ಬೇಡ. ಸಾಮಾಜಿಕವಾಗಿ ಕಾರ್ಯಗಳಿಗೆ ನಿಮ್ಮ ಹಣವನ್ನೇ ಬಳಸುವಿರಿ. ಮನೆಯಲ್ಲಿ ನಿಮ್ಮ ಕಾರ್ಯಗಳಿಗೆ ಹಿರಿಯರಿಂದ ವಿರೋಧ ಬರಲಿದೆ. ಅಪಮಾನವನ್ನು ಧೈರ್ಯದಿಂದ ಎದುರಿಸಲು ಮುಂದಾಗುವಿರಿ. ತಿಳಿವಳಿಕೆಯು ಇಂದು ನಿಮಗೆ ಮುಜುಗರವನ್ನು ತರಬಹುದು. ಒಗ್ಗಟ್ಟು ನಿಮ್ಮ ದಿನವನ್ನು ಮೃದುವಾಗಿಸುತ್ತದೆ. ಕೆಲಸದ ಒತ್ತಡ ಇದ್ದರೂ ಫಲ ಉತ್ತಮ. ನಿಮ್ಮ ವೃತ್ತಿಯನ್ನು ಪ್ರೀತಿಸುವುದು ಅನಿವಾರ್ಯವೇ ಆಗಿರುತ್ತದೆ. ಅದು ನಿಮಗೆ ಅನುಕೂಲವನ್ನು ಮಾಡಿಕೊಡುವುದು. ಸಿಕ್ಕ ಅವಕಾಶಗಳನ್ನು ಇನ್ನೊಬ್ಬರಿಗೆ ಕೊಡುವ ಮೊದಲು ಯೋಚಿಸಿ.

ವೃಶ್ಚಿಕ ರಾಶಿ:

ಕಾರ್ಯದ ಸ್ಥಳದಲ್ಲಿ ನಿಮ್ಮ ಮಾತಿಗೆ ಗೌರವ. ಸಹೋದ್ಯೋಗಿಗಳಿಂದ ಮೆಚ್ಚುಗೆ. ಕುಟುಂಬದಲ್ಲಿ ಸಕಾರಾತ್ಮಕ ಬದಲಾವಣೆ. ಇಂದು ಯಾರ ಬಳಿಯೂ ಏನ್ನೂ ಹೇಳಿಸಿಕೊಳ್ಳದೇ ಕೆಲಸವನ್ನು ಮಾಡುವಿರಿ. ಇಂದು ನೀವು ಅನನೂಕುಲ ಸ್ಥಿತಿಯಿಂದ ಹೊರ ಬರುವಿರಿ. ಕೆಟ್ಟ ಅಭ್ಯಾಸಕ್ಕೆ ಹಣವನ್ನು ಖರ್ಚು ಮಾಡುವಿರಿ. ಧಾರ್ಮಿಕ ಆಚರಣೆಯಲ್ಲಿ ಅನಿರೀಕ್ಷಿತವಾಗಿ ತೊಡಗುವಿರಿ. ನಿಮ್ಮ ಸರಳ ಉಪಾಯವನ್ನು ಕಾರ್ಯದಲ್ಲಿ ಹಾಕುವಿರಿ. ನಿಮ್ಮ ಮಾತು ಸಂಗಾತಿಯನ್ನು ಮೌನಿಯನ್ನಾಗಿ‌ ಮಾಡುವುದು. ನೀವು ಮನೆಯ ಜವಾಬ್ದಾರಿಗಳನ್ನು ವಹಿಸಿಕೊಳ್ಳಬೇಕಾದೀತು. ಮನೆಯ ಕಾರ್ಯವು ನಿಮಗೆ ತೃಪ್ತಿ ಕೊಡುವುದು. ವಾಹನ ಸಂಚಾರಕ್ಕೆ ತೊಂದರೆಯಾಗುವುದು. ಹಣಕಾಸಿನ ವ್ಯವಹಾರದಲ್ಲಿ ಸಡಿಲಿಕೆ ಬೇಡ. ಭವಿಷ್ಯದ ಕನಸಿನಿಂದ ನೀವು ಹೊರಬನ್ನಿ. ಅಹಂಕಾರ ತೋರದಿರುವುದು ಉತ್ತಮ. ಪ್ರೀತಿಭಾವ ಮತ್ತು ಸ್ನೇಹ ಬೆಳೆಸಲು ಸೂಕ್ತ ದಿನ. ಮನೆಯಲ್ಲಿ ಅಧ್ಯಯನಕ್ಕೆ ತೊಂದರೆಯಾಗಿ ಎಲ್ಲಿಗಾದರೂ ದೂರ ಹೋಗುವಿರಿ. ತಾಯಿಯ ಸೇವೆಯನ್ನು ಶ್ರದ್ಧೆಯಿಂದ ಮಾಡಲಿದ್ದೀರಿ.

ಧನು ರಾಶಿ:

ಮಾನಸಿಕ ಸಮತೋಲನ ಮುಖ್ಯ. ಭಾವನಾತ್ಮಕ ಪ್ರತಿಕ್ರಿಯೆಗಳಿಗಿಂತ ಕಾರ್ಯಪ್ರವೃತ್ತಿ ಉತ್ತಮ. ಹಣಕಾಸು ವಿಷಯಗಳು ತಾಳ್ಮೆ ಬೇಡಿಕೆ ಇಡುತ್ತವೆ. ಮನೋವಿಕಾರದಿಂದ ಜೊತೆಗಾರರಿಗೆ ತೊಂದರೆಯಾಗುವುದು. ಪ್ರವಾಸಕ್ಕೆ ಸ್ನೇಹಿತರ ಜೊತೆ ಎಲ್ಲಗಾದರೂ ಹೋಗುವಿರಿ. ಅನಿರೀಕ್ಷಿತ ಧನವನ್ನು ಪಡೆಯುವಿರಿ. ಸಮಾರಂಭಗಳಿಗೆ ಹೋಗುವಿರಿ. ವಂಚನೆಗೆ ಸಿಕ್ಕಿಕೊಳ್ಳುವಿರಿ. ಯೋಗ್ಯತೆ ಅನುಸಾರವಾಗಿ ನಿಮ್ಮ ಮಾತು ಇರಲಿ.‌ ಯಾರು ಏನೇ ಅಂದರೂ ನೀವು ಮಾತ್ರ ಯಥಾಸ್ಥಾನದಲ್ಲಿ ಇರುವುದು. ಮನೋಬಲವನ್ನು ಹೆಚ್ಚಿಸಿಕೊಳ್ಳಬೇಕಾಗವುದು. ಸುಮ್ಮನೇ ಮಾತಿಗಾಗಿ ಮಾತು ಬೆಳೆಸುವುದು ಬೇಡ. ಆರೋಗ್ಯದಲ್ಲಿ ಸಣ್ಣ ಸಮಸ್ಯೆ ಕಂಡರೂ ಹೆಚ್ಚು ಚಿಂತೆಯ ಅಗತ್ಯವಿಲ್ಲ. ನಿಮ್ಮ ತಪ್ಪನ್ನು ಯಾರದೋ ಮೇಲೆ ಹಾಕಿ ಖುಷಿ ಪಡುವಿರಿ. ಸಂಗಾತಿಯಿಂದ ಮಾನಸಿಕ ಕಿರಿಕಿರಿ ಇರುವುದು. ಪ್ರತಿಭೆಯ ಪ್ರದರ್ಶನಕ್ಕೆ ಅವಕಾಶಗಳು ಸಿಗದೇ ಹೋಗಬಹುದು. ವೃತ್ತಿಯಲ್ಲಿ ನಿಮ್ಮ ಸ್ಥಾನವನ್ನು ಭದ್ರವಾಗಿರಿಸಿಕೊಳ್ಳಲು ನೋಡುವಿರಿ. ಇಷ್ಟವಿಲ್ಲದ ವ್ಯಕ್ತಿಗಳ ಜೊತೆ ಇರಲು ಕಸಿವಿಸಿ ಆದೀತು.

ಮಕರ ರಾಶಿ:

ನಿರ್ಧಾರಗಳಲ್ಲಿ ಸ್ಪಷ್ಟತೆಯ ಕೊರತೆ ಕಂಡರೂ ದಿನದ ಅಂತ್ಯದಲ್ಲಿ ಸ್ಪಷ್ಟ ದಾರಿ ಸಿಗುತ್ತದೆ. ಸ್ನೇಹಿತರಿಂದ ಸಹಾಯ ಲಭ್ಯವಾಗುತ್ತದೆ. ಇಂದು ವ್ಯವಹಾರದಲ್ಲಿ ಸ್ಥೈರ್ಯವು ಬೇಕಾಗುವುದು. ನಿಮ್ಮ ಖರ್ಚು ಅಧಿಕವಾದರೂ ಒಳ್ಳೆಯ ಕಾರ್ಯಕ್ಕೆ ಆಗುತ್ತದೆ. ಇಂದು ವಿಸ್ಮರಣೆಯಿಂದ ಮಾಡಬೇಕಾದ ಕೆಲಸವನ್ನು ಮಾಡದೇ ಇರುವಿರಿ. ಧಾರ್ಮಿಕ ಆಚರಣೆಗಳಲ್ಲಿ ನಿಷ್ಠೆ ಇರಲಿದೆ. ಗಳಿಸಿದ ಹಣವನ್ನು ಸದ್ವಿನಿಯೋಗಕ್ಕೆ ಕೊಡುವಿರಿ. ಆರ್ಥಿಕತೆಯು ದಾಂಪತ್ಯದಲ್ಲಿ ಕಲಹವಾಗುವಂತೆ ಮಾಡುವುದು. ಕುಟುಂದ ಜೊತೆ ಸಮಯ ಕಳೆಯುವುದು ಇಂದು ಸಾಧ್ಯವಾಗದು. ಸ್ಥೈರ್ಯದ ಸಂವಹನ ನಿಮ್ಮ ದಿನವನ್ನು ಉತ್ತಮಗೊಳಿಸುತ್ತದೆ. ಆದರೆ ಮಾತಿನಲ್ಲಿನ ಉದ್ವೇಗದ ಸ್ವಭಾವ ತಪ್ಪಿಸಿ. ಕ್ಷಣಿಕ ಸುಖಕ್ಕೆ ಮೈಮರೆಯಬಹುದು. ನಿಮ್ಮವರ ಪ್ರೀತಿಯನ್ನು ಇಂದು ಗಳಿಸುವಿರಿ. ಒಂದೇ ಕೆಲಸವನ್ನು ಬಹಳ ಕಾಲ ಮಾಡುವುದು ನಿಮಗೆ ಇಷ್ಟವಾಗದು. ಆಸ್ತಿ ಖರೀದಿಯ ಬಗ್ಗೆ ನಿಮಗೆ ಸರಿಯಾದ ಮಾಹಿತಿ ಲಭ್ಯವಾಗದು. ಸಾಕಾಗದು. ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ಸಿಗಲಿದೆ. ಪ್ರಯಾಣವನ್ನು ಆನಂದಿಸುವಿರಿ. .

ಕುಂಭ ರಾಶಿ:

ಕೆಲಸದಲ್ಲಿ ನಿಧಾನವಾದರೂ ಲಾಭಕರ ಮುನ್ನಡೆ. ಹಣಕಾಸಿನಲ್ಲಿ ಅನಾವಶ್ಯಕ ವೆಚ್ಚಗಳನ್ನು ನಿಯಂತ್ರಿಸಿದರೆ ಉತ್ತಮ. ಮನೆಯವರ ಸಲಹೆ ಉಪಯುಕ್ತ. ನಿಮ್ಮ ಬಯಕೆಗಳನ್ನು ಪೂರೈಸಿಕೊಳ್ಳಲು ಇಂದು ಆಗದು. ನೀವು ಇಂದು ಯಾರ ಮಾತನ್ನೂ ಕೇಳದ ಸ್ಥಿತಿಯಲ್ಲಿ ಇರುವಿರಿ. ಸುಲಭವಾದ ಕಾರ್ಯವನ್ನು ಸಂಕೀರ್ಣ ಮಾಡಿಕೊಳ್ಳುವಿರಿ. ಒಂದೇ ವಿಚಾರಕ್ಕೆ ಹತ್ತು ಬಾರಿ ಹೇಳಿಸಿಕೊಳ್ಳುವಿರಿ. ನಿಮ್ಮ ಜವಾಬ್ದಾರಿಗಳನ್ನು ನೀವು ಕಳೆದುಕೊಂಡು ನಿಶ್ಚಿಂತೆಯಿಂದ ಇರುವಿರಿ. ನಿಮ್ಮದೇ ವಸ್ತುವನ್ನು ಗುರುತಿಸಲಾರದಷ್ಟು ಮರೆವು ನಿಮ್ಮದಾಗಿದೆ. ಸಹೋದ್ಯೋಗಿಗಳಿಂದ ಸಹಕಾರ ಹೆಚ್ಚಾಗುತ್ತದೆ. ಸಂಜೆ ಸಮಯದಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಘಟನೆ ಸಂಭವಿಸುತ್ತದೆ. ನಿಮ್ಮ ವರ್ತನೆಯು ಅಹಂಕಾರದಂತೆ ಇರಲಿದೆ. ಹಣವನ್ನು ಬಹಳ ಜೋಪಾನವಾಗಿ ತೆಗೆದಿಟ್ಟುಕೊಳ್ಳಿ. ಇಷ್ಟ ಮಿತ್ರರ ಸಹವಾಸವು ಸಿಗಬಹುದು. ಭವಿಷ್ಯದ ಬಗ್ಗೆ ಚಿಂತೆ ಆರಂಭವಾಗಲಿದೆ. ಯಾವುದಾದರೂ ಸರಳ ವೃತ್ತಿಯಲ್ಲಿ ಕೆಲಸ ಮಾಡುವಿರಿ.

ಮೀನ ರಾಶಿ:

ಆರ್ಥಿಕವಾಗಿ ಸಣ್ಣ ಲಾಭ ಸಿಗುವಾಗ ಬಿಟ್ಟುಬಿಡುವುದು ಬೇಡ. ಪ್ರಯಾಣದ ಯೋಜನೆ ತಡವಾಗಬಹುದು. ಮನಸ್ಸಿಗೆ ಶಾಂತಿ ದೊರಕುವಂತಹ ಒಂದು ಅನಿರೀಕ್ಷಿತ ಸುದ್ದಿಯೂ ಬರಬಹುದು. ಇಂದು ವಿದ್ಯಾಭ್ಯಾಸದಲ್ಲಿ ಬುದ್ಧಿಪೂರ್ವಕವಾಗಿ ಪ್ರಯತ್ನವನ್ನು ಮಾಡಬೇಕು. ನೀವು ಪ್ರಮುಖ ವ್ಯಕ್ತಿಯ ಇಂದು ಸಂಬಂಧವನ್ನು ಬೆಳೆಸುವಿರಿ. ಇನ್ನೊಬ್ಬರಲ್ಲಿ ತಪ್ಪನ್ನೇ ಹುಡುಕುವ ಕೆಲಸ ಇಂದು ಬೇಡ. ಇಂದು ನೀವು ಮಾತನಾಡುವ ಸಂದರ್ಭವು ಕಡಿಮೆ‌ ಇರುವುದು. ಧೈರ್ಯವಿಲ್ಲದೇ ಸಾಹಸ ಮಾಡುವುದು ಬೇಡ. ಕೃಷಿಯ ಬಗ್ಗೆ ಒಲವು ಬರಬಹುದು. ನಿಮ್ಮ ವಿಚಾರವನ್ನು ಇತರರ ಜೊತೆ ಹಂಚಿಕೊಳ್ಳುವಿರಿ. ಸಂತೋಷದ ದಿನಗಳ ನಿರೀಕ್ಷೆಯು ಹೆಚ್ಚಿರುವುದು.‌ ಕೆಲಸಗಳಲ್ಲಿ ಹೊಸದೊಂದು ದಿಕ್ಕು ಕಾಣುತ್ತದೆ. ಕುಟುಂಬದಲ್ಲಿ ಮಾತಿನ ಜಗಳ ತಪ್ಪಿಸಲು ಮೃದುಸ್ವಭಾವ ಅವಶ್ಯ. ವ್ಯಕ್ತಿತ್ವವನ್ನು ನೀವು ಸರಿಯಾಗಿ ಮಾಡಿಕೊಳ್ಳಲು ಗಮನವಿರುವುದು. ಓಡಾಟವು ಅಧಿಕ ಆಯಾಸವನ್ನು ತರಿಸಬಹುದು. ನಿಮ್ಮನ್ನು ನೀವು ಸಮರ್ಥಿಸಿಕೊಳ್ಳುವಿರಿ. ಸ್ನೇಹಿತರ ಜೊತೆ ಮನಸ್ತಾಪವು ಬರಬಹುದು.

Views: 31

Leave a Reply

Your email address will not be published. Required fields are marked *