Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ .
General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ.
1 . ಸಕ್ಕರೆಯನ್ನು ಆಲ್ಕೋಹಾಲಾಗಿ ಪರಿವರ್ತಿಸುವ ಪ್ರಕ್ರಿಯೆ
ಫರ್ಮೆಂಟೇಶನ್
2 . ವಿಕ್ರಮಾಂಕದೇವ ಚರಿತಂ ಕೃತಿಯ ಲೇಖಕರು
ಬಿಲ್ಹಣ
3 . ಬಿಟ್ ಕಾಯಿನ್ ಎಂದರೆ
ಡಿಜಿಟಲ್ ಕ್ರಿಪ್ಟೋ ಕರೆನ್ಸಿ
4 . ಭೂಮಿ ಮತ್ತು ಚಂದ್ರನ ನಡುವೆ ಇರುವ ಅಂತರವನ್ನು ನಿಖರವಾಗಿ ಅಳೆಯುವ ಸಾಧನ
ರಿಟ್ರೋ ರಿಫ್ಲೆಕ್ಟರ್
5 . ಅಂತರಾಷ್ಟ್ರೀಯ ಜೀವ ವೈವಿಧ್ಯತೆಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ
ಮೇ 22
6 . ಉತ್ತರ ಭಾರತದ ಮ್ಯಾಂಚೆಸ್ಟರ್ ಯಾವುದು
ಕಾನ್ಪುರ್
7 . ಕಬ್ಬಿಣದ ತಗಡುಗಳು ತುಕ್ಕು ಹಿಡಿಯದಂತೆ ಅದಕ್ಕೆ ಲೇಪಿಸುವ ಲೋಹ
ಸತು
8 . ಬಿಳಿ ರಕ್ತ ಕಣಗಳು ಹೆಚ್ಚಾಗುವುದರಿಂದ ಬರುವ ರೋಗ
ಲುಕೇಮಿಯಾ
9 . ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಬಗ್ಗೆ ತಿಳಿಸುವ ವಿಧಿ
352ನೇ ವಿಧಿ
10 . ಭಾರತದಲ್ಲಿ ಜಹಾಂಗೀರ್ ಆರ್ಟ್ ಗ್ಯಾಲರಿ ಇರುವ ಸ್ಥಳ
ಮುಂಬೈ