Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ .

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ.
1 . ಏಷ್ಯಾದಲ್ಲಿಯೇ ಮೊದಲ ಜಲವಿದ್ಯುತ್ ಯೋಜನೆ ಪ್ರಾರಂಭವಾದ ವರ್ಷ
1902
2 . ಉತ್ತರ ಪ್ರದೇಶ ರಾಜ್ಯವು ಎಷ್ಟು ರಾಜ್ಯಗಳೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ
ಎಂಟು ರಾಜ್ಯಗಳು
3 . ಕನ್ನಡದ ಸೇನಾನಿ ಎಂಬ ಬಿರುದಾಂಕಿತರು
ಎ ಆರ್ ಕೃಷ್ಣ ಶಾಸ್ತ್ರಿ
4 . “ಆಡು ಮುಟ್ಟದ ಸೊಪ್ಪಿಲ್ಲ” ಈ ಗಾದೆ ಮಾತಿನ ತಾತ್ಪರ್ಯ
ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ
5 . ಭಾರತದ ನೆಪೋಲಿಯನ್ ಎಂದು ಯಾರನ್ನು ಕರೆಯುತ್ತಿದ್ದರು
ಸಮುದ್ರಗುಪ್ತ
6 . ರೇಡಿಯೋ ತರಂಗಗಳನ್ನು ಪತ್ತೆ ಹಚ್ಚಿದ ಮೊದಲಿಗರು
ಹೆನ್ರಿಕ್ ಹರ್ಟ್ಸ್
7 . ಪಂಚ ದ್ರಾವಿಡ ಭಾಷೆಗಳು ಯಾವುವು
ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ತುಳು
8 . ವಿಶ್ವ ಸುನಾಮಿ ಜಾಗೃತಿ ದಿನ
ನವೆಂಬರ್ 5
9 . “ಗೋಲ್ಡನ್ ಗರ್ಲ್” ಇದು ಯಾರ ಆತ್ಮಕಥನ
ಪಿ ಟಿ ಉಷಾ
೧೦ . ಮಾಸ್ಟರ್ ಆಫ್ ಮಾಸ್ಟರ್ ಗ್ರಂಥಿ ಎಂದು ಯಾವುದನ್ನು ಕರೆಯುತ್ತಾರೆ.
ಹೈಪೋ ಥಲಾಮಸ್ ಗ್ರಂಥಿ
Views: 0