Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ .

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ.
1 . ಭಾರತವು ಇತ್ತೀಚೆಗೆ ರೂಪಾಯಿಗಳಲ್ಲಿ ವ್ಯಾಪಾರ ವಹಿವಾಟನ್ನು ಪ್ರಾರಂಭಿಸಿದ ದೇಶ
ಬಾಂಗ್ಲಾದೇಶ
2 . ಗಾಂಧಿ ಸಾಗರ್ ಅಭಯಾರಣ್ಯ ಕಂಡುಬರುವ ರಾಜ್ಯ
ಗುಜರಾತ್
3 . ವಿಶ್ವ ಕ್ಷುದ್ರಗ್ರಹ ದಿನ
ಜೂನ್ 30
4 . ಸಂಸ್ಕೃತಕ್ಕೆ ಎರಡನೇ ಅಧಿಕೃತ ಭಾಷಾ ಸ್ಥಾನಮಾನವನ್ನು ನೀಡಿರುವ ರಾಜ್ಯ
ಉತ್ತರಖಂಡ
5 . ಚಂದ್ರವಳ್ಳಿ ಶಾಸನದ ಕರ್ತೃ
ಮಯೂರವರ್ಮ
6 . ಲೋಕ ಅದಾಲತ್ ಇದರ ಮತ್ತೊಂದು ಹೆಸರು
ಜನತಾ ನ್ಯಾಯಾಲಯ
7 . ಒತ್ತಡವನ್ನು ಎದುರಿಸಲು ಯಾವ ಹಾರ್ಮೋನ್ ಗಳು ಸಹಾಯಕವಾಗಿವೆ
ಸಿರೋಟನಿನ್
8 . ಪ್ರಪಂಚದ ಪ್ರಾಕೃತಿಕ ಅದ್ಭುತ ಎಂದು ಕರೆಯಲ್ಪಡುವ ಮಹಾ ಕಂದರ
ಕೊಲೆರಾಡೊ ಕಂದರ
9 . ವಿಶ್ವ ಪ್ರವಾಸೋದ್ಯಮ ಸಂಸ್ಥೆಯ ಪ್ರಧಾನ ಕಛೇರಿ ಇರುವ ಸ್ಥಳ
ಮ್ಯಾಡ್ರಿಡ್ , ಸ್ಪೇನ್
10 . ಭಾರತದ ವಾಯು ಸಾರಿಗೆ ಆರಂಭಗೊಂಡ ವರ್ಷ
1911