Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ .
General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ.
1 . ಭಾರತದಲ್ಲಿಯೇ ಅತಿ ಕಡಿಮೆ ವಿಧಾನಸಭಾ ಸದಸ್ಯರನ್ನು ಒಳಗೊಂಡಿರುವ ರಾಜ್ಯ / ಕೇಂದ್ರಾಡಳಿತ ಪ್ರದೇಶ
ಸಿಕ್ಕಿಂ
2 . ದೇಹದ ಯಾವ ಅಂಗವೂ ಡೆಂಗ್ಯೂನಿಂದ ಹೆಚ್ಚು ಪೀಡಿತವಾಗುತ್ತದೆ
ಯಕೃತ್
3 . ಅಂತರಾಷ್ಟ್ರೀಯ ದಿನ ರೇಖೆಗೆ ಅತ್ಯಂತ ಸಮೀಪದಲ್ಲಿರುವ ಜಲಸಂಧಿ
ಬೇರಿಂಗ್ ಜಲಸಂಧಿ
4 . ಶಾಂಪೇನ್ ಬುಡಕಟ್ಟು ಜನಾಂಗ ಕಂಡುಬರುವ ಪ್ರದೇಶ
ನಿಕೋಬಾರ್ ದ್ವೀಪ ಪ್ರದೇಶ
5 . ಭಾರತದ ರಾಷ್ಟ್ರೀಯ ಜಲಚರ ಪ್ರಾಣಿ
ಗಂಗಾ ಡಾಲ್ಫಿನ್
6 . ಭಾರತೀಯ ಸಂವಿಧಾನದ ಪೀಠಿಕೆಯನ್ನು ತಿದ್ದುಪಡಿ ಮಾಡಿದ ಕಾಯ್ದೆ
42 ನೇ ತಿದ್ದುಪಡಿ ಕಾಯ್ದೆ
7 . ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮಂಡಳಿಯ ಪ್ರಧಾನ ಕಚೇರಿ ಎಲ್ಲಿದೆ
ಕಲಬುರ್ಗಿ
8 . ಅತಿ ಹೆಚ್ಚು ಮೆಕ್ಕಲು ಮಣ್ಣು ಹೊಂದಿರುವ ರಾಜ್ಯ
ಉತ್ತರ ಪ್ರದೇಶ
9 . ಪನ್ನಾ ಟೈಗರ್ ರಿಸರ್ವ್ ಏರಿಯಾ ಎಲ್ಲಿ ಕಂಡು ಬರುತ್ತದೆ
ಮಧ್ಯ ಪ್ರದೇಶ
10 . 2022ರ ಅತ್ಯಂತ ಶ್ರೇಷ್ಠ ವಿಜ್ಞಾನಿ ಪ್ರಶಸ್ತಿ ಪಡೆದವರು
ಆರ್ . ಕೆ. ವಿಷ್ಣು ಪ್ರಸಾದ್