Daily GK quiz : Green Hydrogen ಉತ್ಪಾದನೆಯಲ್ಲಿ ಪ್ರಮುಖ ಕಚ್ಚಾ ವಸ್ತು ಯಾವುದು?

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ಉತ್ತರ ಸಹಿತ ನೀಡಿದ್ದೇವೆ.

  1. Green Hydrogen ಉತ್ಪಾದನೆಯಲ್ಲಿ ಪ್ರಮುಖ ಕಚ್ಚಾ ವಸ್ತು ಯಾವುದು?
    ಉತ್ತರ: ನೀರು (Water)

2. Semiconductor ಉದ್ಯಮದಲ್ಲಿ “Fab” ಎಂದರೆ ಏನು?
ಉತ್ತರ: ಚಿಪ್ ಉತ್ಪಾದನಾ ಘಟಕ

3. EV ಬ್ಯಾಟರಿಗಳ ಮರುಬಳಕೆ (Recycling) ಏಕೆ ಅಗತ್ಯವಾಗಿದೆ?
ಉತ್ತರ: ಅಪರೂಪದ ಲೋಹಗಳ ಸಂರಕ್ಷಣೆಗಾಗಿ

4. ಭಾರತದ National Supercomputing Mission ಯ ಗುರಿ ಏನು?
ಉತ್ತರ: ದೇಶೀಯ ಗಣನ ಸಾಮರ್ಥ್ಯ ಹೆಚ್ಚಿಸುವುದು.

5. ಭಾರತದಲ್ಲಿ GST ಕೌನ್ಸಿಲ್‌ಗೆ ಅಧ್ಯಕ್ಷರು ಯಾರು?
ಉತ್ತರ: ಕೇಂದ್ರ ಹಣಕಾಸು ಸಚಿವರು

6. “Ease of Doing Business” ಸೂಚ್ಯಂಕವನ್ನು ಪ್ರಕಟಿಸುವ ಸಂಸ್ಥೆ ಯಾವುದು?
ಉತ್ತರ: ವಿಶ್ವ ಬ್ಯಾಂಕ್

7. RBI ಬಿಡುಗಡೆ ಮಾಡಿದ “Digital Rupee” ಯಾವ ರೂಪದಲ್ಲಿದೆ?
ಉತ್ತರ: CBDC (Central Bank Digital Currency)

8. “Consolidated Fund of India” ಯಿಂದ ಹಣ ತೆಗೆದುಕೊಳ್ಳಲು ಏನು ಅಗತ್ಯ?
ಉತ್ತರ: ಸಂಸತ್ತಿನ ಅನುಮೋದನೆ

9. ಕೇಂದ್ರ ಮತ್ತು ರಾಜ್ಯಗಳ ನಡುವೆ ತೆರಿಗೆ ವಿವಾದ ಬಗೆಹರಿಸುವ ಸಂಸ್ಥೆ ಯಾವುದು?
ಉತ್ತರ: ಹಣಕಾಸು ಆಯೋಗ

10. ರಾಜ್ಯದ ಅತಿ ಉದ್ದದ ರಾಷ್ಟ್ರೀಯ ಹೆದ್ದಾರಿ ಯಾವುದು?
ಉತ್ತರ: NH–48

Views: 18

Leave a Reply

Your email address will not be published. Required fields are marked *