Daily GK Quiz: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ.

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ.
ಪ್ರಶ್ನೆ 1: ಬಾಂಗ್ಲಾದೇಶದ ರಾಷ್ಟ್ರೀಯ ಕ್ರೀಡೆ ಯಾವುದು..?
ಉತ್ತರ: ಕಬ್ಬಡಿ
ಪ್ರಶ್ನೆ 2: ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಕುರಿತು ಅಧ್ಯಯನ ಮಾಡಲು ನೇಮಕವಾಗಿದ್ದ ಆಯೋಗ ಯಾವುದು..?
ಉತ್ತರ: ಹಂಟರ್ ಆಯೋಗ
ಪ್ರಶ್ನೆ 3: ಚಿತ್ರದುರ್ಗದಲ್ಲಿನ “ಬ್ರಹ್ಮಗಿರಿ” ಶಾಸನವು ಯಾವ ಚಕ್ರವರ್ತಿಗೆ ಸೇರಿದೆ?
ಉತ್ತರ: ಅಶೋಕ
ಪ್ರಶ್ನೆ 4: ‘ಥಾಲಿ’ ಎಂಬುದು ಯಾವ ರಾಜ್ಯದ ಜಾನಪದ ನೃತ್ಯವಾಗಿದೆ?
ಉತ್ತರ: ಹಿಮಾಚಲ ಪ್ರದೇಶ
ಪ್ರಶ್ನೆ 5: ಭಾರತೀಯ ಧ್ವಜವನ್ನು ತಯಾರಿಸುವ ಏಕೈಕ ಅಧಿಕೃತ ಘಟಕ ಯಾವುದು?
ಉತ್ತರ: ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗ ಸಂಯುಕ್ತ ಸಂಘ (KKGSS)
ಪ್ರಶ್ನೆ 6: ನಿಮ್ಹಾನ್ಸ್‌ನ ಪೂರ್ಣ ರೂಪ ಯಾವುದು?
ಉತ್ತರ: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್
ಪ್ರಶ್ನೆ 7: BMCRIಯ ಪೂರ್ಣ ರೂಪ ಯಾವುದು?
ಉತ್ತರ: ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ
ಪ್ರಶ್ನೆ 8: ಪ್ರಸಿದ್ಧ ಶ್ರೀ ರಾಮಾಯಣ ದರ್ಶನಂ ಪುಸ್ತಕವನ್ನು ಬರೆದವರು ಯಾರು?
ಉತ್ತರ: ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ(ಕುವೆಂಪು)
ಪ್ರಶ್ನೆ 9: ಯಾವ ಸ್ಥಳವನ್ನು ಭಾರತದ ಸ್ಕಾಟ್ಲೆಂಡ್ ಎಂದು ಕರೆಯಲಾಗುತ್ತದೆ?
ಉತ್ತರ: ಕೊಡಗು
ಪ್ರಶ್ನೆ 10: ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧ ಯಾವಾಗ ನಡೆಯಿತು?
ಉತ್ತರ: 1798
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1