ಜ್ಯೋತಿಷ್ಯದಿಂದ ಮಾನವ ವ್ಯವಹಾರಗಳು ಮತ್ತು ಭೂಮಂಡಲದ ಸಂಗತಿಗಳನ್ನು ತಿಳಿಯಬಹುದಾಗಿದೆ. ಜಾತಕವನ್ನು ಸಾಮಾನ್ಯವಾಗಿ ಹನ್ನೆರಡು ಜ್ಯೋತಿಷ್ಯ ರಾಶಿಗಳನ್ನು ಹೊಂದಿದೆ. ಪ್ರತಿಯೊಂದೂ ವ್ಯಕ್ತಿಯ ಜೀವನ ಮತ್ತು ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ಶ್ರಾವಣ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ತೃತೀಯಾ, ನಿತ್ಯನಕ್ಷತ್ರ: ಪೂರ್ವಾಭಾದ್ರ, ಯೋಗ: ಸುಕರ್ಮ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 20 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:49 ಗಂಟೆ, ರಾಹು ಕಾಲ ಮಧ್ಯಾಹ್ನ 02:09 ರಿಂದ 03:43, ಯಮಘಂಡ ಕಾಲ ಬೆಳಿಗ್ಗೆ 06:21 ರಿಂದ 07:54ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 09:28 ರಿಂದ 11:02ರ ವರೆಗೆ.
ಮೇಷ ರಾಶಿ: ನಿಮ್ಮ ನಡವಳಿಕೆಯೇ ಸಮೀಪಕ್ಕೆ ಜನರು ಬರುವಂತೆ ಮಾಡಿದೆ. ಇಂದು ನೀವು ಅತಿಥಿಗಳ ಕಡೆ ಗಮನ ಕೊಡದೆ ಅವರಿಗೆ ಬೇಸರ ಮಾಡುವಿರಿ. ಅತಿಯಾದ ಬಳಕೆಯಿಂದ ಸಂಬಂಧಗಳು ಹಳಸಬಹುದು. ಸಂಗಾತಿಯ ಮಾತನ್ನು ನೆರವೇರಿಸುವುದು ಕಷ್ಟವಾಗಬಹುದು. ನೀವು ಇಂದು ಅಧ್ಯಾತ್ಮದ ವಿಚಾರದಿಂದ ಪ್ರಭಾವಿತರಾಗಿರುವಿರಿ. ನಿಮ್ಮ ಆತುರದ ನಿರ್ಧಾರದಿಂದ ಕುಟುಂಬಕ್ಕೆ ಸಮಸ್ಯೆಯಾಗಬಹುದು. ಅತಿಯಾದ ಭೋಜನವು ನಿಮಗೆ ಸಂಕಷ್ಟವನ್ನು ಉಂಟುಮಾಡಬಹುದು. ಗಂಭೀರವಾದ ವಿಷಯವನ್ನು ಬಹಳ ಲಘುವಾಗಿ ತೆಗೆದುಕೊಳ್ಳುವಿರಿ. ನಿಮ್ಮ ಯೋಜನೆಯ ಸಂಪೂರ್ಣ ಚಿತ್ರಣ ದೊರೆತಮೇಲೆ ಕಾರ್ಯವನ್ನು ಆರಂಭಿಸಿ. ಅವಸರವಾಗಿ ಬೇಡ. ಸಂತಾನ ವಾರ್ತೆಯಿಂದ ಶುಭವಿದೆ. ಕಛೇರಿಯಲ್ಲಿ ಇಂದು ವಾದಗಳು ನಡೆಯಬಹುದು. ವಿದ್ಯಾರ್ಥಿಗಳಿಗೆ ಸಾಲಬಾಧೆ ತಟ್ಟುವ ಸಾಧ್ಯತೆ ಇದೆ. ಅದನ್ನು ಸರಿ ಮಾಡಿಕೊಳ್ಳುವ ಮಾರ್ಗವೂ ಇದೆ. ಎಲ್ಲದಕ್ಕೂ ಪಲಾಯನ ಮಾಡದೇ ಎದುರಿಸುವ ಧೈರ್ಯ ಮಾಡಿ.
ವೃಷಭ ರಾಶಿ : ಇಂದು ನಿಮಗೆ ಕೆಲವು ಕಾರ್ಯಗಳು ವ್ಯರ್ಥವೆನಿಸಬಹುದು. ಯಾರನ್ನೋ ಪ್ರಶಂಸಿಸಿದ ಮಾತ್ರ ನೀವು ಚಿಕ್ಕ ವರ್ಗದವರಾಗಲಾರಿರಿ ಒಂದಾದಮೇಲೊಂದರoತೆ ಬರುವ ಕೆಲಸಗಳು ನಿಮಗೆ ಒತ್ತಡವಾಗಲಿದೆ. ಅನಗತ್ಯ ಓಡಾಟವನ್ನು ನಿಲ್ಲಿಸಿ. ಇದು ನಷ್ಟದ ಓಡಾಟವೇ ಆಗಲಿದೆ. ದೇಹವನ್ನು ನೀವು ದಂಡಿಸುವಿರಿ. ಅತಿಯಾದ ದಾಹದಿಂದ ನೀವು ಕಂಗೆಡುವಿರಿ. ಕಛೇರಿಯ ಘಟನೆಯನ್ನು ಮನೆಯಲ್ಲಿ ಹೇಳಿ ಅವರನ್ನು ಆತಂಕಕ್ಕೆ ತಳ್ಳುವವರಿದ್ದೀರಿ. ಸ್ನೇಹಿತರ ಸಹವಾಸದಿಂದ ಧನನಷ್ಟವು ಆಗಲಿದೆ. ಕುಚೋದ್ಯದ ಮನಃಸ್ಥಿತಿ ನಿಮಗೆ ಇಷ್ಡವಾಗದು. ಇದಕ್ಕೆ ಜಗಳವೂ ಆಗಬಹುದು. ಆದಷ್ಟು ತಾಳ್ಮೆಯಿಂದ ಇರುವುದು ಮುಖ್ಯ. ಕೆಲವು ವಿರೋಧವನ್ನು ನೀವು ಸಹಿಸಿಕೊಳ್ಳಲು ತಯಾರಿರಬೇಕು. ಅದರೂ ಅನಿವಾರ್ಯ ಎನಿಸೀತು. ಸನ್ನಿವೇಶವನ್ನು ಎದುರಿಸುವುದು ಕಷ್ಟವಾಗಲಾರದು. ನಕಾರಾತ್ಮಕ ಸೂಚನೆ ನಿಮಗೆ ಸಿಗಲಿದ್ದು, ಅದನ್ನು ನಿರ್ಲಕ್ಷ್ಯ ಮಾಡುವಿರಿ. ಸಮಾಧಾನದ ಚಿತ್ತವು ಅನೇಕ ವಿಚಾರಕ್ಕೆ ಪೂರಕ.
ಮಿಥುನ ರಾಶಿ : ನಿಮ್ಮ ಆಲೋಚನೆಗಳಿಂದ ನಿಮಗೆ ಯೋಗ್ಯ ಸ್ಥಾನವು ಲಭಿಸುವುದು. ನಿರ್ಲಕ್ಷ್ಯವನ್ನು ಮಾಡದೇ ಕೆಲಸಗಳನ್ನು ಮಾಡಿ ಮುಗಿಸಿ. ಉತ್ಸಾಹಕ್ಕೆ ಭಂಗ ಬರುವ ಸನ್ನಿವೇಶವನ್ನು ನೀವು ಎದುರಿಸುವಿರಿ. ನೀವು ಇನ್ನೊಬ್ಬರ ಜೊತೆ ಮಾತನಾಡುವುದು ಇಷ್ಟವಾಗದು. ತುರ್ತು ಕಾರ್ಯದ ಕಾರಣ ಪ್ರಯಾಣ ಮಾಡಬೇಕಿದ್ದು ಅದರ ಬದಲಿ ವ್ಯವಸ್ಥೆಯನ್ನು ಮಾಡಿಕೊಳ್ಳಲು ಪ್ರಯತ್ನಿಸಿ. ನಿಮ್ಮ ಮುಂದಾಲೋಚನೆಯು ಹೆಚ್ಚಿನ ಅನುಕೂಲವನ್ನು ಮಾಡಲಿದೆ. ಬೆಳಗಿನ ಜಾವ ಏಳುವುದನ್ನು ಅಭ್ಯಾಸ ಮಾಡಿಕೊಳ್ಳಿ, ನಿಮ್ಮ ಅನೇಕ ಆರೋಗ್ಯದ ಸಮಸ್ಯೆಗಳು ದೂರಾಗಲಿದೆ. ಮೂಲಧನವನ್ನು ಸುರಕ್ಷಿತವಾಗಿ ಇರಿಸಿಕೊಳ್ಳಿ. ಸೂಕ್ಷ್ಮ ವಿಚಾರಗಳನ್ನು ಪಕ್ಷಪಾತವಿಲ್ಲದೇ ನಿರ್ಣಯಿಸಬೇಕಾಗುವುದು. ಮನೆಯಲ್ಲಿ ಹರ್ಷದ ವಾತಾವರಣ ಇದ್ದು ಬಂಧುಗಳು ನಿಮ್ಮ ಜೊತೆಗಿರುವರು. ಸ್ನೇಹಿತರ ಮಾತಿನಿಂದ ಹಣಕಾಸಿನ ವಿಚಾರ
ಕರ್ಕಾಟಕ ರಾಶಿ : ಎಲ್ಲದಕ್ಕೂ ಒಂದೇ ರೀತಿಯ ಪರಿಹಾರವಿಲ್ಲ. ಸಂದರ್ಭಕ್ಕೆ ತಕ್ಕಂತೆ ಬದಲಾಗಬಹುದು. ನಿಮ್ಮ ಅಗತ್ಯದ ಹಣವನ್ನು ಪೂರೈಸಲು ಶ್ರಮಪಡುವಿರಿ. ನೂತನ ಉದ್ಯೋಗವನ್ನು ಅರಸುತ್ತಿರುವಿರಿ. ಈಗಾಗಲೇ ಉದ್ಯೋಗದಲ್ಲಿ ಇರುವವರು ವೇತನವನ್ನು ಹೆಚ್ಚಿಸಲು ವಿನಂತಿಸಲಿದ್ದೀರಿ. ನಿಮ್ಮದೇ ಆದ ವ್ಯಕ್ತಿತ್ವವು ನಿಮಗೆ ಗೌರವವನ್ನು ತರಿಸಬಹುದು. ದುರ್ಘಟನೆಯನ್ನು ಮನಸ್ಸಿನಿಂದ ಹೊರಹಾಕಲು ಕಷ್ಟವಾದೀತು. ಸಾಲವನ್ನು ಹಿಂಪಡೆಯುವ ಬಗ್ಗೆ ಗಂಭೀರವಾಗಿ ಆಲೋಚಿಸಿ. ಸಂತೋಷವನ್ನು ನೀವು ಯಾರ ಜೊತೆ ಹಂಚಿಕೊಳ್ಳುತ್ತೀರಿ ಎಂಬುದರ ಆಧಾರದ ಮೇಲೆ ನಿಮ್ಮ ಸಂತೋಷ ನಿಂತಿದೆ. ವಿದ್ಯಾಭ್ಯಾಸದ ಬಗ್ಗೆ ನಿಮಗೆ ಬಹಳ ತುಡಿತವಿದ್ದು ಮಾರ್ಗದರ್ಶನ ಹಾಗೂ ಸಹಾಯದ ಕೊರತೆ ಇರಲಿದೆ. ಯಾವುದನ್ನೂ ಅತಿಯಾಗಿ ಮಾಡಿಕೊಳ್ಳುವುದು ಬೇಡ. ವಾಹನ ಮುಂತಾದ ಉದ್ಯಮವನ್ನು ನಡೆಸುತ್ತಿದ್ದರೆ ಲಾಭವು ಇರುವುದು. ಉದ್ವೇಗಕ್ಕೆ ಒಳಗಾಗಿ ಏನನ್ನಾದರೂ ಎಡವಟ್ಟು ಮಾಡಿಕೊಳ್ಳುವಿರಿ.
ಸಿಂಹ ರಾಶಿ : ಜಟಿಲ ಸಮಸ್ಯೆಗಳನ್ನು ನಿಮ್ಮ ಬಳಿ ಹೇಳಿಕೊಳ್ಳುವರು. ಯಾರನ್ನೋ ಮೆಚ್ಚಿಸಲು ನಿಮ್ಮ ಸಮಯವನ್ನು ವ್ಯಯಿಸಬೇಕಾಗುವುದು. ದುರಾಸೆಯಿಂದ ಸಂಕಷ್ಟವನ್ನು ಹೆಚ್ಚು ಮಾಡಿಕೊಳ್ಳುವಿರಿ. ಯಾರಿಗಾದರೂ ಯೋಗ್ಯರಿಗೆ ದಾನವನ್ನು ಮಾಡಿ. ನಿಮ್ಮವರಿಗೆ ನೀಡಿದ ಹಣವನ್ನು ಪಡೆಯಲು ಬಹಳ ಸಾಹಸ ಪಡುವಿರಿ. ಸಂಗಾತಿಯನ್ನು ನೀವು ಅಲಕ್ಷಿಸುವ ಸಾಧ್ಯತೆ ಇದೆ. ಮಂದಗತಿಯಲ್ಲಿ ಸಾಗುವ ಕೆಲಸಕ್ಕೆ ವೇಗವನ್ನು ಕೊಡಬೇಕಾದೀತು. ಬಲವಂತವಾಗಿ ಸಂಗಾತಿಯಿಂದ ಸಹಾಯವನ್ನು ಪಡೆದುಕೊಳ್ಳಬೇಕಾಗಬಹುದು. ಶ್ರೀಮಂತಿಕೆಯ ಅಮಲು ನಿಮ್ಮನ್ನು ನೆಮ್ಮದಿಯಿಂದ ಇರಲು ಬಿಡದು. ಸಂಗಾತಿಯ ನಡುವೆ ಹಳೆಯ ವಿಚಾರಕ್ಕೆ ಹೆಚ್ಚು ಮತ್ತೆ ಜಗಳವಾಗಬಹುದು. ಮೌನದಿಂದ ಇರುವುದು ಒಳ್ಳೆಯದು. ಅನವಶ್ಯಕವಾಗಿ ಹಣವನ್ನು ವ್ಯರ್ಥ ಮಾಡಿಕೊಳ್ಳುವಿರಿ. ಎಲ್ಲವನ್ನೂ ಪ್ರಾರಬ್ಧ ಎಂದು ಸುಮ್ಮನಾಗುವುದಕ್ಕಿಂತ ಭಿನ್ನವಾಗಿ ಯೋಚಿಸುವಿರಿ. ಸಂಗಾತಿಯ ಬೆಂಬಲ ಸಿಗಲಿದೆ. ಜೀವನಕ್ಕೆ ಕೆಲವು ಮಾರ್ಪಾಡುಗಳು ಅನಿವಾರ್ಯವಾದೀತು.
ಕನ್ಯಾ ರಾಶಿ : ಇಂದು ಬಿಡಲಾಗದ ದುಶ್ಚಟಗಳು ನಿಮ್ಮ ವ್ಯಕ್ತಿತ್ವವನ್ನು ಘಾಸಿಗೊಳಿಸಬಹುದು. ಹಣದ ಆಮಿಷವನ್ನು ತೋರಿಸಿ ನಿಮ್ಮನ್ನು ವಂಚಿಸುವ ಸರಳ ಉಪಾಯವಾಗಿದೆ. ನಿಮಗೆ ಪರಿಹರಿಸಿಕೊಳ್ಳಲು ಕಷ್ಟವಾದ ಸಮಸ್ಯೆಯನ್ನು ನೀವು ಅನುಭವಿಗಳ ಅಥವಾ ಆಪ್ತರ ಜೊತೆ ಹಂಚಿಕೊಳ್ಳಿ. ಸಜ್ಜನಿಕೆಯನ್ನು ತೋರಿಸಲು ಹೋಗಿ ಕಷ್ಟಕ್ಕೆ ಸಿಕ್ಕಿಕೊಳ್ಳಬಹುದು. ಬಂಧುಗಳ ಸಲಹೆಯನ್ನು ಸ್ವೀಕರಿಸದೇ ಇದ್ದುದಕ್ಕೆ ನಿಮಗೆ ಬೇಸರವಾಗಬಹುದು. ನೀವು ಆರಂಭಿಸಿದ ಹೊಸ ಉದ್ಯೋಗದಲ್ಲಿ ಬರಬಹುದಾದ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಳ್ಳುವುದು ಒಳ್ಳೆಯದು. ನಿಮ್ಮ ಮಿತಿಯಲ್ಲಿ ಅವುಗಳನ್ನು ಸರಿಮಾಡಿಕೊಳ್ಳಿ. ಸಮಯಕ್ಕೆ ಬಂದುದನ್ನು ನೀವು ಸ್ವೀಕರಿಸಬೇಕಾದೀತು. ವ್ಯವಸ್ಥೆ ಇರುವುದೇ ಹೀಗೆ ಎಂಬ ನಿರ್ಧಾರದಿಂದ ಸಮಾಧಾನ ಸಿಗಲಿದೆ. ಸುಮ್ಮನೇ ಖರ್ಚಿಗೊಂದು ದಾರಿಯಾಗುದು. ಸಾಮರ್ಥ್ಯವನ್ನು ಬಳಕೆಯಾಗುವಲ್ಲಿ ಉಪಯೋಗಿಸಿ. ಮಕ್ಕಳನ್ನು ದೂರ ಮಾಡಿಕೊಂಡು ಬೇಸರಗೊಳ್ಳುವಿರಿ.
ತುಲಾ ರಾಶಿ : ದಾನವನ್ನು ಪಡೆಯಲಿಕ್ಕಾಗಿ ಇಂದು ನಿಮ್ಮ ಬಳಿ ಯಾರಾದರೂ ಬರಬಹುದು. ಬುದ್ಧಿವಂತರಾದರೆ ಸಾಲದು. ಅದನ್ನು ಪ್ರಯೋಗಿಸುವ ಚಾಣಾಕ್ಷತೆಯೂ ಬೇಕು. ಯಾವುದನ್ನೂ ಕೊಂಡುಕೊಳ್ಳಬಹುದು. ಆದರೆ ನೆಮ್ಮದಿ ಸುಖವನ್ನು ಖರೀದಿಸಲಾಗದು. ಇರುವುದರಲ್ಲಿ ನೆಮ್ಮದಿಯಿದೆ. ಕೆಲಸದಲ್ಲಿ ಉತ್ಸಾಹ ಕಡಿಮೆ ಎನಿಸಿದಾಗ ಸ್ವಲ್ಪ ಸಮಯ ಬೇರೆ ಕಾರ್ಯದಲ್ಲಿ ಮಗ್ನರಾಗಿ. ಹೊಂದಾಣಿಕೆಯ ಕೊರತೆಯಿಂದ ಸಹೋದರರಲ್ಲಿ ಭೂಮಿಗೆ ಸಂಬಂಧಿಸಿದಂತೆ ವಾಗ್ವಾದ ನಡೆಯುವುದು. ಆಕಸ್ಮಿಕವಾಗಿ ನಿಮ್ಮ ಆರೋಗ್ಯದಲ್ಲಿ ಬದಲಾವಣೆ ಉಂಟಾಗಬಹುದು. ಆಹಾರ ಉದ್ಯಮದಿಂದ ಹಣಕಾಸಿನ ವಿಚಾರ ಸುಧಾರಿಸುವುದು. ಕಛೇರಿಯ ಒತ್ತಡವನ್ನು ನೀವು ಕಳೆದುಕೊಳ್ಳಲು ಇಚ್ಛಿಸುವಿರಿ. ತಾನು ಮಾಡಿದ್ದನ್ನು ತಾನೇ ಉಣ್ಣಬೇಕು ಎಂಬ ಸತ್ಯ ಅರಿವಿಗೆ ಬರುವುದು. ಹಿರಿಯರ ಮಾತನ್ನು ನಿರ್ಲಕ್ಷಿಸದೇ ಪಾಲಿಸಿ. ಹಳೆಯ ಘಟನೆಯನ್ನು ನೆನಪಿಸಿಕೊಂಡು ಸಂಕಟಪಡುವುದು ಬೇಡ. ಕಳ್ಳರಿಂದ ಭೀತಿಯು ನಿಮಗೆ ಆಗುವುದು.
ವೃಶ್ಚಿಕ ರಾಶಿ : ನೀವು ನೋಡಲಷ್ಟೇ ಸುಂದರವಗಿದ್ದರೆ ಸಾಲದು. ಮನಸ್ಸೂ ಸುಂದರವಾಗಿರಬೇಕು ಕೊಳಕುಗಳು ಇಲ್ಲದಂತೆ. ಹೊಸ ಆಲೋಚನೆಯನ್ನು ಮಾಡುವ ಮಾನಸಿಕತೆ ಇದ್ದರೆ ಇಂದು ವ್ಯಾಪಾರದಲ್ಲಿ ಹೆಚ್ಚಿನ ಲಾಭವನ್ನು ಪಡೆಯುವಿರಿ. ಅನಧಿಕೃತ ವಿಚಾರಕ್ಕೆ ನೀವು ಮನಸ್ಸು ಮಾಡುವುದು ಬೇಡ. ಒಮ್ಮೆಲೇ ದೊಡ್ಡ ಯೋಚನೆಯನ್ನು ಕಾರ್ಯಗತಗೊಳಿಸುವುದು ಬೇಡ. ನೀವು ಮೊದಲು ವಿಶ್ವಾಸಾರ್ಹತೆಯನ್ನು ಪಡೆದುಕೊಳ್ಳಲು ಪ್ರಯತ್ನಿಸಿ. ಯಾವ ಕಾರ್ಯವನ್ನೇ ಮಾಡಿದರೂ ದಾಖಲೆಗಳು ಅತ್ಯವಶ್ಯಕ. ಪೂರ್ಣವಾಗಿ ಅರ್ಥವಾದಮೇಲೆ ಮುಂದುವರಿಯಿರಿ. ದಾಖಲೆಗಳನ್ನು ಇಟ್ಟುಕೊಂಡೇ ಕಾನೂನಿಗೆ ಸಂಬಂಧಿಸಿದ ಹೋರಾಟದಲ್ಲಿ ತೊಡಗಿ. ಅನಧಿಕೃತ ಪತ್ರಗಳಿಗೆ ನೀವು ಉತ್ತರಿಸುವ ಅವಶ್ಯಕತೆ ಇರುವುದಿಲ್ಲ. ವಿದೇಶದಲ್ಲಿ ಇರುವವರಿಗೆ ನೆಮ್ಮದಿ. ದೂರಪ್ರಯಾಣವನ್ನು ಮುಂದೂಡುವುದು ಒಳ್ಳೆಯದು. ಯಾರನ್ನೋ ದೂಷಿಸುವುದರಿಂದ ಯಾವ ಲಾಭವೂ ಆಗದು. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಆಸಕ್ತಿ ಕಳೆದುಕೊಳ್ಳಬಹುದು, ಪ್ರೀತಿ ಪಾತ್ರರನ್ನು ನೀವು ಚೆನ್ನಾಗಿ ನೋಡಿಕೊಳ್ಳುವಿರಿ.
ಧನು ರಾಶಿ : ಹತ್ತರ ಜೊತೆ ಹನ್ನೊಂದು ಎನ್ನುವ ಭಾವ ಬೇಡ. ಪಾಲಕರಿಗೆ ನಿಮ್ಮನ್ನು ದೂರ ಕಳುಹಿಸುವುದು ಕಷ್ಟವಾದೀತು. ಉತ್ತಮ ಯೋಜನೆ ನಿಮ್ಮ ಉನ್ನತಾಧಿಕಾರಕ್ಕೆ ಪೂರಕವಾಗಬಹುದು. ಮನೆಯಲ್ಲಿ ಆಡಿದ ಮಾತುಗಳಿಂದ ನೀವು ಹೊರಬರಲು ಸಮಯಬೇಕಾದೀತು. ಸಂಗಾತಿಯ ಮೇಲೆ ಅನುಮಾನದ ದೃಷ್ಟಿ ಇರಲಿದೆ. ನಿಮ್ಮ ತನವನ್ನು ಉಳಿಸಿಕೊಳ್ಳಲು ಕೆಲವನ್ನು ಬಿಡಬೇಕಾಗುವುದು. ವಿದ್ಯಾಭ್ಯಾಸವು ಪೂರ್ತಿಯಾದರೂ ಕೆಲಸದ ಚಿಂತೆಯು ಕಾಡಬಹುದು. ದೇವರ ಮೊರೆ ಹೋಗದೇ ಬೇರೆ ದಾರಿ ಇಲ್ಲ ಅನ್ನಿಸಬಹುದು. ಸಾಲವು ಸಿಗುವುದು ಎಂದು ನಂಬಿದ್ದರೆ ನಿಮಗೆ ದುಃಖವಾದೀತು. ಸ್ವಾರ್ಥದಿಂದ ನಿಮಗೇ ಕಷ್ಟಗಳು ಗೊತ್ತಾಗುತ್ತದೆ. ಸಹೋದ್ಯೋಗಿಗಳ ಮಾತನ್ನು ಕೇಳಿ ನೀವು ಕೆಡುವಿರಿ. ನೀವು ಮಾತನಾಡುವುದು ನಿಮ್ಮ ವೈಯಕ್ತಿಕದ್ದಾಗಿರದು. ಸುಲಭವೆಂದು ಕೆಲಸವು ಕಷ್ಟವೆನಿಸಬಹುದು. ಕಾಮಗಾರಿಯ ಬಗ್ಗೆ ಸದ್ಭಾವವಿರದು. ಮನೆಯ ಕಾರ್ಯದಲ್ಲಿ ನಿಮ್ಮ ಇಡೀ ದಿನವು ಕಳೆದು ಹೋದುದ್ದು ಗೊತ್ತಾಗದೇ ಹೋಗಬಹುದು.
ಮಕರ ರಾಶಿ : ಇಂದು ನಿಮ್ಮ ವ್ಯಾಪಾರದಲ್ಲಿ ಚೇತರಿಕೆ ಕಾಣಿಸಿಕೊಂಡರೂ ನೀವು ಯಾವುದೋ ಗಹನವಾದ ಆಲೋಚನೆಯಲ್ಲಿಯೇ ಇರುವಿರಿ. ತಪ್ಪು ಆಲೋಚನೆಗಳಿಂದ ಮಾಡಿದ ಕಾರ್ಯವು ತಪ್ಪಾಗಿಯೇ ಆಗುತ್ತದೆ. ನೀವು ಸಂಗಾತಿಯ ಮೇಲೆ ಭಾವನಾತ್ಮಕವಾಗಿ ಇರುವಿರಿ. ಉದ್ಯೋಗದ ನಿಮಿತ್ತ ಸಂಗಾತಿಯನ್ನು ಬಿಡಲು ನಿಮಗೆ ಕಷ್ಟವಾದೀತು. ಆರ್ಥಿಕ ಸ್ಥಿತಿಯನ್ನು ಬಹಳ ಪರಿಶ್ರಮದಿಂದ ಸರಿಮಾಡಿಕೊಳ್ಳುವಿರಿ. ಕೌಶಲ್ಯವನ್ನೂ ಬೆಳೆಸಿಕೊಳ್ಳುವುದು ಇಂದಿನ ವಿದ್ಯಮಾನಕ್ಕೆ ಸರಿಹೊಂದುವುದಾಗಿದೆ. ಇಂದಿನ ಜೀವನದ ಬಗ್ಗೆ ದೈವಜ್ಞರ ಬಳಿ ಕೇಳಿ ಅಗತ್ಯವಾದ ಪರಿಹಾರವನ್ನು ಮಾಡಿಕೊಳ್ಳುವುದು ಒಳ್ಳೆಯದು. ಅತಿಥಿಗಳ ಜೊತೆ ಇಂದಿನ ಸಮಯವನ್ನು ಕಳೆಯಬಹುದು. ವಿವಾದವಾಗುವ ಮಾತುಗಳನ್ನು ಆಡಬೇಡಿ. ಸಂಗಾತಿಯ ಜೊತೆಗಿನ ಕಲಹವು ನಿಮ್ಮ ಇಡೀ ದಿನವನ್ನು ಸರಿಯಾಗಿ ಕಳೆಯುವಂತೆ ಮಾಡದು. ದೂರಪ್ರಯಾಣವು ಆಯಾಸವನ್ನು ಕೊಡಬಹುದು. ಬಂಧುಗಳ ನಕಾರಾತ್ಮಕ ಮಾತುಗಳಿಂದ ನಿಮ್ಮ ಉತ್ಸಾಹಕ್ಕೆ ಭಂಗ ಬರುವುದು.
ಕುಂಭ ರಾಶಿ : ಒಂದೇ ಉದ್ದೇಶ ಹೊಂದಿದ ಹಲವರನ್ನು ಭೇಟಿ ಮಾಡುವಿರಿ. ಯಾವುದನ್ನಾದರೂ ಮೊದಲು ಬಂದಂತೆ ಸ್ವೀಕರಿಸಿ. ಅನಂತರ ಅದನ್ನು ನಿಮಗೆ ಬೇಕಾದಂತೆ ಮಾಡಿಕೊಳ್ಳಬಹುದು. ಭರವಸೆಯೇ ನಿಮಗೆ ಭವಿಷ್ಯದ ಬೆಳಕಾಗಲಿದೆ. ಮಾನಸಿಕವಾಗಿ ನೀವು ದುರ್ಬಲವಾದರೆ ಸ್ವಲ್ಪ ಸಮಯ ಏಕಾಂತವಾಗಿ ಇರಿ. ನಿಮ್ಮ ಯೋಜನೆಗಳು ಇನ್ನೊಬ್ಬರಿಗೆ ಒಪ್ಪಿಗೆಯಾಗುವಂತೆ ಇರಲಿ. ಇಂದು ನಿಮಗೆ ತಪ್ಪಿನ ಅರಿವಾಗಿ ಪಶ್ಚಾತ್ತಾಪ ಉಂಟಾಗಬಹುದು. ಸಂಬಂಧಗಳಲ್ಲಿಯೂ ನೀವು ಲಾಭವೇನು ಎಂದು ಲೆಕ್ಕಹಾಕುವಿರಿ. ನಿಮ್ಮನ್ನು ಯಾರದರೂ ಆಡಿಕೊಂಡಾರು. ಅದನ್ನು ಲೆಕ್ಕಿಸದೆ ನಿಮ್ಮ ಗುರಿಯ ಕಡೆ ಗಮನವಿರಲಿ. ಹೆಚ್ಚು ಮನೋರಂಜನೆಯಿಂದ ಸಮಯವನ್ನು ಕಳೆಯಬಹುದು. ಇಂದು ನೀವು ಸಿಡಿದೇಳುವ ಸಂದರ್ಭವು ಬರಬಹುದು. ಎಲ್ಲದಕ್ಕೂ ಕೂಡಲೇ ಫಲ ಸಿಗಬೇಕು ಎಂಬ ಮಾನಸಿಕತೆಯಿಂದ ಹೊರಬರಬೇಕಾಗಬಹುದು. ವೃತ್ತಿಶೀಲರು ತಮ್ಮನ್ನು ಅತಿಮಾನುಷರಂತೆ ತೋರ್ಪಡಿಸುವರು. ನೀವು ಉದ್ಯೋಗವನ್ನು ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ.
ಮೀನ ರಾಶಿ : ನೀವು ಇಂದು ಅಕಾರಣವಾಗಿ ಚಿಂತೆ ಮಾಡುವಿರಿ. ನಿಮಗೆ ವ್ಯಾಪಾರದ ನಷ್ಟವನ್ನು ಸಹಿಸಿಕೊಳ್ಳುವುದು ಕಷ್ಟವಾದೀತು. ಪೂರ್ಣ ವಿವರಗಳನ್ನು ಪಡೆದು ಕಾರ್ಯಪ್ರವೃತ್ತರಾಗಿ. ಆತುರದಲ್ಲಿ ಮಾಡಿದ ಕಾರ್ಯವನ್ನೇ ಮತ್ತೆ ಮಾಡಬೇಕಾದೀತು. ನಿಮ್ಮಿಂದ ಸಹಾಯವನ್ನು ಪಡೆದರೂ ಅದನ್ನು ಮರೆಯುವ ಹಿತಶತ್ರುಗಳು ಇರಬಹುದು. ನಿಮ್ಮ ಕಾರ್ಯವನ್ನು ನಕಾರಾತ್ಮಕವಾಗಿ ತಿಳಿಯಬಹುದು. ಮೇಲಧಿಕಾರಿಗಳ ಜೊತೆ ವಿವಾದಗಳು ಆಗಬಹುದು. ಅಧಿಕವಾಗಿ ತಿನ್ನಬೇಕೆಂಬ ಆಸೆ ಹೆಚ್ಚಾಗುವುದು. ಕಲಾವಿದರಿಗೆ ಬೆಂಬಲವು ಕಡಿಮೆ ಆದಂತೆ ಅನ್ನಿಸೀತು. ಮನೆಗೆ ಸಹಾಯವನ್ನು ಮಾಡಲು ಮನಸ್ಸು ಇರಲಿದೆ. ಇನ್ನೊಬ್ಬರನ್ನು ನೋಡಿ ನಿಮಗೆ ಅಸೂಯೆ ಹೆಚ್ಚಾಗುವುದು. ಮನೆಯಲ್ಲಿ ನಡೆಯುವ ಘಟನೆಗಳು ಕುತೂಹಲ ತರಿಸಬಹುದು. ವ್ಯವಹಾರದಲ್ಲಿ ಇಂದು ನಿಮಗೆ ತುಂಬಾ ಒತ್ತಡದ ದಿನವಾಗಿರುತ್ತದೆ. ನಿಮ್ಮ ಹಣವನ್ನು ಬಲಾತ್ಕಾರದಿಂದ ಪಡೆಯಬೇಕಾಗಬಹುದು. ಸ್ತ್ರೀಯರು ಸಂತೋಷದಿಂದ ದಿನ ಕಳೆಯುವಿರಿ.