ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಶರದ್, ಚಾಂದ್ರ ಮಾಸ : ಆಶ್ವಯುಜ, ಸೌರ ಮಾಸ : ಕನ್ಯಾ, ಮಹಾನಕ್ಷತ್ರ : ಉತ್ತರಾಫಲ್ಗುಣೀ, ವಾರ : ಶುಕ್ರ, ಪಕ್ಷ : ಶುಕ್ಲ, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ಅನೂರಾಧಾ, ಯೋಗ : ಶುಭ, ಕರಣ : ಬಾಲವ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 11 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:41 – 12:11, ಗುಳಿಕ ಕಾಲ 07:40 – 09:10 ಯಮಗಂಡ ಕಾಲ 15:11 – 16:42,
ನವರಾತ್ರದ ಐದನೇ ದಿನ ನಾಲ್ಕನೇ ದೇವಿ ಕೂಷ್ಮಾಂಡಾ ದೇವಿಯ ಉಪಾಸನೆ ಮಾಡಲಾಗುವುದು. ಕೈಯಲ್ಲಿ ಕಮಲ, ಚಕ್ರ, ಕಮಂಡಲು, ಬಿಲ್ಲು, ಬಾಣ, ಗದೆ, ಜಪಮಾಲೆ, ಅಮೃತ ಕಲಶವನ್ನು ಧರಿಸಿದ್ದಾಳೆ.
ಮೇಷ ರಾಶಿ :
ಮಾತಿನ ಸಾಮ್ಯತೆಯನ್ನು ಬಿಟ್ಟರೆ ಮಾತ್ರ ಕಾರ್ಯ ವೇಗವನ್ನು ಪಡೆಯುವುದು. ನಿಮ್ಮ ನಿಜವಾದ ಪ್ರಯತ್ನಕ್ಕೆ ದೈವವೂ ಸಹಾಯ ಮಾಡುವುದು. ಇಂದು ಕಷ್ಟವಾದರೂ ಸಂತೋಷದಿಂದ ಕೆಲಸವನ್ನು ಮಾಡುವಿರಿ. ನಿಮಗೆ ಇಂದು ಪ್ರೇಮದ ವಿಚಾರದಲ್ಲಿ ಆಸಕ್ತಿ ಹೆಚ್ಚಾಗಿದ್ದು ಪ್ರೇಮಿಯನ್ನು ನೋಡಲು ಹಂಬಲಿಸುವಿರಿ. ಮಹಿಳಾ ಉದ್ಯೋಗಿಗಳಿಗೆ ಸೂಕ್ತಸ್ಥಾನವು ಸಿಗಲಿದೆ. ಎಲ್ಲಿಯೋ ಹೂಡಿಕೆ ಮಾಡಿ ನಷ್ಟಮಾಡಿಕೊಳ್ಳುವಿರಿ. ಯಾರ ಮೇಲೂ ದೂರನ್ನು ಹಾಕುವುದು ಬೇಡ. ಮನೆಯಿಂದ ದೂರವಿರುವ ಉದ್ಯೋಗವು ನಿಮಗೆ ಸಿಗುವ ಸಾಧ್ಯತೆ ಇದೆ. ನಿಮ್ಮ ಮಾತುಗಳಿಂದ ತಾಯಿಗೆ ಬೇಸರ ಮಾಡುವಿರಿ. ನಿಮ್ಮನ್ನು ನೀವು ಬದಲಿಸಿಕೊಳ್ಳಲು ಪ್ರಯತ್ನಿಸುವಿರಿ. ಬಂಧುಗಳ ಮನೆಗೆ ಹೋಗಿ ಬರಲಿದ್ದೀರಿ. ಓಡಾಟಕ್ಕೆ ವಾಹನ ಸೌಕರ್ಯ ಸಿಗುವುದು. ಭೂವಿಚಾರದ ಕಾನೂನು ಸಮರದಲ್ಲಿ ನಿಮಗೆ ಆಸಕ್ತಿ ಹೆಚ್ಚಾಗಬಹುದು. ಸಂಗಾತಿಯಿಂದ ಕಿರಿಕಿರಿ ಆಗಬಹುದು. ಆರ್ಥಿಕವಾಗಿ ಸಬಲರಾಗಲು ವಿವಿಧ ಆರ್ಥಿಕ ಮೂಲವನ್ನು ಹುಡುಕುವಿರಿ.
ವೃಷಭ ರಾಶಿ :
ಅನಾಮಿಕ ವ್ಯಕ್ತಿಗಳು ನಿಮ್ಮ ಬಳಿ ಆಪ್ತವಾಗಿ ಮಾತನಾಡುವರು. ಆನಾರೋಗ್ಯಕ್ಕೆ ಉತ್ತಮ ಚಿಕಿತ್ಸೆಗಿಂತ ಮಾನಸಿಕ ನೆಮ್ಮದಿ ಧೈರ್ಯಗಳು ಉಪಯೋಗಕ್ಕೆ ಬರುವುದು. ಬೇರೆಯವರು ಖುಷಿಪಡುವಂತೆ ಮಾತನಾಡುವಿರಿ. ಆರ್ಥಿಕ ಸಹಾಯವು ಸಿಗದೇ ಕಷ್ಟಪಡಬೇಕಾದೀತು. ಮನಸ್ಸು ಚಂಚಲವಾಗಿ ಕೆಲಸವು ಸೂಚಿಸದೇ ಇದ್ದೀತು. ಚರ ಆಸ್ತಿಯನ್ನು ಕಳೆದುಕೊಳ್ಳಬಹುದು. ಯಾರಾದರೂ ನಿಮಗೆ ಸ್ಫೂರ್ತಿಯಾಗಬಹುದು. ಶೈಕ್ಷಣಿಕ ಕೆಲಸದಲ್ಲಿ ವಿರಾಮವಿರದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಏಕಾಗ್ರತೆ ಇರದು. ಸ್ಥಾನವನ್ನು ಉಳಿಸಿಕೊಳ್ಳಲು ಜವಾಬ್ದಾರಿಯ ಕೆಲಸವನ್ನು ನಿರ್ವಹಿಸಬೇಕಾಗುವುದು. ಭೀತಿಯಿಂದ ಮನೆಯನ್ನು ಬಿಟ್ಟು ಹೋಗಲಾರಿರಿ. ಶುಭವಾರ್ತೆಯು ನಿಮಗೆ ನೆಮ್ಮದಿಯನ್ನು ತಂದೀತು. ಪ್ರಯಾಣದ ವಿಚಾರದಲ್ಲಿ ನಿಮಗೆ ನಿರಾಸಕ್ತಿ ಇರಲಿದೆ. ಬಂಧುಗಳ ಭೇಟಿಯು ಸುಖವನ್ನು ಕೊಡುವುದು. ಒಂದೇ ವಿಚಾರವನ್ನು ಮನನ ಮಾಡುವಿರಿ. ಸಂಗಾತಿಯ ನಡುವೆ ಭಿನ್ನಾಭಿಪ್ರಾಯ ಬರಲಿದೆ.
ಮಿಥುನ ರಾಶಿ :
ಹಣವಿದ್ದರೆ ಸಾಲದು, ಅದನ್ನು ನಿರ್ವಹಿಸುವ ಚಾಣಾಕ್ಷತನವೂ ಬೇಕು. ಉದ್ಯಮದಿಂದ ಆದ ಲಾಭಕ್ಕೆ ನಿಮಗೆ ಆದಾಯ ಸಿಗುವುದು. ಇಂದು ಆಪ್ತರು ನಿಮಗೆ ಬರುವ ಸಂಕಟದಲ್ಲಿ ಜೊತೆಯಾಗುವರು. ಇನ್ನೊಬ್ಬರಿಗೆ ಸಹಾಯ ಮಾಡುವ ಮನಸ್ಸಾಗುವುದು. ನಿರೀಕ್ಷಿಸಿದಷ್ಟು ಸಂಪತ್ತು ಸಿಗದೇ ಹೋದೀತು. ಯಾರದೋ ತಪ್ಪಿಗೆ ನೀವು ಬಲಿಯಾಗಬೇಕಾಗುವುದು. ಐಷಾರಾಮಿ ವಸ್ತುಗಳನ್ನು ಖರೀದಿಸಿದರೂ ನಿಮಗೆ ಸಂತೃಪ್ತಿ ಸಿಗದು. ಜೀವನಕ್ಕೆ ಬೇಕಾದುದನ್ನು ಸ್ನೇಹಿರಿಂದ ಪಡೆಯುವಿರಿ. ನೀವು ಇಂದು ವಿಶೇಷ ಲಕ್ಷ್ಯವನ್ನು ಇಟ್ಟುಕೊಂಡು ಕೆಲಸ ಮಾಡುವಿರಿ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಲಭ್ಯ ಆಗುವುದು. ಅನುಕಂಪದಿಂದ ಕೆಲವು ಸಮಯ ಸಹಾಯವನ್ನು ಪಡೆಯಬಹುದು. ಮನೋರಂಜನೆಯಲ್ಲಿ ಹೆಚ್ಚು ಸಮಯವನ್ನು ಕಳೆಯುವಿರಿ. ಯಂತ್ರದ ಮಾರಾಟದಿಂದ ಲಾಭವಿರಲಿದೆ. ಸಣ್ಣ ವ್ಯಾಪಾರದಲ್ಲಿ ಅಲ್ಪ ಲಾಭವಾಗಲಿದೆ. ವೇತನವನ್ನು ಹೆಚ್ಚಿಸಿಕೊಳ್ಳಲು ಅನ್ಯ ಮಾರ್ಗವನ್ನು ಹುಡುಕುವ ಅವಶ್ಯಕತೆ ಬರಬಹುದು.
ಕರ್ಕಾಟಕ ರಾಶಿ :
ಅನಿವಾರ್ಯವಾಗಿ ಬರುವ ಒಂಟಿ ಪ್ರಯಾಣವು ಭಯ ತರಿಸುವುದು. ನಿಮಗೆ ಗೊತ್ತಿರುವುದನ್ನು ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಇಂದು ಮೇಲಧಿಕಾರಿಗಳು ನಿಮ್ಮ ಕಾರ್ಯವನ್ನು ವೀಕ್ಷಿಸಬಹುದು. ಇಂದು ನಿಮಗೆ ಬರಬೇಕಾದ ಹಣವು ಅನಿರೀಕ್ಷಿತ ರೀತಿಯಲ್ಲಿ ಬಂದರೂ ಅದು ಇನ್ನೊಂದು ಮಾರ್ಗದಲ್ಲಿ ಖಾಲಿಯಾಗುವುದು. ನಿಮಗೆ ಇಷ್ಟವಿಲ್ಲದವರನ್ನು ಮನಸ್ಸಿನಿಂದ ಹೊರಹಾಕಿ. ಆತುರದಲ್ಲಿ ಗೃಹನಿರ್ಮಾಣವನ್ನು ಮಾಡಿಕೊಂಡು ಅನಂತರ ಸಿಟ್ಟಾಗುವಿರಿ. ವಾಹನವನ್ನು ಚಾಲಾಯಿಸುವಾಗ ಅನೇಕ ನಕಾರಾತ್ಮಕ ಯೋಚನೆಗಳು ಬರಲಿದೆ. ಲಿಖಿತವನ್ನು ಬದಲಿಸಲಾಗದೇ ಇರುವ ಕಾರಣ ಬಂದಿದ್ದನ್ನು ಸ್ವೀಕರಿಸಿ. ಸಂಗಾತಿಯ ಆಯ್ಕೆಯಲ್ಲಿ ನಿಮಗೆ ಅನೇಕ ರೀತಿಯ ಪರೀಕ್ಷೆಗಳು ಬರಬಹುದು. ಸ್ವತಂತ್ರವಾದ ಆಲೋಚನೆಯನ್ನು ಬೆಳೆಸಿಕೊಳ್ಳಿ. ಸದುದ್ದೇಶದ ಸಂಬಂಧಗಳು ನಿಮಗೆ ಯಶಸ್ಸು ಕೊಡುವುದು. ಇಂದು ಹೆಚ್ಚು ಶ್ರಮವಹಿಸಿ ಕೆಲಸವನ್ನು ಮಾಡಬೇಕಾದೀತು. ನಿಮ್ಮ ಮನವನ್ನು ಸಂಗಾತಿಯು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವರು.
ಸಿಂಹ ರಾಶಿ :
ನಿಮ್ಮ ಮೇಲೆ ಸ್ವಯಂ ನಿಯಂತ್ರಣವಿಲ್ಲದೇ ಇದ್ದರೆ ಅನ್ಯರಿಗೆ ಶರಣಾಗುವಿರಿ. ನಿಮಗೆ ಇಂದು ಏನಾದರೂ ಹೊಸತನ್ನು ಮಾಡುವ ಉದ್ದೇಶವಿರುವುದು. ಇಂದು ನಿಮ್ಮ ಕರ್ತವ್ಯಗಳನ್ನು ಮರೆಯು ಸಾಧ್ಯತೆ ಇದ್ದು, ಯಾರೋ ಅದನ್ನು ನೆನಪಿಸಬೇಕಾದೀತು. ಹೂಡಿಕೆಯನ್ನು ಮಾಡಿ ಹೊಸ ಚಿಂತೆಯನ್ನು ತಂದುಕೊಳ್ಳುವಿರಿ. ಇಷ್ಟ ಮಿತ್ರರ ಜೊತೆ ಸಮಯವನ್ನು ಕಳೆಯುವಿರಿ. ಅಸೂಯೆಯ ಕಾರಣ ಯಾವ ಸಂತೋಷವನ್ನೂ ನೀವು ಪೂರ್ಣವಾಗಿ ಅನುಭವಿಸಲಾರಿರಿ. ಸಾಮಾಜಿಕ ವ್ಯವಸ್ಥೆಗೆ ಒಳಪಟ್ಟರೆ, ಇಷ್ಟವಿಲ್ಲದ್ದನ್ನೂ ಮಾಡಬೇಕಾಗುವುದು. ಬಂಧುಗಳ ಮಾತು ನಿಮ್ಮ ಸಿಟ್ಟಿಗೆ ಕಾರಣವಾಗಬಹುದು. ನಿರಂತರ ಒಂದಲ್ಲ ಒಂದು ಕೆಲಸದಲ್ಲಿ ನೀವು ಮಗ್ನರಾಗಿರುವಿರಿ. ಕೃಷಿ ಚಟುವಟಿಕೆಯಲ್ಲಿ ಉತ್ಸಾಹದಿಂದ ಭಾಗಬಹಿಸುವಿರಿ. ನಿಮಗೆ ಬರಬೇಕಾದ ಹಣವನ್ನು ಕೇಳಿ ಪಡೆಯುವಿರಿ. ನಿಮ್ಮ ಸ್ಥಾನವನ್ನು ನೀವು ಬಿಟ್ಟಕೊಡುವಿರಿ. ಮತ್ತೆ ಆರೋಗ್ಯವು ಕಡೆವುದು ನಿಮಗೆ ಕಷ್ಟವಾಗುವುದು. ಒತ್ತಡಕ್ಕೆ ಮಣಿದು ನಿಮ್ಮ ಕೆಲಸ ಹಾಗೂ ನಿರ್ಧಾರವನ್ನು ಬದಲಿಸುವಿರಿ.
ಕನ್ಯಾ ರಾಶಿ :
ನಿಮಗೂ ಪ್ರಕಣಕ್ಕೂ ಸಂಬಂಧವಿಲ್ಲದೇ ಇದ್ದರೂ ಸಾಕ್ಷಿಯಾಗಿ ನೀವು ನ್ಯಾಯಾಲಯಕ್ಕೆ ಇಂದು ನೀವು ಹೋಗಬೇಕಾಗುವುದು. ನಿಮ್ಮ ಪ್ರತಿಬಂಧವನ್ನು ಮೀರಿ ತೊಂದರೆ ಪಡುವಿರಿ. ನಿಮಗೆ ವಿದೇಶಕ್ಕೆ ಸಂಬಂಧಪಟ್ಟ ವ್ಯವಹಾರದಲ್ಲಿ ಪಾಲುದಾರಿಕೆ ಸಿಗಬಹುದು. ಒಂದೇ ಕೆಲಸದಲ್ಲಿ ಮಗ್ನರಾಗಿ ಮಾಡಬೇಕಾದ ಕೆಲಸವನ್ನು ಮರೆಯಬಹುದು. ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗುವ ಮನಸ್ಸಾಗುವುದು. ಹೊಸ ವಸ್ತುಗಳು ನಿಮಗೆ ಖುಷಿಯನ್ನು ಕೊಟ್ಟೀತು. ಆರ್ಥಿಕ ವ್ಯವಹಾರವು ನಿಮ್ಮ ಪರವಾಗಿ ಇರುವುದು. ಸಣ್ಣ ಕೆಲಸವನ್ನು ಹೆಚ್ಚು ಸಮಯ ಮಾಡಲಾಗದು. ದಾಂಪತ್ಯದಲ್ಲಿ ಅಸಹಜ ಮಾತುಕತೆಗಳು ಕಿರಿಕಿರಿಯನ್ನು ತಂದೀತು. ಶುಭ ಸಮಾಚಾರದ ನಿರೀಕ್ಷೆಯಲ್ಲಿ ನೀವು ಇರುವಿರಿ. ಕರ್ತವ್ಯದಲ್ಲಿ ನೀವು ಇಂದು ನಿರತರಾಗಿರುವಿರಿ. ಪ್ರೇಮ ಸಂಬಂಧವು ದಾರಿತಪ್ಪಬಹುದು. ನಿಮ್ಮಲ್ಲಿರುವ ಅಲ್ಪ ಹಣವನ್ನು ಸೇರಿಸಿ ಕೊಡಬೇಕಾದವರಿಗೆ ಹಣವನ್ನು ಕೊಡುವಿರಿ. ಇಂದಿನ ನಿಮ್ಮ ಮಾರಾಟದಿಂದ ಅಧಿಕಲಾಭವೂ ಆಗದು.
ತುಲಾ ರಾಶಿ :
ಗೊತ್ತಿಲ್ಲದೇ ಅಪಾಯವನ್ನು ತಂದುಕೊಂಡರೂ ಕಷ್ಟ. ಇಂದು ನಿಮ್ಮಲ್ಲಿ ಉತ್ಸಾಹವಿದ್ದು ನೀವೇ ಸ್ವತಃ ಜವಾಬ್ದಾರಿಯನ್ನು ಪಡೆಯುವಿರಿ. ನಿಮ್ಮದಾದ ಸಂಪತ್ತನ್ನು ಇನ್ನೊಬ್ಬರಿಗೆ ಕೊಡಬೇಕಾಗುವುದು. ನಿಮ್ಮ ವ್ಯಕ್ತತ್ವಕ್ಕೆ ಕಳಂಕವನ್ನು ಶತ್ರುಗಳು ಮಸಿ ಬಳಿಯಬಹುದು. ಬೆನ್ನು ನೋವು ನಿಮ್ಮ ಯಾವ ಕೆಲಸವನ್ನೂ ಮಾಡಲು ಕೊಡದು. ಉದ್ಯೋಗಕ್ಕೆ ವಿರಾಮ ಹೇಳಿ ಹೊರಗೆ ಸುತ್ತಾಟವನ್ನು ಮಾಡಲಿದ್ದೀರಿ. ಎಲ್ಲ ಕಾರ್ಯವನ್ನೂ ನೀವೇ ಮಾಡಬೇಕು ಎಂಬ ಅತಿಯಾದ ಆಸೆ ಬೇಡ. ಕೂಡಿಟ್ಟ ಹಣವನ್ನು ನೀವು ಇಂದು ಬಿಡಿಸಿಕೊಳ್ಳುವಿರಿ. ಹಣ ಕೊಟ್ಟು ಸರಿಯಾದ ವ್ಯವಸ್ಥೆ ಸಿಗದೇ ಬೇಸರ. ನಿಮ್ಮ ನೋವಿಗೆ ಅಪರಿಚಿತರು ಸ್ಪಂದಿಸಬಹುದು. ಸಂಗಾತಿಯ ಜೊತೆ ಹಳೆ ವಿಚಾರಗಳನ್ನು ಮಾತನಾಡುವಿರಿ. ಅಪರೂಪಕ್ಕೆ ಸಿಕ್ಕ ಆಹಾರವನ್ನು ಮಿತವಾಗಿ ಸೇವಿಸಿ, ಆರೋಗ್ಯವನ್ನು ಕಾಅಡಿಕೊಳ್ಳಿ. ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗಬೇಕು ಎಂದು ಅನ್ನಿಸಬಹುದು. ಹವ್ಯಾಸಗಳು ನಿಮಗೆ ಪ್ರಯೋಜನವನ್ನು ಕೊಡುತ್ತದೆ.
ವೃಶ್ಚಿಕ ರಾಶಿ :
ಮನೆಯಲ್ಲಿ ಕುಳಿತು ಏಕಾಗ್ರವಾಗಿ ವಿದ್ಯಾಭ್ಯಾಸ ಮಾಡುವುದು ಸಾಧ್ಯವೆನಿಸದು. ವ್ಯಾವಹಾರಿಕ ಸಂಬಂಧವನ್ನು ಹಾಗೆಯೇ ಇಟ್ಟುಕೊಂಡರೆ ಒಳ್ಳೆಯದು. ನಿಮ್ಮ ಮಕ್ಕಳ ಬಗ್ಗೆ ನೀವು ಸರಿಯಾಗಿ ತಿಳಿದುಕೊಳ್ಳುವ ಅವಶ್ಯಕತೆ ಇದೆ. ವ್ಯಾಪರವು ನಷ್ಟವಾದರೂ ತಾಳ್ಮೆಯಿಂದ ಇದ್ದು ಇದನ್ನು ಮುಂದುವರಿಸಿ. ಮೂರನೇ ವ್ಯಕ್ತಿಗಳ ಒತ್ತಡಕ್ಕೆ ಮಣಿದು ನಿಮ್ಮ ಕೆಲಸ ಹಾಗೂ ನಿರ್ಧಾರವನ್ನು ಬಯಸುವಿರಿ. ವಿದೇಶವನ್ನು ಸುತ್ತುವ ಮನಸ್ಸಾಗುವುದು. ಆರ್ಥಿಕತೆಯನ್ನು ಸುಸ್ಥಿರ ಮಾಡಿಕೊಳ್ಳಲು ದೇಹವನ್ನು ದಂಡಿಸಬೇಕಾಗುವುದು. ಆಯಾಸದಂತೆ ನಿಮಗೆ ಅನ್ನಿಸೀತು. ನೆಮ್ಮದಿಗಾಗಿ ದೇವಾಲಯಕ್ಕೆ ಹೋಗಬಹುದು. ನಿಮ್ಮ ನಿರೀಕ್ಷೆಯಲ್ಲಿ ಕೆಲವು ಫಲಿಸಬಹುದು. ಅನಾಯಾಸವಾಗಿ ಫಲವನ್ನು ಪಡೆಯಲು ಬಯಸುವುದು ಸರಿಯಲ್ಲ. ಆದಾಯಕ್ಕೆ ಯಾರಿಂದಲಾದರೂ ಅಡ್ಡಿಯಾಗಿ, ಸಿಟ್ಟುಗೊಳ್ಳುವಿರಿ. ವಿವಾಹಕ್ಕೆ ಸಂಬಂಧಿಸಿದಂತೆ ಮಾತುಕತೆ ಸ್ಪಂದನ ಇರದು. ಸ್ವಾಲಂಬಿಯಾಗುವುದು ಕೂಡಲೇ ಕಷ್ಟ. ಅಮಂಗಲವಾದ ಕಾರ್ಯಕ್ಕೆ ಗೊತ್ತಿಲ್ಲದೇ ನೀವು ಹಣವನ್ನು ನೀಡುವಿರಿ.
ಧನು ರಾಶಿ :
ಬರುವ ಕೆಲಸವನ್ನು ಆತ್ಮವಿಶ್ವಾಸದೊಂದಿಗೆ ಸ್ವೀಕರಿಸುವಿರಿ. ನಿಮ್ಮ ನಿಯೋಜಿತ ಕಾರ್ಯಗಳನ್ನು ಮಾಡಲು ಜನರು ಸಿಗದೇಹೋಗಬಹುದು. ಧಾರ್ಮಿಕ ಕಾರ್ಯಗಳಿಗೆ ಮುಂದಾಳುತ್ವವವನ್ನು ವಹಿಸುವಿರಿ. ನಿಮ್ಮ ಬಳಿ ಸಾಲವನ್ನು ಕೇಳಬಹುದು. ವೈದ್ಯರಿಗೆ ಪ್ರಶಂಸೆ ಸಿಗಬಹುದು. ಸರ್ಕಾರಿ ಉದ್ಯೋಗಿಗಳ ಸ್ಥಾನವು ಬದಲಾಗುವುದು. ಎಲ್ಲವನ್ನೂ ತಿಳಿದಿದ್ದೇನೆ ಎಂಬ ಅಹಂಕಾರ ಬೇಡ. ಭವಿಷ್ಯದ ಬಗ್ಗೆ ದೊಡ್ಡ ಕನಸನ್ನು ಇಟ್ಟುಕೊಳ್ಳುವಿರಿ. ಮಕ್ಕಳು ನಿಮ್ಮ ಕೆಲಸಕ್ಕೆ ಅಡ್ಡಿಯಾಗಬಹುದು. ಬೇರೆ ಕಡೆಗೆ ಕಳುಹಿಸುವ ವಸ್ತುಗಳು ನಿಮಗೆ ಕೊರತೆಯಾಗಬಹುದು. ಮನೆಯ ವಾತಾರಣದಲ್ಲಿ ಇರಲು ಖುಷಿಪಡುವಿರಿ. ಗುರಿಯ ನಿರ್ಧಾರವನ್ನು ಸಕಲ ಪ್ರಯತ್ನಗಳಿಂದ ಮಾಡಿ. ನಿಮ್ಮ ವಸ್ತುಗಳನ್ನು ಸ್ನೇಹಿತನಿಗೆ ದಾನವಾಗಿ ಕೊಡುವಿರಿ. ಮಕ್ಕಳ ಜೊತೆ ಸಮಯವನ್ನು ಕಳೆಯುವುದು ಇಷ್ಟವಾದೀತು. ರಹಸ್ಯ ವಿಚಾರಗಳನ್ನು ಗೊತ್ತಿಲ್ಲದೇ ಹಂಚಿಕೊಳ್ಳುವಿರಿ. ಕೆಲವು ಸಮಯ ಚೆನ್ನಾಗಿದೆ ಎಂದಿದ್ದು ಅನಂತರ ಚೆನ್ನಾಗಿರದೇಹೋಗಬಹುದು. ಸಂಗಾತಿಯ ಆಯ್ಕೆಯಲ್ಲಿ ನಿಮಗೆ ಅನೇಕ ಗೊಂದಲ.
ಮಕರ ರಾಶಿ :
ಸ್ವಸ್ಥಾನಕ್ಕೆ ಹಿಂದಿರುಗದೇ ಸಮಾಧಾನವಾಗದು. ನಿಮ್ಮ ಮಕ್ಕಳನ್ನು ಸರಿಯಾದ ಮಾರ್ಗಕ್ಕೆ ತರಲು ಸಮಯವು ಬೇಕಾಗುವುದು. ಕುಟುಂಬದವರ ಮಾತಿನ ಅಲಕ್ಷ್ಯದಿಂದ ನಿಮಗೆ ಸಮಸ್ಯೆಯಾದೀತು. ಸಂಗಾತಿಯ ನೋವನ್ನು ಕೇಳುವಷ್ಟು ತಾಳ್ಮೆ ಇಲ್ಲವಾದೀತು. ಸರಿಯಾದ ಸಮಯಕ್ಕೆ ವೈದ್ಯರ ಬಳಿ ಹೋಗಿ ಆರೋಗ್ಯವನ್ನು ಸರಿ ಮಾಡಿಕೊಳ್ಳುವಿರಿ. ನಿಮ್ಮ ನಿರ್ಬಂಧಗಳು ಕುಟುಂಬದವರಿಗೆ ಇಷ್ಟವಾಗದು. ನಿಮ್ಮ ಜವಾಬ್ದಾರಿಯನ್ನು ಸಂಗಾತಿ ನಿರ್ವಹಿಸುವಳು. ಕಛೇರಿಯ ಒತ್ತಡದ ಕೆಲಸವನ್ನು ಮನೆಗೂ ತಂದುಕೊಳ್ಳುವಿರಿ. ಮಾನಸಿಕವಾಗಿ ನೀವು ಕುಗ್ಗುವಿರಿ. ವೇತನವನ್ನು ಹೆಚ್ಚಿಸಿಕೊಳ್ಳಲು ಮಾರ್ಗವನ್ನು ಹುಡುಕುವ ಸಂಭವ ಇದೆ. ಹೊಸ ಉದ್ಯೋಗಕ್ಕೆ ಬೇಕಾದ ಸಿದ್ಧತೆಯನ್ನೂ ಮಾಡಿಕೊಳ್ಳುವಿರಿ. ಆರಂಭದಲ್ಲಿಯೇ ಅಪನಂಬಿಕೆಯನ್ನು ದೂರಮಾಡಿಕೊಳ್ಳುವುದು ಉತ್ತಮ. ಸಂಗಾತಿಯನ್ನು ಹೊರಗೆ ಸುತ್ತಾಡಲು ಕರೆಯುವಿರಿ. ಯಾರೋ ಕೊಟ್ಟದ್ದನ್ನು ಸ್ವೀಕರಿಸುವುದಿಲ್ಲ. ಇಂದು ನೀವು ನಿರೀಕ್ಷಿಸಿದಷ್ಟು ಸಂಪತ್ತು ಸಿಗದೇ ಹೋದೀತು.
ಕುಂಭ ರಾಶಿ :
ಸಲಹೆಯನ್ನು ಪಾಲಿಸದೇ ಇದ್ದರೆ ಬೇಸರವಾಗಲಿದೆ. ಸಾಮಾಜಿಕ ಕಾರ್ಯಗಳ ಬಗ್ಗೆ ಕಿವಿಮಾತನ್ನು ಆಪ್ತರು ಹೇಳುವರು. ಅದನ್ನು ಕೇಳಿಸಿಕೊಳ್ಳುವ ವ್ಯವಧಾನವೂ ಬೇಕು. ನಿಮ್ಮ ಮಾತು ಇಂದು ಕೇಳುಗರಿಗೆ ಹಿಂಸೆ ಕೊಡಬಹುದು. ಸಂಗಾತಿಯ ನಡುವೆ ಭಿನ್ನಾಭಿಪ್ರಾಯವು ಬರಬಹುದು. ಸತತ ಸುತ್ತಾಟದಿಂದ ಆಯಾಸವಾಗಲಿದೆ. ನಿಮ್ಮ ಆಸೆಗಳನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳುವಿರಿ. ಹಣಕಾಸಿನ ವಿಚಾರದಲ್ಲಿ ನಿಮಗೆ ಚಿಂತೆಯು ಕಾಡಬಹುದು. ಹೊಸ ಕೆಲಸಕ್ಕೆ ನಿಮಗೆ ಧೈರ್ಯವು ಸಾಕಾಗದು. ಇರುವುದರಲ್ಲಿ ನೆಮ್ಮದಿಯನ್ನು ಕಾಣಲು ಹೆಚ್ಚು ಇಷ್ಟಪಡುವಿರಿ. ಆತುರದ ನಿರ್ಧಾರಕ್ಕೆ ಮನೆಯಿಂದ ವಿರೋಧ. ನೀವು ಇಂದು ಸುಮ್ಮನೇ ಕುಳಿತಾಗ ಕೇವಲ ಸೋಲುಗಳೇ ನಿಮ್ಮ ಕಣ್ಣೆದುರು ಕಾಣಿಸುವುದು. ಕೆಲವು ವಿಚಾರದಲ್ಲಿ ನಿಮ್ಮ ಮಾನಸಿಕ ಸ್ಥಿತಿಯು ಬದಲಾಗಬಹುದು. ಯಾವುದೇ ಪ್ರಭಾವಕ್ಕೆ ಒಳಗಾಗದೆ ಸ್ವಂತ ನಿರ್ಧಾರಕ್ಕೆ ಬದ್ಧರಾಗುವಿರಿ. ಭೂ ವ್ಯವಹಾರದಲ್ಲಿ ನಿಶ್ಚಿತ ಲಾಭವು ಪ್ರಾಪ್ತವಾಗಲಿದೆ. ಚರ ಆಸ್ತಿಯನ್ನು ಮಾರಾಟ ಮಾಡಿ ಹಣದ ಗಳಿಸುವಿರಿ.
ಮೀನ ರಾಶಿ :
ಧಾರ್ಮಿಕ ಕಾರ್ಯದಿಂದ ಫಲ ಸಿಕ್ಕಂತೆ ಇಂದು ಭಾಸವಾಗಲಿದೆ. ನಿಮ್ಮ ಇಂದಿನ ಶ್ರಮವು ಎಷ್ಟೇ ಇದ್ದರು ಒಂದು ಮಾತು ಎಲ್ಲದಕ್ಕೂ ತಣ್ಣೀರು ಹಾಕುವುದು. ನೀವು ಸುತ್ತಾಟಕ್ಕೆಂದು ಮಕ್ಕಳ ಜೊತೆ ಹೋಗುವಿರಿ. ಎಷ್ಟೇ ಕಷ್ಟಪಟ್ಟರೂ ಬಯಸಿದ್ದನ್ನು ಪಡೆಯಲು ಕಷ್ಟವಾದೀತು. ಸಂಗಾತಿಯ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ನೀವು ವ್ಯಾಪಾರದಲ್ಲಿ ಆರ್ಥಿಕ ಲಾಭಕ್ಕಿಂತ ಗ್ರಾಹಕರ ವಿಶ್ವಾಸ ಗಳಿಸುವುದು ಇಂದು ನಿಮಗೆ ಮುಖ್ಯವೆನಿಸುವುದು. ಆರ್ಥಿಕವಾಗಿ ಸಬಲರಾಗಲು ಅನೇಕ ಆರ್ಥಿಕ ಮೂಲವನ್ನು ಹುಡುಕುವಿರಿ. ತಾಯಿಯ ಕಡೆಯಿಂದ ನಿಮಗೆ ಆರ್ಥಿಕ ಸಹಾಯವನ್ನು ಮಾಡುವರು. ಮಕ್ಕಳ ವಿವಾಹ ಕೆಲಸದಲ್ಲಿ ನೀವು ಮಗ್ನರಾಗುವಿರಿ. ಶತ್ರುಗಳ ಉಪಟಳ ಕಡಿಮೆ ಆಗಿದ್ದು ನೀವು ನಿಶ್ಚಿಂತೆಯಿಂದ ಇರುವಿರಿ. ಶುಭ ಕಾರ್ಯದಲ್ಲಿ ನೀವು ತೊಡಗುವಿರಿ. ಮಾತನ್ನು ಕಡಿಮೆ ಮಾಡುವಿರಿ. ಮಹಿಳಾ ಉದ್ಯೋಗಿಗಳು ಹೆಚ್ಚಿನ ಸ್ಥಾನವನ್ನು ಪಡೆಯುವಿರಿ. ಯಾರನ್ನೂ ದೂರುವ ಅವಶ್ಯಕತೆ ಇಲ್ಲ. ನಿಮ್ಮ ಕೆಲಸವನ್ನು ಸರಿ ಮಾಡಿಕೊಂಡು ಹೋಗುವಿರಿ.
Views: 77