ಜುಲೈ 28, 2024ರ ನಿಮ್ಮ ರಾಶಿಭವಿಷ್ಯ: ಸಂಗಾತಿಯನ್ನು ಪ್ರೀತಿಸುವ ಮನಸ್ಸು ಇದ್ದರೂ ಅನಿರೀಕ್ಷಿತ ಕಾರ್ಯಗಳು ಅದನ್ನು ಬಿಟ್ಟುಕೊಡುವುದಿಲ್ಲ. ನಿಮ್ಮ ಜೊತೆ ಮಾತನಾಡಲು ಮನೆಯಲ್ಲಿ ಭಯಪಟ್ಟಾರು. ತಾಳ್ಮೆಯಿಂದ ಕುಟುಂಬವನ್ನು ನಡೆಸುವ ಕಲೆ ಒಲಿದಿದೆ. ಹಾಗಾದರೆ ಜುಲೈ 28ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಪುಷ್ಯಾ, ಮಾಸ: ಆಷಾಢ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಅಶ್ವಿನೀ, ಯೋಗ: ಶೂಲಿ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 16 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 01 ನಿಮಿಷಕ್ಕೆ, ರಾಹು ಕಾಲ ಸಂಜೆ 05:26 ರಿಂದ ಸಂಜೆ 07:02ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:39 ರಿಂದ 02:15ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:51ರಿಂದ 05:26ರ ವರೆಗೆ.
ಮೇಷ ರಾಶಿ: ನೀವು ಇಂದು ಸ್ನೇಹಿತನ ನಂಬಿಕೆಯ ಯಾರಿಗೋ ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ. ಅನ್ಯರ ಚಿಂತೆ ನಿಮಗೆ ಬೇಡ. ಬಾಕಿ ಇರುವ ಕೆಲಸದ ಬಗ್ಗೆ ಹೆಚ್ಚು ಗಮನವಿರಲಿ. ದಿನವನ್ನು ಮುಂದೆ ಹಾಕುವುದು ಬೇಡ. ಇಂದು ನಿಮ್ಮ ಕಡೆಯಿಂದ ದೊಡ್ಡ ತಪ್ಪು ಆಗದಂತೆ ನೋಡಿಕೊಳ್ಳಿ. ನಿಮ್ಮ ಸಂಗಾತಿಯನ್ನು ಹೊಸ ರೀತಿಯಲ್ಲಿ ಪ್ರೀತಿಸಲು ಇಷ್ಟಪಡುವಿರಿ. ಹಣವು ನಿಮಗೆ ಸರಿಯಾದ ಸಮಯಕ್ಕೆ ಸಿಗದೇ ಗಲಿಬಿಲಿಗೊಳ್ಳುವಿರಿ. ಮಕ್ಕಳಿಗೆ ನಿಮ್ಮಿಂದ ಖುಷಿ ಸಿಗಲಿದೆ. ಗಂಭೀರವಾದ ಚಿಂತನೆಗೆ ಮನಸ್ಸು ತೊಡಗಿಕೊಳ್ಳದೇ ಬೇರೆ ವಿಚಾರದ ಬಗ್ಗೆಯೇ ಹೆಚ್ಚು ಆಲೋಚಿಸೀತು. ದುಡುಕುವ ಸನ್ನಿವೇಶದಲ್ಲಿ ಸುಮ್ಮನಿದ್ದುಬಿಡುವುದು ಉತ್ತಮ. ಯಾವ ಕೆಲಸ ಪ್ರಣಯಕ್ಕೆ ಈ ದಿನವು ಒಳ್ಳೆಯದು. ಆದಷ್ಟು ನೀರಿನಿಂದ ದೂರವಿರಿ. ಪ್ರೇಮವನ್ನು ಬಹಿರಂಗಪಡಿಸಲು ಅಂಜುವಿರಿ.
ವೃಷಭ ರಾಶಿ: ಇಂದು ನಿವು ಏನೂ ಕೆಲಸವಿಲ್ಲದೇ ಸಮಯವನ್ನು ವ್ಯರ್ಥಮಾಡುವಿರಿ. ಆದಕಾರಣ ಹತ್ತಾರು ವಿಚಾರಗಳು ನಿಮ್ಮ ತಲೆಯಲ್ಲಿ ಓಡುತ್ತಿರಬಹುದು. ಮಹಿಳೆಯರಿಂದ ನಿಮಗೆ ವಿರೋಧವು ಬರಬಹುದು. ಹಣದ ಬಗ್ಗೆ ಬಹಳ ಚಿಂತಾಕ್ರಾಂತರಾಗಿದ್ದು ಅದನ್ನು ಸ್ನೇಹಿತರು ಮನಗಂಡು ಸಹಾಯ ಮಾಡುವರು. ನಿಮ್ಮ ಬಗ್ಗೆ ನೀವೇ ಹೇಳಿಕೊಳ್ಳುವುದು ಸ್ವಾರಸ್ಯಕರವಾಗಿ ಇರದು. ನಿಮ್ಮ ತಂದೆಯ ಮಾತು ನಿಮಗೆ ಅಸಹ್ಯವಾದರೂ ಅದನ್ನು ತಮಾಷೆಯಾಗಿ ತೆಗೆದುಕೊಂಡು ಸುಮ್ಮನಾಗುವಿರಿ. ಆತುರದ ನಿರ್ಧಾರವನ್ನು ತೆಗೆದುಕೊಳ್ಳುವುದು ಬೇಡ. ಅನಂತರ ಪಶ್ಚಾತ್ತಾಪ ಪಡಬೇಕಾದೀತು. ಸಂಗಾತಿಯ ಜೊತೆಗಿನ ವ್ಯವಹಾರವು ನಿಮಗೆ ಎಂದಿಗಿಂತ ಹಿತ ಎನಿಸಬಹುದು. ಆತ್ಮೀಯತೆಯು ದುರ್ಬಲವಾಗಬಹುದು. ನೀವು ಹನಿಮ್ಮ ಆವಿಷ್ಕಾರಕ್ಕೆ ಕೆಲವು ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಬರುವುದು. ಹಣದಿಂದ ಕೆಲವು ತೊಂದರೆಗಳನ್ನು ದೂರಮಾಡಿಕೊಳ್ಳಬಹುದು. ಬೇಕಾದ ವಸ್ತುವನ್ನು ಯಾರಿಂದಲಾದರೂ ಪಡೆಯುವಿರಿ.
ಮಿಥುನ ರಾಶಿ: ಇಂದು ನಿಮಗೆ ಇಷ್ಟವಾಗದವರ ಜೊತೆ ಮಾತನಾಡುವ ಸಂದರ್ಭವು ಅನಿರೀಕ್ಷಿತವಾಗಿ ಬರುವುದು. ಹದಗೆಟ್ಟ ಆರೋಗ್ಯದಲ್ಲಿ ಅಲ್ಪ ಮಟ್ಟಿನ ಚೇತರಿಗೆ ಕಾಣಿಸುವುದು. ಉದ್ಯಮಿಗಳಾಗಿರುವ ನಿಮಗೆ ಉದ್ಯಮದಲ್ಲಿ ಉಂಟಾದ ಸಣ್ಣ ಬದಲಾವಣೆಯಿಂದ ಕೆಲವು ಕೆಲಸಗಾರರು ಬಿಟ್ಟು ಹೋಗಬಹುದು. ಸಂಗಾತಿಯನ್ನು ಟೀಕಿಸುತ್ತ ಇರುವಿರಿ. ರಾಜಕಾರಣಿಗಳು ತುರ್ತು ಕಾರ್ಯಪ್ರವೃತ್ತರಾಗಬೇಕಾಗುವುದು. ನಿಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಲು ಗೊಂದಲ ಬೇಡ. ಒಪ್ಪಿಕೊಂಡ ಮಾತ್ರಕ್ಕೆ ಸೋಲು ಎಂದುಕೊಳ್ಳುವುದು ಬೇಡ. ದಾಂಪತ್ಯದಲ್ಲಿ ಅಹಂಕಾರದಿಂದ ಸಂಬಂಧಗಳ ನಡುವೆ ಬಿರುಕುಬರಬಹುದು. ವಾಹನ ಖರೀದಿಗೆ ನೀವು ಮುಂದಾಗುವಿರಿ. ನಿಮ್ಮ ದ್ವಂದ್ವ ನೀತಿಯು ಮನೆಯವರಿಗೆ ಕಷ್ಟವಾಗುವುದು. ಬೇಕಾದ ವ್ಯಕ್ತಿಯಿಂದ ನಿಮಗೆ ಬೇಕಾದುದನ್ನು ಕೇಳಿಕೊಳ್ಳುವಿರಿ. ನೀವು ಸರಳತೆಯನ್ನು ರೂಢಿಸಿಕೊಳ್ಳುವುದು ಉತ್ತಮ.
ಕಟಕ ರಾಶಿ: ನೀವು ಇಂದು ದೂರದ ಪ್ರಯಾಣವನ್ನು ಮಾಡಲು ಸಾಧ್ಯವಾಗದು. ಯಾರ ಬಳಿ ಏನನ್ನು ಮಾತನಾಡುತ್ತಿದ್ದೇನೆ ಎಂಬ ಜ್ಞಾನವಿರಲಿ. ಕೆಲವು ಪದಗಳೂ ನಿಮ್ಮ ಜೊತೆ ವೈಮನಸ್ಯವನ್ನು ತರುವುದು. ಹೊಸ ಉದ್ಯೋಗವನ್ನು ಹುಡುಕುವ ಭರದಲ್ಲಿ ಮೋಸಕ್ಕೆ ಸಿಲುಕಿಕೊಳ್ಳಬಹುದು. ಅತಿಯಾದ ಆಸೆಯಿಂದ ನಿಮ್ಮ ಸಂಪತ್ತನ್ನು ಕಳೆದುಕೊಳ್ಳಬಹುದು. ಇಂದಿನ ಸಮಾರಂಭದಲ್ಲಿ ಪರಿಚಿತರ ಭೇಟಿಯು ಸಮಾಧಾನವನ್ನು ನೀಡುವುದು. ವಿದ್ಯಾರ್ಥಿಗಳು ಅನಾಯಸವಾಗಿ ನಿಮಗೆ ಸಂಪತ್ತು ಸಿಗಬಹುದು. ನಿಮಗೆ ತಪ್ಪಿತಸ್ಥ ಭಾವವು ಮೂಡುವುದು. ನಿಮ್ಮ ಕರ್ತವ್ಯವನ್ನು ಮರೆಯದೇ ನಿಭಾಯಿಸಲು ಪ್ರಯತ್ನಿಸಿ. ಅಲ್ಪದರಲ್ಲಿ ನೀವು ಪಾರಾಗಿ ನೆಮ್ಮದಿ ಪಡೆಯುವಿರಿ. ದುರಭ್ಯಾಸವನ್ನು ಬೆಳೆಸಿಕೊಳ್ಳುವ ಸಾಧ್ಯತೆ ಇದೆ. ನಿಮಗೇ ಗೊತ್ತಾಗದಂತೆ ಹಣವು ಖರ್ಚಾಗಬಹುದು.
ಸಿಂಹ ರಾಶಿ: ಇನ್ನೊಬ್ಬರ ನೋವಿಗೆ ಸ್ಪಂದನೆ ಸರಿಯಾಗಿ ಇರಲಿ. ಭಯದ ವಾತಾವರಣದಲ್ಲಿ ಇಂದು ಇರಲಿದ್ದೀರಿ. ನಿಮ್ಮ ವೃತ್ತಿಯ ಬಗ್ಗೆ ಯಾರ ಬಳಿಯೂ ಹೇಳಿಕೊಳ್ಳವುದು ಬೇಡ. ನಿಮ್ಮ ವೇತನವನ್ನು ತಿಳಿದು ಆಡಿಕೊಳ್ಳಬಹುದು. ಸಾರ್ವಜನಿಕ ಸಮಾರಂಭಗಳಿಗೆ ಭಾಗವಹಿಸಲು ನೀವು ಹಿಂದೇಟು ಹಾಕಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳು ಕೈಗೂಡವುದು. ನಿಮ್ಮ ಶ್ರಮಕ್ಕೆ ತಕ್ಕಂತೆ ಫಲವು ಲಭ್ಯವಾಗುವುದು. ಎಂದೋ ಕಲಿತ ವಿದ್ಯೆಯು ಉಪಯೋಗಕ್ಕೆ ಬರುವುದು. ಅನಿಯಮಿತ ಕಾಲದಲ್ಲಿ ಆಹಾರವನ್ನು ಸ್ವೀಕರಿಸಿ ಅನಾರೋಗ್ಯವನ್ನು ಕೆಡಿಸಿಕೊಳ್ಳುವಿರಿ. ಕಾರ್ಯದ ನಿಮಿತ್ತ ಓಡಾಟದಿಂದ ಆಯಾಸವಾಗಬಹುದು. ಸಮಸ್ಯೆಯನ್ನು ಸರಳ ಮಾಡಿಕೊಂಡು ಬಗೆಹರಿಸಿಕೊಳ್ಳಿ. ಸಂತಾನದ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇದೆ. ಸಾಹಸ ಪ್ರವೃತ್ತಿ ಒಳ್ಳೆಯದಲ್ಲ. ನೀವು ಮಾಡುವ ಪ್ರಯಾಣದ ಬಗ್ಗೆ ಸರಿಯಾದ ಯೋಜನೆ ಇರಲಿ.
ಕನ್ಯಾ ರಾಶಿ: ನಿಮ್ಮ ಅತಿಯಾದ ಸಲುಗೆಯು ದ್ವೇಷಕ್ಕೆ ಕಾರಣವೂ ಆಗಬಹುದು. ನಿಮ್ಮ ದಾಂಪತ್ಯದ ಪ್ರಕರಣವು ನ್ಯಾಯಾಲಯದ ಮಟ್ಟದ ವರೆಗೆ ತಲುಪಬಹುದು. ನಿಮ್ಮ ಉದ್ಯಮದ ಪೂರ್ವಾವಲೋಕನ ಮಾಡಿದರೆ ನಿಮಗೆ ಸಂತೋಷವಾಗುವುದು. ನಿಮ್ಮವರು ಹಣವನ್ನು ಹೂಡಲು ಒತ್ತಾಯಿಸಬಹುದು. ಎತ್ತರದ ಪ್ರದೇಶಕ್ಕೆ ಸುತ್ತಾಡಲು ಸ್ನೇಹಿತ ಜೊತೆ ಹೋಗಲಿದ್ದೀರಿ. ನಿಮ್ಮ ಅಸ್ತಿತ್ವವನ್ನು ನೀವು ಉಳಿಸಿಕೊಳ್ಳಲು ಬಹಳ ಪ್ರಯತ್ನಪಡುವಿರಿ. ಇನ್ನೊಬ್ಬರ ಬಗ್ಗೆ ತೋರುವ ಸಹಾನುಭೂತಿಯು ಬೇರೆಯವರಿಗೆ ಇಷ್ಟವಾಗುವುದು. ನಿಮ್ಮ ಸಂಗಾತಿಗೆ ಒತ್ತಡಕ್ಕೆ ಇಂದಿನ ಕಾರ್ಯವನ್ನು ಮಾಡಬೇಕಾಗುವುದು. ನಿಮ್ಮ ಬಗ್ಗೆ ಪ್ರಚಾರದ ಗೀಳು ಇರಬಹುದು. ಖ್ಯಾತಿಯನ್ನು ಪಡೆಯುವ ಆಸೆಯಾಗುವುದು. ಅನಾರೋಗ್ಯದ ಮೇಲೆ ಕಾಳಜಿ ಅತ್ಯಗತ್ಯ.
ತುಲಾ ರಾಶಿ: ನಿಮ್ಮ ಪ್ರೇಮವು ಇತರರಿಗೆ ಗ್ರಾಸವಾಗಬಹುದು. ನಿಮ್ಮನ್ನು ಇಷ್ಟಪಡುವವರ ಜೊತೆ ನೀವು ಕೆಲವು ಸಮಯವಿರಬೇಕಾಗುತ್ತದೆ. ನಿಮ್ಮ ಯೋಚನೆಗಳಿಗೆ ಸಂಗಾತಿಯಿಂದ ಬೆಂಬಲ ಸಿಗಬಹುದು. ಅದರ ಅಭಿವೃದ್ಧಿಗೆ ಹೆಚ್ಚಿನ ಪ್ರಯತ್ನವೇ ಆಗಬೇಕಾದೀತು. ಉದ್ಯೋಗದಲ್ಲಿ ಭಡ್ತಿ ಸಿಗುವ ವಿಚಾರವು ನಿಮಗೆ ಸ್ನೇಹಿತರಿಂದ ತಿಳಿಯಲಿದೆ. ಪ್ರೇಮವನ್ನು ಸತಾಯಿಸುವುದು ನಿಮಗೆ ಖುಷಿ ವಿಚಾರ. ಯಂತ್ರೋಪಕರಣದಿಂದ ಲಾಭವಾಗಲಿದೆ. ಬೇಕಾದ ಎಲ್ಲ ವಸ್ತುಗಳನ್ನು ಇಂದೇ ತೆಗೆದುಕೊಳ್ಳುವ ಅಗತ್ಯವಿಲ್ಲ. ಬೇಕಾದ್ದಷ್ಟನ್ನೇ ಪಡೆಯಿರಿ. ಯಾರ ಬಗೆಗಿನ ತೀರ್ಮಾನವನ್ನೂ ಏಕಪಕ್ಷೀಯವಾಗಿ ತೆಗೆದುಕೊಳ್ಳುವುದು ಬೇಡ. ಸುಳ್ಳನ್ನು ಹೇಳುವುದು ಗೊತ್ತಾದೀತು. ನಿಮ್ಮನ್ನು ನಿರ್ಲಕ್ಷಿಸುವ ಸಹೋದ್ಯೋಗಿಗಳ ಜೊತೆ ಬೆರೆಯಲು ಪ್ರಯತ್ನಿಸಿ. ವೃತ್ತಿಯಲ್ಲಿ ನಿಮಗೆ ಅನನುಕೂಲತೆಯು ಸೃಷ್ಟಿಯಾಗಬಹುದು.
ವೃಶ್ಚಿಕ ರಾಶಿ: ಇಂದು ಅಪರಿಚಿತ ಕರೆಗಳು ನಿಮ್ಮ ಕೆಲಸಕ್ಕೆ ತೊಂದರೆ ಕೊಡಬಹುದು. ಸಂಪೂರ್ಣ ಮಾಹಿತಿಯ ಜೊತೆ ಕೆಲಸಕ್ಕೆ ಮುಂದುವರಿಯಿರಿ. ವ್ಯವಹಾರದಲ್ಲಿ ನಿಮಗೆ ತಿಳಿವಳಿಕೆ ಕೊರತೆ ಎಂದು ಗೊತ್ತಾಗಬಹುದು. ಸಂಗಾತಿಯ ಕಾರಣದಿಂದ ನಿಮಗೂ ಗೌರವ ಸಿಗಲಿದೆ. ವಿವಾಹಜೀವನದ ಚಿಂತೆ ನಿಮ್ಮನ್ನು ಕಾಡಬಹುದು. ತಾಯಿಯಿಂದ ನಿಮಗೆ ಸಾಂತ್ವನ ಸಿಕ್ಕೀತು. ಉಳಿದವರು ಅಪಹಾಸ್ಯ ಮಾಡಿಯಾರು. ಗೊಂದಲಗಳ ನಿವಾರಣೆಗೆ ತಜ್ಞರನ್ನು ಭೇಟಿಯಾಗಿ. ದುರಭ್ಯಾಸವು ನಿಮಗೆ ಮುಳುವಾಗುವುದು. ಸಕಾಲದಲ್ಲಿ ನಿಮ್ಮ ಕೆಲಸವನ್ನು ಮುಗಿಸಿಕೊಳ್ಳಿ. ಮಹಿಳೆಯ ಕಾರಣದಿಂದ ತೊಂದರೆಯಲ್ಲಿ ಸಿಕ್ಕಿಕೊಳ್ಳುವಿರಿ. ಪೂರ್ವಾಗ್ರಹ ಪೀಡಿತರಾಗಿ ಮಾತನಾಡುವುದು ಬೇಡ. ಆಪ್ತರ ಮೇಲೆ ಅಪನಂಬಿಕೆ ಇಟ್ಟು ಎಲ್ಲವೂ ಹಾಳಾಗುವುದು. ನೀವಾಡುವ ಮಾತುಗಳು ನಂಬಿಕೆ ಬರುವಂತಿರಲಿ. ಇಂದು ನಿಮಗೆ ಬಂಧನದಂತೆ ಅನ್ನಿಸಬಹುದು.
ಧನು ರಾಶಿ: ನಿಮಗೆ ಇಷ್ಟವಿಲ್ಲದ ವಿಚಾರದಲ್ಲಿ ಚರ್ಚೆ ನಡೆಯುವುದು. ಅದನ್ನು ನಿಮಗೆ ಸಹಿಸಲಾಗದು. ಅಧರ್ಮ ಮಾರ್ಗದಲ್ಲಿ ನಡೆಯುವ ಮನಸ್ಸು ಮಾಡುವಿರಿ. ಖರ್ಚು ಹೆಚ್ಚಾಗಬಹುದು. ಹಳೆಯ ಪ್ರೇಮವು ನಿಮ್ಮನ್ನು ಕಾಡಬಹುದು. ಮಕ್ಕಳ ಒತ್ತಾಯಕ್ಕೆ ಅವರ ಜೊತೆ ವಿದೇಶಕ್ಕೆ ಹೋಗಲಿದ್ದೀರಿ. ಸಾಮಾಜಿಕ ಕಾರ್ಯವನ್ನು ಬಹಳ ಒತ್ತಡದಿಂದ ಮಾಡುವಿರಿ. ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಿ. ಆಲಸ್ಯದಿಂದ ನಿಮಗೆ ಅವಕಾಶಗಳು ಸಿಗದಾದೀತು. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಆಸಕ್ತಿಯನ್ನು ಹೊಂದುವರು. ಸಂಗಾತಿಯನ್ನು ಪ್ರೀತಿಸುವಿರಿ. ನಿಮ್ಮ ಸಿಟ್ಟಿನ ಸ್ವಭಾವದಿಂದ ಏನನ್ನೂ ಸಾಧಿಸಲಾಗದು. ಯಾರನ್ನೋ ನೋಡಿ ನೀವು ಅಸೂಯೆ ಪಡೆಯುವುದು ಬೇಡ. ಹೊರಗಿನ ಆಹಾರದಿಂದ ಸಂತೋಷವಾಗಬಹುದು. ಯಾವ ಸಂದರ್ಭದಲ್ಲೊಯೂ ಉದ್ವೇಗಕ್ಕೆ ಒಳಗಾಗುವುದು ಬೇಡ. ದೂರದ ಬಂಧುಗಳ ಸಮಾಗಮವಾಗಬಹುದು. ಬೇಡವೆಂದರೂ ಕೆಲವು ಮಾತನ್ನು ಆಡುವ ಸಂದರ್ಭವು ಬರುತ್ತದೆ.
ಮಕರ ರಾಶಿ: ನಿಮ್ಮ ಭವಿಷ್ಯದ ಚಿಂತೆಯಿಂದ ಇಂದು ಸರಿಯಾಗಿ ನಿದ್ರೆ ಬಾರದೇ ದಿನವಿಡೀ ಅಸ್ತವ್ಯಸ್ತವಾಗುವುದು. ಮಾನಸಿಕ ಒತ್ತಡವು ನಿಮ್ಮ ನಿದ್ರಾಭಂಗಕ್ಕೆ ಕಾರಣವಾಗಲಿದೆ. ನಿಮಗೆ ಬರಬೇಕಾದ ಹಣವು ಬರಲಿದೆ. ಹಣದಿಂದ ಎಲ್ಲವೂ ಅಸಾಧ್ಯ ಎಂದು ತಿಳಿದು ಹಣದ ಮೋಹವು ಕಡಿಮೆ ಆದೀತು. ಉದ್ವೇಗದಲ್ಲಿ ಏನ್ನಾದರೂ ಹೇಳಿ ಬಿಡುವಿರಿ. ಆಪ್ತರಿಗೆ ಧನಸಹಾಯ ಮಾಡಬೇಕಾದೀತು. ಅನ್ಯರನ್ನು ಹಾಸ್ಯ ಮಾಡಬಹುದು. ನಿಮ್ಮ ಕುಂದುಕೊರೆತಗಳ ಬಗ್ಗೆ ಲಕ್ಷ್ಯ ವಹಿಸಿ. ನೀರಿನ ವಿಚಾರದಲ್ಲಿ ಹುಡುಗಾಟ ಬೇಡ. ಅವಸರ ವಾಹನ ಸಂಚಾರದಿಂದ ಹೊರಬರುವದು ಒಳ್ಳೆಯದು. ಅಲ್ಪ ಕಾಲದ ಶ್ರದ್ಧೆಯು ನಿಮಗೆ ಏನನ್ನೂ ತಂದುಕೊಡದು. ಪ್ರೀತಿಯಿಂದ ಮನೆಯ ಕೆಲಸವನ್ನು ಮಾಡಿ. ಅನಧಿಕೃತ ಮಾಹಿತಿಯನ್ನು ಹಂಚಿ ಎಲ್ಲರ ಕೆಂಗಣ್ಣಿಗೆ ಗುರಿಯಾಗುವಿರಿ. ಪ್ರಭಾವಿ ವ್ಯಕ್ತಿಗಳಿಂದ ತೊಂದರೆಯು ದೂರಾಗಬಹುದು. ನಿಮಗೆ ಹಿಡಿಸದ ವಿಚಾರದಲ್ಲಿ ಪ್ರಯತ್ನವನ್ನು ಮುಂದುವರಿಸುವುದು ಯೋಗ್ಯವಾಗದು. ಹೊಸ ವ್ಯವಹಾರಕ್ಕೆ ಹಿಂದೇಟು ಹಾಕುವಿರಿ.
ಕುಂಭ ರಾಶಿ: ಉದ್ಯಮದಲ್ಲಿ ಅನಿರೀಕ್ಷಿತ ಬದಲಾವಣೆ ತರುವಿರಿ. ನಿಮಗೆ ನಿಮ್ಮ ದಿನ ನಿತ್ಯದ ಕೆಲಸಗಳೇ ಮುಖ್ಯವಾಗಿ ಉಳಿದವು ನಗಣ್ಯವೆನಿಸೀತು. ಮೋಜಿನಲ್ಲಿ ಹಣವನ್ನು ಕಳೆದುಕೊಳ್ಳುವಿರಿ. ವೃತ್ತಿಯನ್ನು ಬದಲಿಸುವ ಆಲೋಚನೆಯನ್ನು ಮನೆಯಲ್ಲಿ ಹಂಚಿಕೊಳ್ಳುವಿರಿ. ಸಹೋದರನಿಂದ ನಿಮಗೆ ಉದ್ಯೋಗಕ್ಕೆ ಸಂಬಂಧಿಸಿದ ಸಹಾಯವಾಗಲಿದೆ. ವಂಚನೆಯಲ್ಲಿ ಸಿಕ್ಕಿಬೀಳುವ ಸಾಧ್ಯತೆ ಇದೆ. ಹಣದ ಉಳಿತಾಯದ ಬಗ್ಗೆ ಗಮನವಿರಲಿ. ಅನಿವಾರ್ಯವಾಗಿ ಖರ್ಚಿಗೆ ದಾರಿಗಳು ತೆರೆದುಕೊಳ್ಳುವುದು. ನಿಮಗೆ ಸಿಗುವ ಸೂಚನೆಗಳನ್ನು ಅರಿತು ಮುನ್ನಡೆಯಿರಿ. ಬಾಂಧವ್ಯವನ್ನು ಯಾವುದರಿಂದಲೂ ಅಳೆಯಲಾಗದು. ಮೇಲಧಿಕಾರಿಗಳ ಪ್ರಶಂಸೆಯು ನಿಮಗೆ ಮಾಡುವ ಕೆಲಸದಲ್ಲಿ ಉತ್ಸಾಹ ಹೆಚ್ಚಿಸುವುದು. ನಿಮ್ಮ ಕೆಲಸವು ನ್ಯಾಯ ಸಮ್ಮತವಾಗಿ ಇರಿ. ನೀವು ಕಾಲ್ಪನಿಕ ಪ್ರಪಂಚಕ್ಕೆ ಪ್ರಯಾಣಿಸುವಿರಿ. ಕುಟುಂಬದ ವಿಷಯಗಳಲ್ಲಿ ಆಸಕ್ತಿ ವಹಿಸುತ್ತೀರಿ. ಎಲ್ಲಿಗಾದರೂ ದೂರದ ಊರಿಗೆ ಪ್ರಯಾಣದ ಯೋಜನೆಗಳನ್ನು ಮಾಡಿಕೊಳ್ಳುವಿರಿ.
ಮೀನ ರಾಶಿ: ಇಂದು ನಿಮ್ಮ ಮಕ್ಕಳ ಜೀವನವನ್ನು ಕಂಡು ಖೇದವಾಗುವುದು. ಯಾರ ಜೊತೆಗೂ ವಿವಾದವನ್ನು ಮಾಡಲು ಹೋಗಬೇಡಿ. ನೀವು ಇಂದು ನಿಯಮಕ್ಕೆ ಬದ್ಧರಾಗಿ ಕಾರ್ಯವನ್ನು ಮಾಡುವಿರಿ. ಸ್ವತಂತ್ರ ಆಲೋಚನೆಗಳು ನಿಮಗೆ ಖುಷಿ ಕೊಡುವುದು. ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಹಿರಿಯರ ಚಿಂತನೆ ನಡೆಸುವಿರಿ. ಬಂಧುಗಳ ಸಹಯೋಗದಿಂದ ವಾಹನವನ್ನು ಪಡೆಯುವಿರಿ. ಸಂಗಾತಿಯನ್ನು ಪ್ರೀತಿಸುವ ಮನಸ್ಸು ಇದ್ದರೂ ಅನಿರೀಕ್ಷಿತ ಕಾರ್ಯಗಳು ಅದನ್ನು ಬಿಟ್ಟುಕೊಡುವುದಿಲ್ಲ. ನಿಮ್ಮ ಜೊತೆ ಮಾತನಾಡಲು ಮನೆಯಲ್ಲಿ ಭಯಪಟ್ಟಾರು. ತಾಳ್ಮೆಯಿಂದ ಕುಟುಂಬವನ್ನು ನಡೆಸುವ ಕಲೆ ಒಲಿದಿದೆ. ವ್ಯಾವಹಾರಿಕ ಮಾತುಗಳನ್ನು ಬಿಟ್ಟು ಬೇರೆ ಮಾತನಾಡಲು ಸಂಯಮವಿರದು. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ಬೇಕು. ಆದಷ್ಟು ಸ್ಥಿರಾಸ್ತಿಯ ಬಗ್ಗೆ ಚರ್ಚೆ ಮಾಡುವುದನ್ನು ತಪ್ಪಿಸಿ. ಜಲಮೂಲಗಳಿಂದ ಆದಾಯ ಸಿಗಬಹುದು.
Views: 0