ನಿತ್ಯ ಭವಿಷ್ಯ, 28 ಅಕ್ಟೋಬರ್: ಈ ರಾಶಿಯವರಿಗೆ ಉದ್ಯೋಗದ ಕಾರಣದಿಂದ ಅನಾರೋಗ್ಯ ನಿಮ್ಮೊಳಗೆ ಕೆಲಸ ಶುರುಮಾಡಿದೆ.

ನಿತ್ಯ ಪಂಚಾಗ, ಅಕ್ಟೋಬರ್​ 28: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಶರದ್, ಚಾಂದ್ರ ಮಾಸ : ಕಾರ್ತಿಕ, ಸೌರ ಮಾಸ : ತುಲಾ, ಮಹಾನಕ್ಷತ್ರ : ಚಿತ್ರಾ, ವಾರ : ಸೋಮ, ಪಕ್ಷ : ಶುಕ್ಲ, ತಿಥಿ : ಷಷ್ಠೀ, ನಿತ್ಯನಕ್ಷತ್ರ : ಶ್ರವಣಾ, ಯೋಗ : ಅತಿಗಂಡ, ಕರಣ : ತೈತಿಲ, ಸೂರ್ಯೋದಯ – 06 – 13 am, ಸೂರ್ಯಾಸ್ತ – 05 – 53 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:41 – 09:08 ಗುಳಿಕ ಕಾಲ 13:31 – 14:58, ಯಮಗಂಡ ಕಾಲ 10:36 – 12:03.

ಮೇಷ ರಾಶಿ: ಅವಕಾಶದಿಂದ ವಂಚಿತರಾಗಿರುವುದನ್ನು ಯಾರೊಂದಿಗೂ ಹೇಳಲಾರಿರಿ. ಇಂದು ಯಾವ ನಿರ್ಧಾರವನ್ನೂ ಸ್ವತಂತ್ರವಾಗಿ ಮಾಡುವುದು ಕಷ್ಟ. ಬಹಳ ಪರಿಶ್ರಮದಿಂದ ಇಂದು ಸ್ಥಳವನ್ನು ತಲುಪುವಿರಿ. ನಿಮಗೆ ದೂರದಲ್ಲಿರುವ ಮಕ್ಕಳನ್ನು ಕಾಣದೇ ಬೇಸರವಾಗಲಿದೆ. ಕಾನೂನಿಗೆ ವಿರುದ್ಧವಾದ ಮಾರ್ಗದಲ್ಲಿ ಹಣಸಂಪಾದನೆಯನ್ನು ಮಾಡುವ ಯೋಚನೆ ಬರುವುದು. ನಿಮ್ಮ ಉದ್ಯಮದಕ್ಕೆ ಸೂಕ್ತವಾದ ವ್ಯಕ್ತಿಗಳನ್ನು ಸೇರಿಸಿಕೊಳ್ಳಿ. ನಿಮಗೆ ಕೊಟ್ಟ ಅಧಿಕಾರವನ್ನು ಸದುಪಯೋಗಿ ಮಾಡಿಕೊಂಡು ಎಲ್ಲರ ಪ್ರೀತಿಯನ್ನು ಗಳಿಸುವಿರಿ. ಸಂಗಾತಿಯ ನಿಲುವನ್ನು ಬೆಂಬಲಿಸುವಿರಿ. ತಾಳ್ಮೆಯಿಂದಲೇ ಮಾತನಾಡಿ. ಅತ್ಯುಗ್ರವಾದ ಸನ್ನಿವೇಶವನ್ನು ತಾಳ್ಮೆಯಿಂದ ಪರಿಹರಿಸಬಹುದು. ಬಾಕಿ ಉಳಿದ ಕಛೇರಿಯ ಕಾರ್ಯಗಳನ್ನು ಮಾಡುವಿರಿ. ದಾಂಪತ್ಯದಲ್ಲಿ ಹಳೆಯ ಬೇಸರವೆಲ್ಲ ದೂರವಾಗಿ ಸಂತೋಷವು ಇರಲಿದೆ. ಹೊಸಪ್ರದೇಶದಿಂದ ನಿಮಗೆ ಉತ್ಸಾಹ ಬರಲಿದೆ. ಇಂದು ವಿಘಟನೆಗೆ ಆಗಲು ಅವಕಾಶವು ಕೊಡುವುದು ಬೇಡ.

ವೃಷಭ ರಾಶಿ: ಉದ್ಯೋಗದ ಕಾರಣದಿಂದ ಅನಾರೋಗ್ಯ ನಿಮ್ಮೊಳಗೆ ಕೆಲಸ ಶುರುಮಾಡಿದೆ. ಸೂಕ್ತವಾದ ಪರಿಹಾರ ಮಾರ್ಗವನ್ನು ಇಂದೇ ಕಂಡುಕೊಳ್ಳಲು ಆರಂಭಿಸಿ. ನಿಮ್ಮ ಆಸೆಯನ್ನು ಹೇಳಿಕೊಳ್ಳಬೇಕೆಂದರೂ ಆಗದು. ಇಂದು ಎಲ್ಲದಕ್ಕೂ ವಿರೋಧ ಮಾಡುವುದು ನಿಮಗೇ ಇದು ಸರಿ ಕಾಣದು. ಕುಟುಂಬದಲ್ಲಿ ಅನಿರೀಕ್ಷಿತ ತಿರುವು ಬರಲಿದೆ. ಅನಾರೋಗ್ಯದಿಂದ ಕಷ್ಟಪಡುವಿರಿ. ಬೇರೆಯವರಿಗೆ ಕೊಡುವ ಹಣವು ನಿಮ್ಮ ಕೈಸೇರುವುದು. ಇಂದಿನ ಕೆಲಸವನ್ನು ಬೇಗ ಮುಗಿಸಿ ವಿಶ್ರಾಂತಿಯನ್ನು ಪಡೆಯುವಿರಿ. ನಿಮ್ಮವರ ಮೇಲೆ ತಪ್ಪು ತಿಳಿವಳಿಕೆಯನ್ನು ಇಟ್ಟುಕೊಂಡಿದ್ದು ಅದನ್ನು ಬದಲಿಸಿ. ನಿಮ್ಮ ವಿವಾಹಕ್ಕಾಗಿ ಬಂಧುಗಳು ಪ್ರಯತ್ನಿಸುವರು. ವೈದ್ಯ ವೃತ್ತಿಯಲ್ಲಿ ನಿಮಗೆ ನಿರೀಕ್ಷಿತ ಆದಾಯ ಬಲ ಸಿಗದು. ಬಾಡಿಗೆ ದಾರರ ಜೊತೆ ವಾಗ್ವಾದ ನಡೆಯುವುದು. ವಿದ್ಯಾರ್ಥಿಗಳಿಗೆ ನೀವು ಭವಿಷ್ಯವನ್ನು ಸ್ಪಷ್ಟಪಡಿಸಬೇಕಾಗುವುದು. ಕೆಲವರ‌ ಮೇಲೆ ನಿಮಗೆ ಅಸಮಾಧಾನ ಇರಲಿದೆ. ಯಾರಾದರೂ ನಿಮ್ಮ ಗುಟ್ಟನ್ನು ಹೊರಹಾಕಬಹುದು. ನಿಮ್ಮ ರಹಸ್ಯವನ್ನು ಬಿಟ್ಟುಕೊಡಲಾರಿರಿ. ಇಂದು ನೀವು ಧನಾಗಮನಕ್ಕಾಗಿ ಸ್ವಲ್ಪ ಕಾಯಬೇಕಾಗಬಹುದು. ಹಳೆಯ ವಸ್ತುವನ್ನು ಪುನಃ ಉಪಯೋಗಿಸುವಿರಿ.

ಮಿಥುನ ರಾಶಿ: ಇಂದು ನಿಮ್ಮ ವ್ಯವಹಾರ, ಓಡಾಟಗಳು ಬಹಳ ಗುಪ್ತವಾಗಿರಲಿದೆ. ಉನ್ನತ ವಿದ್ಯಾಭ್ಯಾಸಕ್ಕೆ ಕಾಲ ಕೂಡಿಬರದು. ಇಂದು ಕುಟುಂಬದ ಜೊತೆ ಸಂತೋಷದಿಂದ ಕಾಲ ಕಳೆಯುವಿರಿ. ಸಂಗಾತಿಯ ಜೊತೆ ಹೆಚ್ಚಿನ ಸಮಯವನ್ನು ನೀವು ಕಳೆಯುವಿರಿ. ಖರೀದಿಯನ್ನು ಮಾಡುವಿರಿ. ಸಂತಾನದ ಬಯಕೆಯನ್ನು ಹಂಚಿಕೊಳ್ಳುವಿರಿ. ಮನೆಯಲ್ಲಿ ನಿಮಗೆ ಕಾರ್ಯಬಾಹುಲ್ಯವಿರುವುದು. ಬಳಕೆಯಾದ ವಾಹನವನ್ನು ಖರೀದಿಸುವಿರಿ. ತೆಗೆದುಕೊಂಡ ಹಣವನ್ನು ಪಡೆಯಲು ನಿಮಗೆ ಕಷ್ಟವಾದೀತು. ಸ್ಥಿರಾಸ್ತಿಯ ವಿಚಾರಕ್ಕೆ ನೀವು ಕಾನೂನಿಗೆ ಶರಣಾಗುವಿರಿ. ಸರ್ಕಾರಿ ಉದ್ಯೋಗಕ್ಕೆ ನಿಮ್ಮ ಶ್ರಮ‌ ಸಾಕೆನಿಸಬಹುದು. ಮಾತುಗಾರಿಗೆ ಹಿನ್ನಡೆಯಾಗಲಿದೆ. ಸಿಕ್ಕ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಳ್ಳುವಿರಿ. ಮಕ್ಕಳಿಗೆ ಸತ್ಯದ ವಿಚಾರಗಳನ್ನು ಅವರ ಮಟ್ಟಕ್ಕೆ ತಕ್ಕಂತೆ ತಿಳಿಸಿ. ನಿಮ್ಮವರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಕಷ್ಟವಾದೀತು. ಹಿರಿಯರ ಎದುರು ವಿನಯದಿಂದ ಮಾತನಾಡಿ.

ಕರ್ಕಾಟಕ ರಾಶಿ: ಯಾವ ನಷ್ಟಕ್ಕೂ ಕುಗ್ಗದೇ ಸ್ಥೈರ್ಯವನ್ನು ಇಟ್ಟುಕೊಳ್ಳಬೇಕು. ವ್ಯಾಪಾರ ವಹಿವಾಟಿನಲ್ಲಿ ನಿಮಗೆ ನೇರವಾಗಿ ಭಾಗವಹಿಸಲಾಗದು. ನಿಮ್ಮ ಅಧ್ಯಾತ್ಮದ ಆಸಕ್ತಿಗೆ ಯೋಗ್ಯವಾದ ಜನ ಹಾಗೂ ವಿಷಯ ಸಿಗಲಿದೆ. ಮಾಹಿತಿಯ ಕೊರತೆಯಿಂದ ತಪ್ಪಾದ ಕೆಲಸಕ್ಕೆ ಪಶ್ಚಾತ್ತಾಪ ಪಡುವಿರಿ. ನಿಮಗೆ ಗೌರವವು ಸಿಗದ ಕಡೆ ನೀವು ಹೋಗಲು ಇಷ್ಟಪಡುವುದಿಲ್ಲ. ದೂರ ಪ್ರಯಾಣವು ನಿಮ್ಮಿಂದ ವಿಶ್ರಾಂತಿಯನ್ನು ಕೇಳುವುದು. ಉದ್ಯಮದಲ್ಲಿ ಗಟ್ಟಿಯಾದ ನಿರ್ಧಾರವನ್ನು ತೆಗೆದುಕೊಳ್ಳದಿದ್ದರೆ ಕಷ್ಟವಸದೀತು. ಉದ್ಯೋಗವನ್ನು ಕಳೆದುಕೊಳ್ಳುವ ಭೀತಿಯು ಇರಲಿದೆ. ವೃತ್ತಿಯನ್ನು ಹೊರತುಪಡಿಸಿದ ಆದಾಯ ಬರುವ ಕೆಲಸವನ್ನು ನೀವು ಹುಡುಕಿಕೊಳ್ಳುವಿರಿ. ವಾತಕ್ಕೆ ಸಂಬಂಧಿಸಿದ ರೋಗವು ಕಾಣಿಸಿಕೊಳ್ಳಬಹುದು. ನಿಮ್ಮ ಗಟ್ಟಿಯಾದ ಮಾತು ಮಕ್ಕಳಿಗೆ ಅತಿಯಾಗಬಹುದು. ಅತಿಯಾದ ಮಾತು ನಿಮಗೆ ಕಿರಿಕಿರಿ ಅನಿಸೀತು. ಅದನ್ನು ಕೂಡಲೇ ಪ್ರಕಟಿಸದೇ ನಿಯಂತ್ರಿಸಲು ಪ್ರಯತ್ನಿಸಿ. ಅತಿ ನಿದ್ರೆಯಿಂದ ತಲೆ ಭಾರವೆನಿಸುವುದು. ವೈವಾಹಿಕ ಜೀವನದಲ್ಲಿ ವಿಶ್ವಾಸವು ಹೆಚ್ಚಾಗುವುದು.

ಸಿಂಹ ರಾಶಿ: ಅಪರಾಧವನ್ನು ಒಪ್ಪಿಕೊಂಡು ಅಲ್ಲಿಗೇ ಪ್ರಕರಣ ಮುಗಿಸಿದರೆ ಯಾರಿಗೂ ಅರಿವಾಗದು. ಎಂತಹ ಏಕಾಂತವೂ ನಿಮ್ಮ ಮನಸ್ಸಿಗೆ ಕಿರಿಕಿರಿ ತರುವುದು. ನಿಮ್ಮ ಸಂಕಟವನ್ನು ಆಪ್ತರ ಜೊತೆ ಹಂಚಿಕೊಂಡು ಸಮಾಧಾನಪಟ್ಟುಕೊಳ್ಳುವಿರಿ. ನಿದ್ರೆಯಲ್ಲಿ ಕಂಡ ಕನಸಿನಿಂದ ಭೀತರಾಗುವಿರಿ. ನಿಮಗೆ ಸಂಪತ್ತು ಯಾರಿಗಾದರೂ ದಾನ ಮಾಡಬೇಕು ಎಂದು ಅನ್ನಿಸುವುದು. ರಾಜಕೀಯವಾದ ಒತ್ತಡವು ನಿಮ್ಮ ಮೇಲೆ ಬರಲಿದೆ. ಸಭ್ಯತೆಯನ್ನು ಉಳಿಸಿಕೊಂಡು ವ್ಯವಹರಿಸುವುದು ಕಷ್ಟವಾಗುವುದು. ಕೃಷಿಗೆ ಸಂಬಂಧಿಸಿದ ಇತರ ಚಟುವಟಿಕೆಯಲ್ಲಿ ಭಾಗಿ. ನಿಮ್ಮ ಸಾಮರ್ಥ್ಯವನ್ನು ನೀವಾಗಿಯೇ ತೋರಿಸುವುದು ಬೇಡ. ಅವಶ್ಯಕತೆ ಇದ್ದರೆ ಮಾತ್ರ ಬಳಸಿ. ಸಿಗಬೇಕಾದವರು ಇಂದು ಸಿಗದೇ ಹೋಗುವರು. ಮಹಿಳಾ ನಾಯಿಕೆಯರಿಗೆ ಹಲವರ ಬಂಬಲ ಸಿಗುವುದು. ನಿಮ್ಮ ಮಾತಿಗೆ ಸಮಜಾಯಿಷಿ ಕೊಡಲು ಹೋಗುವ ಅವಶ್ಯಕತೆ ಇಲ್ಲ. ಒಂಟಿತನದ ಆಲೋಚನೆಯು ಪೂರ್ಣವಾಗದು. ಚರಾಸ್ತಿಯನ್ನು ರಕ್ಷಿಸಿಕೊಳ್ಳಲು ಹೋರಾಟ ನಡೆಸಬೇಕು.

ಕನ್ಯಾ ರಾಶಿ: ನೆನಪಿನ ಕೊರೆತಯಿಂದ ನಿಮ್ಮ ಉದ್ಯಮಕ್ಕೆ ತೊಂದರೆ. ಸ್ಥಿರಾಸ್ತಿಯ ಬಗ್ಗೆ ಗೊಂದಲ ಉಂಟಾಗುವುದು. ಅಧಿಕಾರಿಗಳಿಗೆ ಬೇಕಾದುದನ್ನು ನೀಡಿ ಅವರನ್ನು ಸಂತೋಷಪಡಿಸುವಿರಿ. ಈ ದಿನ‌ದ ಆರಂಭದಲ್ಲಿಯೇ ನಿಮ್ಮಲ್ಲಿ ಉತ್ಸಾಹದ ಕೊರತೆಯು ಕಾಣಿಸುವುದು. ಯಾರದೋ ವಿಚಾರಕ್ಕೆ ನೀವು ಸಮಯವನ್ನು ಕೊಡಬೇಕಾಗುವುದು. ಹಿರಿಯರಿಗೆ ಕೊಡಬೇಕಾದ ಗೌರವವನ್ನು ಸಲ್ಲಿಸಿ. ವಿದೇಶದಲ್ಲಿ ಇರುವವರ ಬಗ್ಗೆ ಚಿಂತೆ ಇರಲಿದೆ. ಉದ್ಯೋಗದ ಕಾರಣಕ್ಕೆ ಮನೆಯಿಂದ ದೂರ ಇರುವಿರಿ. ಅನಧಿಕೃತ ಮಾಹಿತಿಯನ್ನು ಪಡೆದು ಯಾವ ಕೆಲಸಕ್ಕೂ ಮುಂದಾಗಬೇಡಿ. ನಾಲ್ಕಾರು ಜನರ ಅಭಿಪ್ರಾಯವನ್ನು ಪಡೆಯಿರಿ. ತಪ್ಪುಗಳನ್ನು ಒಪ್ಪಿಕೊಳ್ಳದಿದ್ದರೂ ಕ್ಷಮಿಸುವ ಗುಣವೂ ದೊಡ್ಡದೇ. ಉತ್ಸಾಹದಿಂದ ಹೊರಟ ಕಾರ್ಯಕ್ಕೆ ತಡೆಯಾಗುವ ಸಂಭವ ಬರುವುದು. ಸಂತೋಷದ ಸಂದರ್ಭಗಳನ್ನು ನೆನಪಿಸಿಕೊಳ್ಳುವಿರಿ. ಮನಸ್ತಾಪಗಳು ದೂರವಾಗಿ ಕುಟುಂಬದಲ್ಲಿ ಅನ್ಯೋನ್ಯತೆ ಎದ್ದು ತೋರುವುದು. ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸಬಹುದು.

ತುಲಾ ರಾಶಿ: ಅನಾಥ ಪ್ರಜ್ಞೆಯನ್ನು ನೆರೆಹೊರೆಯವರ ಪ್ರೀತಿ ಮರೆಸುತ್ತದೆ. ಇಂದು ನಿಮ್ಮ ಅಂದಾಜು ಲೆಕ್ಕ ವ್ಯತ್ಯಸವಾಗುವುದು. ನಿಮ್ಮ ಪಟ್ಟ ಶ್ರಮಕ್ಕೆ ಈಗ ಗೌರವವನ್ನು ಪಡೆದುಕೊಳ್ಳುವಿರಿ. ತಂದೆಗೆ ಅಪರೂಪದ ಉಡುಗೊರೆಯನ್ನು ಕೊಡುವಿರಿ. ವಾಹನ ಸಂಚಾರವು ಕಡಿಮೆ ಇರಲಿ. ನಿಮ್ಮ ನಿರ್ಣಯಕ್ಕೆ ವಿರುದ್ಧವಾಗಿ ಯಾರಾದರೂ ಮಾತನಾಡಬಹುದು. ಸಂಗಾತಿಯ ಜೊತೆ ಅನಗತ್ಯ ವಸ್ತುಗಳ ಖರೀದಿಯ ಕಾರಣದಿಂದ ಕಲಹವಾಗಲಿದೆ. ಮಿತ್ರರಿಂದ ಆಗದ ಕಾರ್ಯವನ್ನು ಅಪರಿಚಿತರು ಮಾಡುವರು. ವಿದ್ಯಾರ್ಥಿಗಳಿಗೆ ಪ್ರೋತ್ಸಾಹವು ಸಿಗಲಿದೆ. ಮನೆಯ ಕಾರ್ಯಕ್ಕೆ ಸ್ಥೂಲರೂಪವನ್ನು ಇಂದುಕೊಡುವಿರಿ. ಫಲಾಪೇಕ್ಷೆ ಇಲ್ಲದೇ ಶ್ರದ್ಧೆಯಿಂದ ಸಾಮಾಜಿಕ ಕಾರ್ಯದಲ್ಲಿ ಮಗ್ನರಾಗುವಿರಿ. ಪಡೆದುಕೊಳ್ಳುವ ಭೂಮಿಯನ್ನು ಸರಿಯಾಗಿ ಪರೀಕ್ಷಿಸಿ. ತಾಯಿಯ ಸಂಪತ್ತನ್ನು ಹೆಣ್ಣು ಮಕ್ಕಳು ಪಡೆಯಲು ಬಯಸುವರು. ಸ್ನೇಹಿತರ ಬಳಗ ನಿಮ್ಮನ್ನು ಕೆಟ್ಟ ಕೆಲಸಕ್ಕೆ ಪ್ರೇರಿಸಬಹುದು. ಬೀಳುವ ನಿಮ್ಮನ್ನು ಯಾರಾದರೂ ರಕ್ಷಿಸಿಯಾರು. ನ್ಯಾಯ ನೀತಿಯ ವಿರುದ್ಧ ನಡೆಯುವುದು ಬೇಡ.

ವೃಶ್ಚಿಕ ರಾಶಿ: ನೀವಿಂದು ಕ್ಷಣಿಕದ ಆಸೆಗೆ ಬಲಿಯಾಗುವಿರಿ. ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತಿ ಜಾಗೂ ಜಯ ಸಿಗುವುದು. ಇಂದು ನಿಮ್ಮ ಬಾಕಿ ಉಳಿದ ಸಾಲಗಳನ್ನು ಪೂರ್ಣ ಮಾಡಿ. ದಾಂಪತ್ಯದ ಸಮಸ್ಯೆಯು ನ್ಯಾಯಾಲಯದವರೆಗೂ ಹೋಗಬಹುದು. ಪರಸ್ಪರ ಬಗೆ ಹರಿಸಿಕೊಳ್ಳುವುದು ಕ್ಷೇಮ. ಅಧಿಕಾರಕ್ಕೆ ತಕ್ಕ ಹಿಡಿತವು ನಿಮ್ಮಲ್ಲಿ ಇರದು. ಒಂದೇ ಸಮಯಕ್ಕೆ ಹೆಚ್ಚು ಜವಾಬ್ದಾರಿಯನ್ನು ನಿರ್ವಹಿಸುವುದು ಕಷ್ವಾಗಲಿದೆ. ನೀವು ಏಕಾಂಗಿ ಎಂಬ ಮನೋಭಾವವು ಬರಲಿದೆ. ಇನ್ನೊಬ್ಬರ ಬಳಿ ಇದ್ದ ಸ್ಥಿರಾಸ್ತಿಯನ್ನು ನೀವು ಪಡೆದುಕೊಳ್ಳುವಿರಿ. ನಿಮ್ಮ ಸ್ಥಿತಿ ಯಾರ ಮನಸ್ಸನ್ನೂ ಕಲಕುವಂತೆ ಮಾಡುವುದು. ಸರ್ಕಾರಿ ಸೌಲಭ್ಯಗಳು ನಿಮಗೆ ನಿಮ್ಮ ಪ್ರಯತ್ನದ ಫಲವಾಗಿ ಸಿಗಲಿದೆ. ವಿದ್ಯಾಭ್ಯಾಸಕ್ಕೆ ಯಾರ ಬಳಿಯಾದರೂ ಸಹಾಯವನ್ನು ಕೇಳುವಿರಿ. ಅಂತಃಕರಣ ಶುದ್ಧಿಯು ವಿಶ್ವಾಸವನ್ನು ಹೆಚ್ಚಿಸುವುದು. ಉತ್ಸಾಹಕ್ಕೆ ನಿಮ್ಮದೇ ಆದ ಕಾರಣವನ್ನು ಕಂಡುಕೊಳ್ಳಬೇಕು. ಸುಮ್ಮನೇ ಇದ್ದರೆ ಆಗದು. ನಿಮ್ಮ ದಿನಚರಿ ನಿಧಾನವಾಗಿರುತ್ತದೆ.

ಧನು ರಾಶಿ: ನಿಮ್ಮಂತೆ ಯಾರಿಗೂ ತೊಂದರೆಯಾಗಬಾರದೆಂಬ ಕಳಕಳಿ ಜಾಗೃತವಾಗಲಿದೆ. ನಿಮಗಾದ ಅಪಮಾನಕ್ಕೆ ಸಮಯವನ್ನು ಕಾಯುವಿರಿ. ನಿಮಗೆ ಇಂದು ಮುಖ್ಯ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸಾಧ್ಯವಾಗದು. ಪ್ರೀತಿಯ ವಿಚಾರದಲ್ಲಿ ನಿಮಗೆ ಕೆಲವು ತೊಂದರೆಗಳು ಬರಬಹುದು. ಹಿತಶತ್ರುಗಳ ಬೆಂಬಲವು ಅಬದ್ಧವಾದ ಕೆಲಸಕ್ಕೆ ಸಿಗುವುದು. ವ್ಯಾಪಾರದಲ್ಲಿ ಹಿನ್ನಡೆಯಾಗಲಿದೆ. ಅಪರಿಚಿತರು ಆಪ್ತರೆಂದು ಬರಬಹುದು. ನಿಮ್ಮದೇ ಸತ್ಯವೆಂದು ವಾದಿಸುವುದು ಸರಿಯಾಗದು. ಬಂಧುಗಳ ಜೊತೆ ಔಚಿತ್ಯಪೂರ್ಣವಾದ ಮಾತುಗಳನ್ನು ಆಡಿ. ಮಹತ್ವಾಕಾಂಕ್ಷೆಗಳಿಂದ ಕೆಲವು ಸೋಲಾಗಲಿದೆ. ನಿಮ್ಮ ವೈಫಲ್ಯವನ್ನು ಸರಿ ಮಾಡಿಕೊಳ್ಳಿ. ನಿಮ್ಮ ಮಾತು ಔಚಿತ್ಯಪೂರ್ಣವಾಗಿ ಇರಲಿ. ಕಳೆದು ಕೊಂಡ ಮಾನವನ್ನು ಮರಳಿ ಪಡೆಯಲಾಗದು. ನಿಮ್ಮ ವೃತ್ತಿಯ ಕ್ಷೇತ್ರದಲ್ಲಿ ನಿಮಗೆ ಗೌರವವು ಕಡಿಮೆ ಆಗಬಹುದು. ಆರ್ಥಿಕತೆಯನ್ನು ನೀವು ಬೆಳೆಸಿಕೊಳ್ಳಲು ಹೆಚ್ಚು ಶ್ರಮಿಸುವಿರಿ. ವಾಕ್ಸಮರದಿಂದ ನಿಮಗೇ ನಷ್ಟ. ನೇರ ನುಡಿಯಿಂದ ಬೇಸರವು ಉಂಟಾದೀತು. ಸರಳ ಜೀವನವನ್ನು ಜೊತೆಗಾರರಿಂದಲೂ ನೀವು ಇಷ್ಟಪಡುವಿರಿ.

ಮಕರ ರಾಶಿ: ದೂರ ಪ್ರಯಾಣದಿಂದ ಹಿಂದಿರುಗಬೇಕಾಗುವುದು. ಕಟ್ಟಡಗಳ ನಿರ್ಮಾಣ ಮಾಡುವವರಿಗೆ ಇಂದು ಬೇಕಾದುದು ಜರುಗುವುದು. ಇಂದು ನಿಮ್ಮ ವಿವಾಹದ ಇಚ್ಛೆಯನ್ನು ಮನೆಯಲ್ಲಿ ಹೇಳುವಿರಿ. ದಾಂಪತ್ಯದಲ್ಲಿ ಪ್ರೀತಿಯು ಕಡಿಮೆ ಆಗಬಹುದು. ಹೊಸ ಉದ್ಯೋಗದ ಸ್ಥಳವು ನಿಮಗೆ ಉತ್ಸಾಹವನ್ನು ಕೊಡುವುದು.‌ ಹೊಸ ಸ್ನೇಹ ಬಳಗವನ್ನೂ ಕಟ್ಟಿಕೊಳ್ಳುವಿರಿ. ಸಂಗಾತಿಯಿಂದ ಉಡುಗೊರೆಯು ನಿಮಗೆ ಸಿಗಲಿದೆ. ಪ್ರಯಾಣವನ್ನು ಎಲ್ಲರ ಒತ್ತಾಯದಿಂದ ನಿಲ್ಲಿಸುವಿರಿ. ನಿಮ್ಮ‌ ಮಾತಿಗೆ ಬೆಲೆಯು ಕಡಿಮೆ ಆಗಬಹುದು. ಯಾರನ್ನೂ ಅಪಹಾಸ್ಯ ಮಾಡುವುದು ಬೇಡ. ನಿಮ್ಮ ಮಾತೇ ಇಂದು ನಿಮಗೆ ಶತ್ರುವಾಗಲಿದೆ. ದೇವರ ಮೇಲೆ‌ ಶ್ರದ್ಧೆಯು ಅಧಿಕವಾಗುವುದು. ಮಾತುಗಾರರಾಗಿದ್ದರೆ ಉತ್ತಮ‌ ಅವಕಾಶಗಳು ಸಿಗಲಿವೆ. ಕೋಪವನ್ನು ತೋರಿಸುವುದು ಬೇಡ. ಮಾತಿನಲ್ಲಿ ಅಧಿಕಾರದ ಗತ್ತು ಕಾಣಿಸುವುದು. ಧಾರ್ಮಿಕ ಆಚರಣೆಗಳನ್ನು ಶ್ರದ್ಧೆಯಿಂದ ಮಾಡಲು ಅವಕಾಶ ಬರುವುದು. ಸಂಗಾತಿಯ ಎದುರು ಏನನ್ನೂ ಹೇಳದೇ ಸುಮ್ಮನಿರುವಿರಿ.

ಕುಂಭ ರಾಶಿ: ಉದ್ಯೋಗದ ಭರವಸೆಯನ್ನು ನೀಡಿ ಮೋಸ ಮಾಡುವರು. ಇಂದು ಅಪರಿಚಿತ ವ್ಯಕ್ತಿಗಳಿಂದ ಕರೆ ಬರಬಹುದು. ನಿಮ್ಮ ಸ್ವತಂತ್ರ ಯೋಚನೆಯಿಂದ ಯಶಸ್ಸು ಸಿಗಲಿದೆ. ನಿಮ್ಮರೇ ಆದರೂ ನಿಮ್ಮ ಬಗ್ಗೆ ಸಲ್ಲದ ಮಾತುಗಳನ್ನು ಆಡುವರು. ಮನೆಯ ವಾತಾವರಣವು ಸಂತೋಷವನ್ನು ಕೊಡುವುದು. ನಿಮ್ಮ ಬಗ್ಗೆ ನೀವೇ ಹೇಳಿಕೊಳ್ಳಬೇಕಾಗುವುದು.‌ ಇಂದು ನಿಮಗಾಗುವ ಕಾರ್ಯವನ್ನು ಬಿಡದೇ ಮಾಡಿಸಿಕೊಳ್ಳುವಿರಿ. ನೂತನ ವಸ್ತ್ರಗಳನ್ನು ಖರೀದಿಸುವಿರಿ. ಮನಸ್ಸು ಬಹಳ ಚಂಚಲವಾಗುವುದು. ಕೇಳಿದವರಿಗೆ ಸಹಾಯವನ್ನು ಮಾಡುವಿರಿ. ಸಂಗಾತಿಯ ಅದೃಷ್ಟದಿಂದ ಉದ್ಯೋಗದಲ್ಲಿ ಅಚಾನಕ್ಕಾದ ತಿರುವು. ಸಂಶೋಧನೆಯಲ್ಲಿ ನಿಮಗೆ ಆಸಕ್ತಿ ಬರಬಹುದು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಕಾಳಜಿ ಇರಲಿದೆ. ಅರ್ಧವಾದ ಕಾರ್ಯವನ್ನು ಮುಂದುವರಿಸುವಿರಿ. ನಿಮ್ಮ ಸಿದ್ಧಾಂತವನ್ನು ಇನ್ನೊಬ್ಬರ ಮೇಲೆ ಹೇರುವುದು ಬೇಡ. ಶುಭ ಸುದ್ದಿಯು ನಿಮ್ಮನ್ನು ಪ್ರೋತ್ಸಾಹಿಸುವುದು. ನಿಮ್ಮ ಗುಣವನ್ನು ಅಪಾರ್ಥ ಮಾಡಿಕೊಂಡಾರು.

ಮೀನ ರಾಶಿ: ದುರ್ಘಟನೆಗಳು ಮನಸ್ಸಿನಲ್ಲಿ ಉಳಿಯುವಂತೆ ಆಗುವುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ನಿಮಗೆ ಹತಾಶೆ ಕಾಣಿಸುವುದು. ನಿಮಗೆ ಹಿರಿಯರ ಆಸೆಯನ್ನು ಪೂರೈಸಿದ ಸಂತೃಪ್ತಿ ಇರುವುದು. ಅನ್ಯ ಮಾರ್ಗದಿಂದ ನಿಮ್ಮ ಕಾರ್ಯವನ್ನು ಸಾಧಿಸಿಕೊಳ್ಳುವಿರಿ. ಸರ್ಕಾರದ ಕೆಲಸವನ್ನು ಒತ್ತಡದಿಂದ ಮಾಡಿಸಿಕೊಳ್ಳುವಿರಿ. ಸಾಲವಾಗಿ ಯಾರಿಗೂ ಹಣವನ್ನು ಕೊಡುವುದು ಬೇಡ. ದುರಭ್ಯಾಸವನ್ನು ರೂಢಿಸಿಕೊಳ್ಳಲಿದ್ದೀರಿ. ವಿವಾಹಕ್ಕೆ ಬೇಕಾದ ತಯಾರಿಯಲ್ಲಿ ನೀವಿರುವಿರಿ. ಇಂದು ಮಾಡಬೇಕು ಎಂದುಕೊಂಡ ಕೆಲಸವನ್ನು ಮುಂದೂಡುವಿರಿ. ಭೂ ವಿಚಾರಕ್ಕೆ ಕಾನೂನಿನ ಮೊರೆ ಅನಿವಾರ್ಯ ಆಗುವುದು. ಎಂತಹ ಸಂದರ್ಭ ಬಂದರೂ ದುಡ್ಡನ್ನು ನೀವಾಗಿಯೇ ಕೊಡಾಲಾರಿರಿ. ಬಂಧುಗಳ ಭೇಟಿಯು ಸಂತೋಷವನ್ನು ಕೊಡುವುದು. ಸ್ನೇಹವನ್ನು ಹೆಚ್ಚು ಕಾಲ ಉಳಿಸಿಕೊಳ್ಳಲಾರಿರಿ. ಸ್ನೇಹವು ಸ್ನೇಹವಾಗಿಯೇ ಇರಲಿ, ಯಾವ ನಿರೀಕ್ಷೆಯೂ ಬೇಡ. ಭಾವನಾತ್ಮಕ ವಿಚಾರಗಳಿಗೆ ಕರಗುವಿರಿ. ಸೌಂದರ್ಯಕ್ಕೆ ಹೆಚ್ಚು ಮಹತ್ವವನ್ನು ಕೊಡಲಿದ್ದೀರಿ. ಮನೆಯವರ ಮನ ನೋಯಿಸಿ ಕಾರ್ಯ ಮಾಡಬೇಡಿ.

Views: 65

Leave a Reply

Your email address will not be published. Required fields are marked *