ನಿತ್ಯ ಭವಿಷ್ಯ 20 ಅಕ್ಟೋಬರ್ : ಇಂದು ನಿಮ್ಮ ಪ್ರಯತ್ನದಿಂದ ಯಶಸ್ಸು ಸಿಗುವುದು..

ಶಾಲಿವಾಹನ ಶಕೆ 1948ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಶರದ್, ಚಾಂದ್ರ ಮಾಸ : ಆಶ್ವಯುಜ, ಸೌರ ಮಾಸ : ತುಲಾ, ಮಹಾನಕ್ಷತ್ರ : ಚಿತ್ರಾ, ವಾರ : ಸೋಮ, ಪಕ್ಷ : ಕೃಷ್ಣ, ತಿಥಿ : ಚತುರ್ದಶೀ, ನಿತ್ಯನಕ್ಷತ್ರ : ಚಿತ್ರಾ, ಯೋಗ : ಬ್ರಹ್ಮ, ಕರಣ : ಭದ್ರ, ಸೂರ್ಯೋದಯ – 06 – 11 am, ಸೂರ್ಯಾಸ್ತ – 05 – 56 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:40 – 09:08, ಗುಳಿಕ ಕಾಲ 13:32 – 15:01, ಯಮಗಂಡ ಕಾಲ 10:36 – 12:40

ಮೇಷ ರಾಶಿ::ನಿರ್ದಾಕ್ಷಿಣ್ಯವೂ ಅಪಮಾನಕ್ಕೆ ಕಾರಣವಾಗಲಿದೆ. ಇಂದು ಹಿತಶತ್ರುಗಳ ತಂತ್ರಗಾರಿಕೆಯ ಬೆಂಬಲವು ನಿಮಗೆ ಗೊತ್ತಾಗದೇಹೋಗಬಹುದು. ಯಾರಾದರೂ ನಿಮ್ಮ ದೌರ್ಬಲ್ಯವನ್ನು ಅರಿತು ನಿಮ್ಮನ್ನು ಪೀಡಿಸಬಹುದು. ಇಂದು ನಿಮ್ಮ ಪ್ರಯತ್ನದಿಂದ ಯಶಸ್ಸು ಸಿಗುವುದು. ಆರೋಗ್ಯದ ಮೇಲೆ ಸಣ್ಣ ಸಮಸ್ಯೆಗಳು ಬರಬಹುದು. ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕಿಲ್ಲ. ಆನುವಂಶಿಕ ಖಾಯಿಲೆಯಿಂದ ದುಃಖಪಡಬೇಕಾದೀತು. ಅಶಿಸ್ತಿನಿಂದ ಇದ್ದರೆ ಯಾರಾದರೂ ಬಯ್ಯುವರು. ನಿಮ್ಮದಾದ ಯೋಜನೆಯನ್ನು ಸಿದ್ಧಪಡಿಸಲು ಅಧಿಕ ಶ್ರಮವಿರಲಿದೆ. ಉದ್ಯೋಗದ ಸ್ಥಳದಲ್ಲಿ ನೆಮ್ಮದಿಯ ಕೊರತೆ ಕಾಣಿಸುವುದು. ಯಾವ ನೋವನ್ನೂ ಸಹಿಸುವ ಕ್ಷಮತೆ ಇರದು. ಆದಾಯದ ಮೂಲವು ಬದಲಾಗಬಹುದು. ಸಂಗಾತಿಯ ಇಂಗಿತವನ್ನು ಅರಿಯುವ ಪ್ರಯತ್ನ ಮಾಡುವಿರಿ. ಅಪಮಾನವಾದ ಸ್ಥಳದಲ್ಲಿಯೇ ಗೌರವವು ಸಿಗಲಿದೆ. ಸಾಹಸದಿಂದ ಏನಾದರೂ ಅನಾಹುತ ಮಾಡಿಕೊಳ್ಳಬಹುದು.

ವೃಷಭ ರಾಶಿ::ಉದ್ಯಮದಲ್ಲಿ ವಾರ್ಷಿಕ ವೇತನ ಹೆಚ್ಚಿದ್ದಲ್ಲಿ ಹೋಗುವಿರಿ. ಇಂದು ನೀವು ರಹಸ್ಯದ ಕಾರ್ಯಾಚರಣೆಯನ್ನು ಮಾಡುವಿರಿ. ನಿಮ್ಮ ಕೈ‌ಮೀರಿದ ಸಂಗತಿಗಳಿಗೆ ಜವಾಬ್ದಾರಿಯನ್ನು ತೆಗೆದುಕಕೊಳ್ಳಬೇಕಿಲ್ಲ. ವೃತ್ತಿ ಜೀವನದಿಂದ ನಿಮಗೆ ಗೌರವವು ಸಿಗಬಹುದು. ಆರೋಗ್ಯದ ವ್ಯತ್ಯಾಸವನ್ನು ನೀವು ನಿರ್ಲಕ್ಷ್ಯ ಮಾಡುವಿರಿ.ಅನಗತ್ಯ ಖರ್ಚಿಗೆ ಇಂದು ಹಲವು ಹಾದಿಗಳು ಇರಲಿವೆ. ಉದ್ಯಮದ ಅಪಾಯದ ಬಗ್ಗೆ ಎಚ್ಚರಿಕೆ ಇರಲಿ. ಯಾರ ಜೊತೆಯೂ ನೋವಾಗುವಂತೆ ವರ್ತಿಸುವುದು ಬೇಡ. ನಿಮಗೆ ಸೋಲನ್ನು ಒಪ್ಪಿಕೊಳ್ಳುವುದು ಕಷ್ಟವಾದೀತು. ಗಳಿಕೆ ಅಲ್ಪ ಭಾಗವನ್ನು ಉಳಿತಾಯಕ್ಕೆ ಇಡುವುದು ಉತ್ತಮ ಎನಿಸುವುದು. ನಿಮ್ಮ ಖಂಡನೆಯು ಹಿಂಸಾತ್ಮಕವಾಗುವುದು ಬೇಡ. ನಿಮ್ಮದಲ್ಲದ ವಸ್ತುವಿನ ಬಗ್ಗೆ ಮೋಹವು ಇರಲಿದೆ. ಮನೋರಂಜನೆಗೆ ಖರ್ಚು ಮಾಡುವಿರಿ. ವೃತ್ತಿಜೀವನದಲ್ಲಿ ಆದ ಅಚಾತುರ್ಯದಿಂದ ಭಯವಾಗುವುದು. ನಿಮ್ಮ ನಂಬಿಕೆಯನ್ನು ಯಾರಾದರೂ ಬದಲುಮಾಡಬಹುದು.

ಮಿಥುನ ರಾಶಿ: :ಕಾರ್ಯಗಳನ್ನು ಶಕ್ತಿಯಿಂದಲ್ಲದೇ ಯುಕ್ತಿಯಿಂದ ಮಾಡಿದಾಗ ಪ್ರಚಾರ ಸಿಗುವುದು. ನಿಮಗೆ ಪ್ರತಿಕೂಲದ ವಿಚಾರಗಳೇ ನೆನಪಾಗುವುದು. ಉನ್ನತ ವಿದ್ಯಾಭ್ಯಾಸಕ್ಕೆ ಎದುರಾಗುವ ಸಾಧಕ ಬಾಧಕಗಳ ಮಾಹಿತಿ ಇರಲಿ. ನೀವು ಇಂದು ನಿರೀಕ್ಷಿತ ಹಂತಕ್ಕೆ ಹೋಗುತ್ತಿರುವುದು ಸಂತೋಷದ ಸಂಗತಿಯಾಗಲಿದೆ. ದೂರ ಪ್ರಯಾಣವು ನಿಮಗೆ ಖುಷಿ ಕೊಡಬಹುದು. ಭೋಜನವನ್ನು ಸರಿಯಾದ ಸಮಯಕ್ಕೆ ಮಾಡಿ. ಇಲ್ಲವಾದರೆ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರಬಹುದು. ಅಪರಿಚಿತ ಸ್ಥಳದಲ್ಲಿ ಇರುವವರಿಗೆ ಭಯವಿರುವುದು. ನೀವು ಯಾರ ನಕಾರಾತ್ಮಕ ಮಾತಿಗೂ ಉತ್ತರಿಸುವುದು ಬೇಡ. ಕಾಲ ಸರಿದಂತೆ ಎಲ್ಲವೂ ಗೊತ್ತಾಗುವುದು. ನಿಮಗೆ ಬೇಕಾದ ವಸ್ತುಗಳನ್ನು ಎಲ್ಲಿದ್ದರೂ ಪಡೆಯುವಿರಿ. ಸಮಯವನ್ನು ಸಾರ್ಥಕ ಮಾಡಿಕೊಳ್ಳಲು ಎಷ್ಟೇ ಶ್ರಮಿಸಿದರೂ ಆಗದು. ಹೂಡಿಕೆಯಿಂದ ಪ್ರಯೋಜನವಾಗದು ಎಂದು ಅನ್ನಿಸಬಹುದು. ಹೊಂದಾಣಿಕೆಯ ಸ್ವಭಾವವನ್ನು ಬುದ್ಧಿಪೂರ್ವಕವಾಗಿ ಬೆಳೆಸಿಕೊಳ್ಳಬೇಕು.

ಕರ್ಕಾಟಕ ರಾಶಿ: :ಅಸಮಯದ ಆಹಾರವು ಆರೋಗ್ಯವನ್ನು ಹಾಳುಮಾಡುವುದು. ಆರ್ಥಿಕ ಸ್ಥಿತಿಯು ನಿಮ್ಮ ಮಾನಸಿಕ ಒತ್ತಡವನ್ನು ಹೆಚ್ಚುಮಾಡುವುದು. ಇಂದು ನೀವು ಅತಿಯಾದ ಆತುರದಲ್ಲಿ ಇರುವಿರಿ. ಸಂಬಂಧಗಳನ್ನು ನಿಮ್ಮ ಬಳಸಿಕೊಳ್ಳಬಹುದು. ನಿಮ್ಮ ಕೆಲಸದಲ್ಲಿ ನೀವು ತೊಡಗಿಕೊಳ್ಳಿ. ಮನಸ್ತಾಪಗಳು ನೆಮ್ಮದಿಯನ್ನು ಹಾಳು ಮಾಡುವುದು. ಕಾಲು ಕೆರೆದು ನಿಮ್ಮ ಬಳಿ ಜಗಳಕ್ಕೆ ಬರಬಹುದು. ಸಂಗಾತಿಯಿಂದ ನಿಮ್ಮ ಯೋಚನೆಗೆ ಪ್ರೋತ್ಸಾಹವು ಸಿಗಲಿದೆ‌. ಅಪರಿಚಿತ ಕರೆಗಳಿಗೆ ಸ್ಪಂದಿಸುವುದು ಬೇಡ. ಶೈಕ್ಷಣಿಕ ವಿಚಾರದಲ್ಲಿ ಆಡಳಿತಾತ್ಮಕವಾಗಿ ವಿರಾಮ ಇರದು. ನಿಮ್ಮ ಸಂತೋಷವನ್ನು ಕೆಲವರಿಗೆ ನೋಡಲಾಗದು. ಹಿರಿಯರ ಜೊತೆ ತೆರಳಿ ವಿವಾಹದ ಮಾತುಕತೆಯನ್ನು ಮಾಡುವಿರಿ. ನಿಮ್ಮದಲ್ಲದ ವಿಚಾರವನ್ನು ಕಿವಿಗೆ ಹಾಕಿಕೊಳ್ಳುವುದು ಬೇಡ. ಇದು ಬೇಸರವನ್ನು ಉಂಟುಮಾಡೀತು. ಒಂದೇ ರೀತಿ ಜೀವನ ಶೈಲಿಯಿಂದ ಆಚೆ ಬರುವುದು ನಿಮಗೆ ಮುಖ್ಯವಾದೀತು. ನಿಮ್ಮ ಮಿತಿಯಲ್ಲಿ ನೀವು ಇರುವುದು ಸೂಕ್ತ.

ಸಿಂಹ ರಾಶಿ: :ವಿಷಯದ ಭಿನ್ನಾಭಿಪ್ರಾಯವನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುವುದು ಬೇಡ. ಹೊಸ ವಿಚಾರವನ್ನು ಕಲಿಯುವ ಉಮೇದು ಮಾಡುವಿರಿ. ಇಂದು ಅತಿಯಾದ ಉತ್ಸಾಹದಿಂದ ನಿಮ್ಮ ಮೇಲೆ‌ ನಿಮಗೆ ನಿಯಂತ್ರಣ ಸಿಗದಾದೀತು. ಇಂದು ನೀವು ಬಹಳ ಜಾಣ್ಮೆಯಿಂದ ವ್ಯವಹಾರವನ್ನು ಮಾಡುವಿರಿ. ಭೂಮಿಯ ಖರೀದಿಯನ್ನು ನೀವು ಮಾಡವ ಯೋಚನೆ ಇರಲಿದೆ. ನಿಮ್ಮ ಆರ್ಥಿಕ ಸ್ಥಿತಿಯು ನಿಮಗೆ ಸಮಾಧಾನವನ್ನು ಕೊಡುವುದು. ನಿಮ್ಮ ದಾರಿ ತಪ್ಪಿಸಲು ಯಾರಾದರೂ ಹುರಿದುಂಬಿಸಬಹುದು. ತಾಳ್ಮೆಯನ್ನು ಕಳೆದುಕೊಳ್ಳಲು ನಿಮ್ಮ ಬಗ್ಗೆ ಇರುವ ಪೂರ್ವಾಗ್ರಹವು ಬದಲಾದೀತು. ಇಂದು ಮನೆಯಲ್ಲಿ ಸಂಭ್ರಮದ ವಾತಾವರಣ. ಬಲದಿಂದ‌ ಆಗದ ಕಾರ್ಯವನ್ನು ಯುಕ್ತಿಯಿಂದ ಮಾಡುವುದು ಸೂಕ್ತ. ಅವಾಸ್ತವವನ್ನು ನಿರಾಕರಿಸುವುದು ಉತ್ತಮ. ಮಾತುಗಳನ್ನು ಕಡಿಮೆ ಮಾಡಿದಷ್ಟು ಒಳ್ಳೆಯದೇ. ಬಾಡಿಗೆ ಮನೆಯಲ್ಲಿ ನೀವಿದ್ದರೆ ಕಿರಿಕಿರಿಯಾದೀತು. ವ್ಯಾವಹಾರಿಕವಾದ ಅಪವಾದಗಳು ಬರಬಹುದು.

ಕನ್ಯಾ ರಾಶಿ: :ಸಂಸಾರವನ್ನು ಬಹಳ ಸಂತೋಷದಿಂದ ಸಂಭ್ರಮಿಸುವಿರಿ. ನಿಮ್ಮ ಮಾತುಗಳು ಸುಳ್ಳೆನಿಸಬಹುದು. ಇಂದು ನಿಮ್ಮ ಜೊತೆ ಕಲಹಕ್ಕಾಗಿಯೇ ಪರಿಚಿತರು ಮಾತನಾಡಬಹುದು. ಬೇರೆ ಕಡೆಯಿಂದ ಬರುವ ಅತಿಯಾದ ಒತ್ತಡದಿಂದ ಮನಸ್ಸು ಹಾಳಾಗುವುದು. ಸ್ತ್ರೀಯರ ಸಹಾಯಕ್ಕೆ ನೀವು ಹೋಗುವಿರಿ. ಹೇಳಿಕೊಂಡು ನಿಮ್ಮ ದುಃಖವನ್ನು ಕಡಿಮೆ ಮಾಡಿಕೊಳ್ಳಬಹುದು. ಯಾರದೋ ಮೂಲಕ ನಿಮ್ಮ ಕೆಲಸವನ್ನು ಮಾಡಿಕೊಳ್ಳುವಿರಿ. ಹಣಕಾಸಿನ ವಿಚಾರದಲ್ಲಿ ನಿಮಗೆ ತೃಪ್ತಿ ಇರದು. ಹೊರಗಿನ ಆಹಾರವು ನಿಮ್ಮ ಆರೋಗ್ಯವನ್ನು ಕೆಡಿಸೀತು. ಕಲಾವಿದರಿಗೆ ಅವಕಾಶಗಳು ಸಿಗಬಹುದು. ದೂರ ಪ್ರಯಾಣದಿಂದ ಆಯಾಸವಾಗಿ, ಅನಂತರ ವಿಶ್ರಾಂತಿ ಪಡೆಯುವಿರಿ. ಸಭ್ಯರಂತೆ ತೋರಿದರೂ ನಂಬಲಾರರು. ಕುಟುಂಬದ ಜವಾಬ್ದಾರಿಯು ಬರಬಹುದು. ಆಸ್ತಿಯ ವಿಚಾರದಲ್ಲಿ ಕಲಹವಾಗುವುದು. ನಿಮ್ಮ ಒಳ ಮನಸ್ಸು ಹೇಳಿದಂತೆ ಕೇಳಿ.‌ ನೆಮ್ಮದಿಗೆ ಅದೇ ದಾರಿ. ನಿಮಗೆ ಸಿಗಬೇಕಾದ ಹಣವು ಸಿಗದೇ ಇರುವುದರಿಂದ ಬೇಸರ ಬೇಡ.

ತುಲಾ ರಾಶಿ::ಯಾವುದೇ ಕಡಿವಾಣಕ್ಕೆ ಒಳಪಡುವುದು ಇಷ್ಟವಾಗದು. ನಿಮಗೆ ಇಂದು ಯಾರಾದರೂ ಧೈರ್ಯ ತುಂಬುವವರ ಅವಶ್ಯಕತೆ ಇರಲಿದೆ. ಇಂದು ಬಂಧುಗಳ ಚುಚ್ಚು ಮಾತು ನಿಮಗೆ ಹಿಡಿಸದು. ವಿಶ್ವಾಸವನ್ನು ಗಳಿಸುವ ವಿಚಾರದಲ್ಲಿ ಸೋಲುವಿರಿ. ಮನೆಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡುವಿರಿ. ಮನೆಯಲ್ಲಿ ಅತಿಥಿಗಳು ಇರುವರು. ದೂರದಲ್ಲಿರುವ ಪ್ರೀತಿಪಾತ್ರರನ್ನು ಭೇಟಿ ಮಾಡುವಿರಿ.
ವಿದ್ಯಾರ್ಥಿಗಳು ಪರೀಕ್ಷೆಯ ಭಯದಲ್ಲಿರುವರು. ಆತ್ಮೀಯರ ಒಡನಾಟದಿಂದ ಸಂತೋಷವು ನೆಮ್ಮದಿಯು ಹೆಚ್ಚುವುದು. ಮಾನಸಿಕ ಹಿಂಸೆಯು ನಿಮ್ಮ ಶಾಂತತೆಗೆ ಭಂಗ ತರಬಹುದು. ಸಂಸಾರವು ಸುಖ ಎಂದು ಅನ್ನಿಸಬಹುದು. ಯಾರ ಅಭಿಪ್ರಾಯಕ್ಕೂ ಮೂದಲಿಸದೇ ಎಲ್ಲವನ್ನೂ ಸ್ವಾಗತಿಸಿ. ಪ್ರಯಾಣದಲ್ಲಿ ಅಪರಿಚಿತರ ಸಖ್ಯವಾಗುವುದು. ನಿಮ್ಮ ಪೂರ್ಣ ಪರಿಚಯನ್ನು ಮಾಡಿಕೊಡುವುದು ಬೇಡ. ಹೆಚ್ಚಿನ ಆದಾಯಕ್ಕೆ ಆಯ್ಕೆ ಮಾಡಿಕೊಂಡ ಕ್ಷೇತ್ರವು ನಿಮಗೆ ಅಷ್ಟು ಸುಖವಿಲ್ಲ. ವಿದೇಶದ ವ್ಯಾಮೋಹವು ನಿಮಗೆ ದೂರಾಗುವುದು. ಆದರೆ ಅದನ್ನು ಬಿಡಲು ಯೋಚಿಸುವಿರಿ.

ವೃಶ್ಚಿಕ ರಾಶಿ: :ಅನಿರೀಕ್ಷಿತವಾಗಿ ಪುಣ್ಯಸ್ಥಳಕ್ಕೆ ಭೇಟಿ, ನೆಮ್ಮದಿ. ಸಮಯೋಚಿತ ಕಾರ್ಯದಿಂದ ನಿಮಗೆ ಉನ್ನತ ಅಧಿಕಾರಗಳು ಬರಬಹುದು. ಇಂದು ನಿಮ್ಮ ಭವಿಷ್ಯ ಹಾಗೂ ಮಕ್ಕಳ ಬಗ್ಗೆ ಯೋಚನೆ ಅಧಿಕವಾಗುವುದು. ಮನೆಯವರ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಹಿರಿಯಿಂದ ಆಶೀರ್ವಾದವನ್ನು ಪಡೆಯುವಿರಿ. ವೈಯಕ್ತಿಕ ಕೆಲಸವನ್ನು ಮಾಡಿಕೊಳ್ಳುವಿರಿ. ನೀವು ನಿರೀಕ್ಷಿಸಿದ ಹಣವು ನಿಮಗೆ ಬಾರದೇ ಹೋಗಬಹುದು. ನಿಮ್ಮ ಸುತ್ತಲನ್ನು ಶಿಸ್ತಿನಿಂದ ಇರಿಸಿಕೊಳ್ಳುವಿರಿ. ಸಹೋದರನ ಸಹಾಯವನ್ನು ನೀವು ಕೇಳುವಿರಿ. ವಾಹನ ಖರೀದಿಸುವ ಸ್ಥಿತಿಯು ಬರಲಿದ್ದು ಸಾಲ ಮಾಡಬೇಕಾಗಬಹುದು. ಬಂಗಾರದ ಮೇಲೆ ಅಲ್ಪ ಹೂಡಿಕೆ ಮಾಡುವಿರಿ. ಆಹಾರದ ವ್ಯಾಪಾರದಲ್ಲಿ ಪ್ರಗತಿ ಇರುವುದು. ಏಕಾಂತವು ನಿಮಗೆ ಬಲವನ್ನು ಕೊಡಬಹುದು. ಸ್ವಾರ್ಥವನ್ನು ಗೊತ್ತಾಗದಂತೆ ಬೆಳೆಸಿಕೊಳ್ಳುವಿರಿ. ನ್ಯಾಯದ ವಿಚಾರದಲ್ಲಿ ನೀವು ಸ್ವಲ್ಪ ಹಿನ್ನಡೆ ಪಡೆಯಬಹುದು. ಸಂಗಾತಿಯ ಹೆಸರಿನಲ್ಲಿ ಸ್ಥಿರಾಸ್ತಿಯನ್ನು ಖರೀದಿಸುವಿರಿ.

ಧನು ರಾಶಿ: :ಪ್ರತಿಭೆಗೆ ಸ್ಥಳಾವಕಾಶ ಇಲ್ಲವೆಂದು ಬೇಸರವಾಗುವುದು. ಹೊಸ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಬಯಕೆ ಇರುವುದು. ಇಂದು ದಂಪತಿಗಳ ನಡುವೆ ಕಲಹವೆದ್ದು ಇಬ್ಬರ ತಪ್ಪುಗಳನ್ನು ಪರಸ್ಪರ ಹೇಳಿ ವಾದ ಮಾಡುವಿರಿ. ನಿಮ್ಮವರನ್ನು ಕಳೆದುಕೊಳ್ಳುತ್ತೇನೆ ಎಂಬ ಭಯವು ಇರುವುದು. ವಾಸ್ತವದಲ್ಲಿ ಬದುಕುವುದನ್ನು ಕಲಿಯಿರಿ. ನೀವು ಮಾಡುವ ಕಾರ್ಯದಲ್ಲಿ ಲೋಪಬಾರದಂತೆ ನೋಡಿಕೊಳ್ಳಿ. ನಿಮ್ಮ ನೋವನ್ನು ಕೇಳಲು ಯಾರೂ ಇಲ್ಲವೆಂದು ಬೇಸರವಾಗುವುದು. ಸಿಟ್ಟನ್ನು ನಿಮ್ಮ ಹತೋಟಿಯಲ್ಲಿ ಇಟ್ಟುಕೊಳ್ಳಿ. ಕೃಷಿಯಲ್ಲಿ ನಿಮಗೆ ಆಸಕ್ತಿಯು ಹೆಚ್ಚಾಗಬಹುದು. ಇಂದಿನ‌ ನಿಮ್ಮ ಕೆಲಸವು ನೆಮ್ಮದಿಯನ್ನು ಕೊಡುವುದು. ನಿಮ್ಮ ಉದ್ಯಮವನ್ನು ವಿಸ್ತರಿಸಲು ಯೋಚಿಸುವಿರಿ. ವಿದ್ಯಾರ್ಥಿಗಳು ಯಶಸ್ಸಿಗಾಗಿ ದಾರಿ ಹುಡುಕುವಿರಿ. ಸಂಗಾತಿಯಿಂದ ನಿಮಗೆ ಉಡುಗೊರೆಯು ಸಿಗುವುದು. ವಿದೇಶೀ ಬಂಧುಗಳ ಜೊತೆ ವ್ಯಾವಹಾರಿಕ ಮಾತುಕತೆಗಳು‌ ನಡೆಯುವುದು. ಸರ್ಜನಶೀಲ ವ್ಯಕ್ತಿಗಳಾಗಿದ್ದರೆ ನಿಮಗೆ ಅವಕಾಶಗಳು ಹೆಚ್ಚು ಬರುತ್ತದೆ.

ಮಕರ ರಾಶಿ;:ಯಾರೇ ನಿಮಗೆ ಮೇಲಧಿಕಾರಿಯಾಗಿ ಬಂದರೂ ಅವರನ್ನು ನಿಮ್ಮ ವಶದಲ್ಲಿ ಇರಿಸಿಕೊಳ್ಳುವುದು ಗೊತ್ತು.‌ ಆರ್ಥಿಕಮಟ್ಟವನ್ನು ಯಾರಾದರೂ ತುಲನೆ ಮಾಡಬಹುದು. ನೀವು ಇಂದು ಸೌಂದರ್ಯಕ್ಕೆ ಪ್ರಾಮುಖ್ಯ‌ ಕೊಟ್ಟು ಕಾರ್ಯವನ್ನು ವಿಳಂಬ ಮಾಡುವಿರಿ. ನಿಮ್ಮ ಕಾರ್ಯಕ್ಕೆ ವಿಘ್ನವು ಬರಲಿದ್ದು ನಕಾರಾತ್ಮಕ ನಿಮ್ಮಲ್ಲಿ ಆತಂಕವು ಸೃಷ್ಟಿಯಾಗಬಹುದು. ಕೆಲವು ವಿಚಾರಗಳನ್ನು ನೀವು ನಿರ್ಲಕ್ಷ್ಯಿಸದಿದ್ದರೆ ಅದು ದೊಡ್ಡದಾಗಬಹುದು. ಆಪ್ತರ ಸಲಹೆಯನ್ನು ಪಡೆಯಲು ನಿಮಗೆ ಮುಜುಗರವಾದೀತು. ನೀವು ಕೆಲವರ ಪಾಲಿಗೆ ಆಪದ್ಬಾಂಧವರಾಗಬಹುದು. ಎಲ್ಲರೂ ನಿಮ್ಮನ್ನೇ ಗುರಿ ಮಾಡಿಕೊಂಡು ಮಾತನಾಡುವರು. ಮರೆಯಾಗಿದ್ದ ಸ್ಥಿರಾಸ್ತಿಯ ಕಲಹವು ಮತ್ತೆ ಹುಟ್ಟಕೊಳ್ಳುವುದು. ಕೋಪ ತರಿಸಲು ನೀವೇ ಏನಾದರೂ ಮಾಡುವಿರಿ. ಯಾರೂ ನಿಮ್ಮನ್ನು ನೋಡಿಕೊಳ್ಳುವುದಿಲ್ಲ ಎಂದು ಅನ್ನಿಸಬಹುದು. ಆಪ್ತರಿಗೆ ಅಮೂಲ್ಯವಾದ ಕೊಡುಗೆಯನ್ನು ಕೊಡುವಿರಿ. ಕಳೆದ ದುಃಖದ ಸಮಯವನ್ನು ಮತ್ತೆ ನೆನಪಿಸಿಕೊಳ್ಳುವಿರಿ. ಉದ್ವೇಗದಿಂದಾಗಿ ಇಂದಿನ ಉತ್ತಮ ಲಾಭದಾಯಕ ವ್ಯಾಪಾರವನ್ನು ಕಳೆದುಕೊಳ್ಳಿ.

ಕುಂಭ ರಾಶಿ: :ನೀವು ಅಪೇಕ್ಷಿತ ಫಲಿತಾಂಶ ಬರವಂತೆ ಅದಕ್ಕೆ ಬೇಕಾದ ಸಿದ್ಧತೆಯನ್ನು ಮಾಡಿಕೊಳ್ಳುವಿರಿ. ಖಾಸಗಿ ಸಂಸ್ಥೆಯ ಜವಾಬ್ದಾರಿಯನ್ನು ನೀವು ನಿರ್ವಹಿಸಲು ಕಷ್ಟವಾಗುವುದು.‌ ನೀವು ಯಾರಿಗಾದರೂ ಸಾಲ ಕೊಡುವ ಮೊದಲು ಆಲೋಚನೆ ಇರಲಿ. ನಿದ್ರೆಯಲ್ಲಿ ಕಂಡ ಕನಸಿನಿಂದ ನಿಮಗೆ ಭಯವಾಗುವುದು. ಧಾರ್ಮಿಕ ವಿಚಾರದಲ್ಲಿ ನಿಮಗೆ ಭಕ್ತಿಯು ಕಡಿಮೆ ಆಗಬಹುದು. ನಿಮಗೆ ಬೇಕಾದ ವಸ್ತುವೇ ಆದರೂ ಅದನ್ನು ಕೇಳಿದವರಿಗೆ ಕೊಡುವಿರಿ. ನಿಮ್ಮ ನಂಬಿಕೆಗೆ ಘಾಸಿಯಾಗುವ ಸಾಧ್ಯತೆ ಇದೆ. ಅಲ್ಪವಾದರೂ ಪರರ ಉಪಕಾರಕ್ಕೆ ನೀಡಿ. ಖರ್ಚಿನ ಬಗ್ಗೆ ನಿರ್ದಿಷ್ಟ ಮಿತಿ ಇರಲಿ. ಸಹಾಯವನ್ನು ಕೇಳಿದವರಿಗೆ ಇಲ್ಲ ಎನ್ನಲು ಮನಸ್ಸು ಬಾರದು. ಪಾಲುದಾರಿಕೆಯ ಬಂಧವು ಗಟ್ಟಿಯಾಗಿರಲಿ. ಸೋಮಾರಿಯ ಹಣೆಪಟ್ಟಿ ನಿಮಗೆ ಬೀಳಬಹುದು. ಯಾರನ್ನೋ ಹೋಲಿಸಿಕೊಂಡು ನೆಮ್ಮದಿಯನ್ನು ಹಾಳು ಮಾಡಿಕೊಳ್ಳುವಿರಿ. ಎಲ್ಲರೂ ಇದ್ದರೂ ಏಕಾಂಗಿ ಎಂದು ಅನ್ನಿಸಬಹುದು. ನಿಮ್ಮ ಸುತ್ತಲಿನ ಜನರು ತಮ್ಮದೇ ಮಿತಿಯಲ್ಲಿ ಇರುವರು. ತಮ್ಮಷ್ಟಕ್ಕೆ ನಿರ್ಧಾರ ಕೈಗೊಳ್ಳುವ ಅವಕಾಶ ನೀಡಿ.

ಮೀನ ರಾಶಿ::ಎಲ್ಲವೂ ಸುಲಭವಾಗಿ ಆಗಬೇಕು ಎನ್ನುವ ಮನೋಭಾವ. ಅ‌ನ್ಯರ ಕಾರಣದಿಂದ ನಿಮಗೆ ಒಂದು ಸಿಟ್ಟು ಬರುವುದು. ಇಂದಿನ ಎಂತ ಸ್ಥಿತಿಯಲ್ಲಿಯೂ ಮನಸ್ಸು ತಾಳ್ಮೆಯನ್ನು ಬಿಡದಿರಲಿ. ದೂರದ ಬಂಧುವನ್ನು ನೀವು ಭೇಟಿಯಾಗಿ ಪರಿಚಯ ಮಾಡಿಕೊಳ್ಳುವಿರಿ. ಸಂಗಾತಿಯ ಮಾತನ್ನು ಕೇಳದೇ ಇದ್ದುದಕ್ಕೆ ಬೇಸರವಾಗಬಹುದು. ವಿವಾಹದ ಮಾತುಕತೆಗೆ ಕುಟುಂಬದ ಜೊತೆ ತೆರಳುವಿರಿ. ನಿಮ್ಮ ಬಹುಕಾಲದ ಇಷ್ಟವನ್ನು ಪೂರೈಸುವಿರಿ. ಭೂಮಿಯ ವ್ಯವಹಾರದಿಂದ ಲಾಭವು ಕಡಿಮೆ ಆಗುವುದು. ಆದಾಯದ ಮೂಲವನ್ನು ಹೆಚ್ಚು ಮಾಡಿಕೊಳ್ಳುವಿರಿ. ನಿಮಗೆ ಬೇಡ ಎನಿಸಿದ ವಿಚಾರದ ಬಗ್ಗೆ ನೀವು ಏನನ್ನೂ ಹೇಳದೇ ಇರುವಿರಿ. ಕಲಾವಿದರಾಗುವ ಕನಸು ನನಸಾಗುವುದು. ಆತ್ಮವಿಶ್ವಾಸವನ್ನು ನೀವೇ ಕೊಲ್ಲುವಿರಿ. ವನ್ನು ದಾಂಪತ್ಯವನ್ನು ಸುಖವಾಗಿಡಲು ಉಡುಗೊರೆಯನ್ನು ಕೊಡಬೇಕಾಗಬಹದು. ಎಲ್ಲರಲ್ಲಿಯೂ ನಕಾರಾತ್ಮಕ ಅಂಶಗಳನ್ನು ಗಮನಿಸುವಿರಿ. ದಿನದಲ್ಲಿ ಶುಭವು ಹೆಚ್ಚಿರಲಿದೆ. ರಾಜಕೀಯದ ಜೊತೆ ಸಂಪರ್ಕವು ಬೆಳೆಯವಹುದು.

Views: 47

Leave a Reply

Your email address will not be published. Required fields are marked *