North Karnataka Recipe: ಮಧ್ಯಾಹ್ನ ಊಟಕ್ಕೆ (Lunch) ಒಂದೇ ರೀತಿಯ ರೈಸ್-ಸಾಂಬಾರ್ (Rice And Sambar) ತಿಂದು ಬೇಸರ ಆಗಿದ್ರೆ ಇಂದು ನಾವು ಹೇಳುವ ರೆಸಿಪಿ (Recipe) ಟ್ರೈ ಮಾಡಿ. ಡಾಬಾ ಶೈಲಿಯ ದಾಲ್ ಬದಲಾಗಿ ಉತ್ತರ ಕರ್ನಾಟಕ ಖಾನಾವಳಿ ಶೈಲಿಯಲ್ಲಿ (Khanavali Food) ಬೇಳೆ ಮಾಡಬಹುದು. ಈ ಮೆಂತೆ ಬ್ಯಾಳಿ (Mente Byali Recipe) ನಿಮಗೆ ಉತ್ತರ ಕರ್ನಾಟಕದ (North Karnataka Food) ಎಲ್ಲಾ ಮನೆಗಳಲ್ಲಿ ಸಿಗುತ್ತದೆ. ಈ ಮೆಂತೆ ಬ್ಯಾಳಿಯನ್ನು ಖಡಕ್ ರೊಟ್ಟಿ, ಬಿಸಿಯಾದ ಚಪಾತಿ, ಅನ್ನದ ಜೊತೆಗೆ ಒಳ್ಳೆಯ ಕಾಂಬಿನೇಷನ್ ಆಗಿದೆ. ಇದು ಪಕ್ಕಾ ಗ್ರಾಮೀಣ ಸೊಗಡಿನ ಅಡುಗೆಯಾಗಿದ್ದು (Village cooking Style), ಇದನ್ನು ತಿಂದವರು ಬೇರೆ ಎಲ್ಲಾ ರುಚಿಗಳನ್ನು ಮರೆಸುತ್ತದೆ.

ಈ ಮೆಂತೆ ಬ್ಯಾಳಿಗೆ ತೊಗರಿ ಬೇಳೆ ಮತ್ತು ಮೆಂತೆ ಸೊಪ್ಪು ಪ್ರಮುಖ ವಸ್ತುಗಳು. ನೀವು ಸಸ್ಯಾಹಾರಿ ಆಗಿದ್ರೆ ಖಂಡಿತ ನೀವು ಈ ರೆಸಿಪಿಯನ್ನು ಟ್ರೈ ಮಾಡಬಹುದು.
ಮೆಂತೆ ಬ್ಯಾಳಿ ಮಾಡಲು ಬೇಕಾಗುವ ಸಾಮಾಗ್ರಿಗಳು
ಮೆಂತೆ ಸೊಪ್ಪು: ಒಂದು ಕಟ್
ತೊಗರಿಬೇಳೆ: 100 ಗ್ರಾಂ
ಈರುಳ್ಳಿ: ಒಂದು
ಬೆಳ್ಳುಳ್ಳಿ: 7 ರಿಂದ 8
ಟೊಮೆಟೋ: ಎರಡು
ಇಂಗು: ಚಿಟಿಕೆ
ಅರಿಶಿನ: ಚಿಟಿಕೆ
ಜೀರಿಗೆ-ಸಾಸವೆ: ಒಂದು ಟೀ ಸ್ಪೂನ್
ಬ್ಯಾಡಗಿ ಮೆಣಸಿನಕಾಯಿ: ಎರಡರಿಂದ ಮೂರು
ಹಸಿ ಮೆಣಸಿನಕಾಯಿ: ಎರಡರಿಂದ ಮೂರು
ಕೋತಂಬರಿ ಸೊಪ್ಪು
ಕರೀಬೇವು: ನಾಲ್ಕರಿಂದ ಐದು ಎಲೆ
ಅಡುಗೆ ಎಣ್ಣೆ
ರುಚಿಗೆ ತಕ್ಕಷ್ಟು ಉಪ್ಪು
ಮೆಂತೆ ಬ್ಯಾಳಿ ಮಾಡುವ ವಿಧಾನ
ಮೊದಲು ಮಾರುಕಟ್ಟೆಯಿಂದ ತಂದಿರೋ ಟೊಮೆಟೋ, ಮೆಂತೆ ಸೊಪ್ಪು ತೊಳೆದುಕೊಳ್ಳಿ. ಈರುಳ್ಳಿ ದಪ್ಪವಾಗಿ ಕತ್ತರಿಸಿಕೊಳ್ಳಿ. ಹಸಿ ಮೆಣಸಿನಕಾಯಿಯನ್ನು ಉದ್ದವಾಗಿ ಕತ್ತರಿಸಿಕೊಂಡು ಎತ್ತಿಟ್ಟುಕೊಳ್ಳಿ.
ತೊಗರಿಬೇಳೆಯನ್ನು ನೀರಿನಲ್ಲಿ ತೊಳೆದುಕೊಂಡು ಕುಕ್ಕರ್ ಗೆ ಹಾಕಿಕೊಳ್ಳಿ. ಇದೇ ಕುಕ್ಕರ್ಗೆ ಕತ್ತರಿಸಿಕೊಂಡಿರುವ ಮೆಂತೆ ಸೊಪ್ಪ, ಹಸಿ ಮೆಣಸಿನಕಾಯಿ, ಈರುಳ್ಳಿ, ಟೊಮೆಟೋ ಹಾಕಿಕೊಳ್ಳಿ. ನಂತರ ಮುಕ್ಕಾಲು ಲೀಟರ್ ನಷ್ಟು ನೀರು ಸೇರಿಸಿಕೊಂಡು ಮುಚ್ಚಳ ಮುಚ್ಚಿ ನಾಲ್ಕರಿಂದ ಐದು ಕೂಗಿ ಕೂಗಿಸಿಕೊಳ್ಳಿ.
ಐದು ಕೂಗು ಕೂಗಿದ ಬಳಿಕ ಹಬೆ ಹೋಗುವರೆಗೂ ಕುಕ್ಕರ್ ಎತ್ತಿಟ್ಟುಕೊಳ್ಳಿ. ಈಗ ಒಗ್ಗರಣೆಗೆ ಸಿದ್ಧತೆ ಮಾಡಿಕೊಳ್ಳಬೇಕು.
ಈಗ ಪಾತ್ರೆಯೊಂದನ್ನು ಒಲೆ ಮೇಲೆ ಇರಿಸಿಕೊಂಡು ಮೂರು ಟೀ ಸ್ಪೂನ್ ನಷ್ಟು ಎಣ್ಣೆ ಹಾಕಿಕೊಳ್ಳಿ. ಅಡುಗೆ ಎಣ್ಣೆ ಬಿಸಿ ಆಗುತ್ತಿದ್ದಂತೆ ಸಾಸವೆ ಮತ್ತು ಜೀರಿಗೆ ಹಾಕಿಕೊಳ್ಳಿ.
ಸಾಸವೆ-ಜೀರಿಗೆ ಸಿಡಿಯುತ್ತಿದ್ದಂತೆ ಬ್ಯಾಡಗಿ ಮೆಣಸಿನಕಾಯಿ, ಜಜ್ಜಿದ ಬೆಳ್ಳುಳ್ಳಿ ಎಸಳು ಹಾಕಿಕೊಳ್ಳಿ. ಆ ಬಳಿಕಮ ಚಿಟಿಕೆ ಇಂಗು ಮತ್ತು ಅರಿಶಿನ ಸೇರಿಸಿ ಒಲೆ ಆಫ್ ಮಾಡ್ಕೊಳ್ಳಿ.
ಕುಕ್ಕರ್ ನಲ್ಲಿ ಬೇಯಿಸಿಕೊಂಡಿರುವ ತೊಗರಿ ಬೇಳೆ ಮತ್ತು ಮೆಂತೆ ಸೊಪ್ಪಿನ ಮಿಶ್ರಣಕ್ಕೆ ಒಗ್ಗರಣೆಯನ್ನು ಸೇರಿಸಬೇಕು. ನಂತರ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಐದರಿಂದ ಎಂಟು ನಿಮಿಷ ಚೆನ್ನಾಗಿ ಬೇಯಿಸಿಕೊಳ್ಳಿ.
ಕೊನೆಗೆ ಸಣ್ಣದಾಗಿ ಕೊಚ್ಚಿಕೊಂಡಿರುವ ಕೋತಂಬರಿ ಸೊಪ್ಪು ಸೇರಿಸಿದ್ರೆ ರುಚಿಯಾದ ಖಡಕ್ ಮೆಂತೆ ಬ್ಯಾಳಿ ಸವಿಯಲು ಸಿದ್ಧವಾಗುತ್ತದೆ.
(ಇಲ್ಲಿ ನೀವು ಹಸಿ ಮೆಣಸಿನಕಾಯಿ ಬದಲಾಗಿ ಅಚ್ಚ ಖಾರದ ಪುಡಿಯನ್ನು ಸೇರಿಸಿಕೊಳ್ಳಬಹುದು. ಹುಳಿ ಇಷ್ಟಪಡೋರು ಹುಣಸೆ ಹಣ್ಣಿನ ರಸ ಸೇರಿಸಿಕೊಳ್ಳುತ್ತಾರೆ. ಬೇಕಿದ್ದಲ್ಲಿ ತೆಂಗಿನಕಾಯಿ ತುರಿಯನ್ನು ಸೇರಿಸಬಹುದು.)
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Views: 0