Daliy Horoscope: ಮಾರ್ಚ್ 20 ಇಂದು ಈ ರಾಶಿಯವರಿಗೆ ಶುಭ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಯೋಗವಿದೆ.

ಶುಕ್ರವಾರ, ಮಾರ್ಚ್ 20ರ ಇಂದಿನ ದಿನ ಭವಿಷ್ಯದಲ್ಲಿ ಚೈತ್ರ ಮಾಸದ ಶುಕ್ಲ ಪಕ್ಷದ ದ್ವಿತೀಯಾ ತಿಥಿಯ ಫಲಗಳೇನಿವೆ? 12 ರಾಶಿಗಳ ಇಂದಿನ ಭವಿಷ್ಯ ಹಾಗೂ ಪಂಚಾಂಗದ ಸಂಪೂರ್ಣ ವಿವರ ಇಲ್ಲಿದೆ.

ಇಂದಿನ ಪಂಚಾಂಗ ವಿವರ:

ಸಂವತ್ಸರ: ಪರಾಭವ

ಆಯನ: ಉತ್ತರಾಯಣ

ಋತು: ವಸಂತ ಋತು

ಮಾಸ: ಚೈತ್ರ

ಪಕ್ಷ: ಶುಕ್ಲ ಪಕ್ಷ

ತಿಥಿ: ದ್ವಿತೀಯಾ

ನಕ್ಷತ್ರ: ರೇವತೀ

ಸೂರ್ಯೋದಯ: ಬೆಳಿಗ್ಗೆ 06:29

ಸೂರ್ಯಾಸ್ತ: ಸಂಜೆ 06:34

ರಾಹುಕಾಲ: ಬೆಳಿಗ್ಗೆ 11:01 ರಿಂದ ಮಧ್ಯಾಹ್ನ 12:32 ರವರೆಗೆ

ಯಮಗಂಡ ಕಾಲ: ಮಧ್ಯಾಹ್ನ 03:33 ರಿಂದ ಸಂಜೆ 05:04 ರವರೆಗೆ

ಮೇಷ ರಾಶಿ:ಕೈಗೊಂಡ ಕಾರ್ಯಗಳಲ್ಲಿ ಕೊಂಚ ಹಿನ್ನಡೆಯಾಗಬಹುದು. ಶುಭ ಕಾರ್ಯಗಳಿಗಾಗಿ ಹಣ ಖರ್ಚಾಗುವ ಸಾಧ್ಯತೆ ಇದೆ. ವ್ಯಾಪಾರ ಅಥವಾ ಹೂಡಿಕೆಯಲ್ಲಿ ನಿರೀಕ್ಷಿತ ಲಾಭ ಸಿಗದಿರಬಹುದು. ಹೊಸ ಅವಕಾಶಗಳ ಹುಡುಕಾಟದಲ್ಲಿರುವಿರಿ. ಇತರರೊಂದಿಗೆ ವೈಮನಸ್ಸು ಬೆಳೆಸಿಕೊಳ್ಳುವುದು ಅಥವಾ ಲಘುವಾಗಿ ಮಾತನಾಡುವುದು ಬೇಡ. ಮಕ್ಕಳ ಶಿಕ್ಷಣಕ್ಕೆ ಹಣ ಹೊಂದಿಸುವ ಚಿಂತೆ ಕಾಡಬಹುದು, ಬರಬೇಕಾದ ಹಣ ವಿಳಂಬವಾಗುವುದರಿಂದ ಸ್ವಲ್ಪ ಆತಂಕ ಎದುರಾಗಲಿದೆ.

ವೃಷಭ ರಾಶಿ:ಕೇವಲ ತೋರಿಕೆಗಾಗಿ ಕೆಲಸ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ನೂತನ ಗೃಹ ಪ್ರವೇಶದಂತಹ ಶುಭ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಯೋಗವಿದೆ. ದೀರ್ಘಕಾಲದ ಸಮಸ್ಯೆಗಳಿಗೆ ಇಂದು ಪರಿಹಾರ ಕಂಡುಕೊಳ್ಳುವಿರಿ. ಹಳೆಯ ತಪ್ಪುಗಳಿಂದ ಪಾಠ ಕಲಿಯುವಿರಿ. ಮೇಲಾಧಿಕಾರಿಗಳ ಮೇಲಿನ ಭಯದಿಂದಾಗಿ ವೃತ್ತಿ ಕ್ಷೇತ್ರದಲ್ಲಿ ಕೆಲಸಗಳು ತ್ವರಿತಗತಿಯಲ್ಲಿ ಸಾಗಲಿವೆ. ರಾಜಕೀಯ ವ್ಯಕ್ತಿಗಳಿಗೆ ಕೊಂಚ ಅಸ್ಥಿರತೆ ಕಾಡಬಹುದು.

ಮಿಥುನ ರಾಶಿ:ಯಾವುದೇ ಕೆಲಸವನ್ನು ಅರ್ಧಕ್ಕೆ ಬಿಡಲು ನಿಮ್ಮ ಮನಸ್ಸು ಒಪ್ಪುವುದಿಲ್ಲ. ವ್ಯಾಪಾರದಲ್ಲಿ ತೀವ್ರ ಪೈಪೋಟಿ ಇರಲಿದ್ದು, ಹೊಸ ತಂತ್ರಗಳನ್ನು ರೂಪಿಸಬೇಕಾಗುತ್ತದೆ. ನಕಾರಾತ್ಮಕ ಯೋಚನೆಗಳಿಂದ ಆದಷ್ಟು ದೂರವಿರಿ. ಕುಟುಂಬದಲ್ಲಿ ಪ್ರೀತಿಯ ವಾತಾವರಣವಿದ್ದರೂ, ತಂದೆಯ ಕಷ್ಟ ನೋಡಿ ಮಕ್ಕಳಿಗೆ ಬೇಸರವಾಗಬಹುದು. ಇತರರ ಸಮಯವನ್ನು ವ್ಯರ್ಥ ಮಾಡದೆ ನೇರವಾಗಿ ವ್ಯವಹರಿಸುವುದು ಒಳಿತು.

ಕರ್ಕಾಟಕ ರಾಶಿ:ಇಂದು ಪ್ರೀತಿಪಾತ್ರರನ್ನು ಭೇಟಿಯಾಗುವ ಯೋಗವಿದೆ ಹಾಗೂ ಸಂಗಾತಿಗೆ ವಿಶೇಷ ಉಡುಗೊರೆ ನೀಡುವಿರಿ. ನಿಮ್ಮ ಖಾಸಗಿ ವಿಚಾರಗಳನ್ನು ಇತರರೊಂದಿಗೆ ಹಂಚಿಕೊಳ್ಳದಿರಿ. ನಿಯಮಗಳನ್ನು ಉಲ್ಲಂಘಿಸುವ ಸಾಧ್ಯತೆ ಇದ್ದು ಎಚ್ಚರ ವಹಿಸಿ. ವೃತ್ತಿಜೀವನದಲ್ಲಿ ಸ್ವಲ್ಪ ನಿರಾಸಕ್ತಿ ಮೂಡಬಹುದು, ಆದರೂ ಕೆಲಸವನ್ನು ಸರಳವಾಗಿ ನಿಭಾಯಿಸಲು ಪ್ರಯತ್ನಿಸಿ. ಸೋಮಾರಿತನವನ್ನು ಬಿಡುವುದು ಇಂದಿನ ಅಗತ್ಯ.

ಸಿಂಹ ರಾಶಿ:ವಿದ್ಯಾರ್ಥಿಗಳಲ್ಲಿ ಓದಿನ ಕಡೆ ಗಮನ ಕಡಿಮೆಯಾಗುವ ಸಾಧ್ಯತೆ ಇದೆ. ಆದರೆ ವೃತ್ತಿ ಕ್ಷೇತ್ರದಲ್ಲಿ ನಿಮ್ಮ ನಿರಂತರ ಶ್ರಮದಿಂದ ಕೆಲಸಗಳನ್ನು ಪೂರ್ಣಗೊಳಿಸುವಿರಿ. ವ್ಯಾಪಾರದಲ್ಲಿ ಹಿರಿಯರ ಅಥವಾ ಅನುಭವಿಗಳ ಮಾರ್ಗದರ್ಶನ ಪಡೆಯುವುದು ಉತ್ತಮ. ಕೆಲಸಗಳನ್ನು ಹಂಚಿಕೊಂಡು ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ. ವಿವಾಹದಂತಹ ಶುಭ ಕಾರ್ಯಗಳಿಗೆ ಕಾಲ ಕೂಡಿಬಂದರೂ ಸದ್ಯಕ್ಕೆ ಮುಂದೂಡುವ ನಿರ್ಧಾರ ಮಾಡುವಿರಿ.

ಕನ್ಯಾ ರಾಶಿ:ಪ್ರಮುಖ ದಾಖಲೆಗಳನ್ನು ಎಚ್ಚರಿಕೆಯಿಂದ ಭದ್ರಪಡಿಸಿಕೊಳ್ಳಿ. ನಿಮ್ಮ ಸುತ್ತಮುತ್ತಲಿನ ವಾತಾವರಣವು ಆಹ್ಲಾದಕರವಾಗಿರುತ್ತದೆ. ಭೂಮಿ ಅಥವಾ ನಿವೇಶನ ಖರೀದಿಗೆ ಆಸಕ್ತಿ ತೋರುವಿರಿ. ಆರ್ಥಿಕ ಸ್ಥಿತಿ ಸುಧಾರಿಸುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಆಧ್ಯಾತ್ಮಿಕ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚು ಸಮಯ ಕಳೆಯುವಿರಿ. ಭದ್ರತೆ ಅಥವಾ ರಕ್ಷಣಾ ವಿಭಾಗದಲ್ಲಿ ಕೆಲಸ ಮಾಡುವವರು ಆರೋಗ್ಯದ ಕಡೆ ಹೆಚ್ಚಿನ ಕಾಳಜಿ ವಹಿಸಬೇಕು.

ತುಲಾ ರಾಶಿ:ತಂಡದಲ್ಲಿ ಅಥವಾ ಗುಂಪಿನಲ್ಲಿ ಕೆಲಸ ಮಾಡುವುದರಿಂದ ಯಶಸ್ಸು ಸುಲಭವಾಗಲಿದೆ. ಹಿರಿಯರ ಆರೋಗ್ಯ ಅಥವಾ ನೆಮ್ಮದಿಯಲ್ಲಿ ಕೊಂಚ ಏರುಪೇರಾಗಬಹುದು. ಆಸ್ತಿ ವಿಚಾರವಾಗಿ ಮಕ್ಕಳ ಒಪ್ಪಿಗೆ ದೊರೆಯಲಿದೆ. ಒಡಹುಟ್ಟಿದವರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬರಬಹುದು. ಆಸ್ತಿ ಖರೀದಿಸುವ ನಿಮ್ಮ ಯೋಚನೆಗಳು ಇಂದು ಫಲಪ್ರದವಾಗುವ ಸಾಧ್ಯತೆ ಇದೆ. ತಾಯಿಯ ಮೇಲಿನ ವಾತ್ಸಲ್ಯ ಮತ್ತಷ್ಟು ಹೆಚ್ಚಾಗಲಿದೆ.

ವೃಶ್ಚಿಕ ರಾಶಿ:ಸಾಲ ಮರುಪಾವತಿ ಮಾಡಲು ಸ್ವಲ್ಪ ಕಾಲಾವಕಾಶ ಕೇಳಬೇಕಾಗಬಹುದು. ಮನಸ್ಸಿನಲ್ಲಿರುವ ಗೊಂದಲಗಳು ದೂರವಾಗಿ ಅನಿರೀಕ್ಷಿತ ಸಂತೋಷದ ಸುದ್ದಿ ಕೇಳುವಿರಿ. ದಂಪತಿಗಳ ನಡುವಿನ ಮನಸ್ತಾಪಗಳು ಬಗೆಹರಿದು ಅನ್ಯೋನ್ಯತೆ ಹೆಚ್ಚಾಗಲಿದೆ. ವ್ಯಾಪಾರ-ವ್ಯವಹಾರಗಳಲ್ಲಿ ಇತರರ ಸಲಹೆಗಳನ್ನು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಬಹುದು. ತಂದೆಯೊಂದಿಗೆ ಮುಕ್ತವಾಗಿ ಮಾತನಾಡುವುದರಿಂದ ಮನಸ್ಸಿಗೆ ಹಗುರವೆನಿಸುತ್ತದೆ.

ಧನು ರಾಶಿ:ಆಪ್ತರಿಂದ ಹಾಗೂ ಬಂಧುಗಳಿಂದ ಶುಭ ಸಮಾರಂಭಗಳಿಗೆ ಆಮಂತ್ರಣ ಬರಲಿದೆ. ಬೆಂಕಿ ಅಥವಾ ವಿದ್ಯುತ್ ಉಪಕರಣಗಳ ಬಳಕೆಯಲ್ಲಿ ಎಚ್ಚರಿಕೆ ಇರಲಿ. ಪ್ರಭಾವಿ ವ್ಯಕ್ತಿಗಳ ಒಡನಾಟದಿಂದ ಅನುಕೂಲವಾಗಲಿದೆ. ಉದ್ಯೋಗದ ನಿಮಿತ್ತ ಸ್ಥಳ ಬದಲಾವಣೆ ಮಾಡುವ ಅನಿವಾರ್ಯತೆ ಬರಬಹುದು. ವೈಯಕ್ತಿಕ ಕೆಲಸಗಳಿಗಿಂತ ಇತರರ ಕೆಲಸಗಳಿಗೆ ಹೆಚ್ಚು ಸಮಯ ಮೀಸಲಿಡುವಿರಿ. ನಿಮ್ಮ ಆಪ್ತರು ನಿಮ್ಮನ್ನು ತಪ್ಪಾಗಿ ಅರ್ಥೈಸಿಕೊಳ್ಳುವ ಸಾಧ್ಯತೆ ಇದೆ.

ಮಕರ ರಾಶಿ:ವಿದ್ಯಾರ್ಥಿಗಳಿಗೆ ತಮ್ಮ ಶ್ರಮಕ್ಕೆ ತಕ್ಕ ಉತ್ತಮ ಪ್ರತಿಫಲ ದೊರೆಯಲಿದೆ. ವೃತ್ತಿ ಕ್ಷೇತ್ರದಲ್ಲಿ ಹೊಸ ಒಪ್ಪಂದಗಳು ಆರ್ಥಿಕ ಲಾಭ ತಂದುಕೊಡಲಿವೆ. ಆರ್ಥಿಕವಾಗಿ ಹಣ ಕೈಗೆ ಬಂದರೂ ಸಾಲ ತೀರಿಸಲು ಮನಸ್ಸು ಮಾಡದಿರಬಹುದು. ಹೂಡಿಕೆಯ ಮೂಲಗಳನ್ನು ಬದಲಾಯಿಸುವ ಚಿಂತನೆ ಮಾಡುವಿರಿ. ಹೊಸ ವಾಹನ ಖರೀದಿಸುವ ಆಸೆ ಇಂದು ಈಡೇರಲಿದೆ. ಆದರೆ, ನಿಮ್ಮ ಬಗ್ಗೆ ವಿನಾಕಾರಣ ಅಪವಾದಗಳು ಕೇಳಿಬರಬಹುದು, ಎಚ್ಚರವಿರಲಿ.

ಕುಂಭ ರಾಶಿ:ದೈಹಿಕ ಆಯಾಸ ಹಾಗೂ ಸುಸ್ತು ನಿಮ್ಮನ್ನು ಕಾಡಬಹುದು, ಹೀಗಾಗಿ ಸಾಕಷ್ಟು ವಿಶ್ರಾಂತಿ ಪಡೆಯುವುದು ಅಗತ್ಯ. ಅವಿವಾಹಿತರಿಗೆ ವಿವಾಹ ಯೋಗ ಕೂಡಿಬರಲು ನಿರಂತರ ಪ್ರಯತ್ನ ಬೇಕು. ವಾಹನ ಸಂಚಾರ ಅಧಿಕವಾಗಿರಲಿದೆ. ಬಂಧುಗಳ ಕಡೆಯಿಂದ ಅಶುಭ ವಾರ್ತೆ ಕೇಳಬೇಕಾಗಬಹುದು. ಸಮಯಕ್ಕೆ ಸರಿಯಾಗಿ ಕಾರ್ಯ ನಿರ್ವಹಿಸುವುದರಿಂದ ಪ್ರಶಂಸೆಗೆ ಪಾತ್ರರಾಗುವಿರಿ.

ಮೀನ ರಾಶಿ:ಆರ್ಥಿಕ ಪ್ರಗತಿಗಾಗಿ ಮಾಡುವ ಪ್ರಯತ್ನಗಳು ಯಶಸ್ವಿಯಾಗಲಿವೆ. ದೈನಂದಿನ ಅಗತ್ಯತೆಗಳಿಗೆ ಯಾವುದೇ ಕೊರತೆ ಇರುವುದಿಲ್ಲ. ಸ್ನೇಹಿತರಿಗೆ ಆರ್ಥಿಕ ಸಹಾಯ ಮಾಡುವ ಯೋಗವಿದೆ. ಸಮಾಜಮುಖಿ ಕಾರ್ಯಗಳಲ್ಲಿ ಭಾಗಿಯಾಗುವುದರಿಂದ ಜವಾಬ್ದಾರಿಗಳು ಹೆಚ್ಚಾಗಲಿವೆ. ಸಂಗಾತಿಯೊಂದಿಗೆ ಆಪ್ತವಾಗಿ ಮಾತನಾಡುವ ಅವಕಾಶ ಸಿಗಲಿದೆ. ಇಂದು ಬಿಡುವಿನ ಸಮಯ ಹೆಚ್ಚಿರುವುದರಿಂದ ಅದನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳಿ.

Leave a Reply

Your email address will not be published. Required fields are marked *