ಡಾನಾ ರೌದ್ರಾವತಾರ, ಗಂಟೆಗೆ 120 ವೇಗದ ಬಿರುಗಾಳಿ ಸಹಿತ ರಾಜ್ಯಗಳಿಗೆ ಭಾರೀ ಮಳೆ.

ಬೆಂಗಳೂರು, ಅಕ್ಟೊಬರ್ 22: ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತವು ‘ಡಾನಾ’ ಚಂಡಮಾರುತವಾಗಿ ಬದಲಾಗಿ 48 ಗಂಟೆ ಕಳೆದಿವೆ. ಇದೀಗ ಆ ಚಂಡಮಾರುತವು ರೌದ್ರಾವತಾರ ತಾಳಿದೆ. ಅಕ್ಟೋಬರ್ 25ರಂದು ಕರಾವಳಿಗೆ ಅಪ್ಪಳಿಸಲಿದೆ. ಅಲ್ಲಿಯವರೆಗೆ ಈ ‘ಡಾನಾ’ ಚಂಡಮಾರುತ ಪ್ರಭಾವದಿಂದಾ ಬಿರುಗಾಳಿ ಸಹಿತ ದೇಶದ ಈ ವಿವಿಧ ರಾಜ್ಯಗಳಿಗೆ ಭರ್ಜರಿ ಮಳೆ ಆಗಲಿದೆ.

Cyclone Dana: ಪ್ರತಿ ಗಂಟೆಗೆ 100-110 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದೆ. ಮುಂದಿನ ಎರಡೇ ದಿನದಲ್ಲಿ ಇದರ ವೇಳೆ ಗಂಟೆಗೆ 120 ಕಿಮೀ ಹೆಚ್ಚಲಿದೆ. ಈ ವೈಪರಿತ್ಯವು ತೀವ್ರಗೊಂಡು ಅಕ್ಟೋಬರ್ 24-25 ರಂದು ಒಡಿಶಾ ಮತ್ತು ಪಶ್ಚಿಮ ಬಂಗಾಳ ಕರಾವಳಿಗೆ ಅಪ್ಪಳಿಸಲಿದೆ. ಈ ಎರಡು ರಾಜ್ಯ ಸೇರಿ, ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ ಸೇರಿದಂತೆ ಇನ್ನಿತರ ರಾಜ್ಯಗಳಲ್ಲಿ ಭಾರೀ ಮಳೆ ಆಗುತ್ತಿದೆ. ಮುಂದಿನ ಮೂರು ದಿನವು ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಒಡಿಶಾ ಸರ್ಕಾರವು ಸೂಕ್ತ ಕ್ರಮ ಕೈಗೊಂಡಿದೆ. ಮಳೆ ಪ್ರವಾಹದಿಂದ ತೊಂದರೆ ಆಗಲಿರುವ ಸಂಭಾವ್ಯ ಪ್ರದೇಶಗಳನ್ನು ಗುರುತಿಸಿ ಅಲ್ಲಿನ ನಿವಾಸಿಗಳನ್ನು ಶೇಕಡಾ ‘100ರಷ್ಟು ಸ್ಥಳಾಂತರಿಸುವ’ಕಾರ್ಯ ಆರಂಭವಾಗಿದೆ. ಸದ್ಯ ಸರ್ಕಾರ ಮುಂಜಾಗೃತಾ ದೃಷ್ಟಿಯಿಂದ ಶಾಲೆಗಳಿಗೆ ಮಂಗಳವಾರವೇ ರಜೆ ಘೋಷಿಸಿದೆ.

ಮುಂದಿನ ಮೂರು ದಿನಗಳಲ್ಲಿ ಡಾನಾ ಚಂಡಮಾರುತ ಮತ್ತಷ್ಟು ತೀವ್ರಗೊಳ್ಳಲಿದೆ. ಅಕ್ಟೋಬರ್ 24ರಂಚು ರಾತ್ರಿ ಇಲ್ಲವೇ ಮರು ದಿನ ಬೆಳಗ್ಗೆ ‘ಒಡಿಶಾ, ಪಶ್ಚಿಮ ಬಂಗಾಳ ಕರಾವಳಿಗೆ ಚಂಡಮಾರುತ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಅಲ್ಲಿಯವರೆಗೆ ಈ ಮೇಲಿನ ಎರಡು ರಾಜ್ಯಗಳಿಗೆ ವಿಪರೀತ ಮಳೆ ಆರ್ಭಟ ಕಂಡು ಬರಲಿದೆ ಎಂಬ ಮುನ್ಸೂಚನೆ ಇದೆ.

ಒಡಿಶಾ, ಪಶ್ಚಿಮ ಬಂಗಾಳದಲ್ಲಿ ಅತ್ಯಧಿಕ ಮಳೆ, ಅಲರ್ಟ್

ಅಕ್ಟೋಬರ್ 25 ರವರೆಗೆ ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕರಾವಳಿಯ ಮಾರ್ಗವಾಗಿ ಈ ಸೈಕ್ಲೋನ್ ದಾಟಲಿದೆ. ಆ ಹೊತ್ತಿಗೆ ಗಾಳಿಯ ವೇಗ ಪ್ರತಿ ಗಂಟೆಗೆ 120 ಕಿಲೋ ಮೀಟರ್ ಇರಲಿದೆ. ಹೀಗಾಗಿ ಓಡಿಶಾ, ಪಶ್ಚಿಮ ಬಂಗಾಳದಲ್ಲಿ ಅತ್ಯಧಿಕ ಮಳೆ ನಿರೀಕ್ಷಿಸಲಾಗಿದೆ. ತಮಿಳುನಾಡಿಗೆ ಹಗುರದಿಂದ ಸಾಧಾರಣ ಮಳೆ ಆಗಲಿದೆ.

ಬಂಗಾಳ ಕೊಲ್ಲಿಯ ಪೂರ್ವ-ಮಧ್ಯ ಮತ್ತು ಉತ್ತರ ಅಂಡಮಾನ್ ಸಮುದ್ರದ ಮೇಲೆ ಮುಂದಿನ 24 ಗಂಟೆಗಳಲ್ಲಿ ಕಡಿಮೆ ಒತ್ತಡದ ಪ್ರದೇಶವು ಸೃಷ್ಟಿಯಾಗಲಿದೆ. ಇದು ಸಹ ಪಶ್ಚಿಮ-ವಾಯುವ್ಯ-ಪಶ್ಚಿಮವಾಗಿ ಸಾಗುವ ನಿರೀಕ್ಷೆ ಇದೆ. ಅಕ್ಟೋಬರ್ 23 ರ ವೇಳೆಗೆ ಪೂರ್ವ-ಮಧ್ಯ ಬಂಗಾಳ ಕೊಲ್ಲಿಯಲ್ಲಿ ಈ ಡಾನಾ ಚಂಡಮಾರುತ ಇನ್ನಷ್ಟು ತೀವ್ರಗೊಳ್ಳಲಿದೆ ಎಂದು ಹವಾಮಾನ ಇಲಾಕೆ ದೈನಂದಿನ ಮಾಧ್ಯಮ ವರದಿಯಲ್ಲಿ ಉಲ್ಲೇಖಿಸಿದೆ.

ಈ ವ್ಯವಸ್ಥೆಯು ತೀವ್ರ ಚಂಡಮಾರುತದ ಆಕಾರವನ್ನು ಪಡೆಯುವ ಸಾಧ್ಯತೆಯಿದೆ ಎಂದು ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಹೇಳಿದ್ದಾರೆ. ಅಕ್ಟೋಬರ್ 23 ರಿಂದ ಒಡಿಶಾದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.

Source : https://m.dailyhunt.in/news/india/kannada/oneindiakannada-epaper-thatskannada/cyclone+dana+daana+roudraavataara+gantege+120+vegadha+birugaali+sahita+raajyagalige+bhaari+male-newsid-n636090566?listname=topicsList&topic=news&index=7&topicIndex=1&mode=pwa&action=click

Leave a Reply

Your email address will not be published. Required fields are marked *