ಚಿತ್ರದುರ್ಗ ಆ. 14
ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್
ದರ್ಶನ್ ಜಾಮೀನು ರದ್ದು ವಿಚಾರದಿಂದ ಮತ್ತಷ್ಟು ನಂಬಿಕೆ ಬಂದಿದೆ ಕಾನೂನು, ನ್ಯಾಯಾಂಗದ ಮೇಲೆ ನಂಬಿಕೆಯಿದೆ ಮಗ ರೇಣುಕಾಸ್ವಾಮಿ ಕೊಲೆಗೆ ನ್ಯಾಯ ಸಿಗುವ ಭರವಸೆ ಇದೆ ಎಂದು ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿಯ ತಂದೆ ಕಾಶೀನಾಥಯ್ಯ ಭಾವುಕರಾಗಿ ಪ್ರತಿಕ್ರಿಯೆಸಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ ಏಳು ಜನ ಆರೋಪಿಗಳ ಜಾಮೀನು ರದ್ದಾದ ಹಿನ್ನಲೆಯಲ್ಲಿ ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿಯ ತಂದೆ ಕಾಶೀನಾಥಯ್ಯ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ನಾನು 11ಗಂಟೆ ಸುಮಾರಿಗೆ ಎಂದಿನಂತೆ ಪೂಜೆಗೆ ಕುಳಿತಿದ್ದೆನು ಪತ್ನಿ ರತ್ನಪ್ರಭಾ ದರ್ಶನ್ ಜಾಮೀನು ರದ್ದು ವಿಚಾರ ತಿಳಿಸಿದರು ಇದರಿಂದ ನನಗೆ ತುಂಬಾ ಸಂತೋಷವಾಗಿದೆ ಎಂದರು.
ರೇಣುಕಾಸ್ವಾಮಿ ತಾಯಿ ರತ್ನಪ್ರಭ ಪ್ರತಿಕ್ರಿಯಿಸಿನಟ ದರ್ಶನ್ ಬೇಲ್ ರದ್ದುಪಡಿಸಿರೋದು ಸ್ಚಾಗತಾರ್ಹ ನಮ್ಮ ಮಗನ ಸಾವಿಗೆ ನ್ಯಾಯ ಸಿಕ್ಕಿದೆ ಕೋರ್ಟ್, ಕಾನೂನಿನ ಬಗ್ಗೆ ನಂಬಿಕೆ ಇದೆ ಇಂದು ಮನೆದೇವರಿಗೆ ಅಭಿಷೇಕ ಸಲ್ಲಿಸಲು ಹೊರಟಿದ್ದೆವು ಇಂದೇ ತೀರ್ಪು ಇರುವ ಬಗ್ಗೆ ಮಾಹಿತಿ ಇರಲಿಲ್ಲ ಇಂದು ಒಳ್ಳೆಯ ತೀರ್ಪು ಬಂದಿದೆ ಮಗನ ಆತ್ಮಕ್ಕೆ ಶಾಂತಿ ಸಿಕ್ಕಂತಾಯ್ತು ಎನಿಸಿದೆ ಎಂದು ತಿಳಿಸಿದರು.
ರೇಣುಕಾಸ್ವಾಮಿ ಪತ್ನಿ ಸಹನಾ ಮಾತನಾಡಿ ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗಲಿ ಕಾನೂನಿನಲ್ಲಿ ಎಲ್ಲರೂ ಸಮಾನರು ಕಾನೂನಿನಲ್ಲಿ ಏನು ಶಿಕ್ಷೆ ಕೊಡುತ್ತಾರೆ ಗೊತ್ತಿಲ್ಲ, ಎಲ್ಲಾ ದೇವರ ಕೈಲಿದೆ ಎಂದರು.
ರೇಣುಕಾಸ್ವಾಮಿ ಸಂಬಂಧಿ ಷಡಕ್ಷರಿ ಮಾತನಾಡಿ, ಸರ್ಕಾರ, ಪೊಲೀಸ್ ಇಲಾಖೆಗೆ ಕೃತಜ್ಞತೆ ಸಲ್ಲಿಸುತ್ತೇವೆ ಸರ್ಕಾರ ಸುಪ್ರೀಂಗೆ ಹೋಗದಿದ್ದರೆ ಏನೂ ಗೊತ್ತಾಗುತ್ತಿರಲಿಲ್ಲ ಸುಪ್ರೀಂಕೋರ್ಟ್ ತ್ವರಿತವಾಗಿ ವಿಚಾರಣೆಗೆ ಸೂಚಿಸಿದೆ ವಿಶೇಷ ಟ್ರಯಲ್ ಕೋರ್ಟ್ ನಲ್ಲಿ ವಿಚಾರಣೆಗೆ ಆಗ್ರಹಿಸಿದ್ದೆವು ಯಾರೇ ತಪ್ಪು ಮಾಡಿದೂ ತಪ್ಪಿಸುಕೊಳ್ಳಲು ಸಾಧ್ಯವಿಲ್ಲ ಒಂದು ಕಡೆ ತಪ್ಪಿಸಿಕೊಂಡರೆ ಇನ್ನೊಂದು ಕಡೆ ಶಿಕ್ಷೆ ಕಾನೂನಿನ ಬಗ್ಗೆ ಯಾವತ್ತೂ ನಮಗೆ ಗೌರವವಿದೆ ಇಂದಿನ ತೀರ್ಪಿನಿಂದ ಹೆಚ್ಚಿನ ಗೌರವ ಉಂಟಾಗಿದೆ ತಪ್ಪು ಮಾಡಿದವರಿಗೆ ಶಿಕ್ಷೆ ಆಗಿದ್ದು ನಂಬಿಕೆ ಹೆಚ್ಚಿದೆ ರೇಣುಕಾಸ್ವಾಮಿ ಪತ್ನಿ ಸಹನಾಗೆ ಚಿಕ್ಕವಯಸ್ಸಿದೆ, ಮಗುವಿದೆ ಸಹನಾಗೆ ಸರ್ಕಾರಿ ನೌಕರಿಗೆ ಮನವಿ ಮಾಡಿದ್ದೆವು ಸರ್ಕಾರ ಸಹನಾಗೆ ಸೂಕ್ತ ನೆರವು ನೀಡಲಿ ನಟ ದರ್ಶನ್ ಫಾರೆನ್ ಟೂರ್, ಕೊಲೆ ಆರೋಪಿ ಜತೆ ಫೋಸ್ ವಿಚಾರ ಬಗ್ಗೆ ನಮಗೆ ಗೊತ್ತಿಲ್ಲ, ಕಾನೂನು ರೀತಿ ಶಿಕ್ಷೆ ಯಾಗಲಿ ಎಂದರು.
ನಟ ದರ್ಶನ್ & ಗ್ಯಾಂಗ್ ನಿಂದ ರೇಣುಕಾಚಾರ್ಯ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಜಾಮೀನು ಅರ್ಜಿ ವಜಾಗೊಳಿಸಿದ ಕೋರ್ಟ್‍ಕೋರ್ಟ್ ತೀರ್ಪು ವೇಳೆ ಪೂಜೆಗೆ ಕುಳಿತಿದ್ದ ರೇಣುಕಾಸ್ವಾಮಿಯ ತಂದೆ ಕಾಶೀನಾಥಯ್ಯರಿಂದ ಲಿಂಗಪೂಜೆ ಕೋರ್ಟ್ ತೀರ್ಪಿನ ಬಗ್ಗೆ ಪತಿಗೆ ತಿಳಿಸಿದ ಪತ್ನಿ ತಿಳಿಸಿದಾಗ ಮನೆ ಬಾಗಿಲು, ತುಳಸಿಗೆ ಬೆಳಗಿ ನಮಸ್ಕರಿಸಿದ ಕಾಶೀನಾಥಯ್ಯ ಫಲಿಸಿತಾ ಪೂಜಾಫಲ ಎಂದರು.
Views: 7