DC vs LSG: ಅಶುತೋಷ್ ಶರ್ಮಾ ಹಾಗೂ ವಿಪ್ರಜ್ ಅವರ ಅಬ್ಬರ ಬ್ಯಾಟಿಂಗ್ ನೆರವಿನಿಂದಾಗಿ, ಸೋಲಿನ ಸುಳಿಯಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ಗೆದ್ದು ಬೀಗಿದೆ. ಒಂದು ವಿಕೆಟ್‌ನಿಂದ ಡೆಲ್ಲಿ ಕ್ಯಾಪಿಟಲ್ಸ್ ಗೆದ್ದು ಬೀಗಿದೆ.

ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) 20 ಓವರ್‌ಗಳಲ್ಲಿ ಮಾರ್ಷ್ (Marsh) ಹಾಗೂ ಪೂರನ್ ಅವರ ಅಬ್ಬರ ಬ್ಯಾಟಿಂಗ್‌ನಿಂದಾಗಿ 209 ರನ್‌ಗಳಿಸಿತು. ಪೂರನ್ (Pooran) 75 ರನ್‌ಗಳಿಸಿದ್ರೆ, ಮಾರ್ಷ್ 72 ರನ್‌ಗಳಿಸಿದ್ರು. ಇನ್ನೂ ಕೊನೆಯಲ್ಲಿ ಡೇವಿಡ್ ಮಿಲ್ಲರ್ (David Miller) 27 ರನ್‌ಗಳಿಸಿ ಅಜೇಯರಾಗುಳಿದರು. ಡೆಲ್ಲಿ ಕ್ಯಾಪಿಟಲ್ಸ್‌ಗೆ (Delhi Capitals) 210 ರನ್‌ಗಳ ಟಾರ್ಗೆಟ್ ನೀಡಿತ್ತು. ಈ ಗುರಿ ಬೆನ್ನತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮೊದಲ ಓವರ್‌ನಲ್ಲೇ ಆಘಾತ ಎದುರಾಯ್ತು. ಆದರೆ ಅಶುತೋಷ್ ಶರ್ಮಾ ಹಾಗೂ ವಿಪ್ರರ್ಜ್ ಆರ್ಭಟದಿಂದ ಡೆಲ್ಲಿ ಕ್ಯಾಪಿಟಲ್ಸ್ ಗೆಲುವು ಕಂಡಿದೆ.

ಅಶುತೋಷ್ ಅಬ್ಬರದ ಬ್ಯಾಟಿಂಗ್!
ಕೊನೆಯದಾಗಿ ಕೊನೆ ಓವರ್‌ನಲ್ಲಿ 6 ರನ್‌ಗಳ ಅವಶ್ಯಕತೆ ಇತ್ತು. ಅತ್ತ 9 ವಿಕೆಟ್ ಕಳೆದುಕೊಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೋಹಿತ್ ಶರ್ಮಾ ಸ್ಟ್ರೈಕ್‌ನಲ್ಲಿದ್ದರು. ಒಂದು ಸಿಂಗಲ್ ತೆಗೆದುಕೊಟ್ಟು ಮೋಹಿತ್ ಒಳ್ಳೆ ಕೆಲಸ ಮಾಡಿದ್ರು. 5 ರನ್ ಬೇಕಿದ್ದಾಗ ಅಶುತೋಷ್ ಶರ್ಮಾ ಲಾಂಗ್ ಆನ್‌ನಲ್ಲಿ ಸಿಕ್ಸರ್ ಬಾರಿಸುವ ಮೂಲಕ ಗೆಲುವು ತಂದುಕೊಟ್ರು.
ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಎರಡು ಓವರ್‌ನಲ್ಲೇ 3 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಎಲ್ರೂ ಡೆಲ್ಲಿ ಕ್ಯಾಪಿಟಲ್ಸ್ ಖಂಡಿತ ಸೋಲುತ್ತೆ ಅಂತಾನೇ ಅಂದುಕೊಂಡಿದ್ದರು. ಆದ್ರೆ ಅಶುತೋಷ್ ಶರ್ಮಾ ಅಬ್ಬರದ ಬ್ಯಾಟಿಂಗ್ ಮಾಡಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಗೆಲುವು ತಂದುಕೊಟ್ಟರು. ಕೊನೆವರೆಗೂ ಸಾಕಷ್ಟು ರೋಚಕತೆಯಿಂದ ಈ ಪಂದ್ಯ ಕೂಡಿತ್ತು ಅಂದ್ರೆ ತಪ್ಪಾಗಲ್ಲ.

ಕೊನೆ ಓವರ್‌ನಲ್ಲಿ ನಡೀತು ಚಮತ್ಕಾರ!
ಮೊದಲು ವಿಪ್ರಜ್ ನಿಗಮ್ ಮತ್ತು ನಂತರ ಅಶುತೋಷ್ ಶರ್ಮಾ ಅವರ ಅದ್ಭುತ ಫಿನಿಶಿಂಗ್ ಹೊಡೆತಗಳ ಮೂಲಕ, ಡೆಲ್ಲಿ ಕ್ಯಾಪಿಟಲ್ಸ್ ಈ ಗೆಲುವಿನ ಪ್ರಯಾಣದಲ್ಲಿ ಅತ್ಯುನ್ನತ ಸ್ಥಾನದಲ್ಲಿತ್ತು. ಕೊನೆಯ ಓವರ್‌ನಲ್ಲಿ ಎಲ್ಲಾ ರೀತಿಯ ನಾಟಕೀಯತೆಗಳು ನಡೆಯಿತು. ಮೊಹಿತ್ ಶರ್ಮಾಗೆ ಡಿಆರ್‌ಎಸ್ ಮೂಲಕ ಎಲ್‌ಬಿಡಬ್ಲ್ಯೂ ಆಗಿರಲಿಲ್ಲ ಅಂತ ಗೊತ್ತಾಯ್ತು. ಬಳಿಕ ಅದೇ ಎಸೆತದಲ್ಲಿ ರಿಷಭ್ ಪಂತ್ ಸ್ಟಂಪಿಂಗ್ ಮಿಸ್ ಮಾಡಿದ್ರು. ರನ್ ಔಟ್ ಮಾಡುವ ಅವಕಾಶವನ್ನು ಕೂಡ ಕೈಚೆಲ್ಲಿದರು, ನಂತರ ಸಿಕ್ಸರ್ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಗೆಲುವನ್ನು ಕಂಡರು.
ಅಶುತೋಷ್ ಶರ್ಮಾ 31 ಎಸೆತಗಳಲ್ಲಿ 5 ಸಿಕ್ಸರ್ 5 ಬೌಂಡರಿ ಒಳಗೊಂಡ 66 ರನ್ ಬಾರಿಸಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಗೆಲುವು ತಂದು ಕೊಟ್ರು. ಇದಕ್ಕೂ ಮುನ್ನ ಇವರಿಗೆ ವಿಪ್ರಜ್ 15 ಎಸೆತಗಳಲ್ಲಿ 2 ಭರ್ಜರಿ ಸಿಕ್ಸರ್ ಸೇರಿ 5 ಬೌಂಡರಿ ಬಾರಿಸಿ 39 ರನ್‌ಗಳಿಸಿದ್ರು.
Source: Kannada News 18
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1