DC vs LSG: ಡೆಲ್ಲಿಗೆ ರಣರೋಚಕ ಜಯ, ಆರ್‌ಸಿಬಿಗೆ ವರದಾನ! ದಿಢೀರ್‌ ಹೆಚ್ಚಾಯ್ತು ಬೆಂಗಳೂರು ಬಾಯ್ಸ್‌ ಪ್ಲೇಆಫ್‌ ಚಾನ್ಸ್‌!

Cricket: ಡು ಆರ್‌ ಡೈ ಪಂದ್ಯದಲ್ಲಿ ಟಾಸ್‌ ಗೆದ್ದ ಲಕ್ನೋ ತಂಡ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತ್ತು. ಡೆಲ್ಲಿ 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 208 ರನ್‌‌ಗಳಿಸಿತು. ಈ ಗುರಿ ಬೆನ್ನತ್ತಲಾಗದೇ ಎಲ್‌ಎಸ್‌ಜಿ ಸೋಲೊಪ್ಪಿಕೊಂಡಿದೆ.

ಇಂದು 2024ರ ಇಂಡಿಯನ್ ಪ್ರೀಮಿಯರ್‌ ಲೀಗ್‌ (IPL)ನ 64ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ (DC) ಮತ್ತು ಲಕ್ನೋ ಸೂಪರ್ ಜೈಂಟ್ಸ್ (LSG) ಮುಖಾಮುಖಿಯಾಗಿತ್ತು. ನವದೆಹಲಿಯ ಅರುಣ್‌ ಜೇಟ್ಲಿ ಮೈದಾನದಲ್ಲಿ ಪಂದ್ಯ ನಡೀತು. ಇನ್ನೂ ಡು ಆರ್‌ ಡೈ ಪಂದ್ಯದಲ್ಲಿ ಟಾಸ್‌ ಗೆದ್ದ ಲಕ್ನೋ ತಂಡ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತ್ತು. ಡೆಲ್ಲಿ 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 208 ರನ್‌‌ಗಳಿಸಿತು. ಈ ಗುರಿ ಬೆನ್ನತ್ತಲಾಗದೇ ಎಲ್‌ಎಸ್‌ಜಿ ಸೋಲೊಪ್ಪಿಕೊಂಡಿದೆ. ಲಕ್ನೋ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 189 ರನ್‌ಗಳಿಸಿತು.

ಮತ್ತೆ ಕೈ ಕೊಟ್ಟ ಕನ್ನಡಿಗ ರಾಹುಲ್‌!

209 ರನ್‌‌ಗಳ ಗುರಿ ಬೆನ್ನತ್ತಿದ್ದ ಲಕ್ನೋ ಸೂಪರ್‌ ಜೈಂಟ್ಸ್‌ಗೆ ಮತ್ತೊಮ್ಮೆ ಆರಂಭಿಕ ಆಘಾತ ಎದುರಾಯ್ತು. ಮತ್ತೊಮ್ಮೆ ಕೆ.ಎಲ್‌.ರಾಹುಲ್‌ ಕೈಕೊಟ್ಟಿದ್ದಾರೆ. ಕೇವಲ ರನ್‌‌ಗಳಿಸಿ ಕ್ಯಾಚ್ ನೀಡಿ ಔಟಾದ್ರು. ಈ ಸ್ಕೋರ್ ನೋಡಿದ ಅಭಿಮಾನಿಗಳು ರಾಹುಲ್ಲಾ ರನ್ಸ್‌ ಎಲ್ಲಪ್ಪಾ? ಅಂತ ಪ್ರಶ್ನೆ ಮಾಡುತ್ತಿದ್ದಾರೆ. ಮುಂಚೆ ಎಲ್ಲ ನಿಮ್ಮ ಮೇಲೆ ನಂಬಿಕೆ ಇಡಬಹುದಿತ್ತು. ಈಗ ನೋಡಿದ್ರೆ ಈ ರೀತಿ ಆಡ್ತಿದ್ದೀರಾ? ಅಂತ ಗರಂ ಆಗಿದ್ದಾರೆ.

ಎಲ್‌ಎಸ್‌ಜಿ ಬ್ಯಾಟರ್ಸ್‌ ಪೆವಿಲಿಯನ್‌ ಪರೇಡ್!

ಮೂರನೇ ಓವರ್‌ನ ಕೊನೆಯ ಎಸೆತದಲ್ಲಿ ಕ್ವಿಂಟನ್ ಡಿ ಕಾಕ್ ಕೇವಲ 12 ರನ್ ಬಾರಿಸಿ ಔಟಾದರು. ಮಾರ್ಕಸ್ ಸ್ಟೊಯಿನಿಸ್ ಕೇವಲ 5 ರನ್ ಬಾರಿಸಿ ಪೆವಿಲಿಯನ್ ಸೇರಿಕೊಂಡರು. ಇಶಾಂತ್ ಎಸೆತದಲ್ಲಿ ದೀಪಕ್ ಹೂಡಾ ಖಾತೆ ತೆರೆಯದೆ ಔಟಾದರು.

ಪೂರನ್‌, ಅರ್ಷದ್‌ ಅರ್ಧಶತಕ ವ್ಯರ್ಥ!

ಇನ್ನೂ ಒಂದು ಕಡೆ ವಿಕೆಟ್‌ ಉರುಳುತ್ತಿದ್ರೂ ಪೂರನ್‌ ಮಾತ್ರ ಮೊದಲನೇ ಬಾಲಿನಿಂದಲೂ ಅಬ್ಬರಿಸೋಕೆ ಶುರು ಮಾಡಿದ್ದರು. ಕೇವಲ 5 ಎಸೆತಗಳಲ್ಲಿ 20 ರನ್‌‌ಗಳಿಸಿದ್ರು. ಪೂರನ್ ತಮ್ಮ ಐಪಿಎಲ್ ವೃತ್ತಿಜೀವನದ ಎಂಟನೇ ಅರ್ಧಶತಕವನ್ನು 20 ಎಸೆತಗಳಲ್ಲಿ ದಾಖಲಿಸಿದರು. 27 ಎಸೆತಗಳಲ್ಲಿ 61 ರನ್‌ಗಳಿಸಿದ್ದ ಪೂರನ್‌ ಅಕ್ಷರ್ ಪಟೇಲ್‌ಗೆ ಕ್ಯಾಚ್‌ ನೀಡಿ ಔಟಾದ್ರು.  ಸೆಕೆಂಡ್‌ ಹಾಫ್‌‌ನಲ್ಲಿ ಅರ್ಷದ್‌ ಅಬ್ಬರಿಸಿದ್ರು ಗೆಲುವು ತಂದುಕೊಡಲಾಗಲಿಲ್ಲ

ಡೆಲ್ಲಿ ಗೆಲುವು, ಆರ್‌ಸಿಬಿಗೆ ವರದಾನ!

ಹೌದು, ಇದು ಹೇಗೆ ಅಂತೀರಾ ಇಲ್ಲೆ ಇರೋದು ಮ್ಯಾಟರ್‌. ಡೆಲ್ಲಿ ಕ್ಯಾಪಿಟಲ್ಸ್‌ ಈ ಮ್ಯಾಚ್‌ ಮೂಲಕ ತನ್ನೆಲ್ಲಾ ಟೂರ್ನಿಯ ಪಂದ್ಯಗಳನ್ನಾಡಿದೆ. 14 ಪಂದ್ಯಗಳಲ್ಲಿ 7 ರಲ್ಲಿ ಗೆದ್ದು 14 ಪಾಯಿಂಟ್ಸ್‌ ಗಳಿಸಿ 5ನೇ ಸ್ಥಾನಕ್ಕೆ ಬಂದಿದೆ. ರನ್‌‌ರೇಟ್‌ ಕೂಡ ಮೈನಸ್‌ನಲ್ಲೇ ಇದೆ. ಹೀಗಾಗಿ ಆರ್‌ಸಿಬಿ ಮುಂದಿನ ಪಂದ್ಯ ಗೆದ್ದರೆ ಇದಕ್ಕಿಂತ ಮೇಲೆ ಬರುತ್ತೆ. ಒಂದು ವೇಳೆ ಅಂದುಕೊಂಡಂತೆ ಎಸ್‌ಆರ್‌ಹೆಚ್‌ ಎರಡು ಪಂದ್ಯದಲ್ಲಿ ಸೋತ್ರೆ ಆರ್‌ಸಿಬಿ ಪ್ಲೇಆಫ್‌ಗೆ ಎಂಟ್ರಿಯಾಗೋದು ಫಿಕ್ಸ್‌‌.

ಡೆಲ್ಲಿ ಕ್ಯಾಪಿಟಲ್ಸ್‌ಗೆ ಆರಂಭಿಕ ಆಘಾತ!

ಮೊದಲ ಓವರ್‌ನಲ್ಲಿಯೇ ಡೆಲ್ಲಿಗೆ ಮೊದಲ ಹೊಡೆತ ಬಿತ್ತು. ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಜೇಕ್ ಫ್ರೇಸರ್ ಮೆಕ್ ಗುರ್ಕ್ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದರು. ಇಂದಿನ ಪಂದ್ಯದಲ್ಲಿ ಅವರು ಅಬ್ಬರಿಸುತ್ತಾರೆ ಅಂತ ಎಲ್ಲ ಅಂದುಕೊಂಡಿದ್ದರು. ಪವರ್‌ಪ್ಲೇ ಮುಗಿಯುವ ವೇಳೆ ಡೆಲ್ಲಿ ಆರು ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 73 ರನ್ ಗಳಿಸಿತು.

ಇನ್ನೂ ಡೆಲ್ಲಿ ಒಂಬತ್ತನೇ ಓವರ್‌ನಲ್ಲಿ ಎರಡನೇ ವಿಕೆಟ್ ಕಳೆದುಕೊಂಡಿತು. ಶಾಯ್ ಹೋಪ್ 27 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 38 ರನ್ ಗಳಿಸಿ ಔಟಾದರು. 12ನೇ ಓವರ್‌ನಲ್ಲಿ ಡೆಲ್ಲಿ ಮೂರನೇ ವಿಕೆಟ್ ಕಳೆದುಕೊಂಡಿತು. ಅಭಿಷೇಕ್ ಪೊರೆಲ್ 33 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 58 ರನ್ ಗಳಿಸಿ ಔಟಾದರು. ಡೆಲ್ಲಿ ನಾಯಕ ರಿಷಬ್ ಪಂತ್ 23 ಎಸೆತಗಳಲ್ಲಿ 33 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದರು.

ಪೊರೆಲ್‌, ಸ್ಟಬ್ಸ್‌ ಅಬ್ಬರ!

ಆರಂಭಿಕ ಆಘಾತವಾದ್ರೂ ಡೆಲ್ಲಿ ಬ್ಯಾಟರ್ಸ್‌ ಲಕ್ನೋ ತಂಡದ ಬೌಲರ್‌ಗಳನ್ನ ಕಾಡಿದರು. ಪೊರೆಲ್‌ ಹಾಗೂ ಸ್ಟಬ್ಸ್‌ ಅರ್ಧ ಶತಕ ಸಿಡಿಸಿ ಮಿಂಚಿದರು. ಮೊದಲಿಗೆ ಡೆಲ್ಲಿ ತಂಡ 200 ರನ್‌‌ಗಳಿಸುವುದು ಅಸಾಧ್ಯ ಎನ್ನುವಂತಾಗಿತ್ತು. ಆದರೆ ಡೆಲ್ಲಿ ಬ್ಯಾಟರ್ಸ್ 10 ಓವರ್‌‌ಗಳ ನಂತರ ಅಬ್ಬರಿಸಿದ್ರು.

Source: https://kannada.news18.com/news/sports/ipl-2024-dc-vs-lsg-live-updates-delhi-capitals-won-by-19-runs-vdd-1699369.html

Leave a Reply

Your email address will not be published. Required fields are marked *